ಕರ್ನಾಟಕ ಬಜೆಟ್​ ವಿದೇಶ ಮಹಿಳಾ ದಿನಾಚರಣೆ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL 2025: ಡೆಲ್ಲಿ ಕ್ಯಾಪಿಟಲ್ಸ್​​ ನಾಯಕತ್ವ ರೇಸ್‌ನಲ್ಲಿ ಅಕ್ಷರ್​ ಪಟೇಲ್​-ಕೆಎಲ್​ ರಾಹುಲ್

ರಾಹುಲ್‌ ಒತ್ತಡ ರಹಿತವಾಗಿ ಆಡುವ ನಿಟ್ಟಿನಲ್ಲಿ ನಾಯಕತ್ವ ಬೇಡ ಎಂದಿದ್ದಾರೆ ಎನ್ನಲಾಗಿದೆ. ಆದರೆ ಫ್ರಾಂಚೈಸಿ ಅವರ ಮನವೊಲಿಸುವ ಪ್ರಯತ್ನ ಮಾಡುತ್ತಿದೆ ಎಂದು ಕೂಡ ಹೇಳಲಾಗಿದೆ. ಚಾಂಪಿಯನ್ಸ್‌ ಟ್ರೋಫಿಯಲ್ಲಿ ರಾಹುಲ್‌ ಆಡಿದ ಎಲ್ಲ ಪಂದ್ಯಗಳಲ್ಲಿಯೂ ಉತ್ತಮ ಬ್ಯಾಟಿಂಗ್‌ ಪ್ರದರ್ಶನ ತೋರಿದ್ದರು.

ಐಪಿಎಲ್‌ ಕೆಲ ಪಂದ್ಯಗಳಿಗೆ ಕೆಎಲ್​ ರಾಹುಲ್ ಗೈರು ಸಾಧ್ಯತೆ!

Profile Abhilash BC Mar 11, 2025 9:06 AM

ನವದೆಹಲಿ: ಬಹುನಿರೀಕ್ಷಿತ ಐಪಿಎಲ್‌(IPL 2025) ಟೂರ್ನಿ ಆರಂಭಕ್ಕೆ ಇನ್ನು 10 ದಿನಗಳು ಮಾತ್ರ ಬಾಕಿ ಉಳಿದಿವೆ. ಮಾಚ್‌ 22 ರಿಂದ ಪಂದ್ಯಾವಳಿ ಆರಂಭಗೊಳ್ಳಲಿದೆ. ಟೂರ್ನಿಯಲ್ಲಿ ಪಾಲ್ಗೊಳ್ಳುವ 10 ತಂಡಗಳ ಪೈಕಿ 9 ತಂಡಗಳು ಈಗಾಗಲೇ ತಂಡದ ನಾಯಕನ್ನು ನೇಮಕ ಮಾಡಿದೆ. ಆದರೆ ಡೆಲ್ಲಿ ಕ್ಯಾಪಿಟಲ್ಸ್‌(Delhi Capitals) ಮಾತ್ರ ಇದುವರೆಹೂ ನಾಯಕ ಹೆಸರು ಘೋಷಣೆ ಮಾಡಿಲ್ಲ. ಮೂಲಗಳ ಪ್ರಕಾರ ಡೆಲ್ಲಿ ಕ್ಯಾಪಿಟಲ್ಸ್​ ತಂಡವನ್ನು ಮುನ್ನಡೆಸಲು ಆಲ್ರೌಂಡರ್​ ಅಕ್ಷರ್​ ಪಟೇಲ್(Axar Patel)​ ಮತ್ತು ವಿಕೆಟ್​ ಕೀಪರ್​-ಬ್ಯಾಟರ್, ಕನ್ನಡಿಗ​ ಕೆಎಲ್​ ರಾಹುಲ್​(KL Rahul) ನಡುವೆ ಪೈಪೋಟಿ ಏರ್ಪಟ್ಟಿದೆ ಎನ್ನಲಾಗಿದೆ.

ಫ್ರಾಂಚೈಸಿ ಮೂಲಗಳ ಪ್ರಕಾರ ಅಕ್ಷರ್ ಪಟೇಲ್‌​ ನಾಯಕನಾಗುವುದು ಬಹುತೇಕ ಖಚಿತ ಎನ್ನಲಾಗಿದೆ. ಅವರನ್ನು ಕಳೆದ ಮೆಗಾ ಹರಾಜಿಗೆ ಮುನ್ನ 16.50 ಕೋಟಿ ರೂ.ಗೆ ಡೆಲ್ಲಿ ತಂಡದಲ್ಲಿ ರಿಟೇನ್​ ಮಾಡಿತ್ತು. ರಾಹುಲ್​ ಹರಾಜಿನಲ್ಲಿ 14 ಕೋಟಿ ರೂ.ಗೆ ಡೆಲ್ಲಿ ತಂಡಕ್ಕೆ ಸೇರ್ಪಡೆಯಾಗಿದ್ದರು.

ರಾಹುಲ್‌ ಒತ್ತಡ ರಹಿತವಾಗಿ ಆಡುವ ನಿಟ್ಟಿನಲ್ಲಿ ನಾಯಕತ್ವ ಬೇಡ ಎಂದಿದ್ದಾರೆ ಎನ್ನಲಾಗಿದೆ. ಆದರೆ ಫ್ರಾಂಚೈಸಿ ಅವರ ಮನವೊಲಿಸುವ ಪ್ರಯತ್ನ ಮಾಡುತ್ತಿದೆ ಎಂದು ಕೂಡ ಹೇಳಲಾಗಿದೆ. ಚಾಂಪಿಯನ್ಸ್‌ ಟ್ರೋಫಿಯಲ್ಲಿ ರಾಹುಲ್‌ ಆಡಿದ ಎಲ್ಲ ಪಂದ್ಯಗಳಲ್ಲಿಯೂ ಉತ್ತಮ ಬ್ಯಾಟಿಂಗ್‌ ಪ್ರದರ್ಶನ ತೋರಿದ್ದರು. ಇನ್ನೊಂದೆಡೆ ಪತ್ನಿ ಆಥಿಯಾ ಶೆಟ್ಟಿ ಎಪ್ರಿಲ್‌ ಮೊದಲ ವಾರದಲ್ಲಿ ಮೊದಲ ಮಗುವಿಗೆ ಜನ್ಮ ನೀಡುವ ನಿರೀಕ್ಷೆ ಇದೆ. ಹೀಗಾಗಿ ರಾಹುಲ್​ ಐಪಿಎಲ್​ ಟೂರ್ನಿಯ 1 ಅಥವಾ 2 ಪಂದ್ಯಗಳಿಗೆ ಗೈರಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಒಂದೊಮ್ಮೆ ರಾಹುಲ್​ ನಾಯಕರಾಗಿ ನೇಮಕಗೊಂಡರೂ, ಅವರು ಗೈರಾದ ಪಂದ್ಯಗಳಲ್ಲಿ ಅಕ್ಷರ್​ ಪಟೇಲ್​ ಅವರೇ ಡೆಲ್ಲಿ ತಂಡವನ್ನು ಮುನ್ನಡೆಸಬೇಕಾಗುತ್ತದೆ. ಒಟ್ಟಾರೆ ನಾಯಕ ಯಾರೆಂಬುದು ಈ ವಾರದ ಅಂತ್ಯದಲ್ಲಿ ಅಧಿಕೃತವಾಗಿ ತಿಳಿಯಲಿದೆ. ಡೆಲ್ಲಿ ತಂಡ ತನ್ನ ಮೊದಲ ಪಂದ್ಯವನ್ನು ಮಾರ್ಚ್‌ 24 ರಂದು ಲಕ್ನೋ ಸೂಪರ್‌ಜೈಂಟ್ಸ್‌ ವಿರುದ್ಧ ಆಡಲಿದೆ.

ಇದನ್ನೂ ಓದಿ IPL 2025: ಐಪಿಎಲ್ ವೇಳೆ ತಂಬಾಕು, ಮದ್ಯದ ಜಾಹೀರಾತಿಗೆ ನಿರ್ಬಂಧ!

ಡೆಲ್ಲಿ ಕ್ಯಾಪಿಟಲ್ಸ್‌ ತಂಡ

ಕೆಎಲ್​ ರಾಹುಲ್,​ ಮಿಚೆಲ್​ ಸ್ಟಾರ್ಕ್​, ಟಿ. ನಟರಾಜನ್, ಜೇಕ್​ ಫ್ರೇಸರ್​ ಮೆಕ್​ಗುರ್ಕ್​, ಹ್ಯಾರಿ ಬ್ರೂಕ್​ ,ಕರುಣ್​ ನಾಯರ್, ಸಮೀರ್​ ರಿಜ್ವಿ, ಆಶುತೋಷ್​ ಶರ್ಮ, ಮೋಹಿತ್​ ಶರ್ಮ, ಮುಕೇಶ್​ ಕುಮಾರ್​, ಫಾಫ್ ಡು ಪ್ಲೆಸಿಸ್, ದರ್ಶನ್​ ನಲ್ಕಂಡೆ, ವಿಪ್ರಜ್​ ನಿಗಮ್, ದುಶ್ಮಂತ ಚಮೀರ, ಡೊನೊವನ್​ ಫೆರೀರ , ಅಜಯ್​ ಮಂಡಲ್​, ಮನ್ವಂತ್​ ಕುಮಾರ್, ತ್ರಿಪುರಣ ವಿಜಯ್​, ಮಾಧವ್​ ತಿವಾರಿ.