Dr N Someshwara Column: ನಿಮಗೆ ಗೊತ್ತೇ, ಇದು ಜಗತ್ತಿನ ಅತ್ಯಂತ ಕಷ್ಟದ ಕೆಲಸ !

ಹದಿಹರೆಯದ ಅವಧಿಯು ವ್ಯಕ್ತಿಯನ್ನು ರೂಪಿಸುವ ಪರ್ವಕಾಲ. ಹದಿ ವಯಸ್ಸಿನವರಿಗೆ ಪ್ರಧಾನವಾಗಿ ಕರುಣೆ ಹಾಗೂ ಸಹಾನುಭೂತಿಯನ್ನು ಕಲಿಸಬೇಕು. ಭಾವನೆಗಳ ಸಂಕೀರ್ಣ ಲೋಕದಲ್ಲಿ ಯಶಸ್ವಿ ಯಾಗಿ ಮುಂದುವರಿಯಬೇಕಾದರೆ, ಅದು ಸಹಾನುಭೂತಿಯಿಂದ ಮಾತ್ರ ಸಾಧ್ಯ. ಅವನು ಪರಿಪೂರ್ಣ ನಾಗಿ ಬೆಳೆಯಲು ಅವನಿಗೆ ಪ್ರೀತಿಯ ಪರಿಚಯವಾಗಬೇಕು.

Jean-Jacques Rousseau
Profile Ashok Nayak January 15, 2025

Source : Vishwavani Daily News Paper

ಹಿಂದಿರುಗಿ ನೋಡಿದಾಗ

ಡಾ.ಎನ್‌.ಸೋಮೇಶ್ವರ

ಈ ಜಗತ್ತಿನಲ್ಲಿ ಅತ್ಯಂತ ಕಷ್ಟದ ಕೆಲಸವೆಂದರೆ ಹೆತ್ತವರಾಗಿ ನಾವು ಮಾಡಬೇಕಾಗಿ ಬರುವ ನಮ್ಮ ಮಕ್ಕಳ ಪಾಲನೆ ಮತ್ತು ಪೋಷಣೆ (ಪೇರೆಂಟಿಂಗ್). ನಮ್ಮ ಮಕ್ಕಳನ್ನು ಈ ನಾಡಿನ

ಸದ್ಗೃಹಸ್ಥರನ್ನಾಗಿ ಬೆಳೆಸುವಲ್ಲಿ ನಮಗಿರುವ ಬಹಳ ದೊಡ್ಡ ಸಮಸ್ಯೆಯೆಂದರೆ, ನಮ್ಮ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಅಗತ್ಯವಾದ ಶೈಕ್ಷಣಿಕ ವ್ಯವಸ್ಥೆ ಇಲ್ಲದಿರುವುದು.

ನಮಗೆ ಸ್ವಾತಂತ್ರ್ಯ ಬಂದು 75 ವರ್ಷಗಳಾಗಿದ್ದರೂ, ಇಡೀ ದೇಶಕ್ಕೆ ಅನ್ವಯವಾಗುವಂಥ ಒಂದು ಮಾದರಿ ಶಿಕ್ಷಣ ಪದ್ಧತಿಯನ್ನು ರೂಪಿಸಲು ವಿಫಲರಾಗಿರುವುದು. ಹಾಗಾಗಿ ನಮ್ಮ ದೇಶದಲ್ಲಿ ಪಾಲಕರು ತಮಗೆ ತೋಚಿದ ಹಾಗೆ ತಮ್ಮ ಮಕ್ಕಳನ್ನು ಬೆಳೆಸುತ್ತಿದ್ದಾರೆ, ಇದುಕಟು ವಾಸ್ತವ.

ಜನ್ ಜಾಕ್ವೆಸ್ ರೂಸೋ (1712-1778) ಸ್ವಿಜ಼ರ್ಲ್ಯಾಂಡಿನ ಜಿನೇವಾದಲ್ಲಿದ್ದ ಲೇಖಕ, ದಾರ್ಶನಿಕ ಮತ್ತು ಸಂಯೋಜಕ. ಈತನ ರಾಜಕೀಯ ವಿಚಾರಗಳು ೧೮ನೆಯ ಶತಮಾನದ ಯುರೋಪಿಯನ್ ಬುದ್ಧಿಜೀವಿಗಳ ಮೇಲೆ ಅಪಾರ ಪರಿಣಾಮವನ್ನು ಬೀರಿದವು. ಈ ಅವಧಿಯನ್ನು ವಿವೇಕ

ಯುಗ (ಏಜ್ ಆಫ್ ರೀಸನ್) ಅಥವಾ ಜ್ಞಾನಯುಗ (ಏಜ್ ಆಫ್ ಎನ್‌ಲೈಟನ್‌ಮೆಂಟ್) ಎಂದು ಕರೆಯುವುದುಂಟು. ‌ಫ್ರಾನ್ಸಿನ ಕ್ರಾಂತಿಯ ಹಿನ್ನೆಲೆಯಲ್ಲಿ ಇವನ ವಿಚಾರಧಾರೆಯು ಪ್ರಧಾನ ಪಾತ್ರವನ್ನು ವಹಿಸಿತು. ಹಾಗೆಯೇ ಆಧುನಿಕ ರಾಜಕೀಯ, ಆರ್ಥಿಕ ಹಾಗೂ ಶೈಕ್ಷಣಿಕ ಸುಧಾರಣೆಗಳ ಮೇಲೆ ಇವನ ಪ್ರಭಾವ ಇರುವುದನ್ನು ವಿಮರ್ಶಕರು ಗುರುತಿಸಿದ್ದಾರೆ. ರೂಸೋವಿಗೆ ತನ್ನ ಸಮಕಾಲೀನ ಶಿಕ್ಷಣ ಪದ್ಧತಿಯು ಎಳ್ಳಷ್ಟೂ ಹಿಡಿಸಲಿಲ್ಲ. ಚಿಕ್ಕ ವಯಸ್ಸಿನಲ್ಲಿಯೇ ಓದುವುದು, ಬರೆಯುವುದು, ಲೆಕ್ಕ ಮಾಡುವುದು, ದೇವರು-ಧರ್ಮ, ಪಾಪ-ಪುಣ್ಯ ಇತ್ಯಾದಿಗಳ ಬಗ್ಗೆ ಯೋಚಿಸು ವುದು ಅಸಹಜ ವೆನಿಸಿತು. ಹಾಗಾಗಿ ಮಕ್ಕಳ ಶಿಕ್ಷಣವು ಹೇಗಿದ್ದರೆ ಅವರು ಪರಿಪೂರ್ಣ ವ್ಯಕ್ತಿಗಳಾಗಿ ಬೆಳೆಯ ಬಹುದೆಂದು ಯೋಚಿಸಿದ.

ಯುರೋಪಿನಲ್ಲಿ ಹೀಗೆ ಯೋಚಿಸಿದವರಲ್ಲಿ ಇವನೇ ಮೊದಲಿಗನು. ಜನ್ ಜಾಕ್ವೆಸ್ ರೂಸೋ 1762ರಲ್ಲಿ Emile, or On Education ಎಂಬ ಕೃತಿಯನ್ನು ರಚಿಸಿದ. ಈ ಕೃತಿಯು ಶೈಕ್ಷಣಿಕ ಸಿದ್ಧಾಂತಗಳಿಗೆ ಸಂಬಂಧಿಸಿದ ಹಾಗೆ ಅತ್ಯಂತ ಪ್ರಭಾವಿ ಹಾಗೂ ವಿವಾದಾತ್ಮಕ ಕೃತಿಯಾಗಿದೆ. ಇದೊಂದು ಸೈದ್ಧಾಂತಿಕ ಕಾದಂಬರಿ. ಇವನು ತನ್ನ ಸಮಕಾಲೀನ ಶಿಕ್ಷಣ ಪದ್ಧತಿಗೆ ಸವಾಲೆಸೆಯು ವಂಥ ಕ್ರಾಂತಿಕಾರಿ ಸಿದ್ಧಾಂತವನ್ನು ಮಂಡಿಸಿದ. ಅವನ ನಿಲುವುಗಳು, ಅಂದಿನ ಕಾಲದಲ್ಲಿ ತೀವ್ರ ವಿವಾದಗಳಿಗೆ ಎಡೆಮಾಡಿಕೊಟ್ಟವು. ಅವನ ಈ ಪುಸ್ತಕವನ್ನು ಚರ್ಚ್ ಹಾಗೂ ಫ್ರಾನ್ಸಿನ ಪಾರ್ಲಿಮೆಂಟ್ ಬಹಿಷ್ಕರಿಸಿದವು.

ರೂಸೋವಿನ ಬಂಧನಕ್ಕೆ ಆಜ್ಞೆಯು ಹೊರಟಿತು. ರೂಸೋ ತನ್ನ ಬಂಧನವನ್ನು ತಪ್ಪಿಸಿ ಕೊಳ್ಳಲು ದೇಶ ವಿದೇಶಗಳಲ್ಲಿ ತಲೆಮರೆಸಿಕೊಂಡ. ರೂಸೋವಿನ ಸಿದ್ಧಾಂತವನ್ನು ಇಂದಿನ ಶಿಕ್ಷಣ ಪದ್ಧತಿಗೆ ಹೋಲಿಸಿದರೂ, ಅದು ಕ್ರಾಂತಿಕಾರಿಯಾಗಿಯೇ ಕಾಣುತ್ತದೆ. ಹಾಗಾಗಿ ರೂಸೋವಿನ ‘ಎಮಿಲಿ’

ಅಧ್ಯಯನ ಯೋಗ್ಯವಾಗಿವೆ. ರೂಸೋ ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸಲು ಕಾದಂಬರಿಯಲ್ಲಿ ಮೂರು ಪಾತ್ರಗಳನ್ನು ಸೃಜಿಸಿದ. ಎಮಿಲಿ ಎಂಬ ಹುಡುಗ, ಸೋಫಿ ಎಂಬ ಹುಡುಗಿ ಹಾಗೂ ಸ್ವಯಂ ರೂಸೋ. ಇವನು ಇಡೀ ಕಾದಂಬರಿಯ ಆಯಕಟ್ಟಿನ ಜಾಗದಲ್ಲಿ ಪ್ರವೇಶಿಸಿ ತನ್ನ ಅನಿಸಿಕೆಗಳನ್ನು ಮಂಡಿಸುತ್ತಾನೆ.

ಇಡೀ ಕಾದಂಬರಿಯ ಮೂಲಭೂತ ವಿಚಾರವೆಂದರೆ ಮನುಷ್ಯನಲ್ಲಿರುವ ಒಳ್ಳೆಯತನ. ಒಳ್ಳೆಯ ತನವು ಮನುಷ್ಯನಿಗೆ ಜನ್ಮದತ್ತವಾಗಿ ಬಂದಿರುತ್ತದೆ. ‘ಪ್ರಕೃತಿಯಲ್ಲಿರುವ ಎಲ್ಲ ವಿಚಾರಗಳು ಅತ್ಯಂತ ಪರಿಶುದ್ಧ ರೂಪದಲ್ಲಿಯೇ ಇರುತ್ತವೆ. ಆದರೆ ಅವು ಒಂದು ಸಲ ಮನುಷ್ಯರ ಕೈಗೆ ಸಿಲುಕಿದ

ಕೂಡಲೇ, ತಮ್ಮ ಮೌಲ್ಯಗಳನ್ನು ಕಳೆದುಕೊಳ್ಳುತ್ತವೆ’- ಇದು ರೂಸೋವಿನ ನಿಲುವು. ಹಾಗಾಗಿ ‘ನೈಸರ್ಗಿಕ ಶಿಕ್ಷಣ’ ಅಥವಾ ‘ನ್ಯಾಚುರಲ್ ಎಜುಕೇಶನ್’ ಎನ್ನುವ ಪರಿಕಲ್ಪನೆ ಯನ್ನು ಮುಂದಿಟ್ಟ.

‘ಈ ನೈಸರ್ಗಿಕ ಶಿಕ್ಷಣವು ಮಗುವಿನಲ್ಲಿರುವ ಒಳ್ಳೆಯತನವನ್ನು ಉಳಿಸುತ್ತದೆ ಹಾಗೂ ಸಮಾಜದ ಕೆಟ್ಟ ಪ್ರಭಾವಗಳಿಂದ ಮಗುವನ್ನು ರಕ್ಷಿಸುತ್ತದೆ’ ಎನ್ನುವುದು ರೂಸೋವಿನ ತರ್ಕವಾಗಿತ್ತು. ಆದರೆ ರೂಸೋವಿನ ನಿಲುವು ಅವನ ಸಮಕಾಲೀನ ಶೈಕ್ಷಣಿಕ ಸಿದ್ಧಾಂತ ಕ್ಕಿಂತ ಭಿನ್ನವಾಗಿತ್ತು. ಆಗ ‘ಮಕ್ಕಳನ್ನು ಸಣ್ಣ ರೂಪದ ವಯಸ್ಕರರು’ (ಮಿನಿಯೇಚರ್ ಅಡಲ್ಟ್ಸ್) ಎಂದು ಭಾವಿಸಿದ್ದರು. ಹಾಗಾಗಿ, ‘ವಯಸ್ಕರನ್ನು ಹೇಗೆ ಕಟ್ಟುನಿಟ್ಟಾಗಿ ಬೆಳೆಸುತ್ತೇವೆಯೋ ಹಾಗೆಯೇ ಮಕ್ಕಳನ್ನೂ ಬೆಳೆಸಬೇಕು’ ಎಂದು ನಂಬಿದ್ದರು.

ರೂಸೋವಿನ ಅಭಿಪ್ರಾಯದಲ್ಲಿ ‘ಬಾಲ್ಯ ಎನ್ನುವುದು ಮನುಷ್ಯನ ಬೆಳವಣಿಗೆಯಲ್ಲಿ ಒಂದು ಪ್ರಮುಖ ಹಂತ. ಆ ಹಂತದಲ್ಲಿ ಮಕ್ಕಳನ್ನು ಸಹಜವಾಗಿ ಬೆಳೆಯಲು ಬಿಡಬೇಕು. ದೊಡ್ಡವರಿಗೆ ಅನ್ವಯವಾಗುವ ಎಲ್ಲ ನೀತಿ ನಿಯಮಗಳನ್ನು ಮಕ್ಕಳ ಮೇಲೆ ಹೇರಲು ಹೋದರೆ, ಅದು ಅವರ ಸ್ವಾಭಾವಿಕ ಬೆಳವಣಿಗೆಯನ್ನು ಕುಂಠಿಸುತ್ತದೆ’ ಎಂದ.

ಮಗುವಿನ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗಳಿಗೆ ಅನುಗುಣವಾಗಿ, ಅವರಿಗೆ ಸೂಕ್ತ ವಾಗುವಂಥ ಶೈಕ್ಷಣಿಕ ವಿನ್ಯಾಸವನ್ನು ರೂಪಿಸಿದ. ಅದರಂತೆಯೇ ತಾನು ಎಮಿಲಿಗೆ ಶಿಕ್ಷಣವನ್ನು ನೀಡಿದಂತೆ ಕಾದಂಬರಿಯನ್ನು ಬರೆದ.

ಶೈಶವಾವಧಿ: ಶೈಶವ ಎನ್ನುವುದು ಎಮಿಲಿಯ ಹುಟ್ಟಿದ ದಿನದಿಂದ ಹಿಡಿದು ಸುಮಾರು 5 ವರ್ಷಗಳ ನಡುವಿನ ಅವಧಿ. ಈ ಅವಧಿಯಲ್ಲಿ ಮಗುವು ಆರೋಗ್ಯವಾಗಿ ಬೆಳೆಯಬೇಕು. ಹಾಗಾಗಿ ಮಗುವಿಗೆ ಅಗತ್ಯವಾಗಿರುವ ಆಹಾರ ಪಾನೀಯಗಳನ್ನು ಹಾಗೂ ಲಾಲನೆ ಪಾಲನೆಯನ್ನು

ತಾಯಿಯೇ ನಡೆಸಬೇಕು. ತಾಯಿಯಲ್ಲದೇ ಇತರರು ನೋಡಿಕೊಳ್ಳಬಾರದು. ಏಕೆಂದರೆ ತಾಯಿಯು ಮಾತ್ರ ಅಪ್ಪಟ ಪ್ರೀತಿಯನ್ನು ತೋರಬಲ್ಲಳು. ಪರಿಪೂರ್ಣ ಕಾಳಜಿಯಿಂದ ತನ್ನ ಮಗುವನ್ನು ಆರೈಕೆ ಮಾಡುವಳು. ಆಕೆಯ ಸಮಕ್ಕೆ ಇತರರು ಮಗುವನ್ನು ನೋಡಿ ಕೊಳ್ಳಲಾರರು. ಈ ಅವಧಿ ಯಲ್ಲಿ ಮಗುವಿನ ದೈಹಿಕ ಬೆಳವಣಿಗೆಗೆ ಎಷ್ಟು ಆದ್ಯತೆಯನ್ನು ಕೊಡುತ್ತೇವೆಯೋ, ಅಷ್ಟೇ ಆದ್ಯತೆ ಯನ್ನು ಮಗುವಿನ ಪಂಚೇಂದ್ರಿಯಗಳ ಬೆಳವಣಿಗೆಗೂ ನೀಡಬೇಕು.

ಮಗುವಿನ ತೊಟ್ಟಿಲು ದೊಡ್ಡದಾಗಿರಬೇಕು. ಮಗುವು ತನ್ನ ಕೈಕಾಲುಗಳನ್ನು ಆಡಿಸಲು ಸಾಕಷ್ಟು ಸ್ಥಳವಿರಬೇಕು. ಮಕ್ಕಳಿಗೆ ಬಿಗಿಯಾದ ಉಡುಪಿನ ಬದಲು, ಸಡಿಲವಾದ ಉಡುಪು ಗಳನ್ನು ಹಾಕಬೇಕು. ಮಗುವಿನ ಅಳುವನ್ನು ರೂಸೋ ಅದರ ಪ್ರಥಮ ಭಾಷೆ ಯೆಂದು ಕರೆದ. ಏಕೆಂದರೆ

ಮಗುವು ತನಗೆ ಹಸಿವಾದಾಗ, ಮಲಮೂತ್ರಗಳನ್ನು ವಿಸರ್ಜಿಸಿಕೊಂಡಾಗ ಇಲ್ಲವೇ ಹೆದರಿಕೊಂಡಾಗ ಭಿನ್ನವಾಗಿ ಅಳುತ್ತದೆ. ಈ ಅಳುವಿನ ವೈವಿಧ್ಯವನ್ನು ತಾಯಿ ಮಾತ್ರ ಅರಿಯಬಲ್ಲಳು. ಮಗುವಿಗೆ ಬಲವಂತದಿಂದ ಊಟ ಮಾಡಿಸಬಾರದು. ಮಗುವು ಬಲಗೈ ಬದಲು ಎಡಗೈಯನ್ನು ಬಳಸಿದರೆ ಅದನ್ನು ಟೀಕಿಸಬಾರದು. ಮಕ್ಕಳಿಗೆ ಹೊಡೆಯ ಬಾರದು, ಬೈಯಬಾರದು, ದೊಡ್ಡ ದನಿಯಲ್ಲಿ ಗದರಿಸಬಾರದು, ನೇತ್ಯಾತ್ಮಕ ಅನುಭವ ಗಳಿಗೆ ಮಗುವನ್ನು ಒಡ್ಡಬಾರದು ಎಂದ.

ಬಾಲ್ಯಾವಧಿ: ಮಗುವಿನ ಬಾಲ್ಯವು 6ನೆಯ ವರ್ಷದಲ್ಲಿ ಆರಂಭವಾಗಿ 9ವರ್ಷಗಳವರೆಗೆ ಮುಂದುವರಿಯುತ್ತದೆ. ಈ ಅವಧಿಯಲ್ಲಿ ಮಕ್ಕಳು ಜಗತ್ತಿನ ಎಲ್ಲ ವಿಚಾರಗಳನ್ನು, ಎಲ್ಲೆಲ್ಲಿ

ಸಾಧ್ಯವೋ ಅಲ್ಲೆಲ್ಲ ಹೊಸ ವಿಚಾರಗಳನ್ನು ಸ್ವಾನುಭವದಿಂದ ಕಲಿಯಬೇಕು. ಹೂವು, ಹಕ್ಕಿ, ಹಣ್ಣು, ತರಕಾರಿಗಳನ್ನು ಚಿತ್ರದ ಮೂಲಕ ನೋಡಿ ಕಲಿಯುವ ಬದಲು, ಅವು ಗಳನ್ನು ಪ್ರತ್ಯಕ್ಷ ನೋಡಿ ಕಲಿಯಬೇಕು. ಅವುಗಳನ್ನು ಮುಟ್ಟಿ, ವಾಸನೆಯನ್ನು ನೋಡಿ, ಸಾಧ್ಯವಾದರೆ ರುಚಿ ಯನ್ನೂ ನೋಡಬೇಕು.

ಮಗುವು ಹೀಗೆ ಕ್ರಮಬದ್ಧವಾಗಿ ಕಲಿತರೆ, ತಾನು ಕಲಿತದ್ದನ್ನು ಸದಾ ಕಾಲಕ್ಕೂ ನೆನಪಿ ನಲ್ಲಿಡುತ್ತದೆ. ಈ ವಯಸ್ಸಿನಲ್ಲಿ ಮಕ್ಕಳು ಚೆನ್ನಾಗಿ ಆಟವಾಡಬೇಕು. ಎಲ್ಲೆಲ್ಲಿ ಸಾಧ್ಯವೋ ಅಲ್ಲಿ ಸಣ್ಣ ಪುಟ್ಟ ಪ್ರಯೋಗಗಳನ್ನು, ಉದಾಹರಣೆಗೆ ಮರಳಿನಲ್ಲಿ ಕಪ್ಪೆಗೂಡನ್ನು ಕಟ್ಟುವುದಕ್ಕೆ ಅವಕಾಶವನ್ನು ಮಾಡಿಕೊಡಬೇಕು. ಈ ಅವಧಿಯಲ್ಲಿ ಮಕ್ಕಳನ್ನು ಸಾಂಪ್ರದಾಯಿಕ ಶಾಲೆಗೆ ಕಳುಹಿಸಲೇಬಾರದು

ಎಂದ. ಮಗುವಿನ ಯೋಗಕ್ಷೇಮವನ್ನು ವಹಿಸುವವರು (ಪಾಲಕರು/ಶಿಕ್ಷಕರು) ಮಕ್ಕಳಿಗೆ ‘ಸ್ಪೂನ್ ಫೀಡಿಂಗ್’ ಮಾಡಬಾರದು. ಎಲ್ಲವನ್ನೂ ತಾವೇ ಕಲಿಸಿಕೊಡುವ ಬದಲು, ಹೊಸ ಹೊಸದನ್ನು ಕಲಿಯುವಂತೆ ಪ್ರಚೋದನೆಯನ್ನು ನೀಡಬೇಕು. ಕಲಿಕೆಯಲ್ಲಿ ದಾರಿ ತಪ್ಪಿದರೆ, ಆಗ ಅವರಿಗೆ

ಸೂಕ್ತ ಮಾರ್ಗದರ್ಶನವನ್ನು ಕೊಡಬೇಕು. ಸದಾ ಮಗುವೇ ಸ್ವಯಂ ಕಲಿಯಲು ಅವಕಾಶ ವನ್ನು ಮಾಡಿಕೊಡಬೇಕು. ಮಗುವು ನೇತ್ಮಾತ್ಮಕ ವಿಚಾರಗಳಿಗೆ ಸಿಲುಕುವ ಅಪಾಯವಿದ್ದರೆ, ಅಲ್ಲಿ ಮಾತ್ರ ಗುರುವು ಮಧ್ಯೆ ಪ್ರವೇಶಿಸಿ, ಮಗುವಿನ ಸ್ವಸ್ಥ ಚಿತ್ತವನ್ನು ಕಾಪಾಡಬೇಕು ಎಂದ.

ಹದಿಹರೆಯದ ಪೂರ್ವಾವಧಿ: ಇದು ಹದಿಹರೆಯವು ಆರಂಭವಾಗುವುದಕ್ಕೆ ಪೂರ್ವ ದಲ್ಲಿರುವ 10-12 ವರ್ಷಗಳ ಕಾಲ. ಎಮಿಲಿಯು, ಕಾರ್ಯಕಾರಣಗಳನ್ನು ತಿಳಿಯುವತ್ತ ಗಮನವನ್ನು ಹರಿಸುವಂತೆ ನೋಡಿಕೊಳ್ಳಬೇಕು. ತನ್ನ ಅನುಭವಕ್ಕೆ ಬರುವ ಪ್ರತಿಯೊಂದು ವಿಚಾರವನ್ನು ಕುರಿತು ಯೋಚಿಸಿ, ವಿಶ್ಲೇಷಿಸಿ, ಅಂತಿಮ ತೀರ್ಮಾನಕ್ಕೆ ಬರುವುದನ್ನು ಕಲಿಸಬೇಕು. ಈ ವಯಸ್ಸಿನಲ್ಲಿ ಮಗುವು ತನ್ನ ಆಸಕ್ತಿಯ ಕ್ಷೇತ್ರವನ್ನು ಗುರುತಿಸಿಕೊಳ್ಳುವ ಸಾಧ್ಯತೆಯಿರುತ್ತದೆ. ಅವನಿಗೆ ಸಾಹಿತ್ಯ, ವಿಜ್ಞಾನ, ಇತಿಹಾಸ, ಕ್ರೀಡೆ, ನೃತ್ಯ, ಸಂಗೀತ- ಹೀಗೆ ಹಲವು ಹತ್ತು ಕ್ಷೇತ್ರಗಳ ಪರಿಚಯವಾಗಬೇಕು. ಆಗ ಅವನು ತನಗೆ ಇಷ್ಟವಾದ ವಿಷಯ ವನ್ನು ಆಯ್ಕೆ ಮಾಡಿಕೊಳ್ಳುತ್ತಾನೆ. ಆ ಬಗ್ಗೆ ಹೆಚ್ಚು ಹೆಚ್ಚು ಕಲಿಯಲು ಆಸಕ್ತಿಯನ್ನು ತೋರುತ್ತಾನೆ. ಅದಕ್ಕೆ ಅವಕಾಶವನ್ನು ಮಾಡಿಕೊಡಬೇಕು.

ಅವನಿಗಿಷ್ಟವಿಲ್ಲದ ವಿಷಯಗಳನ್ನು ಕಲಿಯುವಂತೆ ಒತ್ತಡವನ್ನು ಹಾಕಬಾರದು. ಈ ಅವಧಿಯಲ್ಲಿ ಕೈಕೆಲಸವನ್ನು ಕಲಿಸಬೇಕು. ಉದಾಹರಣೆಗೆ ಬಡಗಿಯ ಕೆಲಸ. ಇದು ಮಗುವಿನ ಪರಿಕಲ್ಪನೆ, ಸೃಜನಶೀಲತೆ, ಗಣಿತದ ಲೆಕ್ಕಾಚಾರದೊಡನೆ ದೈಹಿಕ ಶ್ರಮವನ್ನು ಬೇಡುತ್ತದೆ. ಹಾಗಾಗಿ ಅವನ ಮುಂದೆ ಹೊಸದೊಂದು ಜಗತ್ತು ತೆರೆದುಕೊಳ್ಳುತ್ತದೆ.

ಹದಿಹರೆಯದ ಅವಧಿ: ಇದು ಒಬ್ಬ ವ್ಯಕ್ತಿಯನ್ನು ರೂಪಿಸುವ ಪರ್ವಕಾಲ. ಇದು 13-19 ವರ್ಷಗಳ ನಡುವಿನ ಕಾಲ. ಮುಖ್ಯವಾಗಿ ಮಗುವು ತನ್ನ ಭಾವನೆಗಳನ್ನು ತಿಳಿಯುವ ಅವಧಿ. ಹದಿ ವಯಸ್ಸಿನವರಿಗೆ ಪ್ರಧಾನವಾಗಿ ಕರುಣೆ ಹಾಗೂ ಸಹಾನುಭೂತಿಯನ್ನು ಕಲಿಸಬೇಕು. ಭಾವನೆಗಳ ಸಂಕೀರ್ಣ ಲೋಕದಲ್ಲಿ ಯಶಸ್ವಿಯಾಗಿ ಮುಂದುವರಿಯ ಬೇಕಾದರೆ, ಅದು ಸಹಾನುಭೂತಿಯಿಂದ ಮಾತ್ರ ಸಾಧ್ಯ. ಅವನು ಪರಿಪೂರ್ಣನಾಗಿ ಬೆಳೆಯಲು ಅವನಿಗೆ ಪ್ರೀತಿಯ ಪರಿಚಯವಾಗಬೇಕು. ಪ್ರೀತಿಸುವುದು ಹಾಗೂ ಪ್ರೀತಿಸಲ್ಪ ಡುವುದು ಎರಡನ್ನೂ ಆಳವಾಗಿ ಅರಿಯಬೇಕು. ಪ್ರೀತಿಯೇ ಅವನನ್ನು ಭಾವಿ ಜೀವನಕ್ಕೆ ಅನುವುಗೊಳಿಸುತ್ತದೆ. ಈ ಅವಧಿಯಲ್ಲಿ ಸಾಂಪ್ರದಾಯಿಕ ಶಿಕ್ಷಣವು ಆರಂಭವಾಗಬೇಕು. ದೇವರು-ಧರ್ಮ ಇತ್ಯಾದಿಗಳ ಪರಿಚಯವನ್ನು ಮಾಡಿಕೊಡಬೇಕು. ಈ ವೇಳೆಗೆ ಅವನಿಗೆ ಕಾರ್ಯ-ಕಾರಣಗಳನ್ನು ವಿಶ್ಲೇಷಿಸುವ ಸಾಮರ್ಥ್ಯವು ಬಂದಿರುತ್ತದೆಯಾದ್ದರಿಂದ, ಅವನು ತನ್ನ ಬದುಕಿನ ಎಲ್ಲ ಸಮಸ್ಯೆಗಳನ್ನು ಸ್ವಯಂ ವಿಶ್ಲೇಷಿಸಿ ಉತ್ತರವನ್ನು ಕಂಡುಕೊಳ್ಳಬಲ್ಲ.

ವಯಸ್ಕ: 20 ವರ್ಷವನ್ನು ತಲುಪಿದಾಗ ವಯಸ್ಕ ಹಂತವು ಆರಂಭವಾಗುತ್ತದೆ. ಎಮಿಲಿ ಈಗ ಸಮಾಜದಲ್ಲಿ ಮುಕ್ತವಾಗಿ ಬೆರೆಯಬಲ್ಲ. ಬದುಕಿನ ಹಾಗೂ ಸಾಮಾಜಿಕ ಸಮಸ್ಯೆಗಳ ಸೂಕ್ಷ್ಮವನ್ನು ತಿಳಿಯಬಲ್ಲ. ಈ ಅವಧಿಯಲ್ಲಿ ಆತ ಹಣ, ಅಧಿಕಾರ ಇತ್ಯಾದಿ ಆಮಿಷಗಳಿಗೆ ಬಲಿಯಾಗಲಾರ. ಆದರೆಈ ಅವಧಿಯಲ್ಲಿ ಅವನಿಗೆ ಸೋಫಿಯನ್ನು ಭೇಟಿಯಾಗಬೇಕು ಎನ್ನುವ ಆಸೆಯು ಚಿಗುರುವುದು ಸಹಜವಾಗಿದೆ.

ಹಾಗಾಗಿ ಸೋಫಿಯ ಜತೆಯಲ್ಲಿ ಮಾತುಕತೆಯನ್ನು ಆಡುತ್ತಾ ಆಕೆಯನ್ನು ಮದುವೆ ಯಾಗುವ ಅರ್ಹತೆ ಅವನಿಗೆ ಬಂದಿರುತ್ತದೆ. ಎಮಿಲಿ ಓರ್ವ ಆದರ್ಶ ಪುರುಷನಾಗಿರುವಂತೆ ಸೋಫಿ ಓರ್ವ ಆದರ್ಶ ಮಹಿಳೆಯಾಗಿರುತ್ತಾಳೆ. ಅಕೆಯು ಗಂಡನ ಅಧೀನದಲ್ಲಿ ಸ್ವಾಧ್ಯಾಯವನ್ನು ಮಾಡಬಹುದು.

‘ಪುರುಷನು ಬಲಶಾಲಿಯು ಹಾಗೂ ಸಮಾಜದಲ್ಲಿ ಸಕ್ರಿಯನಾಗಿರಬೇಕು; ಮಹಿಳೆಯು ದುರ್ಬಲ ಳಾಗಿ, ನಿಷ್ಕ್ರಿಯಳಾಗಿ ಗಂಡನ ನೆರಳಿನಲ್ಲಿರಬೇಕು’. ರೂಸೋವಿನ ಅಭಿಪ್ರಾಯ ದಲ್ಲಿ ಹೆಣ್ಣು ತನ್ನ ಗಂಡನನ್ನು ಸದಾ ತೃಪ್ತಿಗೊಳಿಸಬೇಕು, ಗಂಡನ ಹಿತಾಸಕ್ತಿಯಂತೆ ನಡೆದುಕೊಳ್ಳಬೇಕು ಹಾಗೂ ಅವನಿಗೆ ಆಸರೆಯನ್ನು ನೀಡಬೇಕು. ಇದು ರೂಸೋವಿನ ಕಾದಂಬರಿಯ ಸ್ಥೂಲ ಚಿತ್ರಣ.

Three labourers brutally assaulted by brick kiln owner
1:53 PM January 20, 2025

Assault case: ಮೂವರು ಕಾರ್ಮಿಕರ ಮೇಲೆ ಇಟ್ಟಿಗೆ ಭಟ್ಟಿ ಮಾಲೀಕ ಮಾರಣಾಂತಿಕ ಹಲ್ಲೆ; ಕೆಲಸಕ್ಕೆ ಬರುವುದು ವಿಳಂಬವಾಗಿದ್ದಕ್ಕೆ ರಾಕ್ಷಸಿ ಕೃತ್ಯ!

Saif Ali Khan, Ibrahim
2:50 PM January 16, 2025

Saif Ali Khan: 1,200 ಕೋಟಿ ರೂ. ಆಸ್ತಿಗಳ ಒಡೆಯ ಸೈಫ್‌ ಆಲಿ ಖಾನ್‌ನನ್ನು‌ ಆಟೋದಲ್ಲಿ ಆಸ್ಪತ್ರೆಗೆ ಕರೆದೊಯ್ದ ಪುತ್ರ ಇಬ್ರಾಹಿಂ; ಕಾರಣವೇನು?

Student dies 1
8:51 PM January 18, 2025

Heart Attack: ಕಾಲೇಜು ಮುಗಿಸಿ ಹೋಗುವಾಗ ಹೃದಯಾಘಾತವಾಗಿ ವಿದ್ಯಾರ್ಥಿನಿ ಸಾವು

robbery case shooting
1:49 PM January 16, 2025

Murder Case: ಸೆಕ್ಯೂರಿಟಿ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ ಮಾಡಿ 93 ಲಕ್ಷ ರೂ. ದರೋಡೆ

BBK 11 Mid week Elimination (1)
9:12 PM January 15, 2025

BBK 11: ಇಂದೇ ನಡೆಯಲಿದೆ ಮಿಡ್ ವೀಕ್ ಎಲಿಮಿನೇಷನ್: ಔಟ್ ಆದ ಸ್ಪರ್ಧಿ ಇವರೇ ನೋಡಿ

Saif ali Khan (1)
9:38 AM January 18, 2025

Saif Ali Khan: ರಕ್ತಸಿಕ್ತವಾದ ಬಟ್ಟೆ, ಸಂಪೂರ್ಣ ಅಸ್ವಸ್ಥರಾಗಿದ್ದ ಸೈಫ್‌! ಆ ರಾತ್ರಿ ನಡೆದಿದ್ದಾದರೂ ಏನು? ಆಟೋ ಡ್ರೈವರ್‌ ಹೇಳಿದ್ದೇನು?

Naga Sadhus
11:15 PM January 18, 2025

Maha Kumbh Mela: ಕುಂಭಮೇಳದ ವೇಳೆ ನಾಗ ಸಾಧುಗಳು ಬರುವುದೆಲ್ಲಿಂದ? ಬಳಿಕ ಅಪ್ರತ್ಯಕ್ಷರಾಗುವುದೇಕೆ? ಅವರ ನಿಗೂಢ ಪ್ರಪಂಚ ಹೇಗಿದೆ? ಇಲ್ಲಿದೆ ಸಮಗ್ರ ವಿವರ

Chaithra Kundapura remuneration (1)
7:13 AM January 16, 2025

BBK 11: ಬಿಗ್ ಬಾಸ್​ನಿಂದ ಹೊರಬಂದ ಚೈತ್ರಾ ಕುಂದಾಪುರಗೆ ಸಿಕ್ಕ ಹಣ ಎಷ್ಟು ಗೊತ್ತೇ?

Honnamaradi jatre
5:53 PM January 15, 2025

Honnamaradi Jatre: ವೈಭವದಿಂದ ನಡೆದ ಹೊನ್ನಮರಡಿ ಜಾತ್ರೆ; ಶ್ರೀ ರಂಗನಾಥಸ್ವಾಮಿ ದರ್ಶನ ಪಡೆದ ಸಾವಿರಾರು ಭಕ್ತರು

Eshwara Khandre
6:54 PM January 16, 2025

Bidar ATM Robbery: ಬೀದರ್ ಎಟಿಎಂ ದರೋಡೆ ಪ್ರಕರಣ; ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮಕ್ಕೆ ಸಚಿವ ಖಂಡ್ರೆ ಸೂಚನೆ