ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishwavani Editorial: ಬೇಲಿಯೇ ಹೊಲವನ್ನು ಮೇಯ್ದರೆ...

ಭಾರತದ ನೆಲದಲ್ಲೇ ಇದ್ದುಕೊಂಡು, ಇಲ್ಲಿನ ಗಾಳಿ- ನೀರು-ಅನ್ನವನ್ನು ಸೇವಿಸುತ್ತಿದ್ದು, ವರ್ಷಗಳಿಂದ ಸರಕಾರ ನೀಡುತ್ತ ಬಂದಿದ್ದ ಸಕಲ ಸವಲತ್ತುಗಳನ್ನೂ ಅನುಭವಿಸಿಕೊಂಡೇ ಬಂದ ಕೆಲ ಕಾಶ್ಮೀರಿಗರು ಅದಕ್ಕೆ ಪ್ರತಿಯಾಗಿ ದೇಶಕ್ಕೆ ಕೊಟ್ಟ ಕೊಡುಗೆಯಿದು. ಲಷ್ಕರ್ -ಎ-ತೈಬಾ, ಜೈಶ್-ಎ-ಮೊಹಮ್ಮದ್, ಹಿಜ್ಬುಲ್ ಮುಜಾಹಿದೀನ್ ಮುಂತಾದ ಭಯೋತ್ಪಾದಕ ಸಂಘಟನೆಗಳೊಂದಿಗೆ ಗುರುತಿಸಿಕೊಂಡಿದ್ದಾರೆ ಎನ್ನಲಾದ ಈ 14 ಮಂದಿ ಸ್ಥಳೀಯರನ್ನು ಈಗಾಗಲೇ ‘ಮೋಸ್ಟ್ ವಾಂಟೆಡ್ ಟೆರರಿಸ್ಟ್’ಗಳ ಪಟ್ಟಿಗೆ ಸೇರಿಸಲಾಗಿದೆ ಎಂಬುದು ಗಮನಾರ್ಹ

ಬೇಲಿಯೇ ಹೊಲವನ್ನು ಮೇಯ್ದರೆ...

Profile Ashok Nayak Apr 29, 2025 6:28 AM

ಬೇಲಿಯೇ ಹೊಲವನ್ನು ಮೇಯ್ದರೆ.. ಇದು ನಿಜಕ್ಕೂ ಆಘಾತಕಾರಿ ಸಂಗತಿಯೇ ಸರಿ. ಅದೆಂದರೆ- ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರು ಮೆರೆದ ಪೈಶಾಚಿಕ ಕೃತ್ಯಕ್ಕೆ 14 ಮಂದಿ ಸ್ಥಳೀಯರು ಕೈಜೋಡಿ ಸಿದ್ದರು ಎಂಬುದು. ‘ಒಲೆ ಹೊತ್ತಿ ಉರಿದಡೆ ನಿಲಬಹುದಲ್ಲದೆ, ಧರೆ ಹೊತ್ತಿ ಉರಿದಡೆ ನಿಲಲು ಬಾರದು’ ಎಂದಿರುವ ಭಕ್ತಿ ಭಂಡಾರಿ ಬಸವಣ್ಣನವರು ಅದೇ ವಚನದಲ್ಲಿ, ‘ಏರಿಯೇ ನೀರನ್ನು ಕುಡಿ ದುಬಿಟ್ಟರೆ, ಬೇಲಿಯೇ ಹೊಲವನ್ನು ಮೇಯ್ದುಬಿಟ್ಟರೆ, ನಾರಿಯೇ ತನ್ನ ಮನೆಯಲ್ಲಿ ಕಳ್ಳತನ ಮಾಡಿದರೆ ಇನ್ನಾರಿಗೆ ದೂರಬೇಕು?’ ಎಂಬರ್ಥದಲ್ಲಿ ಪ್ರಶ್ನಿಸಿದ್ದಾರೆ.

ಭಾರತದ ನೆಲದಲ್ಲೇ ಇದ್ದುಕೊಂಡು, ಇಲ್ಲಿನ ಗಾಳಿ- ನೀರು-ಅನ್ನವನ್ನು ಸೇವಿಸುತ್ತಿದ್ದು, ವರ್ಷಗಳಿಂದ ಸರಕಾರ ನೀಡುತ್ತ ಬಂದಿದ್ದ ಸಕಲ ಸವಲತ್ತುಗಳನ್ನೂ ಅನುಭವಿಸಿಕೊಂಡೇ ಬಂದ ಕೆಲ ಕಾಶ್ಮೀರಿಗರು ಅದಕ್ಕೆ ಪ್ರತಿಯಾಗಿ ದೇಶಕ್ಕೆ ಕೊಟ್ಟ ಕೊಡುಗೆಯಿದು. ಲಷ್ಕರ್ -ಎ-ತೈಬಾ, ಜೈಶ್-ಎ-ಮೊಹಮ್ಮದ್, ಹಿಜ್ಬುಲ್ ಮುಜಾಹಿದೀನ್ ಮುಂತಾದ ಭಯೋತ್ಪಾದಕ ಸಂಘಟನೆಗಳೊಂದಿಗೆ ಗುರುತಿಸಿಕೊಂಡಿದ್ದಾರೆ ಎನ್ನಲಾದ ಈ 14 ಮಂದಿ ಸ್ಥಳೀಯರನ್ನು ಈಗಾಗಲೇ ‘ಮೋಸ್ಟ್ ವಾಂಟೆಡ್ ಟೆರರಿಸ್ಟ್’ಗಳ ಪಟ್ಟಿಗೆ ಸೇರಿಸಲಾಗಿದೆ ಎಂಬುದು ಗಮನಾರ್ಹ.

ಇದನ್ನೂ ಓದಿ: Vishwavani Editorial: ಹುಲಿಯ ಚರ್ಮ ಹೊದ್ದ ನರಿ!

ಪಹಲ್ಗಾಮ್ ಪೈಶಾಚಿಕ ಕೃತ್ಯದ ನಂತರವಷ್ಟೇ ಈ ದ್ರೋಹಿ ಕೃತ್ಯದ ಮಾಹಿತಿ ಬಯಲಾಗಿದೆ. ಹುಡುಕುತ್ತ ಹೋದರೆ ಇಂಥ ‘ಬೆನ್ನಿಗಿರಿಯುವವರ’ ಸಂಖ್ಯೆ ಅದೆಷ್ಟಿರ ಬಹುದೋ, ದೇಶದ ಯಾವ ಯಾವ ಬಿಲಗಳಲ್ಲಿ ಇಂಥವರು ಅಡಗಿರಬ ಹುದೋ?! ಸೌಲಭ್ಯ-ಸವಲತ್ತುಗಳಿಗೆ ಭಾರತವನ್ನು ನೆಚ್ಚುತ್ತಾ, ಶತ್ರುರಾಷ್ಟ್ರಕ್ಕೆ ನಿಷ್ಠೆ ತೋರುವ ಇಂಥ ದೇಶದ್ರೋಹಿಗಳನ್ನು ಹೆಡೆಮುರಿ ಕಟ್ಟಿ ಕಠಿಣ ಶಿಕ್ಷೆಗೆ ಗುರಿಪಡಿಸದಿದ್ದಲ್ಲಿ, ಇಂಥವರ ಜಾಲವು ಮತ್ತಷ್ಟು ವ್ಯಾಪಿಸುವ ಸಾಧ್ಯತೆಯಿದೆ.

ಕಾರ್ಗಿಲ್ ಯುದ್ಧದ ವೇಳೆ ಭಾರತವು ಪಾಕಿಸ್ತಾನಕ್ಕೆ ಎಂಥ ತಪರಾಕಿ ನೀಡಿದೆ, ಸರ್ಜಿಕಲ್ ಸ್ಟ್ರೈಕ್ ಮಾಡುವ ಮೂಲಕ ಉಗ್ರರ ಪಾಳಯವನ್ನು ಅದ್ಯಾವ ಪರಿಯಲ್ಲಿ ಹುಡಿಗಟ್ಟಿದೆ ಎಂಬುದನ್ನು ಅರಿತ ನಂತರವಾದರೂ, ಶತ್ರುರಾಷ್ಟ್ರದೊಂದಿಗೆ ಕೈಜೋಡಿಸಿದವರಿಗೆ ಒದಗುವ ಸ್ಥಿತಿಯ ಕುರಿತು ಇಂಥವರು ಅರಿಯಬೇಕಿತ್ತು. ಆದರೆ ಅದಕ್ಕೆ ಮತಾಂಧತೆ ಬಿಡಬೇಕಲ್ಲ!

ಭಾರತದ ಭದ್ರತೆ, ಸಮಗ್ರತೆ, ಸಾರ್ವಭೌಮತೆಗಳಿಗೆ ಕುತ್ತು ತರುವ ಇಂಥ ದೇಶದ್ರೋಹಿಗಳನ್ನು ಹುಡುಕಿ ಹುಡುಕಿ ಬೇಟೆಯಾಡಬೇಕಿದೆ.