ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Vishwavani Editorial: ಕಿರಿಯ ಪ್ರತಿಭೆಗಳ ಮಿಂಚು

ಆಫ್ಘನ್ ತಂಡದ ವಿರುದ್ಧ ನಡೆದ ಟೆಸ್ಟ್‌ನಲ್ಲಿ ಭಾರತ ತಂಡದ ಮಾನವ್ ಸುತಾರ್ 6 ವಿಕೆಟ್‌ಗಳನ್ನು ಕಿತ್ತು ದಾಖಲೆ ಮಾಡಿದ್ದಾರೆ. ಇದು ಭಾರತ ತಂಡದಲ್ಲಿ ಸುತಾರ್ ಅವರ ಚೊಚ್ಚಲ ಟೆಸ್ಟ್ ಹಾಗೂ ಅವರ ವಯಸ್ಸು 26. ವೈಭವ್, ಸುತಾರ್, ಪ್ರಜ್ಞಾನಂದ, ಗುಕೇಶ್ ಮೊದಲಾದವರು ಆಧುನಿಕ ಭಾರತದ ಯುವ ತಲೆಮಾರಿನ ಕ್ರೀಡಾಳುಗಳಾಗಿದ್ದು, ಕ್ರೀಡಾಸ್ಪೂರ್ತಿ ಯನ್ನೂ ಗೆಲ್ಲುವ ಛಲವನ್ನೂ ಪ್ರದರ್ಶಿಸಿದ್ದಾರೆ. ಇಂಥ ಕಿರಿಯ ಪ್ರತಿಭೆಗಳೇ ನಮ್ಮ ದೇಶದ ಕ್ರೀಡಾಚೈತನ್ಯವನ್ನು ಮುಂದಕ್ಕೊಯ್ಯಲಿದ್ದಾರೆ ಎಂಬುದನ್ನು ಇವರು ಸಾರಿ ಹೇಳುತ್ತಿದ್ದಾರೆ.

ಕಿರಿಯ ಪ್ರತಿಭೆಗಳ ಮಿಂಚು

-

Profile
Ashok Nayak Jun 9, 2026 12:00 PM

ಭಾರತದ ಕ್ರೀಡಾ ಲೋಕದಲ್ಲಿ ಹೊಸ ಹೊಸ ಪ್ರತಿಭೆಗಳ ಆಗಮನವಾಗುತ್ತಿದೆ. ಮಾತ್ರವಲ್ಲ. ಹಿರಿಯರನ್ನು, ಅನುಭವಿಗಳನ್ನು ಮೀರಿ ಇವರು ಮಿಂಚುತ್ತಿದ್ದಾರೆ. ಉದಾಹರಣೆಗೆ, ವೈಭವ್ ಸೂರ್ಯವಂಶಿಯನ್ನು ಗಮನಿಸಬಹುದು. ಕೇವಲ 15 ವರ್ಷ ವಯಸ್ಸಿನಲ್ಲಿಯೇ ತಮ್ಮ ಅದ್ಭುತ ಬ್ಯಾಟಿಂಗ್‌ನಿಂದ ಅವರು ಗಮನ ಸೆಳೆದಿದ್ದಾರೆ.

ಎಡಗೈ ಬ್ಯಾಟ್ಸ್‌ಮನ್ ಆಗಿರುವ ಇವರ ಆಟದ ಶೈಲಿ ಸಚಿನ್ ತೆಂಡುಲ್ಕರ್, ವಿನೋದ್ ಕಾಂಬ್ಳಿ ಮೊದಲಾದವರ ಆರಂಭಿಕ ದಿನಗಳ ಆಕ್ರಮಣಕಾರಿ ಆಟವನ್ನು ನೆನಪಿಸುತ್ತದೆ. ಬಿಹಾರ ಮೂಲದ ವೈಭವ್ ಐಪಿಎಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಪ್ರತಿನಿಧಿಸಿ, ತಮ್ಮ ದಾಖಲೆಗಳಿಂದಾಗಿ ಸರಣಿ ಪುರುಷ ಎನಿಸಿಕೊಂಡದ್ದಲ್ಲದೆ, ಇದೀಗ ಭಾರತೀಯ ಕ್ರಿಕೆಟ್ ತಂಡಕ್ಕೂ ಆಯ್ಕೆಯಾಗಿದ್ದಾರೆ. ಸರಿಯಾದ ಮಾರ್ಗದರ್ಶನ ಮತ್ತು ಸೂಕ್ತ ಆಟದ ಅವಕಾಶ ನೀಡಿದರೆ ಅವರು ಭಾರತ ತಂಡಕ್ಕೆ ಅಮೂಲ್ಯ ಆಸ್ತಿ ಆಗಬಲ್ಲರು. ಇದೇ ರೀತಿ ಚೆಸ್ ಆಟದಲ್ಲಿ ಪ್ರಜ್ಞಾನಂದ ಅವರು ದೇಶವೇ ಹೆಮ್ಮೆ ಪಡುವ ಸಾಧನೆ ಮಾಡಿದ್ದಾರೆ.

ಇದನ್ನೂ ಓದಿ: Vishwavani Editorial: ಸಿದ್ಧಾಂತಗಳ ಅವಸಾನ

ಅತಿ ಕಿರಿಯ ಪ್ರಾಯದಲ್ಲೇ ಭಾರತದ ಗ್ರ್ಯಾಂಡ್ ಮಾಸ್ಟರ್ ಆದ ಪ್ರಜ್ಞಾನಂದ, ನಾರ್ವೆ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸಿ, ವಿಶ್ವ ಚಾಂಪಿಯನ್ ಮ್ಯಾಗ್ನಸ್ ಕಾರ್ಲ್‌ಸನ್ ಅವರನ್ನು ಸೋಲಿಸಿ ಟ್ರೋಫಿ ತಮ್ಮದಾಗಿಸಿಕೊಂಡರು. ಅವರಿಗಿನ್ನೂ 20 ವರ್ಷ. ಇನ್ನೊಬ್ಬ ಕಿರಿಯ ಚೆಸ್ ಮಾಸ್ಟರ್ ಗುಕೇಶ್‌ನನ್ನೂ ನೆನೆಯಬಹುದು.

ಇದೇ ವೇಳೆ, ನಿನ್ನೆ ಆಫ್ಘನ್ ತಂಡದ ವಿರುದ್ಧ ನಡೆದ ಟೆಸ್ಟ್‌ನಲ್ಲಿ ಭಾರತ ತಂಡದ ಮಾನವ್ ಸುತಾರ್ 6 ವಿಕೆಟ್‌ಗಳನ್ನು ಕಿತ್ತು ದಾಖಲೆ ಮಾಡಿದ್ದಾರೆ. ಇದು ಭಾರತ ತಂಡದಲ್ಲಿ ಸುತಾರ್ ಅವರ ಚೊಚ್ಚಲ ಟೆಸ್ಟ್ ಹಾಗೂ ಅವರ ವಯಸ್ಸು 26. ವೈಭವ್, ಸುತಾರ್, ಪ್ರಜ್ಞಾನಂದ, ಗುಕೇಶ್ ಮೊದ ಲಾದವರು ಆಧುನಿಕ ಭಾರತದ ಯುವ ತಲೆಮಾರಿನ ಕ್ರೀಡಾಳುಗಳಾಗಿದ್ದು, ಕ್ರೀಡಾಸ್ಪೂರ್ತಿ ಯನ್ನೂ ಗೆಲ್ಲುವ ಛಲವನ್ನೂ ಪ್ರದರ್ಶಿಸಿದ್ದಾರೆ. ಇಂಥ ಕಿರಿಯ ಪ್ರತಿಭೆಗಳೇ ನಮ್ಮ ದೇಶದ ಕ್ರೀಡಾ ಚೈತನ್ಯವನ್ನು ಮುಂದಕ್ಕೊಯ್ಯಲಿದ್ದಾರೆ ಎಂಬುದನ್ನು ಇವರು ಸಾರಿ ಹೇಳುತ್ತಿದ್ದಾರೆ.

ಇಂಥ ಚೈತನ್ಯವಂತ, ಪ್ರತಿಭಾವಂತ ಕಿರಿಯ ಆಟಗಾರರು ನಮ್ಮ ದೇಶದಲ್ಲಿ ಇನ್ನೂ ಬಹಳ ಮಂದಿ ಇರಬಹುದು. ಅವರನ್ನು ಗುರುತಿಸುವ, ಸರಿಯಾದ ಪ್ರೋತ್ಸಾಹ ನೀಡುವ, ತರಬೇತಿ ನೀಡುವ ಕೆಲಸ ಆಗಬೇಕು. ಕ್ರೀಡಾ ಶಿಕ್ಷಣಕ್ಕೆ, ಪ್ರತಿಭೆಗಳ ಅನ್ವೇಷಣೆಗೆ ಉತ್ತೇಜನ ಸಿಗಬೇಕು. ಆಗ ಭಾರತ ಒಲಿಂಪಿಕ್ಸ್ ಪದಕ ಪಟ್ಟಿಯಲ್ಲಿಯೂ ಮಿಂಚುವಂತೆ ಆದೀತು.