ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishwavani Editorial: ಭಾರತದ ರಾಜತಾಂತ್ರಿಕ ಗೆಲುವು

ಮುಂಬೈ ದಾಳಿಯ ಮುಖ್ಯ ಸಂಚುಕೋರರಲ್ಲಿ ಒಬ್ಬನಾದ ಡೇವಿಡ್ ಹೆಡ್ಲಿಯ ಭಾರತ ಪ್ರವಾಸ ಮತ್ತು ಇತರ ಯೋಜನೆಗಳಿಗೆ ರಾಣಾ ಬೆಂಗಾವಲಾಗಿದ್ದ. ಈತ ಸದ್ಯ ಅಮೆರಿಕದ ಜೈಲಿನಲ್ಲಿದ್ದು ಭಾರತಕ್ಕೆ ಕರೆ ತರಬೇಕಿದೆ. ಅಲ್ಲದೆ, ಇದೇ ದಾಳಿಯ ಇನ್ನಿತರ ಭಯೋತ್ಪಾದಕರು ಪಾಕಿಸ್ತಾನದಲ್ಲಿ ಮುಕ್ತವಾಗಿ ಸುತ್ತಾಡುತ್ತಿದ್ದಾರೆ.

ಭಾರತದ ರಾಜತಾಂತ್ರಿಕ ಗೆಲುವು

-

Ashok Nayak Ashok Nayak Apr 11, 2025 4:51 AM

ಭಾರತದ ಇತಿಹಾಸದಲ್ಲಿ ಮೈಲುಗಲ್ಲೊಂದು ಸೃಷ್ಟಿಯಾಗಿದೆ. ಅಂತಾರಾಷ್ಟ್ರೀಯ ಕುಖ್ಯಾತಿಯ ಉಗ್ರ, 26/11 ಮುಂಬೈ ದಾಳಿಯ ರೂವಾರಿಗಳಲ್ಲಿ ಒಬ್ಬನಾದ ತಹಾವ್ವುರ್ ರಾಣಾನ ಬಂಧನ ವಾಗಿದೆ. ರಾಷ್ಟ್ರೀಯ ತನಿಖಾ ಸಂಸ್ಥೆಯು(ಎನ್‌ಐಎ) ಮುಂಬೈ ದಾಳಿಯ ಪ್ರಕರಣದಲ್ಲಿ ಮುಖ್ಯ ಪಾತ್ರಧಾರಿಯನ್ನು ವಶಕ್ಕೆ ಪಡೆದು, ಅಮೆರಿಕದಿಂದ ವಾಯುಪಡೆಯ ವಿಶೇಷ ವಿಮಾನದಲ್ಲಿ ಕರೆದುಕೊಂಡು ಬಂದಿದ್ದಾರೆ. ಇದು ಭಾರತಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊರೆತ ಬಹು ಮುಖ್ಯ ರಾಜತಾಂತ್ರಿಕ ಗೆಲುವಾಗಿದೆ. 166 ಜನರನ್ನು ಬಲಿ ತೆಗೆದುಕೊಂಡ 2008ರ ಮುಂಬೈ ಭಯೋ ತ್ಪಾದಕ ದಾಳಿಗೆ ರಾಣಾ ಬೆಂಬಲವನ್ನು ಒದಗಿಸಿದ್ದ.

ಈತನನ್ನು 2009ರಲ್ಲಿ ಅಮೆರಿಕದಲ್ಲಿ ಬಂಧಿಸಲಾಗಿತ್ತು. ಆದರೆ ಭಾರತಕ್ಕೆ ಈತನ ಹಸ್ತಾಂತರ ಆಗಿದ್ದು ಈಗ. ವೈದ್ಯನಾಗಿ ಪಾಕಿಸ್ತಾನ ಸೇನೆಯಲ್ಲೂ ಕೆಲಸ ಮಾಡಿದ ರಾಣಾ ಬಳಿಕ ಕೆನಡಾದಲ್ಲಿ ವಲಸೆ ಕಚೇರಿ ತೆರೆದು ನರಬಲಿಯನ್ನು ಪಡೆಯುವ ಯೋಜನೆ ರೂಪಿಸಿದ್ದು ಮಾತ್ರ ಘೋರ ದುರಂತ.

ಇದನ್ನೂ ಓದಿ: Vishwavani Editorial: ಬಾಂಗ್ಲಾ ವರ್ತನೆ ಆಘಾತಕಾರಿ

ಮುಂಬೈ ದಾಳಿಯ ಮುಖ್ಯ ಸಂಚುಕೋರರಲ್ಲಿ ಒಬ್ಬನಾದ ಡೇವಿಡ್ ಹೆಡ್ಲಿಯ ಭಾರತ ಪ್ರವಾಸ ಮತ್ತು ಇತರ ಯೋಜನೆಗಳಿಗೆ ರಾಣಾ ಬೆಂಗಾವಲಾಗಿದ್ದ. ಈತ ಸದ್ಯ ಅಮೆರಿಕದ ಜೈಲಿನಲ್ಲಿದ್ದು ಭಾರತಕ್ಕೆ ಕರೆತರಬೇಕಿದೆ. ಅಲ್ಲದೆ, ಇದೇ ದಾಳಿಯ ಇನ್ನಿತರ ಭಯೋತ್ಪಾದಕರು ಪಾಕಿಸ್ತಾನದಲ್ಲಿ ಮುಕ್ತವಾಗಿ ಸುತ್ತಾಡುತ್ತಿದ್ದಾರೆ. ಲಷ್ಕರ್ -ಎ-ತಯ್ಬಾ ಸಂಸ್ಥಾಪಕ ಹಫೀಜ್ ಸಯೀದ್ ಸುರಕ್ಷಿತ ತಾಣ ಗಳಲ್ಲಿ ವಾಸಿಸುತ್ತಿದ್ದಾನೆ.

ಝಕಿ ಉರ್ ರೆಹಮಾನ್ ಲಖ್ವಿ, ಸಾಜಿದ್ ಮಿರ್, ಅಬ್ದುರ್ ರೆಹಮಾನ್ ಪಾಷಾ, ಅಲ್-ಖೈದಾ ನಾಯಕ ಇಲ್ಯಾಸ್ ಕಾಶ್ಮೀರಿ ಮತ್ತು ಮೇಜರ್ ಇಕ್ಬಾಲ್ ಮತ್ತು ಮೇಜರ್ ಸಮೀರ್ ಅಲಿ (ಐಎಸ್ ಸಮೀರ್ ಅಲಿ) ಇವರೆಲ್ಲರೂ ಭಾರತಕ್ಕೆ ಬೇಕಾಗಿದ್ದು, ನಮ್ಮ ದೇಶಕ್ಕೆ ಕರೆ ತಂದು ವಿಚಾರಣೆ ನಡೆಸ ಬೇಕಾಗಿದೆ. ಪಾಕಿಸ್ತಾನದ ಆತಿಥ್ಯದಲ್ಲಿ ವಾಸಿಸುತ್ತಿರುವ ಈ ಉಗ್ರರನ್ನು ಭಾರತಕ್ಕೆ ಕರೆ ತರುವುದು ಸುಲಭದ ಕೆಲಸವೇನೂ ಅಲ್ಲ.

ಈಗ ಅಮೆರಿಕ ನಿವಾಸಿಯಾಗಿರುವ ಇನ್ನೊಬ್ಬ ಉಗ್ರ ಡೇವಿಡ್ ಹೆಡ್ಲಿಯನ್ನು ಆದ್ಯತೆ ಮೇಲೆ ಭಾರತಕ್ಕೆ ಗಡೀಪಾರು ಮಾಡುವಂತೆ ಒತ್ತಡ ಹೇರಬೇಕಾಗಿದೆ. ಭಾರತದ ನೆಲದ ಕಾನೂನಿನ ಕುಣಿಕೆಯಿಂದ ಯಾವುದೇ ದೇಶದ್ರೋಹಿ ಪಾರಾಗಲು ಸಾಧ್ಯವಿಲ್ಲ ಎಂಬ ಸಂದೇಶವನ್ನು ರವಾನಿಸ ಬೇಕಾಗಿದೆ. ರಾಜತಾಂತ್ರಿಕ ಗೆಲುವಿನೊಂದಿಗೆ, ನ್ಯಾಯದ ಗೆಲುವು ಆಗಬೇಕಿದೆ.