ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Vishwavani Editorial: ಬರಗಾಲದ ಭೀಕರತೆ

ಕಾವೇರಿ ನದಿ ಪಾತ್ರದ ನಾಲ್ಕು ಪ್ರಮುಖ ಅಣೆಕಟ್ಟುಗಳಲ್ಲಿ ಒಟ್ಟು ಶೇ.72 ನೀರು ಮಾತ್ರ ಶೇಖರಣೆ ಆಗಿದೆ. ಅತ್ತ ತಮಿಳುನಾಡು ನೀರಿನ ಹಕ್ಕಿಗಾಗಿ ತಗಾದೆ ಮಾಡುತ್ತಿದ್ದು, ಇದನ್ನು ಈಗಿನಿಂದಲೇ ಎದುರಿಸಲು ಸಿದ್ಧತೆ ಮಾಡಿಕೊಳ್ಳಬೇಕಿದೆ. 132 ತಾಲೂಕುಗಳಲ್ಲಿ ಕಳೆದ 10 ವರ್ಷಗಳ ಸರಾಸರಿಗೆ ಹೋಲಿಸಿದರೆ, ಈ ಬಾರಿ ಅಂತರ್ಜಲ ತೀವ್ರ ಮಟ್ಟಕ್ಕೆ ಕುಸಿದಿದೆ.

Vishwavani Editorial: ಬರಗಾಲದ ಭೀಕರತೆ

-

Profile
Ashok Nayak Sep 9, 2026 6:00 AM

ರಾಜ್ಯದಲ್ಲಿ ಈ ಬಾರಿ ಮುಂಗಾರು ಮಳೆ ಕೊರತೆಯಿಂದ ತೀವ್ರ ಬರದ ಛಾಯೆ ಆವರಿಸಿದೆ. ಅದರ ಜೊತೆಗೆ ಈಗ, ಹಿಂಗಾರು ಕೂಡ ಕೊರತೆಯಾಗಲಿದೆ ಎಂದು ಹವಾಮಾನ ತಜ್ಞರು ಎಚ್ಚರಿಸಿದ್ದಾರೆ. ಅದರೊಂದಿಗೆ, ಈ ವರ್ಷ ಬರ್ಬರ ಆಗುವುದು ಖಚಿತವೆನಿಸಿದೆ. ಈಗಾಗಲೇ ರಾಜ್ಯ ಸರಕಾರ 101 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿ ಆದೇಶ ಹೊರಡಿಸಿದೆ. ಇನ್ನೂ 25 ತಾಲೂಕುಗಳನ್ನು ಘೋಷಿಸಲಾಗುತ್ತದೆ ಎಂದು ಸರಕಾರ ತಿಳಿಸಿದೆ. ಪರಿಹಾರ ಸಂಬಂಧ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಲು ಸಿದ್ಧತೆ ನಡೆದಿದೆ. ಎರಡು ಜಿಲ್ಲೆಗಳನ್ನು ಬಿಟ್ಟರೆ ಉಳಿದ 29 ಜಿಲ್ಲೆಗಳಲ್ಲಿ ಮಳೆ ಕೈಕೊಟ್ಟಿದೆ. ಮುಂಗಾರು ಅವಧಿಯಲ್ಲಿ ಈವರೆಗೆ ಶೇ.31 ಮಳೆ ಕೊರತೆಯಾಗಿದೆ. 2023ರಲ್ಲಿನ ಉಂಟಾದ ಬರ ಪರಿಸ್ಥಿತಿಗಿಂತಲೂ ಈ ಬಾರಿ ಸ್ಥಿತಿ ಕೆಟ್ಟದಾಗಿದೆ.

ಇದನ್ನೂ ಓದಿ: Vishwavani Editorial: ಎಸ್‌ಐಆರ್ ಗೊಂದಲ

2012ರಲ್ಲಿ ರಾಜ್ಯದಲ್ಲಿ ಅತ್ಯಂತ ತೀವ್ರ ಬರಗಾಲ, 2002ರಲ್ಲಿ ಎರಡನೇ ಅತಿ ದೊಡ್ಡ ಬರ ಪರಿಸ್ಥಿತಿ ಎದುರಿಸಿತ್ತು. ಅದಾದ ಬಳಿಕ ಈಗ 2026ರ ರಾಜ್ಯ ಮೂರನೇ ಅತಿ ತೀವ್ರತೆಯ ಬರಗಾಲ ಎದುರಿಸು ತ್ತಿದೆ. ಇದಕ್ಕೆ ಎಲ್ ನಿನೋ ಪ್ರಭಾವ ಕಾರಣ. ಮಳೆ ನಂಬಿ ಬಿತ್ತಿರುವ ರೈತರು ಕಂಗಾಲಾಗಿದ್ದಾರೆ. ಆಗ 21ರ ವರೆಗಿನ ಅಂಕಿ ಅಂಶದಂತೆ ರಾಜ್ಯದಲ್ಲಿ ಶೇ.71ರಷ್ಟು ಬಿತ್ತನೆ ಆಗಿದೆ. 60 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಆಗಿದೆ. ಆದರೆ ಇವೆಲ್ಲ ಮಳೆ ಕೊರತೆಯಿಂದ ಒಣಗಿವೆ. ರಾಜ್ಯದ ಎ ಅಣೆಕಟ್ಟುಗಳಲ್ಲಿ ಕಳೆದ ಬಾರಿ ಇದೇ ಅವಽಗೆ 815.70 ಟಿಎಂಸಿ ನೀರು ಸಂಗ್ರಹ ಇತ್ತು. ಆದರೆ, ಈ ಬಾರಿ 684 ಟಿಎಂಸಿ ಮಾತ್ರ ನೀರಿದೆ.

ಕಾವೇರಿ ನದಿ ಪಾತ್ರದ ನಾಲ್ಕು ಪ್ರಮುಖ ಅಣೆಕಟ್ಟುಗಳಲ್ಲಿ ಒಟ್ಟು ಶೇ.72 ನೀರು ಮಾತ್ರ ಶೇಖರಣೆ ಆಗಿದೆ. ಅತ್ತ ತಮಿಳುನಾಡು ನೀರಿನ ಹಕ್ಕಿಗಾಗಿ ತಗಾದೆ ಮಾಡುತ್ತಿದ್ದು, ಇದನ್ನು ಈಗಿನಿಂದಲೇ ಎದುರಿಸಲು ಸಿದ್ಧತೆ ಮಾಡಿಕೊಳ್ಳಬೇಕಿದೆ. 132 ತಾಲೂಕುಗಳಲ್ಲಿ ಕಳೆದ 10 ವರ್ಷಗಳ ಸರಾಸರಿಗೆ ಹೋಲಿಸಿದರೆ, ಈ ಬಾರಿ ಅಂತರ್ಜಲ ತೀವ್ರ ಮಟ್ಟಕ್ಕೆ ಕುಸಿದಿದೆ. 1000 ಅಡಿಗೂ ಅಧಿಕ ಕೆಳ ಮಟ್ಟಕ್ಕೆ ಅಂತರ್ಜಲ ಇಳಿದಿದೆ. ಕುಡಿಯುವ ನೀರಿನ ತೀವ್ರ ಕೊರತೆ ಎದುರಾಗಲಿದೆ. ಜಾನುವಾರುಗಳಿಗೆ ಮೇವಿನ ಸಮಸ್ಯೆ ಎದುರಾಗುತ್ತಿದೆ. ಉತ್ತರ ಕರ್ನಾಟಕದಲ್ಲಿ ಗುಳೆ ಆರಂಭವಾಗಿದೆ. ಸರಕಾರ ಮೈಜಾಡಿಸಿ ಚುರುಕಾಗಿ ಕಾರ್ಯಪ್ರವೃತ್ತ ವಾಗಬೇಕಿದೆ.