ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಭಾರತದಲ್ಲಿ ಮೊದಲ ಬಾರಿ ವಿಶ್ವ ಸೈಕ್ಲಿಂಗ್‌ ಚಾಂಪಿಯನ್‌ಷಿಪ್, ಪುಣೆಗೆ ಆತಿಥ್ಯ!

2032ರ ಯುಸಿಐ ರೋಡ್ ವಿಶ್ವ ಚಾಂಪಿಯನ್‌ಷಿಪ್‌ಗೆ ಪುಣೆ ಆತಿಥ್ಯ ವಹಿಸಲಿದೆ. ಭಾರತದಲ್ಲಿ ಇದೇ ಮೊದಲ ಬಾರಿ ನಡೆಯಲಿರುವ ಈ ಪ್ರತಿಷ್ಠಿತ ಸೈಕ್ಲಿಂಗ್ ಟೂರ್ನಿ ದೇಶದ ಕ್ರೀಡಾ ಮಹತ್ವವನ್ನು ಮತ್ತಷ್ಟು ಹೆಚ್ಚಿಸುವ ನಿರೀಕ್ಷೆಯಿದೆ. ಆ ಮೂಲಕ ಪುಣೆಯನ್ನು ಜಾಗತಿಕ ಸೈಕ್ಲಿಂಗ್ ತಾಣವನ್ನಾಗಿ ಬೆಳೆಸುವುದು ಇದರ ಮುಖ್ಯ ಉದ್ದೇಶವಾಗಿದೆ.

ಭಾರತದಲ್ಲಿ ಮೊದಲ ಬಾರಿ ವಿಶ್ವ ಸೈಕ್ಲಿಂಗ್‌ ಚಾಂಪಿಯನ್‌ಷಿಪ್‌!

ಪುಣೆಯಲ್ಲಿ ವಿಶ್ವ ಸೈಕ್ಲಿಂಗ್‌ ಚಾಂಪಿಯನ್‌ಷಿಪ್‌. -

Profile
Ramesh Kote Sep 24, 2026 4:04 PM

ಬೆಂಗಳೂರು: ಪುಣೆ 2032ರ UCI ರೋಡ್ ವಿಶ್ವ ಚಾಂಪಿಯನ್‌ಶಿಪ್‌ ಆಯೋಜಿಸುವ ಹಕ್ಕನ್ನು ಪಡೆದುಕೊಂಡಿದ್ದು, ಸೈಕ್ಲಿಂಗ್‌ನ ಈ ಜಾಗತಿಕ ಮಹೋತ್ಸವವನ್ನು ಇದೇ ಮೊದಲ ಬಾರಿ ಭಾರತದಲ್ಲಿ ಆಯೋಜಿಸಲಿದೆ. ಇದು ಮಹಾರಾಷ್ಟ್ರ ಹಾಗೂ ದೇಶದ ಕ್ರೀಡಾ ಮಹತ್ವಾಕಾಂಕ್ಷೆಗಳಿಗೆ ಐತಿಹಾಸಿಕ ಮೈಲುಗಲ್ಲಾಗಿದೆ. ಈ ಐತಿಹಾಸಿಕ ಬಿಡ್‌ನ್ನು ಮಹಾರಾಷ್ಟ್ರ ಸರ್ಕಾರ ಮತ್ತು ಸೈಕ್ಲಿಂಗ್ ಫೆಡರೇಶನ್ ಆಫ್ ಇಂಡಿಯಾ (CFI) ಜಂಟಿಯಾಗಿ, ಭಾರತ ಸರ್ಕಾರದ ಬೆಂಬಲದೊಂದಿಗೆ ಸಲ್ಲಿಸಿದ್ದವು. ಪುಣೆಯನ್ನು ಜಾಗತಿಕ ಸೈಕ್ಲಿಂಗ್ ತಾಣವನ್ನಾಗಿ ಬೆಳೆಸುವುದು ಹಾಗೂ ಜಿಲ್ಲೆ, ಮಹಾರಾಷ್ಟ್ರ ಮತ್ತು ದೇಶದಾದ್ಯಂತ ಸೈಕ್ಲಿಂಗ್‌ಗೆ ಶಾಶ್ವತ ಪರಂಪರೆಯನ್ನು ನಿರ್ಮಿಸುವುದು ಇದರ ಪ್ರಮುಖ ಉದ್ದೇಶವಾಗಿದೆ.

ಈ ಮಹತ್ವದ ಘೋಷಣೆಯು ಭಾರತದ ಕ್ರೀಡಾ ಪಯಣದಲ್ಲಿ ನಿರ್ಣಾಯಕ ಹಂತದಲ್ಲಿ ಹೊರಬಿದ್ದಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 2036ರ ಒಲಿಂಪಿಕ್ ಕ್ರೀಡಾಕೂಟವನ್ನು ಆಯೋಜಿಸುವ ಭಾರತದ ಮಹತ್ವಾಕಾಂಕ್ಷೆಯನ್ನು ವ್ಯಕ್ತಪಡಿಸಿದ್ದು, ಕ್ರೀಡಾ ಮೂಲಸೌಕರ್ಯವನ್ನು ಬಲಪಡಿಸುವುದು, ಪ್ರತಿಭೆಗಳನ್ನು ಬೆಳೆಸುವುದು ಮತ್ತು ಜಾಗತಿಕ ಕ್ರೀಡಾ ರಾಷ್ಟ್ರವಾಗಿ ಭಾರತದ ಸಾಮರ್ಥ್ಯವನ್ನು ಹೆಚ್ಚಿಸುವುದಕ್ಕೆ ಒತ್ತು ನೀಡಿದ್ದಾರೆ. ಕೇಂದ್ರ ಸಚಿವ ಸಂಪುಟ ಅನುಮೋದಿಸಿರುವ ರಾಷ್ಟ್ರೀಯ ಕ್ರೀಡಾ ನೀತಿ 2025, ಭಾರತವನ್ನು ಜಾಗತಿಕ ಕ್ರೀಡಾ ಶಕ್ತಿಕೇಂದ್ರವನ್ನಾಗಿ ರೂಪಿಸುವ ಹಾಗೂ 2036ರ ಒಲಿಂಪಿಕ್ ಕ್ರೀಡಾಕೂಟ ಸೇರಿದಂತೆ ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಅತ್ಯುತ್ತಮ ಸಾಧನೆಗಾಗಿ ಬಲವಾದ ಸ್ಪರ್ಧಿಯಾಗಿ ಬೆಳೆಸುವ ಮಾರ್ಗಸೂಚಿಯನ್ನು ರೂಪಿಸಿದೆ.

ಏಷ್ಯನ್ ಗೇಮ್ಸ್: ಸೆಮಿಫೈನಲ್‌ಗೆ ಲಗ್ಗೆಯಿಟ್ಟ ಭಾರತ ಪುರುಷರ ಕಬಡ್ಡಿ ತಂಡ

ಪುಣೆಯ ಅಭ್ಯರ್ಥಿತ್ವವನ್ನು ಪುಣೆ ಜಿಲ್ಲಾಧಿಕಾರಿ ಜಿತೇಂದ್ರ ದುಡಿ ಮತ್ತು ಸೈಕ್ಲಿಂಗ್ ಫೆಡರೇಶನ್ ಆಫ್ ಇಂಡಿಯಾದ ಪ್ರಧಾನ ಕಾರ್ಯದರ್ಶಿ ಶ್ರೀ ಮನೀಂದರ್ ಪಾಲ್ ಸಿಂಗ್ ಅವರು ಅಧಿಕೃತವಾಗಿ ಪ್ರಸ್ತುತಪಡಿಸಿದರು. 2032ರ UCI ರೋಡ್ ವಿಶ್ವ ಚಾಂಪಿಯನ್‌ಶಿಪ್‌ ಆಯೋಜಿಸಲು ಪುಣೆಯ ದೃಷ್ಟಿಕೋನ, ಸಿದ್ಧತೆ ಮತ್ತು ದೀರ್ಘಕಾಲೀನ ಯೋಜನೆಗಳನ್ನು ಅವರು ವಿವರಿಸಿದರು.

ಪುಣೆ ಜಿಲ್ಲಾಧಿಕಾರಿ ಜಿತೇಂದ್ರ ದುಡಿ ಮಾತನಾಡಿ, “ಇದು ಪುಣೆಗೆ ಮಹತ್ವದ ಕ್ಷಣವಾಗಿದ್ದು, ಮಹಾರಾಷ್ಟ್ರ ಸರ್ಕಾರ ಮತ್ತು ಸೈಕ್ಲಿಂಗ್ ಫೆಡರೇಶನ್ ಆಫ್ ಇಂಡಿಯಾದ ಹಂಚಿಕೆಯದೃಷ್ಟಿಕೋನದ ಫಲವಾಗಿದೆ. UCI ರೋಡ್ ವಿಶ್ವ ಚಾಂಪಿಯನ್‌ಶಿಪ್‌ ಆಯೋಜಿಸುವುದು ಕೇವಲ ಸೈಕ್ಲಿಂಗ್ ರೇಸ್ ನಡೆಸುವುದಷ್ಟೇ ಅಲ್ಲ; ಇದು ಪುಣೆ ಮತ್ತು ಭಾರತವನ್ನು ಅಂತರರಾಷ್ಟ್ರೀಯ ಸೈಕ್ಲಿಂಗ್‌ನ ಪ್ರಮುಖ ಜಾಗತಿಕ ವೇದಿಕೆಗಳಲ್ಲಿ ಒಂದರ ಮೇಲೆ ತರುವ ಅವಕಾಶವಾಗಿದೆ. ಇಲ್ಲಿ ಉನ್ನತ ಮಟ್ಟದ ಕ್ರೀಡೆ, ಜನರ ಭಾಗವಹಿಸುವಿಕೆ, ಜಾಗತಿಕ ಪ್ರಸಾರ, ಪ್ರವಾಸೋದ್ಯಮ, ಆರ್ಥಿಕ ಪರಿಣಾಮ ಮತ್ತು ತಾಣದ ಬ್ರ್ಯಾಂಡಿಂಗ್ ಒಂದಾಗಲಿದೆ. ಮುಖ್ಯವಾಗಿ, ಪುಣೆಯ ಜಾಗತಿಕ ನಗರದ ಸ್ಥಾನಮಾನವನ್ನು ಮತ್ತಷ್ಟು ಬಲಪಡಿಸಲು ಹಾಗೂ ಭಾರತದಲ್ಲಿ ಸೈಕ್ಲಿಂಗ್ ಮತ್ತು ಕ್ರೀಡೆಗೆ ಶಾಶ್ವತ ಪರಂಪರೆಯನ್ನು ನಿರ್ಮಿಸಲು ಇದು ಅವಕಾಶ ನೀಡಲಿದೆ,” ಎಂದು ಹೇಳಿದರು.

ಉಬರ್ ಚಾಲಕರಾಗಿದ್ದ ಸಲ್ಮಾನ್ ಖಾನ್ ಇಂದು ದೇಶಕ್ಕಾಗಿ ಕಂಚು ಗೆದ್ದ ಸಾಧಕ

ಸೈಕ್ಲಿಂಗ್ ಫೆಡರೇಶನ್ ಆಫ್ ಇಂಡಿಯಾದ ಪ್ರಧಾನ ಕಾರ್ಯದರ್ಶಿ ಮನೀಂದರ್ ಪಾಲ್ ಸಿಂಗ್ ಮಾತನಾಡಿ, “ಭಾರತೀಯ ಸೈಕ್ಲಿಂಗ್‌ಗೆ ಇದು ಭಾಗವಹಿಸುವಿಕೆಯಿಂದ ಸಾಧನೆಯತ್ತ ಮತ್ತು ಅಂತರರಾಷ್ಟ್ರೀಯ ರೇಸ್‌ಗಳನ್ನು ಆಯೋಜಿಸುವುದರಿಂದ ಜಾಗತಿಕ ಸೈಕ್ಲಿಂಗ್ ಸಂವಾದದ ಭಾಗವಾಗುವತ್ತ ಸಾಗಲು ದೊರೆತಿರುವ ಮಹತ್ವದ ಅವಕಾಶವಾಗಿದೆ. 2032ರವರೆಗೆ ಇರುವ ವರ್ಷಗಳಲ್ಲಿ ನಮ್ಮ ಕ್ರೀಡಾಪಟುಗಳು, ಕೋಚ್‌ಗಳು ಮತ್ತು ತಾಂತ್ರಿಕ ಅಧಿಕಾರಿಗಳಿಗೆ ಬಲವಾದ ಅಭಿವೃದ್ಧಿ ಮಾರ್ಗಗಳನ್ನು ನಿರ್ಮಿಸುವುದು, ಅಂತರರಾಷ್ಟ್ರೀಯ ಪರಿಣತಿಯನ್ನು ಭಾರತಕ್ಕೆ ತರುವುದು ಮತ್ತು ನಮ್ಮ ಸವಾರರಿಗೆ ಕ್ರೀಡೆಯ ಅತ್ಯುನ್ನತ ಮಾನದಂಡಗಳ ಅನುಭವವನ್ನು ನೀಡುವುದರ ಮೇಲೆ ಗಮನ ಹರಿಸಲಾಗುವುದು. ವಿಶ್ವದ ಅತ್ಯುತ್ತಮ ಸವಾರರೊಂದಿಗೆ ಸ್ಪರ್ಧಿಸಬಲ್ಲ ಬಲಿಷ್ಠ ಪರಿಸರ ವ್ಯವಸ್ಥೆಯನ್ನು ನಿರ್ಮಿಸಲು ಈ ಅವಕಾಶವನ್ನು ಬಳಸಿಕೊಳ್ಳಲು ಸೈಕ್ಲಿಂಗ್ ಫೆಡರೇಶನ್ ಆಫ್ ಇಂಡಿಯಾ ಬದ್ಧವಾಗಿದೆ,” ಎಂದು ಹೇಳಿದರು.