ಕೊಹ್ಲಿ, ಧೋನಿ ಜತೆ ಎಲೈಟ್ ಪಟ್ಟಿ ಸೇರಲು ಸೂರ್ಯಕುಮಾರ್‌ಗೆ ಬೇಕು 73 ರನ್
ಟಿ20ಐಗಳಲ್ಲಿ ಭಾರತದ ಪರ ನಾಯಕನಾಗಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ರೋಹಿತ್ ಶರ್ಮಾ ಹೆಸರಿನಲ್ಲಿದೆ. ರೋಹಿತ್ 62 ಟಿ20ಐ ಪಂದ್ಯಗಳಲ್ಲಿ ಭಾರತವನ್ನು ಮುನ್ನಡೆಸಿದರು ಮತ್ತು 1905 ರನ್ ಗಳಿಸಿದರು. ಅವರ ನಂತರ ಕೊಹ್ಲಿ 50 ಟಿ20ಐ ಪಂದ್ಯಗಳಲ್ಲಿ ಒಟ್ಟು 1570 ರನ್ ಗಳಿಸಿದ್ದಾರೆ. ಧೋನಿ 72 ಟಿ20ಐಗಳಲ್ಲಿ 1112 ರನ್ ಗಳಿಸಿದ್ದಾರೆ.
Suryakumar Yadav -
ತಿರುವನಂತಪುರಂ, ಜ.31: ಶನಿವಾರ (ಜನವರಿ 31) ನ್ಯೂಜಿಲೆಂಡ್(India vs New Zealand) ವಿರುದ್ಧ ನಡೆಯುವ ಐದನೇ ಮತ್ತು ಅಂತಿಮ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್(Suryakumar Yadav) ಮಹತ್ವದ ದಾಖಲೆ ಬರೆಯುವ ಸನಿಹದಲ್ಲಿದ್ದಾರೆ. ತಿರುವನಂತಪುರದ ಗ್ರೀನ್‌ಫೀಲ್ಡ್ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ, ಸೂರ್ಯ ಅವರ ಎಂಎಸ್ ಧೋನಿ, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರೊಂದಿಗೆ ಗಣ್ಯರ ಪಟ್ಟಿಯಲ್ಲಿ ಸೇರುವ ಅವಕಾಶವನ್ನು ಹೊಂದಿದ್ದಾರೆ. ಕನಿಷ್ಠ 73 ರನ್ ಗಳಿಸುವಲ್ಲಿ ಯಶಸ್ವಿಯಾದರೆ, ನಾಯಕನಾಗಿ ಟಿ20ಗಳಲ್ಲಿ 1000 ರನ್ ಗಳಿಸಿದ ನಾಲ್ಕನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗುತ್ತಾರೆ.
ಇಲ್ಲಿಯವರೆಗೆ, ಸೂರ್ಯ ನಾಯಕನಾಗಿ ಆಡಿರುವ 42 ಟಿ20ಐ ಪಂದ್ಯಗಳಲ್ಲಿ 39 ಇನ್ನಿಂಗ್ಸ್‌ಗಳಲ್ಲಿ 927 ರನ್ ಗಳಿಸಿದ್ದಾರೆ. ಆ 42 ಪಂದ್ಯಗಳಲ್ಲಿ, ಅವರು ಭಾರತೀಯ ತಂಡಕ್ಕಾಗಿ 1 ಶತಕ ಮತ್ತು ಆರು ಅರ್ಧಶತಕಗಳನ್ನು ಗಳಿಸಿದ್ದಾರೆ.
ಟಿ20ಐಗಳಲ್ಲಿ ಭಾರತದ ಪರ ನಾಯಕನಾಗಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ರೋಹಿತ್ ಶರ್ಮಾ ಹೆಸರಿನಲ್ಲಿದೆ. ರೋಹಿತ್ 62 ಟಿ20ಐ ಪಂದ್ಯಗಳಲ್ಲಿ ಭಾರತವನ್ನು ಮುನ್ನಡೆಸಿದರು ಮತ್ತು 1905 ರನ್ ಗಳಿಸಿದರು. ಅವರ ನಂತರ ಕೊಹ್ಲಿ 50 ಟಿ20ಐ ಪಂದ್ಯಗಳಲ್ಲಿ ಒಟ್ಟು 1570 ರನ್ ಗಳಿಸಿದ್ದಾರೆ. ಧೋನಿ 72 ಟಿ20ಐಗಳಲ್ಲಿ 1112 ರನ್ ಗಳಿಸಿದ್ದಾರೆ.
T20 World Cup 2026: ಟಿ20 ವಿಶ್ವಕಪ್ ಟೂರ್ನಿಗೆ ಅಂಪೈರ್‌ಗಳನ್ನು ಪ್ರಕಟಿಸಿದ ಐಸಿಸಿ!
ಭಾರತ ತಂಡದ ನಾಯಕನಾಗಿ ಟಿ20ಐಗಳಲ್ಲಿ 1000 ರನ್ ಪೂರೈಸುವುದರ ಜೊತೆಗೆ, ಸೂರ್ಯ ಟಿ20ಐಗಳಲ್ಲಿ 3000 ರನ್ ಗಳಿಸಿದ ಕ್ಲಬ್‌ಗೆ ಸೇರುವ ಅವಕಾಶವನ್ನೂ ಹೊಂದಿರುತ್ತಾರೆ. ಪ್ರಸ್ತುತ, ಅವರು 103 ಟಿ20ಐ ಪಂದ್ಯಗಳ 97 ಇನ್ನಿಂಗ್ಸ್‌ಗಳಲ್ಲಿ 2967 ರನ್ ಗಳಿಸಿದ್ದಾರೆ. ರೋಹಿತ್ ಶರ್ಮಾ (4231) ಮತ್ತು ವಿರಾಟ್ ಕೊಹ್ಲಿ (4188) ನಂತರ ಕಡಿಮೆ ಮಾದರಿಯ ಪಂದ್ಯದಲ್ಲಿ 3000 ಕ್ಕೂ ಹೆಚ್ಚು ರನ್ ಗಳಿಸಿದ ಮೂರನೇ ಭಾರತೀಯ ಕ್ರಿಕೆಟಿಗನಾಗಲು ಅವರು ಇನ್ನೂ 33 ರನ್ ಗಳಿಸಬೇಕಾಗಿದೆ.
ವಿಶ್ವ ದಾಖಲೆ ಪಾಕ್ ಆಟಗಾರ ಹೆಸರಿನಲ್ಲಿದೆ
ನಾಯಕನಾಗಿ ಟಿ20ಐಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ವಿಶ್ವ ದಾಖಲೆ ಪಾಕಿಸ್ತಾನದ ಬಾಬರ್ ಅಜಮ್ ಹೆಸರಿನಲ್ಲಿದೆ. ಪಾಕಿಸ್ತಾನ ಪುರುಷರ ಕ್ರಿಕೆಟ್ ತಂಡದ ನಾಯಕನಾಗಿ 85 ಟಿ20ಐ ಪಂದ್ಯಗಳಲ್ಲಿ ಬಾಬರ್ 2642 ರನ್ ಗಳಿಸಿದ್ದಾರೆ. ಅವರ ನಂತರ ಆಸ್ಟ್ರೇಲಿಯಾದ ಆರನ್ ಫಿಂಚ್ ಇದ್ದಾರೆ. 2021 ರಲ್ಲಿ ಆಸ್ಟ್ರೇಲಿಯಾವನ್ನು ಟಿ20 ವಿಶ್ವಕಪ್ ಪ್ರಶಸ್ತಿ ಗೆಲುವಿನತ್ತ ಮುನ್ನಡೆಸಿದ ಫಿಂಚ್, 76 ಟಿ20ಐಗಳಲ್ಲಿ 2236 ರನ್ ಗಳಿಸಿದ್ದಾರೆ. ಉಳಿದಂತೆ ಯುಎಇಯ ಮುಹಮ್ಮದ್ ವಸೀಮ್ ಮತ್ತು ನ್ಯೂಜಿಲೆಂಡ್‌ನ ಕೇನ್ ವಿಲಿಯಮ್ಸನ್ ಕೂಡ ನಾಯಕರಾಗಿ ಟಿ20ಐಗಳಲ್ಲಿ 2000 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ.