ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Vishwavani Editorial: ಭಾರತದ ನಿಲುವು ಜಗತ್ತಿಗೆ ಭರವಸೆ

ನಮಗೆ ಯಾರ ಅಪ್ಪಣೆಯೂ ಬೇಕಾಗಿಲ್ಲ ಎಂದು ಭಾರತ ಬಲವಾಗಿ ಹೇಳಿತು. ಟ್ರಂಪ್ ಹೀಗೆ ಹಾಸ್ಯಾಸ್ಪದ ಹೇಳಿಕೆ ನೀಡುತ್ತಿರುವುದು ಇದು ಹೊಸತೇನಲ್ಲ. ಇದರ ಮಧ್ಯೆ ನಡೆದಿರುವ ಇನ್ನೊಂದು ಬೆಳವಣಿಗೆಯೆಂದರೆ ರಷ್ಯಾದಿಂದ ಮತ್ತೆ 6 ಕೋಟಿ ಬ್ಯಾರೆಲ್ ತೈಲವನ್ನು ಭಾರತ ಆಮದು ಮಾಡಿಕೊಳ್ಳುತ್ತಿದೆ.

Vishwavani Editorial: ಭಾರತದ ನಿಲುವು ಜಗತ್ತಿಗೆ ಭರವಸೆ

-

Ashok Nayak
Ashok Nayak Mar 26, 2026 9:26 AM

ಒಂದು ಕಡೆ ಭಾರತ ರಷ್ಯಾದಿಂದ ತೈಲ ತರಿಸಿಕೊಳ್ಳದಂತೆ ಮಾಡಲು ಅಮೆರಿಕ ಗರಿಷ್ಠ ಪ್ರಯತ್ನ ಮಾಡುತ್ತಿದೆ. ಹಲವು ತಿಂಗಳು ಬೇಕಾಬಿಟ್ಟಿ ತೆರಿಗೆ ಹಾಕಿ, ರಷ್ಯಾದಿಂದ ತೈಲ ತರಿಸಿದರೆ ಇದೇ ಗತಿ ಎಂದು ಬೆದರಿಸಿತು. ಬಹಿರಂಗ ಜಗತ್ತಿಗೆ ತೋರಿಸಿಕೊಳ್ಳದಿದ್ದರೂ, ಅಂತರಂಗದಲ್ಲಿ ಭಾರತ ರಷ್ಯಾದಿಂದ ತೈಲ ಖರೀದಿಯನ್ನು ತುಸು ಕಡಿಮೆ ಮಾಡಿದೆಯೇ ಎಂಬ ಪ್ರಶ್ನೆಗಳು ಹುಟ್ಟಿಕೊಂಡಿದ್ದವು.

ಆದರೆ ಇರಾನ್ ಮೇಲೆ ಅಮೆರಿಕ ದಾಳಿ ಮಾಡಿದ್ದೇ ತಡ, ಭಾರತ ರಷ್ಯಾದಿಂದ ದೊಡ್ಡ ಪ್ರಮಾಣದಲ್ಲಿ ತೈಲವನ್ನು ಆಮದು ಮಾಡಿಕೊಳ್ಳುತ್ತಿರುವುದು ಖಚಿತವಾಗಿದೆ. ಮೊದಲು ಭಾರತಕ್ಕೆ ರಷ್ಯಾದಿಂದ ಹಡಗು ಹೊರಟಾಗ, ಯುದ್ಧವಾದ್ದರಿಂದ ನಾನೇ ಭಾರತಕ್ಕೆ ಒಂದು ತಿಂಗಳು ತರಿಸಿಕೊಳ್ಳಲು ಅನುಮತಿ ನೀಡಿದ್ದೇನೆ ಎಂದು ಯಾರೂ ಕೇಳದಿದ್ದರೂ ಅಮೆರಿಕ ತಾನೇ ಹೇಳಿಕೆಯನ್ನು ಬಿಡುಗಡೆ ಮಾಡಿತು.

ನಮಗೆ ಯಾರ ಅಪ್ಪಣೆಯೂ ಬೇಕಾಗಿಲ್ಲ ಎಂದು ಭಾರತ ಬಲವಾಗಿ ಹೇಳಿತು. ಟ್ರಂಪ್ ಹೀಗೆ ಹಾಸ್ಯಾಸ್ಪದ ಹೇಳಿಕೆ ನೀಡುತ್ತಿರುವುದು ಇದು ಹೊಸತೇನಲ್ಲ. ಇದರ ಮಧ್ಯೆ ನಡೆದಿರುವ ಇನ್ನೊಂದು ಬೆಳವಣಿಗೆಯೆಂದರೆ ರಷ್ಯಾದಿಂದ ಮತ್ತೆ 6 ಕೋಟಿ ಬ್ಯಾರೆಲ್ ತೈಲವನ್ನು ಭಾರತ ಆಮದು ಮಾಡಿಕೊಳ್ಳುತ್ತಿದೆ.

ಇದನ್ನೂ ಓದಿ: Vishwavani Editorial: ಕೆಡವೋದು ಸುಲಭ, ಕಟ್ಟೋದು ಕಷ್ಟ

ಈ ತೈಲ ಮುಂದಿನ ತಿಂಗಳು ಭಾರತವನ್ನು ತಲುಪಲಿದೆ. ರಿಲಯನ್ಸ್ ಇಂಡಸ್ಟ್ರೀಸ್ ಇರಾನ್‌ನಿಂದಲೂ 50 ಲಕ್ಷ ಬ್ಯಾರೆಲ್ ತೈಲವನ್ನು ತರಿಸಿಕೊಳ್ಳಲು ಸಿದ್ಧವಾಗಿದೆ. ಅಮೆರಿಕ ಭಾರತವನ್ನು ನಿಯಂತ್ರಿಸಲು ಯತ್ನಿಸಿದಂತೆಲ್ಲ ಅದು ತನ್ನ ಯತ್ನದಲ್ಲಿ ಸೋಲುತ್ತಿದೆ. ಭಾರತ ತನ್ನ ಅಗತ್ಯಕ್ಕೆ ತಕ್ಕಂತೆ ಇಡೀ ಜಗತ್ತಿನಲ್ಲಿ ವ್ಯವಹಾರ ನಡೆಸುತ್ತಿದೆ.

ಪರಸ್ಪರ ವೈರಿಗಳಾದ ಅಮೆರಿಕ, ರಷ್ಯಾ ಎರಡರೊಂದಿಗೂ ಉತ್ತಮ ಸಂಬಂಧವನ್ನೇ ಉಳಿಸಿಕೊಂಡಿದೆ. ಹಾಗಂತ ತನ್ನ ಹಿತಾಸಕ್ತಿಯಲ್ಲಿ ಎಲ್ಲೂ ರಾಜಿ ಮಾಡಿಕೊಂಡಿಲ್ಲ. ಇತ್ತ ಕಡೆ ಇಸ್ರೇಲ್ ಜೊತೆಗೆ ಉತ್ತಮ ಬಾಂಧವ್ಯ ಹೊಂದಿರುವ ಭಾರತ, ಆ ಕಡೆ ಇಸ್ರೇಲ್‌ನ ವೈರಿ ಇರಾನ್ ನೊಂದಿಗೂ ಅಷ್ಟೇ ಉತ್ತಮ ಸ್ನೇಹವನ್ನು ಇರಿಸಿಕೊಂಡಿದೆ.

ಇರಾನ್‌ನ ಹೊರ್ಮುಜ್ ಜಲಸಂಽಯಲ್ಲಿ ಭಾರತದ ತೈಲ ಹಡಗುಗಳು ಸಿಲುಕಿ ಕೊಂಡಿದ್ದರೂ, ಇರಾನ್ ಮುತುವರ್ಜಿ ವಹಿಸಿ ಈ ಹಡಗುಗಳು ಭಾರತದತ್ತ ಹೊರಡಲು ನೆರವಾಗಿದೆ. ಭಾರತ ಇಲ್ಲಿ ಒಂದು ಕಡೆ ವಾಲಿಲ್ಲ. ಪ್ರಸ್ತುತ ಜಗತ್ತಿನ ಪ್ರಬಲ ಶಕ್ತಿಯಾಗಿರುವ ಭಾರತದ ಈ ನಿಲುವು ಇಡೀ ಜಗತ್ತಿಗೇ ಭರವಸೆಯಾಗಿದೆ.