Vishwavani Editorial: ಸಿದ್ದರಾಮಯ್ಯ ನಡೆ ಮಾದರಿ
ಕಾಂಗ್ರೆಸ್‌ನ ಬಹುಪಾಲು ನಾಯಕರಿಗಿಂತ ದೊಡ್ಡ ಮಟ್ಟದಲ್ಲಿ ಮೋದಿ ವಿರುದ್ಧ ಸಿದ್ದರಾಮಯ್ಯ ಧ್ವನಿ ಎತ್ತಿದ್ದಾರೆ. ಕೇಂದ್ರ ಸರಕಾರವನ್ನು ಸಿದ್ದರಾಮಯ್ಯ ಅವರು ಟೀಕಿಸಿದಾಗಲೆಲ್ಲ, ಕೇಂದ್ರದೊಂದಿಗೆ ಸಮನ್ವಯ ಇರದೇ ಹೋದರೆ, ದಿನ ಬೆಳಗಾದರೇ ಪ್ರಧಾನಿಗಳನ್ನು ಟೀಕಿಸಿದರೆ ರಾಜ್ಯದ ಅಭಿವೃದ್ಧಿಗೆ ಹೇಗೆ ಸಾಧ್ಯ ಎನ್ನುವ ಪ್ರಶ್ನೆಯನ್ನು ಬಿಜೆಪಿಗರು ಎತ್ತುತ್ತಿದ್ದರು.
-
ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಬಿಜೆಪಿ ಯೇತರ ರಾಜ್ಯಗಳ ಮುಖ್ಯಮಂತ್ರಿಗಳು ಕೇಂದ್ರ ಸರಕಾರದ ವಿರುದ್ಧ ಅಂತರ ಕಾಯ್ದುಕೊಳ್ಳುವುದೇ ದೊಡ್ಡ ಸಾಧನೆಯ ರೀತಿ ನಡೆದುಕೊಳ್ಳುತ್ತಿದ್ದಾರೆ. ಅದರಲ್ಲಿಯೂ ನರೇಂದ್ರ ಮೋದಿ ಅವರು ತಮ್ಮ ರಾಜ್ಯಗಳಿಗೆ ಆಗಮಿಸಿದಾಗ ಶಿಷ್ಠಾಚಾರದ ಪ್ರಕಾರ ಅವರನ್ನು ಸ್ವಾಗತಿಸಬೇಕು ಎಂದಿದ್ದರೂ ಅನೇಕರು ಹೋಗದೇ ಅಂತರ ಕಾಯ್ದುಕೊಂಡಿರುವ ಉದಾಹರಣೆಗಳಿವೆ.
ಕೆಲ ತಿಂಗಳ ಹಿಂದೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪಶ್ಚಿಮ ಬಂಗಾಳಕ್ಕೆ ತೆರಳಿದ್ದಾಗ ಮಮತಾ ಬ್ಯಾನರ್ಜಿ ನಡೆದುಕೊಂಡ ರೀತಿ ಈಗಲೂ ಚರ್ಚಾ ವಸ್ತುವಾಗಿದೆ. ಆದರೆ ಪ್ರಧಾನಿ ನರೇಂದ್ರ ಮೋದಿ ಸರಕಾರದ ನಡೆಗಳನ್ನು ನಿರಂತರವಾಗಿ ಟೀಕಿಸುತ್ತಲೇ ಬಂದಿರುವ ಸಿದ್ದರಾಮ ಯ್ಯ ಅವರು ಈ ವಿಷಯದಲ್ಲಿ ಇತರೆ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಮಾದರಿ ಎನಿಸಿದ್ದಾರೆ.
ಇದನ್ನೂ ಓದಿ: Vishwavani Editorial: ನ್ಯಾ.ವರ್ಮಾ ಪ್ರಕರಣ ಇತ್ಯರ್ಥವಾಗಲಿ
ಕಾಂಗ್ರೆಸ್‌ನ ಬಹುಪಾಲು ನಾಯಕರಿಗಿಂತ ದೊಡ್ಡ ಮಟ್ಟದಲ್ಲಿ ಮೋದಿ ವಿರುದ್ಧ ಸಿದ್ದರಾಮಯ್ಯ ಧ್ವನಿ ಎತ್ತಿದ್ದಾರೆ. ಕೇಂದ್ರ ಸರಕಾರವನ್ನು ಸಿದ್ದರಾಮಯ್ಯ ಅವರು ಟೀಕಿಸಿದಾಗಲೆಲ್ಲ, ಕೇಂದ್ರ ದೊಂದಿಗೆ ಸಮನ್ವಯ ಇರದೇ ಹೋದರೆ, ದಿನ ಬೆಳಗಾದರೇ ಪ್ರಧಾನಿಗಳನ್ನು ಟೀಕಿಸಿದರೆ ರಾಜ್ಯದ ಅಭಿವೃದ್ಧಿಗೆ ಹೇಗೆ ಸಾಧ್ಯ ಎನ್ನುವ ಪ್ರಶ್ನೆಯನ್ನು ಬಿಜೆಪಿಗರು ಎತ್ತುತ್ತಿದ್ದರು.
ಬಿಜೆಪಿ ನಾಯಕರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಸಿಗುವುದಿಲ್ಲ ಎನ್ನುವ ಮಾತಿದ್ದರೂ, ರಾಜ್ಯದ ಅಭಿವೃದ್ಧಿಗೆ ಸಂಬಂಧಿಸಿದಂತೆ ಪ್ರಧಾನಿ ಕಚೇರಿಯೊಂದಿಗೆ ನಿರಂತರ ಸಂಪರ್ಕ ಹೊಂದಿ ರುವ ಸಿದ್ದರಾಮಯ್ಯ ಅವರು ದೆಹಲಿಗೆ ಭೇಟಿ ನೀಡಿದ ವೇಳೆ ಹಲವು ಬಾರಿ ಮೋದಿ ಅವರನ್ನು ಭೇಟಿಯಾಗಿ ಕರ್ನಾಟಕಕ್ಕೆ ಆಗಬೇಕಿರುವ ಕೆಲಸಗಳ ಪಟ್ಟಿಯನ್ನು ನೀಡಿರುವುದನ್ನು ನೋಡಿದ್ದೇವೆ.
ಇದರ ಮುಂದುವರಿದ ಭಾಗವಾಗಿ ಬುಧವಾರ ಬೆಂಗಳೂರಿಗೆ ಆಗಮಿಸಿದ ನರೇಂದ್ರ ಮೋದಿ ಅವರನ್ನು ಸಿದ್ದರಾಮಯ್ಯ ಅವರೇ ಸ್ವಾಗತಿಸಿದರು. ಇದರೊಂದಿಗೆ ಇದೇ ಸಮಯವನ್ನು ಬಳಸಿ ಕೊಂಡು ರಾಜ್ಯಕ್ಕೆ ಆಗಬೇಕಿರುವ ಯೋಜನೆ, ಅನುದಾನ ಬಿಡುಗಡೆ ಸೇರಿದಂತೆ ವಿವಿಧ ವಿಷಯ ಗಳಿಗೆ ಸಂಬಂಧಿಸಿದ ಸುದೀರ್ಘ ಪತ್ರವನ್ನು ನೀಡಿದ್ದಾರೆ.
ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯ ಹಾಗೂ ಕೇಂದ್ರ ಸರಕಾರದ ಚುಕ್ಕಾಣಿಯನ್ನು ಭಿನ್ನ ಪಕ್ಷಗಳು ಹಿಡಿದಾಗ, ನಾಯಕರು ಪಕ್ಷದ ವೇದಿಕೆಯಲ್ಲಿ ನಡೆದುಕೊಳ್ಳುವ ರೀತಿಗೂ, ರಾಜ್ಯಗಳಿಗೆ ಆಗಬೇಕಿ ರುವ ಕಾರ್ಯಗಳನ್ನು ಅನುಷ್ಠಾನ ಗೊಳ್ಳುವಂತೆ ನೋಡಿಕೊಳ್ಳಲು ನಡೆದುಕೊಳ್ಳಬೇಕಿರುವ ರೀತಿಯ ನಡುವಿನ ಸಣ್ಣ ಗೆರೆಯನ್ನು ಅರ್ಥ ಮಾಡಿಕೊಂಡರೆ ರಾಜ್ಯದ ಅಭಿವೃದ್ಧಿ ಸಾಧ್ಯ.