ಏಷ್ಯನ್ ಗೇಮ್ಸ್ ಹಾಕಿ: ಅಜೇಯ ಓಟ ಮುಂದುವರಿಸಿದ ಭಾರತ
Asian Games 2026: ಮಲೇಷ್ಯಾ ಪ್ರಸ್ತುತ ಮೂರು ಪಂದ್ಯಗಳಿಂದ ಒಂಬತ್ತು ಅಂಕಗಳನ್ನು ಗಳಿಸಿ 'ಪೂಲ್ ಬಿ'ಯಲ್ಲಿ ಅಗ್ರಸ್ಥಾನದಲ್ಲಿದೆ. ತಲಾ ಎರಡು ಪಂದ್ಯಗಳನ್ನು ಆಡಿರುವ ಪಾಕಿಸ್ತಾನ ಮತ್ತು ಚೀನಾ ತಲಾ ಆರು ಅಂಕಗಳೊಂದಿಗೆ ನಂತರದ ಸ್ಥಾನಗಳಲ್ಲಿವೆ.
India men’s hockey -
ನಗೋಯಾ, ಸೆ.23: ಏಷ್ಯನ್ ಕ್ರೀಡಕೂಟದ ಪುರುಷರ ಹಾಕಿ ಸ್ಪರ್ಧೆಯಲ್ಲಿ, ದಕ್ಷಿಣ ಕೊರಿಯಾ ವಿರುದ್ಧ 8-2 ಅಂತರದ ಭರ್ಜರಿ ಗೆಲುವು ಸಾಧಿಸುವ ಮೂಲಕ ಭಾರತ ತನ್ನ ಅಜೇಯ ಗೆಲುವಿನ ಓಟ ಮುಂದುವರಿಸಿದೆ. ಏಷ್ಯನ್ ಕ್ರೀಡಾಕೂಟದಲ್ಲಿ ಕೊರಿಯಾ ವಿರುದ್ಧ ಭಾರತ ಸಾಧಿಸಿದ ಅತಿ ದೊಡ್ಡ ಅಂತರದ ಗೆಲುವು ಇದಾಗಿದೆ.
ಗುರುವಾರ ಗಿಫು ಪ್ರಿಫೆಕ್ಚರಲ್ ಗ್ರೀನ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ದಿಲ್‌ಪ್ರೀತ್ ಸಿಂಗ್ ಮತ್ತು ಅಭಿಷೇಕ್ ತಲಾ ಎರಡು ಗೋಲುಗಳನ್ನು ಗಳಿಸುವ ಮೂಲಕ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಈ ಗೆಲುವಿನೊಂದಿಗೆ ಭಾರತ 'ಗ್ರೂಪ್ ಎ'ನಲ್ಲಿ ತನ್ನ ಅಗ್ರಸ್ಥಾನವನ್ನು ಬಲಪಡಿಸಿಕೊಂಡಿತು. ಸುಖ್‌ಜೀತ್ ಸಿಂಗ್, ಹರ್ಮನ್‌ಪ್ರೀತ್ ಸಿಂಗ್, ರಾಜಿಂದರ್ ಸಿಂಗ್ ಮತ್ತು ಶಿಲಾನಂದ್ ಲಾಕ್ರಾ ತಲಾ ಒಂದು ಗೋಲುಗಳನ್ನು ಗಳಿಸಿದರು.
ಕೊರಿಯಾದ ಅಸಂಘಟಿತ ರಕ್ಷಣಾ ವಿಭಾಗದ ದೌರ್ಬಲ್ಯವನ್ನು ಭಾರತೀಯ ಆಕ್ರಮಣಕಾರಿ ಆಟಗಾರರು ಸಮರ್ಥವಾಗಿ ಬಳಸಿಕೊಂಡರು. ಪಂದ್ಯದ ಅಂತಿಮ ಹಂತದಲ್ಲಿ ದಕ್ಷಿಣ ಕೊರಿಯಾ ತಂಡವು ಲಯ ಕಂಡುಕೊಂಡಿತು. ಕಿಮ್ ಜೇ-ಹೋ ಮತ್ತು ಕಿಮ್ ಯೊಂಗ್ ಬೋಕ್ ಅವರು ಕೊನೆಯ ಎರಡು ಕ್ವಾರ್ಟರ್‌ಗಳಲ್ಲಿ ಗೋಲು ಗಳಿಸಿ ತಂಡಕ್ಕೆ ಕೊಂಚ ನಿರಾಳತೆ ಒದಗಿಸಿದರು.
ಮಹಿಳಾ ಮುಂಬೈ ಇಂಡಿಯನ್ಸ್‌ಗೆ ವಿಲಿಯಮ್ಸ್ ನೂತನ ಕೋಚ್
ಕೊರಿಯಾ ತಂಡವು ಈ ಹಿಂದೆ ಇಂಡೋನೇಷ್ಯಾವನ್ನು 13-1 ಮತ್ತು ಶ್ರೀಲಂಕಾವನ್ನು 16-1 ಅಂತರದಿಂದ ಭಾರಿ ಅಂತರದಲ್ಲಿ ಸೋಲಿಸಿತ್ತು. ಆದರೆ ಭಾರತ ವಿರುದ್ಧ ಅವರ ಆಟ ನಡೆಯಲಿಲ್ಲ. ಭಾರತವು ಮೊದಲಾರ್ಧದಲ್ಲಿ ಅಮೋಘ ಮುನ್ನಡೆ ಸಾಧಿಸಿತು. ಆರಂಭಿಕ 15 ನಿಮಿಷಗಳಲ್ಲಿ ಗಳಿಸಿದ ನಾಲ್ಕು ಗೋಲುಗಳಲ್ಲಿ ಕೇವಲ ಒಂದು ಮಾತ್ರ ಪೆನಾಲ್ಟಿ ಕಾರ್ನರ್‌ನಿಂದ ಬಂದಿತು.
ಮಲೇಷ್ಯಾ ಪ್ರಸ್ತುತ ಮೂರು ಪಂದ್ಯಗಳಿಂದ ಒಂಬತ್ತು ಅಂಕಗಳನ್ನು ಗಳಿಸಿ 'ಪೂಲ್ ಬಿ'ಯಲ್ಲಿ ಅಗ್ರಸ್ಥಾನದಲ್ಲಿದೆ. ತಲಾ ಎರಡು ಪಂದ್ಯಗಳನ್ನು ಆಡಿರುವ ಪಾಕಿಸ್ತಾನ ಮತ್ತು ಚೀನಾ ತಲಾ ಆರು ಅಂಕಗಳೊಂದಿಗೆ ನಂತರದ ಸ್ಥಾನಗಳಲ್ಲಿವೆ. ಭಾರತವು ಶನಿವಾರ ಜಪಾನ್ ವಿರುದ್ಧ ಸೆಣಸಲಿದೆ. ಪ್ರತಿ ಪೂಲ್‌ನಿಂದ ಅಗ್ರ ಎರಡು ತಂಡಗಳು ಪುರುಷರ ಹಾಕಿ ಸ್ಪರ್ಧೆಯ ಸೆಮಿಫೈನಲ್‌ಗೆ ಪ್ರವೇಶಿಸಲಿವೆ.