ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishwavani Editorial: ನಿಜಕ್ಕೂ ತಪ್ಪಾಗಿರುವುದು ಎಲ್ಲಿ?

ಇಷ್ಟೂ ವರ್ಷಗಳಲ್ಲಿ ಮಳೆ ನೀರಿನ ಸಮಸ್ಯೆಯು ಜನರನ್ನು ಸತತವಾಗಿ ಕಾಡುತ್ತಿದ್ದರೂ, ಅದಕ್ಕೊಂದು ನಿರ್ಣಾಯಕ ಪರಿಹಾರೋಪಾಯವನ್ನು ಕಂಡುಕೊಳ್ಳಲಾಗದಿರುವುದು ಆಳುಗರ ವೈಫಲ್ಯವಲ್ಲದೆ ಮತ್ತೇನು? ಇದ್ದಬದ್ದ ಕೆರೆಗಳನ್ನೆಲ್ಲ ಮುಚ್ಚಿ ಬಡಾವಣೆಗಳನ್ನು ನಿರ್ಮಿಸುವುದಕ್ಕೆ ಅನುವು ಮಾಡಿ ಕೊಟ್ಟಿದ್ದೇ ಈ ಸಮಸ್ಯೆ ತಾರಕಕ್ಕೇರಲು ಕಾರಣ ಎನ್ನುತ್ತಾರೆ ಬಲ್ಲವರು.

ನಿಜಕ್ಕೂ ತಪ್ಪಾಗಿರುವುದು ಎಲ್ಲಿ?

Profile Ashok Nayak May 21, 2025 10:37 AM

ಮಳೆಗಾಲ ಸನ್ನಿಹಿತವಾದಂತೆ ಬೆಂಗಳೂರು ಮಹಾನಗರಿಯ ಜನರನ್ನು ಒಂದು ತೆರನಾದ ಆತಂಕ ಆವರಿಸುತ್ತದೆ. ಅದೆಂದರೆ, ಮಾರುಕಟ್ಟೆಗೋ ಕಚೇರಿಗೋ ಹೋಗುತ್ತಿರುವಾಗ, ಭೀಕರ ಮಳೆ ಯಿಂದಾಗಿ ಅದ್ಯಾವ ಚರಂಡಿಯಲ್ಲಿ ಕೊಚ್ಚಿಹೋಗಬೇಕಾಗುತ್ತೋ? ಅದ್ಯಾವ ಮರ ತಲೆಯ ಮೇಲೆ ಬೀಳುತ್ತದೋ? ಎಂಬುದು. ಇನ್ನು ಭಾರಿ ವರ್ಷಧಾರೆಯ ಫಲವಾಗಿ ಬೆಂಗಳೂರಿನ ಬಹಳಷ್ಟು ಕಡೆಯಲ್ಲಿ ರಸ್ತೆಗಳು ಕೆರೆ-ಕಾಲುವೆಗಳೇ ಆಗಿಬಿಡುವುದು ಸಾಮಾನ್ಯವಾಗಿ ಕಾಣಬರುವ ದೃಶ್ಯ. ಇಂಥ ಸಂದರ್ಭದಲ್ಲಿ ಕೆಲವರು, “ಬೆಂಗಳೂರಿನಲ್ಲಿ ಮಳೆಗಾಲದ ಸಮಯದಲ್ಲಿ ಸಾರಿಗೆ ಬಸ್ಸುಗ ಳನ್ನು ರದ್ದು ಮಾಡಿ, ವೆನಿಸ್ ನಗರದಲ್ಲಿರುವಂತೆ ದೋಣಿ ಸಂಚಾರವನ್ನು ಶುರುಮಾಡಬೇಕು" ಎಂದು ಹಾಸ್ಯಮಾಡುವುದಿದೆ. ಇದು ಅತಿಶಯೋಕ್ತಿಯೇನಲ್ಲ, ಅಪ್ಪಟ ಹದಿನಾರಾಣೆ ಸತ್ಯ.

ಇದನ್ನೂ ಓದಿ: Vishwavani Editorial: ಪಾಕಿಸ್ತಾನ ಎಂಬ ಊಸರವಳ್ಳಿ

ಆದರೆ, ಇಷ್ಟೂ ವರ್ಷಗಳಲ್ಲಿ ಮಳೆ ನೀರಿನ ಸಮಸ್ಯೆಯು ಜನರನ್ನು ಸತತವಾಗಿ ಕಾಡುತ್ತಿದ್ದರೂ, ಅದಕ್ಕೊಂದು ನಿರ್ಣಾಯಕ ಪರಿಹಾರೋಪಾಯವನ್ನು ಕಂಡುಕೊಳ್ಳಲಾಗದಿರುವುದು ಆಳುಗರ ವೈಫಲ್ಯವಲ್ಲದೆ ಮತ್ತೇನು? ಇದ್ದಬದ್ದ ಕೆರೆಗಳನ್ನೆಲ್ಲ ಮುಚ್ಚಿ ಬಡಾವಣೆಗಳನ್ನು ನಿರ್ಮಿಸುವುದಕ್ಕೆ ಅನುವುಮಾಡಿಕೊಟ್ಟಿದ್ದೇ ಈ ಸಮಸ್ಯೆ ತಾರಕಕ್ಕೇರಲು ಕಾರಣ ಎನ್ನುತ್ತಾರೆ ಬಲ್ಲವರು.

ಜತೆಗೆ, ಇನ್ನೂ ಹಲವು ಕಾರಣಗಳು ಇದ್ದಿರಬಹುದು. ಇವನ್ನೆಲ್ಲಾ ಕೂಲಂಕಷವಾಗಿ ಅವಲೋಕಿಸಿ, ನಿಜಕ್ಕೂ ತಪ್ಪಾಗಿರುವುದೆಲ್ಲಿ ಎಂಬುದನ್ನು ಕಂಡುಕೊಂಡು ಆಳುಗರು ಪರಿಹಾರ ಕ್ರಮಕ್ಕೆ ಮುಂದಾ ಗಬೇಕಿದೆ. ರಸ್ತೆ ತೆರಿಗೆ ಸೇರಿದಂತೆ ಬಗೆಬಗೆಯ ತೆರಿಗೆಗಳನ್ನು ಜನರು ಕಾಲಾನುಕಾಲಕ್ಕೆ ಪಾವತಿಸಿದ್ದರ ಹೊರತಾಗಿಯೂ ಸಮರ್ಪಕ ಮೂಲಸೌಕರ್ಯವನ್ನು ಕಲ್ಪಿಸಿಕೊಡುವಲ್ಲಿ ವ್ಯವಸ್ಥೆಯು ವಿಫಲ ವಾದರೆ ಅದೊಂದು ವಿಷಾದನೀಯ ಸಂಗತಿಯಷ್ಟೇ.

ಈಗಲೂ ಕಾಲ ಮಿಂಚಿಲ್ಲ, ವಿವಿಧ ಕ್ಷೇತ್ರಗಳ ತಜ್ಞರನ್ನು ಒಂದೆಡೆ ಕಲೆಹಾಕಿ ಅವರ ಅಭಿಪ್ರಾಯ ಗಳನ್ನು ಸಂಗ್ರಹಿಸಿ, ಜತೆಗೆ ಸಾರ್ವಜನಿಕರ ಅಭಿಮತವನ್ನೂ ಪಡೆದು ಈ ಸಮಸ್ಯೆಗೆ ಇತಿಶ್ರೀ ಹಾಡ ಬೇಕಿದೆ. ಇಲ್ಲವಾದಲ್ಲಿ ಬೆಂಗಳೂರಿಗರ ಬಾಳು ಮತ್ತಷ್ಟು ಅಸಹನೀಯವಾಗುವುದರಲ್ಲಿ ಮತ್ತು ಅದರಿಂದಾಗಿ ಅವರು ವ್ಯವಸ್ಥೆಯನ್ನು ಶಪಿಸುವಂತಾಗವುದರಲ್ಲಿ ಯಾವ ಅನುಮಾನವೂ ಇಲ್ಲ.