ಕೆ.ಎಲ್ ರಾಹುಲ್ ಕ್ಲೀನ್ ಬೌಲ್ಡ್ ಕಂಡು ಅನಿಲ್ ಕುಂಬ್ಳೆ ನೀಡಿದ ಪ್ರತಿಕ್ರಿಯೆ ಹೇಗಿತ್ತು?
Anil Kumble: ರಾಹುಲ್ ಅವರ ನಿಲುವನ್ನು ಕುಂಬ್ಳೆ ಮತ್ತಷ್ಟು ವಿಶ್ಲೇಷಿಸುತ್ತಾ, ಅವರ ಗಾರ್ಡ್ ಚೆಂಡನ್ನು ಸ್ಟ್ರೆಚಿಂಗ್ ಮಾಡಲು ಬಿಟ್ಟರು ಎಂದು ಹೇಳಿದರು. "ನೀವು ಮಿಡಲ್-ಅಂಡ್-ಆಫ್‌ನಲ್ಲಿ ನಿಂತರೆ, ಆ ಪ್ರದೇಶದಲ್ಲಿ ಹೆಚ್ಚಿನ ಎಸೆತಗಳನ್ನು ನೀವು ನಿಗ್ರಹಿಸಬಹುದು ಅಥವಾ ರಕ್ಷಿಸಬಹುದು. ಆದರೆ ನೀವು ಮಿಡಲ್-ಅಂಡ್-ಲೆಗ್‌ನಲ್ಲಿದ್ದಾಗ, ನೀವು ಬಲವಂತವಾಗಿ ತಲುಪಬೇಕಾಗುತ್ತದೆ" ಎಂದರು.
ಅನಿಲ್ ಕುಂಬ್ಳೆ -
ಗುವಾಹಟಿ, ನ.26: ದಕ್ಷಿಣ ಆಫ್ರಿಕಾ ವಿರುದ್ಧದ(India vs South Africa 2nd Test) ಅಂತಿಮ ಟೆಸ್ಟ್ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ಆರಂಭಿಕ ಬ್ಯಾಟರ್ ಕೆ.ಎಲ್ ರಾಹುಲ್(KL Rahul) ಅವರು ಸೈಮನ್ ಹಾರ್ಮರ್ ಆಫ್ ಸ್ಪಿನ್‌ಗೆ ಕ್ಲೀನ್ ಬೌಲ್ಡ್ ಆದ ತಕ್ಷಣ ಭಾರತದ ಮಾಜಿ ನಾಯಕ ಹಾಗೂ ಬೌಲರ್ ಅನಿಲ್ ಕುಂಬ್ಳೆ(Anil Kumble) ಕಾಮೆಂಟರಿ ಬಾಕ್ಸ್‌ನಲ್ಲಿ ನೀಡಿದ ಪ್ರತಿಕ್ರಿಯೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕ್ರಿಕೆಟ್ ಲೈವ್‌ನಲ್ಲಿ ಕುಂಬ್ಳೆ ಔಟ್ ಬಗ್ಗೆ ವಿವರಿಸುತ್ತಾ, ಚೆಂಡು ಮತ್ತು ಬ್ಯಾಟ್ಸ್‌ಮನ್‌ನ ವಿಧಾನ ಎರಡನ್ನೂ ನಿರ್ಣಯಿಸುವಲ್ಲಿ ಹಿಂಜರಿಯಲಿಲ್ಲ. ರಾಹುಲ್ ಯಾವ ರೀತಿ ಬ್ಯಾಟ್ ಬೀಸಿದರು ಎಂಬುನ್ನು ಕಂಬ್ಳೆ ಅನುಕರಣೆ ಮಾಡಿ ತೋರಿಸಿದರು. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಕುಂಬ್ಳೆ ಅವರ ಈ ಅನುಕರಣೆ ಕ್ರಿಕೆಟ್ ಅಭಿಮಾನಿಗಳನ್ನು ನಗೆ ಗಡಲಲ್ಲಿ ತೇಲುವಂತೆ ಮಾಡಿದೆ.
ವೈರಲ್ ವಿಡಿಯೊ ಇಲ್ಲಿದೆ
Anil Kumble reaction after KL Rahul wicket 😳 pic.twitter.com/Hm5N2h55UJ
— 𝘚𝘏𝘌𝘙𝘈 𝟿𝟿𝟿 (@RarshitHana) November 25, 2025
ರಾಹುಲ್ ಅವರ ನಿಲುವನ್ನು ಕುಂಬ್ಳೆ ಮತ್ತಷ್ಟು ವಿಶ್ಲೇಷಿಸುತ್ತಾ, ಅವರ ಗಾರ್ಡ್ ಚೆಂಡನ್ನು ಸ್ಟ್ರೆಚಿಂಗ್ ಮಾಡಲು ಬಿಟ್ಟರು ಎಂದು ಹೇಳಿದರು. "ನೀವು ಮಿಡಲ್-ಅಂಡ್-ಆಫ್‌ನಲ್ಲಿ ನಿಂತರೆ, ಆ ಪ್ರದೇಶದಲ್ಲಿ ಹೆಚ್ಚಿನ ಎಸೆತಗಳನ್ನು ನೀವು ನಿಗ್ರಹಿಸಬಹುದು ಅಥವಾ ರಕ್ಷಿಸಬಹುದು. ಆದರೆ ನೀವು ಮಿಡಲ್-ಅಂಡ್-ಲೆಗ್‌ನಲ್ಲಿದ್ದಾಗ, ನೀವು ಬಲವಂತವಾಗಿ ತಲುಪಬೇಕಾಗುತ್ತದೆ" ಎಂದರು.
ಬೃಹತ್ ಗುರಿ ಬೆನ್ನತ್ತಿರುವ ಭಾರತ ಅಂತಿಮ ದಿನವಾದ ಬುಧವಾರ ಭಾರತ ಈ ಪಂದ್ಯವನ್ನು ಡ್ರಾ ಮಾಡಿಕೊಳ್ಳಬೇಕಿದ್ದರೆ ಅಸಾಧಾರಣ ಆಟ ಪ್ರದರ್ಶಿಸಬೇಕಿದೆ. ಭಾರತದ ಮೇಲೆ ಫಾಲೋ ಆನ್ ಹೇರದ ಹರಿಣ ಪಡೆ, 2ನೇ ಇನ್ನಿಂಗ್ಸಲ್ಲಿ 5 ವಿಕೆಟ್‌ಗೆ 260 ರನ್ ಗಳಿಸಿ, ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು.
ಸಂಜುಗೆ ಅವಕಾಶ ನೀಡಿ
ದಕ್ಷಿಣ ಆಫ್ರಿಕಾ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯ ಭಾರತ ತಂಡದಲ್ಲಿ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್‌ಗೆಅವಕಾಶ ನೀಡದ ಬಗ್ಗೆ ಅನಿಲ್ ಕುಂಬ್ಳೆ ಬೇಸರ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ IND vs SA: ʻನೆಪ ಹೇಳಬೇಡಿ, ಉತ್ತರ ಕೊಡಿʼ-ಗೌತಮ್ ಗಂಭೀರ್ ವಿರುದ್ಧ ಕ್ರಿಸ್ ಶ್ರೀಕಾಂತ್ ಕಿಡಿ!
ಅಜಿತ್ ಅಗರ್ಕರ್ ಸಾರಥ್ಯದ ಬಿಸಿಸಿಐ ಆಯ್ಕೆ ಸಮಿತಿಯು ಸಂಜು ಸ್ಯಾಮ್ಸನ್ ಅವರನ್ನು ಕೇವಲ ಟಿ20ಐ ತಂಡದಲ್ಲಿ ಮಾತ್ರ ಆಡಿಸುತ್ತಿದೆ. ಆದರೆ, ಸಂಜು ತಮ್ಮ ಕೊನೆಯ ಒಡಿಐ ಸರಣಿಯಲ್ಲಿ ಶತಕವನ್ನು ಕೂಡ ಬಾರಿಸಿದ್ದರು. ಇದರ ಹೊರತಾಗಿಯೂ ಅವರನ್ನು ಸತತವಾಗಿ 50 ಓವರ್‌ಗಳ ಸ್ವರೂಪದಿಂದ ಕಡೆಗಣಿಸಲಾಗುತ್ತಿದೆ ಎಂದಿದ್ದರು.
ಇದನ್ನೂ ಓದಿ Virat Kohli: ದಕ್ಷಿಣ ಆಫ್ರಿಕಾ ಏಕದಿನ ಸರಣಿಗೆ ಲಂಡನ್‌ನಿಂದ ತವರಿಗೆ ಬಂದ ಕೊಹ್ಲಿ
"ಭಾರತ ಏಕದಿನ ತಂಡದಲ್ಲಿ ನಾನು ನೋಡ ಬಯಸುವ ಆಟಗಾರರ ಪೈಕಿ ಸಂಜು ಸ್ಯಾಮ್ಸನ್ ಕೂಡ ಒಬ್ಬರು. ಅವರು ಕಳೆದ ಎರಡು ವರ್ಷಗಳ ಹಿಂದೆ ಅವರು ಏಕದಿನ ತಂಡದಲ್ಲಿ ಆಡಿದ್ದರು ಹಾಗೂ ಶತಕವನ್ನು ಬಾರಿಸಿದ್ದರು. ಆದರೆ, ಆಸ್ಟ್ರೇಲಿಯಾ ಏಕದಿನ ಸರಣಿಯಲ್ಲಿ ಇವರು ಆಡಿಲ್ಲ ಎಂದು ನನಗೆ ಗೊತ್ತಿದೆ," ಎಂದು ಅನಿಲ್ ಕುಂಬ್ಳೆ ಹೇಳಿದ್ದಾರೆ.