Vishwavani Editorial: ಅಕ್ಕಿ ದರ ಕಕ್ಕಾಬಿಕ್ಕಿ
ಮಳೆಯ ಕೊರತೆ, ಭತ್ತ ಮತ್ತು ತೊಗರಿ ಬಿತ್ತನೆ ಪ್ರದೇಶಗಳಲ್ಲಿನ ಇಳಿಕೆ, ಬೆಳೆ ನಷ್ಟ, ಮಾರುಕಟ್ಟೆಯಲ್ಲಿ ದಾಸ್ತಾನು ಕಡಿಮೆಯಾಗಿರುವುದು ಹಾಗೂ ಬೇಡಿಕೆ ಹೆಚ್ಚಾಗಿರುವುದು ಇವನ್ನೆಲ್ಲ ಕಾರಣಗಳಾಗಿ ಹೇಳಲಾಗುತ್ತಿದೆ. ಸರ್ಕಾರಿ ಅಂಗಡಿಗಳಲ್ಲಿ ಸಬ್ಸಿಡಿ ಅಕ್ಕಿ ಲಭ್ಯವಿದ್ದರೂ, ಗುಣಮಟ್ಟದ ಬಗ್ಗೆ ದೂರುಗಳಿವೆ. ಅಕ್ಕಿ ಮತ್ತು ಬೇಳೆ ಎಲ್ಲರ ದಿನನಿತ್ಯದ ಸಾಮಾನ್ಯ ಆಹಾರವಾಗಿದ್ದು, ಇದರ ಬೆಲೆ ಏರಿಕೆ ಕುಟುಂಬಗಳ ಆರ್ಥಿಕತೆಯ ಮೇಲೆ ನೇರ ದುಷ್ಪರಿಣಾಮ ಬೀರುತ್ತಿದೆ.
-
ಹಾಲು, ಬಸ್ಸು ಟಿಕೆಟ್ ದರ ಏರಿಕೆಗಳಿಂದ ತತ್ತರಿಸಿರುವ ಗ್ರಾಹಕನ ಮೇಲೆ ಅಕ್ಕಿ ಬೆಲೆ ಏರಿಕೆಯ ಹೊರೆಯೂ ಬಿದ್ದು ಇದೀಗ ಆತನ ಬೆನ್ನು ಮುರಿದೇ ಹೋಗುವ ಸ್ಥಿತಿ ಬಂದಿದೆ. ರಾಜ್ಯದ ಬಹುಪಾಲ ಜನ ನೆಚ್ಚಿರುವ ಸೋನಾ ಮಸ್ಸೂರಿ ಸೇರಿದಂತೆ ಅಕ್ಕಿಯ ವಿವಿಧ ತಳಿಗಳ ಬೆಲೆ ಕಳೆದ ಕೆಲವು ತಿಂಗಳಿನಿಂದ ನಿರಂತರವಾಗಿ ಏರುತ್ತಿದ್ದು, ಶತಕ ದಾಟಿ ಮುನ್ನಡೆಯುತ್ತಿದೆ.
ಮಳೆಯ ಕೊರತೆ, ಭತ್ತ ಮತ್ತು ತೊಗರಿ ಬಿತ್ತನೆ ಪ್ರದೇಶಗಳಲ್ಲಿನ ಇಳಿಕೆ, ಬೆಳೆ ನಷ್ಟ, ಮಾರುಕಟ್ಟೆ ಯಲ್ಲಿ ದಾಸ್ತಾನು ಕಡಿಮೆಯಾಗಿರುವುದು ಹಾಗೂ ಬೇಡಿಕೆ ಹೆಚ್ಚಾಗಿರುವುದು ಇವನ್ನೆಲ್ಲ ಕಾರಣ ಗಳಾಗಿ ಹೇಳಲಾಗುತ್ತಿದೆ. ಸರ್ಕಾರಿ ಅಂಗಡಿಗಳಲ್ಲಿ ಸಬ್ಸಿಡಿ ಅಕ್ಕಿ ಲಭ್ಯವಿದ್ದರೂ, ಗುಣಮಟ್ಟದ ಬಗ್ಗೆ ದೂರುಗಳಿವೆ. ಅಕ್ಕಿ ಮತ್ತು ಬೇಳೆ ಎಲ್ಲರ ದಿನನಿತ್ಯದ ಸಾಮಾನ್ಯ ಆಹಾರವಾಗಿದ್ದು, ಇದರ ಬೆಲೆ ಏರಿಕೆ ಕುಟುಂಬಗಳ ಆರ್ಥಿಕತೆಯ ಮೇಲೆ ನೇರ ದುಷ್ಪರಿಣಾಮ ಬೀರುತ್ತಿದೆ.
ಇದನ್ನೂ ಓದಿ: Rice: ಹೆಚ್ಚಿದ ಭತ್ತದ ಇಳುವರಿ; ರೈತರಿಗೇ ಅದೇ ವರಿ !
ಇನ್ನೊಂದೆಡೆ, ಅಕ್ಕಿ ದಾಸ್ತಾನು ಅಗತ್ಯಕ್ಕಿಂತ ಹೆಚ್ಚೇ ಇದೆ ಎಂದು ಕೇಂದ್ರ ಹೇಳುತ್ತಿದೆ. ಹಾಗಾದರೆ ಮಾರುಕಟ್ಟೆಗೆ ಬರದೆ ಅಕ್ಕಿ ಎಲ್ಲಿಗೆ ಹೋಗುತ್ತಿದೆ? ಇದರ ನಡುವೆ, ರಾಜ್ಯದ ವಿವಿಧ ಜಿಗಳಲ್ಲಿ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಅಕ್ರಮವಾಗಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಜಾಲದ ವಿರುದ್ಧ ಆಹಾರ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ.
ರಾಜ್ಯಾದ್ಯಂತ ದಾಳಿ ನಡೆಸಿರುವ ಅಧಿಕಾರಿಗಳು, ಒಂದೇ ತಿಂಗಳಲ್ಲಿ ಒಟ್ಟು 15 ಕೋಟಿ ರು. ಮೌಲ್ಯದ ಅನ್ನಭಾಗ್ಯ ಅಕ್ಕಿ, ಅಡುಗೆ ಅನಿಲ ಸಿಲಿಂಡರ್ ಹಾಗೂ ಪೆಟ್ರೋಲ್ ಸೇರಿದಂತೆ ವಿವಿಧ ವಸ್ತುಗಳನ್ನು ಜಪ್ತಿ ಮಾಡಿzರೆ. ಈ ಸಂಬಂಧ 266 ಮಂದಿಯನ್ನು ಬಂಧಿಸಲಾಗಿದೆ ಎಂದರೆ ಈ ಅಕ್ಕಿ ಅಕ್ರಮದ ಬೃಹದಾಕಾರವನ್ನು ತಿಳಿಯಬಹುದು. ಬಡ ಕುಟುಂಬಗಳಿಗೆ ವಿತರಿಸಬೇಕಾದ ಉಚಿತ ಅಕ್ಕಿ ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ. ಇದನ್ನು ತಡೆಯಲು ಆಹಾರ ಇಲಾಖೆ ಕಾರ್ಯಾ ಚರಣೆ ಮುಂದುವರಿಸಿದೆ.
ಕೇಂದ್ರ ಸರಕಾರ ಪ್ರತಿ ವರ್ಷ ಸರಾಸರಿ 10 ಸಾವಿರ ಕೋಟಿ ರುಪಾಯಿಗಳನ್ನು ಅನ್ನ ಯೋಜನೆಗಾಗಿ ವಿನಿಯೋಗಿಸುತ್ತದೆ. ಬಿಪಿಎಲ್ ಮತ್ತು ಅಂತ್ಯೋದಯ ಯೋಜನೆಯ ಕಾರ್ಡುದಾರರು ಇದರ -ಲಾನುಭವಿಗಳು. ಆದರೆ ಅನ್ನಭಾಗ್ಯ ಯೋಜನೆಯ ಅಕ್ಕಿ ವಿದೇಶಕ್ಕೂ ಕಳ್ಳಸಾಗಣೆ ಆಗುತ್ತಿದೆ ಎಂಬುದು ಕಂಡುಬಂದಿದೆ. ಅಂದರೆ, ಸಾಮಾನ್ಯ ಗ್ರಾಹಕ ಅಕ್ಕಿ ದರ ಏರಿಕೆ ಹಾಗೂ ಅಕ್ರಮದ ನಡುವೆ ಸಿಲುಕಿ ನಲುಗುವ ಸ್ಥಿತಿ ಬಂದಿದೆ. ಸರಕಾರಗಳು ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕು. ಅಕ್ಕಿ ಸಂಗ್ರಹ, ಮಾರಾಟವನ್ನು ಬಿಗಿ ಮಾಡಬೇಕು.