ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishwavani Editorial: ಸಾಧನೆ ನಿರಂತರವಾಗಿರಲಿ

ಇದು ದಶಕಗಳ ಹಿಂದಿನ ಮಾತು. ತಾನು ನಿರ್ಮಿಸಿದ ಉಪಗ್ರಹವನ್ನು ಅದರ ಉಡಾವಣಾ ತಾಣದೆಡೆಗೆ ಒಯ್ಯುವುದಕ್ಕೂ ಮುನ್ನ, ಕಾಂತೀಯತೆ-ನಿರೋಧಕ ವೇದಿಕೆಯಂಥ ಉಪಕರಣದ ಅಲಭ್ಯತೆಯಿಂದಾಗಿ ಮರದ ಎತ್ತಿನ ಗಾಡಿಯ ಮೇಲೆ ಉಪಗ್ರಹವನ್ನು ಇರಿಸಿ ಕಾರ್ಯಸಾಧಿಸಿ ಕೊಳ್ಳಬೇಕಾದಂಥ ದುರ್ಭರ ಪರಿಸ್ಥಿತಿಗೆ ಸಾಕ್ಷಿಯಾಗಿತ್ತು ಇಸ್ರೋ

ಸಾಧನೆ ನಿರಂತರವಾಗಿರಲಿ

Profile Ashok Nayak Mar 15, 2025 6:07 AM

ಇದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಪಾಲಿಗೆ ಮತ್ತೊಂದು ಮೈಲಿಗಲ್ಲು. ಸಂಸ್ಥೆ ಕೈಗೊಂಡಿದ್ದ ‘ಸ್ಪಾಡೆಕ್ಸ್ ಕಾರ್ಯಾಚರಣೆ’ ಪ್ರಯೋಗ ಸಂಪೂರ್ಣ ಯಶಸ್ವಿಯಾಗಿದೆ. ಭಾರತದ ವತಿಯಿಂದ ಅಂತರಿಕ್ಷದಲ್ಲೊಂದು ನಿಲ್ದಾಣವನ್ನು ನಿರ್ಮಿ ಸುವ ಕಸರತ್ತಿನ ಭಾಗವಾಗಿದ್ದ ಈ ಘಟ್ಟವನ್ನು ಇಸ್ರೋ ಯಶಸ್ವಿಯಾಗಿ ದಾಟಿದೆ. ಇದು ಇಸ್ರೋಗೆ ಮಾತ್ರವಲ್ಲದೆ ಸಮಸ್ತ ಭಾರತೀಯರ ಪಾಲಿಗೆ ಸಂತಸದ ಸಂಗತಿಯೇ ಸರಿ. ಪ್ರಯೋಗದ ಈ ಘಟ್ಟವು ಯಶಸ್ವಿಯಾಗಿರುವುದರಿಂದ, ಅಂತರಿಕ್ಷ ನಿಲ್ದಾಣ, ‘ಚಂದ್ರ ಯಾನ-4’ ಮತ್ತು ‘ಗಗನಯಾನ’ ಯೋಜನೆಗಳು ಸೇರಿದಂತೆ ಇಸ್ರೋದ ಮುಂಬರುವ ಹತ್ತು ಹಲವು ಮಹತ್ವಾಕಾಂಕ್ಷಿ ಕಾರ್ಯಾಚರಣೆಗಳಿಗೆ ಭೀಮಬಲ ಸಿಕ್ಕಂತಾಗಿದೆ ಎನ್ನುತ್ತಾರೆ ಕ್ಷೇತ್ರತಜ್ಞರು.

ಇದನ್ನೂ ಓದಿ: Vishwavani Editorial: ಬಹುಭಾಷೆ ಇರಲಿ, ತ್ರಿಭಾಷೆಯಲ್ಲ

ಇದು ದಶಕಗಳ ಹಿಂದಿನ ಮಾತು. ತಾನು ನಿರ್ಮಿಸಿದ ಉಪಗ್ರಹವನ್ನು ಅದರ ಉಡಾವಣಾ ತಾಣದೆಡೆಗೆ ಒಯ್ಯುವುದಕ್ಕೂ ಮುನ್ನ, ಕಾಂತೀಯತೆ-ನಿರೋಧಕ ವೇದಿಕೆಯಂಥ ಉಪಕರಣದ ಅಲಭ್ಯತೆಯಿಂದಾಗಿ ಮರದ ಎತ್ತಿನ ಗಾಡಿಯ ಮೇಲೆ ಉಪಗ್ರಹವನ್ನು ಇರಿಸಿ ಕಾರ್ಯಸಾಧಿಸಿಕೊಳ್ಳಬೇಕಾದಂಥ ದುರ್ಭರ ಪರಿಸ್ಥಿತಿಗೆ ಸಾಕ್ಷಿಯಾಗಿತ್ತು ಇಸ್ರೋ.

ಇಂಥ ಹಲವು ಸವಾಲುಗಳು, ಸೋಲುಗಳು, ಸಂಕಷ್ಟಗಳನ್ನು ದಾಟುವಂಥ ಸಂಕಲ್ಪ ಶಕ್ತಿಯು ಇಸ್ರೋದ ವಿವಿಧ ಸ್ತರದ ಸಿಬ್ಬಂದಿಗಳಲ್ಲಿ ಇದ್ದ ಕಾರಣದಿಂದಲೇ ಕಾಲಾನು ಕಾಲಕ್ಕೆ ಹಲವು ವಿಕ್ರಮಗಳನ್ನು ದಾಖಲಿಸುವುದು ಸಂಸ್ಥೆಗೆ ಸಾಧ್ಯವಾಯಿತು. ಪಗ್ರಹ ಉಡಾವಣೆಗೂ ಬೇರೊಂದು ದೇಶದ ನೆಲೆ ಮತ್ತು ಉಪಗ್ರಹ ವಾಹಕವನ್ನು ನೆಚ್ಚಬೇಕಾಗಿದ್ದ ಭಾರತವಿಂದು, ಈಗ ಈ ವಿಷಯದಲ್ಲಿ ಸ್ವಾವಲಂಬಿಯಾಗಿದೆ ಎಂದರೆ ಇಸ್ರೋ ಸಿಬ್ಬಂದಿ ಗಳ ಪರಿಶ್ರಮ, ಬದ್ಧತೆ, ನೈಪುಣ್ಯಗಳೇ ಅದಕ್ಕೆ ಕಾರಣ ಎನ್ನಬೇಕು.

ಉಪಗ್ರಹ ವಾಹಕಗಳು ಮತ್ತಿತರ ತಾಂತ್ರಿಕ ಸಾಧನಗಳ ತಯಾರಿಯಿಂದ ಮೊದಲ್ಗೊಂಡು, ಏಕಕಾಲಕ್ಕೆ ವಿವಿಧ ದೇಶಗಳ ನೂರಾರು ಉಪಗ್ರಹಗಳನ್ನು ಉಡಾವಣೆ ಮಾಡುವಲ್ಲಿ ಯವರೆಗೆ, ಮಂಗಳ ಕಕ್ಞಾಗಾಮಿ ನೌಕೆಯ ಪರಿಕ್ರಮದಿಂದ ಮೊದಲ್ಗೊಂಡು ಚಂದ್ರ ಯಾನ-3 ಯೋಜನೆಯವರೆಗೆ ಇಸ್ರೋ ದಾಖಲಿಸಿರುವ ಸಾಧನೆ ಜನ ಮೆಚ್ಚುವಂತಿದೆ ಎನ್ನಬೇಕು.

ಭಾರತವನ್ನು ವಿವಿಧ ನೆಲೆಗಟ್ಟಿನಲ್ಲಿ ‘ಆತ್ಮನಿರ್ಭರ ದೇಶ’ವನ್ನಾಗಿಸುವ ಪ್ರಧಾನಿ ಮೋದಿ ಯವರ ಸಂಕಲ್ಪಕ್ಕೆ ಇಂಥ ಸಾಧನೆಗಳು ಬಲತುಂಬುತ್ತವೆ ಎಂಬುದರಲ್ಲಿ ಎರಡು ಮಾತಿಲ್ಲ.