ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Vishwavani Editorial: ಮಾಡೋದು ಅನಾಚಾರ, ಮನೆಮುಂದೆ..

‘ಕಂಕುಳಲ್ಲಿ ದೊಣ್ಣೆ, ಕೈಯಲ್ಲಿ ಶರಣಾರ್ಥಿ’ ಎಂಬ ಮಾತಿನಂತೆ, ಶಾಂತಿಮಂತ್ರ ಪಠಿಸುತ್ತಲೇ ತನಗಾಗದ ದೇಶಗಳ ಮೇಲೆ ಯುದ್ಧಕ್ಕೆ ತೆರಳುವ ಅಥವಾ ಯಾವುದಾದರೂ ಎರಡು ರಾಷ್ಟ್ರಗಳ ನಡುವೆ ಹಿತಾಸಕ್ತಿಯ ಸಂಘರ್ಷ ತಲೆದೋರಿದ್ದರೆ ಅವುಗಳ ನಡುವೆ ಯುದ್ಧಕ್ಕೆ ತಿದಿಯೂದುವ ಟ್ರಂಪ್, ತಮ್ಮನ್ನು ತಾವು ‘ಶಾಂತಿದೂತ’ ಎಂದು ಭ್ರಮಿಸಿದ್ದು, ನೊಬೆಲ್ ಶಾಂತಿ ಪುರಸ್ಕಾರ ಕ್ಕಾಗಿ ಹಟಮಾಡಿದ್ದು ಕಳೆದ ವರ್ಷದ ದೊಡ್ಡ ಜೋಕ್.

Vishwavani Editorial: ಮಾಡೋದು ಅನಾಚಾರ, ಮನೆಮುಂದೆ..

-

Ashok Nayak
Ashok Nayak Jan 24, 2026 11:49 AM

ಗಾಜಾಪಟ್ಟಿ ಪ್ರದೇಶದಲ್ಲಿ ಶಾಶ್ವತವಾಗಿ ಶಾಂತಿ ನೆಲೆಸುವಂತಾಗಲು ಮತ್ತು ಸಂಭಾವ್ಯ ಜಾಗತಿಕ ಬಿಕ್ಕಟ್ಟನ್ನು ಪರಿಹರಿಸಲೆಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ‘ಶಾಂತಿ ಮಂಡಳಿ’ಯನ್ನು ಅನಾವರಣಗೊಳಿಸಿದ್ದಾರಂತೆ!

ನಿರೀಕ್ಷೆಯಂತೆ ಪಾಕಿಸ್ತಾನವು ಈ ಮಂಡಳಿಯ ನಿಯಮಗಳಿಗೆ ಸಹಿ ಹಾಕಿದ್ದರೆ, ಭಾರತ ಸೇರಿದಂತೆ ಸಾಕಷ್ಟು ರಾಷ್ಟ್ರಗಳು ಈ ನಿಟ್ಟಿನಲ್ಲಿ ದೂರ ಉಳಿದಿವೆ. ಈ ಬೆಳವಣಿಗೆಯನ್ನು ಕಂಡು ಟ್ರಂಪ್ ಮಹಾಶಯರು ಒಳಗೊಳಗೇ ಗೊಂದಲಕ್ಕೆ ಈಡಾಗಿರಬೇಕು. ಟ್ರಂಪ್‌ರ ಈ ಜಗನ್ನಾಟಕವು ‘ಕುರಿಯ ಚರ್ಮವನ್ನು ಹೊದ್ದ ತೋಳದ’ದ ಕಥೆಯನ್ನು ನೆನಪಿಸು ವಂತಿದೆ.

ಇದನ್ನೂ ಓದಿ: Vishwavani Editorial: ಕುಸಿದಿದ್ದು ಟ್ಯಾಂಕ್ ಮಾತ್ರವೇ ಅಲ್ಲ!

‘ಕಂಕುಳಲ್ಲಿ ದೊಣ್ಣೆ, ಕೈಯಲ್ಲಿ ಶರಣಾರ್ಥಿ’ ಎಂಬ ಮಾತಿನಂತೆ, ಶಾಂತಿಮಂತ್ರ ಪಠಿಸುತ್ತಲೇ ತನಗಾಗದ ದೇಶಗಳ ಮೇಲೆ ಯುದ್ಧಕ್ಕೆ ತೆರಳುವ ಅಥವಾ ಯಾವುದಾದರೂ ಎರಡು ರಾಷ್ಟ್ರಗಳ ನಡುವೆ ಹಿತಾಸಕ್ತಿಯ ಸಂಘರ್ಷ ತಲೆದೋರಿದ್ದರೆ ಅವುಗಳ ನಡುವೆ ಯುದ್ಧಕ್ಕೆ ತಿದಿಯೂದುವ ಟ್ರಂಪ್, ತಮ್ಮನ್ನು ತಾವು ‘ಶಾಂತಿದೂತ’ ಎಂದು ಭ್ರಮಿಸಿದ್ದು, ನೊಬೆಲ್ ಶಾಂತಿ ಪುರಸ್ಕಾರಕ್ಕಾಗಿ ಹಟಮಾಡಿದ್ದು ಕಳೆದ ವರ್ಷದ ದೊಡ್ಡ ಜೋಕ್.

ಇಷ್ಟು ಸಾಲದೆಂಬಂತೆ ಈಗ ‘ಶಾಂತಿಮಂಡಳಿ’ ಎಂಬ ಅಡ್ಡಾವನ್ನು ಹುಟ್ಟುಹಾಕಿ, ನಗೆಪಾಟಲಿನ ಸಂಪುಟಕ್ಕೆ ಮತ್ತೊಂದು ಅಧ್ಯಾಯವನ್ನು ಸೇರಿಸಿದ್ದಾರಷ್ಟೇ. ತನಗೆ ದುಡ್ಡು-ಕಾಸು ಸೇರಿದಂತೆ ಸಾಕಷ್ಟು ನೆಲೆಯಲ್ಲಿ ಅಮೆರಿಕ ನೆರವಾಗುತ್ತಿದೆ ಎಂಬ ದಾಕ್ಷಿಣ್ಯಕ್ಕೆ ಸಿಲುಕಿ ಪಾಕಿಸ್ತಾನವು ಈ ಮಂಡಳಿಯ ನಿಯಮಗಳಿಗೆ ಸಹಿಹಾಕಿರಬೇಕಷ್ಟೇ.

ಮಿಕ್ಕಂತೆ, ಭಾರತ ಸೇರಿದಂತೆ ಅನೇಕ ರಾಷ್ಟ್ರಗಳು ಈ ನಿಟ್ಟಿನಲ್ಲಿ ‘ತಾರಮ್ಮಯ್ಯ’ ಮಾಡಿರುವುದು ಟ್ರಂಪ್‌ಗೆ ಒದಗಿದ ‘ರಾಜತಾಂತ್ರಿಕ ತಪರಾಕಿ’ ಎಂದರೆ ಅತಿಶಯೋಕ್ತಿ ಯೇನಲ್ಲ. ಇದರ ಅರಿವಿದ್ದೂ ಟ್ರಂಪ್ ತಮಗೇನೂ ಆಗಿಲ್ಲ ಎಂಬಂತೆ ನಾಟಕವಾಡು ತ್ತಿದ್ದಾರೆ ಎನಿಸುತ್ತದೆ. ಆಡಲಿ ಬಿಡಿ, ಎಷ್ಟೇ ಆದರೂ ಅವರು ‘ಜಗನ್ನಾಟಕ ಸೂತ್ರಧಾರಿ’ ಯಲ್ಲವೇ?!