ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಇನ್ನೂ ಇಂಗಿಲ್ಲವೇ ರಕ್ತದಾಹ?

ಒಂದೊಮ್ಮೆ ಗಾಳಿ ಬೀಸಿದರೆ, ಪಕ್ಕದ ಮನೆಗೆ ಅಮರಿಕೊಂಡಿರುವ ಬೆಂಕಿ ನಮ್ಮ ಮನೆಗೂ ರಾಚು ತ್ತದೆ ಎಂಬ ಅಪ್ರಿಯ ಸತ್ಯವನ್ನು ನಾವೆಲ್ಲರೂ ಮನಗಾಣಬೇಕಿದೆ. ಅಂದರೆ, ಉಗ್ರವಾದದ ಮತ್ತು ಉಗ್ರವಾದಿ ಗಳ ದಮನವು ಜಗತ್ತಿನ ಪ್ರತಿಯೊಂದು ದೇಶದ ಪಾಲಿಗೂ ಆದ್ಯತೆಯ ಹೊಣೆಗಾರಿಕೆಯಾಗಬೇಕು.

ಇನ್ನೂ ಇಂಗಿಲ್ಲವೇ ರಕ್ತದಾಹ?

-

Profile
Ashok Nayak Feb 7, 2026 3:56 PM

ಐಸಿಸ್ ಉಗ್ರರು’ ಎಂದೇ ಕರೆಯಲ್ಪಡುವ ಇಸ್ಲಾಮಿಕ್ ಭಯೋತ್ಪಾದಕರು ನಾಗರಿಕರನ್ನು ಹಿಂಸೆಗೆ ಗುರಿಪಡಿಸಿ, ಅವರ ಆಸ್ತಿಪಾಸ್ತಿಗೆ ಹಾನಿಯುಂಟು ಮಾಡಿ ಅಟ್ಟಹಾಸ ಮೆರೆದಿರುವ ಸುದ್ದಿ ನೈಜೀರಿ ಯಾ ದೇಶದಿಂದ ವರದಿಯಾಗಿದೆ. ಈ ದೇಶದ ವಿವಿಧೆಡೆ ಇತ್ತೀಚೆಗೆ ದಾಳಿ ನಡೆಸಿದ ಐಸಿಸ್ ಉಗ್ರರು ಒಟ್ಟು 191 ಮಂದಿಯನ್ನು ಗುಂಡಿಟ್ಟು ಕೊಂದಿದ್ದರ ಜತೆಗೆ, ನೂರಾರು ಮನೆಗಳನ್ನು ಸುಟ್ಟು ಭಸ್ಮ ಮಾಡಿದ್ದಾರೆ, ಅಂಗಡಿಗಳನ್ನು ಲೂಟಿ ಮಾಡಿದ್ದಾರೆ ಎಂದಿದೆ ವರದಿ.

ನೈಜೀರಿಯಾದಲ್ಲಿ ಸೃಷ್ಟಿಯಾಗಿರುವ ಈ ಅರಾಜಕತೆ ಮತ್ತು ಉದ್ವಿಗ್ನ ವಾತಾವರಣವು ಆದಷ್ಟು ಬೇಗ ತಹಬಂದಿಗೆ ಬರಲಿ ಎಂದು ಆಶಿಸೋಣ. ‘ಬೆಂಕಿ ಬಿದ್ದಿರುವುದು ಪಕ್ಕದ ಮನೆಗೆ ತಾನೇ..’ ಎಂದು ಜಗತ್ತಿನ ಮಿಕ್ಕ ದೇಶಗಳು ನಿರಾಳವಾಗಿ ಕೂರುವ ಬೆಳವಣಿಗೆಯಲ್ಲ ಇದು.

ಇದನ್ನೂ ಓದಿ: Vishwavani Editorial: ಬಲೂಚ್ ಕಿಚ್ಚಿಗೆ ಪಾಕ್ ದಬ್ಬಾಳಿಕೆ ಕಾರಣ

ಒಂದೊಮ್ಮೆ ಗಾಳಿ ಬೀಸಿದರೆ, ಪಕ್ಕದ ಮನೆಗೆ ಅಮರಿಕೊಂಡಿರುವ ಬೆಂಕಿ ನಮ್ಮ ಮನೆಗೂ ರಾಚು ತ್ತದೆ ಎಂಬ ಅಪ್ರಿಯ ಸತ್ಯವನ್ನು ನಾವೆಲ್ಲರೂ ಮನಗಾಣಬೇಕಿದೆ. ಅಂದರೆ, ಉಗ್ರವಾದದ ಮತ್ತು ಉಗ್ರವಾದಿಗಳ ದಮನವು ಜಗತ್ತಿನ ಪ್ರತಿಯೊಂದು ದೇಶದ ಪಾಲಿಗೂ ಆದ್ಯತೆಯ ಹೊಣೆಗಾರಿಕೆ ಯಾಗಬೇಕು.

ಇಲ್ಲವಾದಲ್ಲಿ ಪಶ್ಚಾತ್ತಾಪ ಪಡಬೇಕಾಗುತ್ತದೆ. ಉಗ್ರವಾದದ ವಿರುದ್ಧ ಸಂಘಟಿತ ಹೋರಾಟದ ಕೊರತೆಯಿರುವುದೇ ಉಗ್ರಗಾಮಿಗಳು ‘ರಕ್ತಬೀಜಾಸುರನ ಸಂತತಿ’ ಆಗುವುದಕ್ಕೆ ಎಡೆಮಾಡಿ ಕೊಟ್ಟಿದೆ ಎನ್ನಬೇಕು. ಆದರೇನು ಮಾಡುವುದು, ಪಾಕಿಸ್ತಾನದಂಥ ‘ಮಗ್ಗುಲು ಮುಳ್ಳು’ ದೇಶಗಳಿಗೆ ಉಗ್ರಗಾಮಿ ಗಳನ್ನು ಪೊರೆಯುವುದು ಎಂದರೆ ಎಲ್ಲಿಲ್ಲದ ಉತ್ಸಾಹ ಮತ್ತು ಸಂತೋಷ.

ಇಂಥ ವಿಕೃತ ಚಿತ್ತಸ್ಥಿತಿ ಮುಂದುವರಿಯುತ್ತಿರುವವರೆಗೂ ಉಗ್ರಗಾಮಿಗಳ ರಕ್ತದಾಹವೂ ನಿರಂತರ ವಾಗಿರುತ್ತದೆ ಎನಿಸುತ್ತದೆ. ಛೇ! ಜೀವವು ಇಷ್ಟೊಂದು ಅಗ್ಗವಾಗಿಹೋಯಿತೇ?