ಏಷ್ಯನ್ ಗೇಮ್ಸ್ ಕ್ರಿಕೆಟ್: ಸೆಮಿಫೈನಲ್‌ನಲ್ಲಿ ಭಾರತಕ್ಕೆ ಶ್ರೀಲಂಕಾ ಎದುರಾಳಿ
Asian Games cricket: ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಮುಖಾಮುಖಿಯಾಗಲಿವೆ. ಗುರುವಾರ ಎರಡೂ ಸೆಮಿಫೈನಲ್ ಪಂದ್ಯಗಳು ನಡೆಯಲಿವೆ. ಐಸಿಸಿ ಟಿ20ಐ (T20I) ತಂಡದ ಶ್ರೇಯಾಂಕದ ಆಧಾರದ ಮೇಲೆ ಭಾರತವು ಉತ್ತಮ ಶ್ರೇಯಾಂಕವನ್ನು ಹೊಂದಿದ್ದರಿಂದ, ಅಫ್ಘಾನಿಸ್ತಾನದ ಬದಲಿಗೆ ಭಾರತವು ಮುಂದಿನ ಹಂತಕ್ಕೇರಿತು.
Team india -
ನಗೋಯಾ, ಸೆ.29: ಮಂಗಳವಾರ ನಡೆಯಬೇಕಿದ್ದ ಶ್ರೀಲಂಕಾ ಮತ್ತು ನೇಪಾಳ ನಡುವಿನ ಕ್ವಾರ್ಟರ್‌ಫೈನಲ್ ಪಂದ್ಯವು ನಿರಂತರ ಮಳೆಯಿಂದಾಗಿ ರದ್ದಾದ ಹಿನ್ನೆಲೆಯಲ್ಲಿ ಶ್ರೀಲಂಕಾ ತಂಡ ಸೆಮಿಫೈನಲ್‌ಗೆ ಅರ್ಹತೆ ಪಡೆಯಿತು. ಸೆಮಿ ಪಂದ್ಯದಲ್ಲಿ ಲಂಕಾ ತಂಡ ಭಾರತದ ಸವಾಲು ಎದುರಿಸಲಿದೆ.
ನಗೋಯಾದ, ಕೊರೋಗಿ ಸ್ಪೋರ್ಟ್ಸ್ ಪಾರ್ಕ್‌ನಲ್ಲಿ ನಡೆಯಬೇಕಿದ್ದ ಈ ಪಂದ್ಯವನ್ನು ಟಾಸ್ ಕೂಡ ನಡೆಸದೆ ರದ್ದುಗೊಳಿಸಲಾಯಿತು. ಐಸಿಸಿ ಟಿ20ಐ ಶ್ರೇಯಾಂಕದಲ್ಲಿ ಶ್ರೀಲಂಕಾ (ಒಂಬತ್ತನೇ ಸ್ಥಾನ) ನೇಪಾಳಕ್ಕಿಂತ (14ನೇ ಸ್ಥಾನ) ಮುಂದಿರುವುದರಿಂದ, ಆ ತಂಡವು ಸೆಮಿ-ಫೈನಲ್‌ಗೆ (ಅಂತಿಮ ನಾಲ್ಕರ ಹಂತಕ್ಕೆ) ಪ್ರವೇಶ ಪಡೆಯಿತು.
ಕಳೆದ ಕೆಲವು ದಿನಗಳಿಂದ ನಗೋಯಾದಲ್ಲಿ ಸುರಿಯುತ್ತಿರುವ ನಿರಂತರ ಮಳೆಯು ಪಂದ್ಯಾವಳಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದ್ದು, ಭಾರತದ ಪಂದ್ಯವನ್ನೂ ಒಳಗೊಂಡಂತೆ ಮೂರೂ ಕ್ವಾರ್ಟರ್-ಫೈನಲ್ ಪಂದ್ಯಗಳು ರದ್ದಾಗಿವೆ.
ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಮುಖಾಮುಖಿಯಾಗಲಿವೆ. ಗುರುವಾರ ಎರಡೂ ಸೆಮಿಫೈನಲ್ ಪಂದ್ಯಗಳು ನಡೆಯಲಿವೆ. ಐಸಿಸಿ ಟಿ20ಐ (T20I) ತಂಡದ ಶ್ರೇಯಾಂಕದ ಆಧಾರದ ಮೇಲೆ ಭಾರತವು ಉತ್ತಮ ಶ್ರೇಯಾಂಕವನ್ನು ಹೊಂದಿದ್ದರಿಂದ, ಅಫ್ಘಾನಿಸ್ತಾನದ ಬದಲಿಗೆ ಭಾರತವು ಮುಂದಿನ ಹಂತಕ್ಕೇರಿತು.
ಸತತ ಎರಡನೇ ಬಾರಿಗೆ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ವಿರುದ್ಧದ ಪಂದ್ಯ ಮಳೆಯಿಂದಾಗಿ ರದ್ದಾದ ಪರಿಣಾಮ, ಅಫ್ಘಾನಿಸ್ತಾನದ ಪುರುಷರ ತಂಡದ ಅಭಿಯಾನ ಅಂತ್ಯಗೊಂಡಿದೆ. 2023ರ ಹ್ಯಾಂಗ್‌ಝೌ ಕ್ರೀಡಾಕೂಟದಲ್ಲಿ, ಪ್ರಬಲ ತಂಡವೆನಿಸಿದ ಭಾರತದ ವಿರುದ್ಧದ ಫೈನಲ್ ಪಂದ್ಯವು ಮೊದಲ ಇನ್ನಿಂಗ್ಸ್‌ನ 18.2 ಓವರ್‌ಗಳ ಆಟದ ನಂತರ ಮಳೆಯಿಂದಾಗಿ ರದ್ದಾದಾಗ, ಅಫ್ಘಾನಿಸ್ತಾನವು ಬೆಳ್ಳಿ ಪದಕವನ್ನು ಗೆದ್ದುಕೊಂಡಿತ್ತು.
Asian Games 2026: ಯಶ್ವೀರ್ ಸಿಂಗ್, ಮುರಳಿ ಶೀಶಂಕರ್‌ಗೆ ಬೆಳ್ಳಿ, ರೋಹಿತ್ ಯಾದವ್‌ಗೆ ಕಂಚು!
ಏತನ್ಮಧ್ಯೆ, ಜ್ವರ ಮತ್ತು ಸೋಂಕಿನ ಕಾರಣದಿಂದಾಗಿ ಬಾಂಗ್ಲಾದೇಶದ ಬ್ಯಾಟರ್ ನಜ್ಮುಲ್ ಹೊಸೈನ್ ಶಾಂತೋ ಅವರು ಏಷ್ಯನ್ ಕ್ರೀಡಾಕೂಟದಿಂದ ಹೊರಗುಳಿದಿದ್ದಾರೆ. ಪುರುಷರ ಕ್ರಿಕೆಟ್ ಸ್ಪರ್ಧೆಗಾಗಿ ನಗೋಯಾಗೆ ಆಗಮಿಸಿದಾಗಿನಿಂದಲೂ ಶಾಂತೋ ಜ್ವರದಿಂದ ಬಳಲುತ್ತಿದ್ದಾರೆ ಎಂದು ತಂಡದ ಫಿಸಿಯೋ ಬಯೇದುಲ್ ಇಸ್ಲಾಂ ಖಾನ್ ತಿಳಿಸಿದ್ದಾರೆ.
ಸೆಮಿಫೈನಲ್ ಪಂದ್ಯಕ್ಕೆ ಮಳೆ ಬಂದು ಪಂದ್ಯ ರದ್ದಾರೆ ಆಗ ಕೂಡ ಶ್ರೇಯಾಂಕದ ಆಧಾರದಲ್ಲಿ ತಂಡವನ್ನು ಮುಂದಿನ ಹಂತಕ್ಕೆ ತೇರ್ಗಡೆ ಮಾಡಲಾಗುತ್ತದೆ. ಶ್ರೀಲಂಕಾದಿಂದ ಮೇಲಿರುವ ಭಾರತ ತಂಡ ನೇರ ಫೈನಲ್ ಅರ್ಹತೆ ಪಡೆಯಲಿದೆ. ಫೈನಲ್‌ಗೂ ಇದೇ ನಿಯಮ ಅನ್ವಯವಾಲಿದೆ.