ಟಿ20 ವಿಶ್ವಕಪ್‌ಗೆ ಬಾಂಗ್ಲಾ ತಂಡ ಪ್ರಕಟ; ಹಿಂದೂ ವ್ಯಕ್ತಿ ನಾಯಕ
Bangladesh T20 World Cup squad: ಬಾಂಗ್ಲಾದೇಶ ತಂಡವು ಟಿ20 ವಿಶ್ವಕಪ್‌ನಲ್ಲಿ ತಮ್ಮ ಅಭಿಯಾನವನ್ನು ಟೂರ್ನಿಯ ಆರಂಭಿಕ ದಿನದಂದು ಆರಂಭಿಸಲಿದೆ. ವೆಸ್ಟ್ ಇಂಡೀಸ್, ಇಂಗ್ಲೆಂಡ್, ನೇಪಾಳ ಮತ್ತು ಇಟಲಿಯೊಂದಿಗೆ 'ಸಿ' ಗುಂಪಿನಲ್ಲಿ ಸ್ಥಾನ ಪಡೆದಿದೆ.
Litton Das -
ಢಾಕಾ, ಜ.4: ಫೆಬ್ರವರಿ 7 ರಿಂದ ಮಾರ್ಚ್ 8 ರವರೆಗೆ ಭಾರತ ಮತ್ತು ಶ್ರೀಲಂಕಾದಲ್ಲಿ ನಡೆಯಲಿರುವ ಮುಂಬರುವ ಐಸಿಸಿ ಟಿ20 ವಿಶ್ವಕಪ್(T20 World Cup 2026)ಗಾಗಿ ಬಾಂಗ್ಲಾದೇಶ(Bangladesh T20 World Cup squad) ತನ್ನ 15 ಸದಸ್ಯರ ತಂಡವನ್ನು ಭಾನುವಾರ ಪ್ರಕಟಿಸಿದೆ. ಐರ್ಲೆಂಡ್ ವಿರುದ್ಧದ ತವರು ಸರಣಿಯನ್ನು ತಪ್ಪಿಸಿಕೊಂಡಿದ್ದ ಅನುಭವಿ ವೇಗಿ ತಸ್ಕಿನ್ ಅಹ್ಮದ್ ಮತ್ತೆ ಟಿ20 ತಂಡಕ್ಕೆ ಮರಳಿದ್ದಾರೆ.
ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ಆಗುತ್ತಿರುವ ದೌರ್ಜನ್ಯದ ಹೊರತಾಗಿಯೂ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್ ಲಿಟ್ಟನ್ ಕುಮಾರ್ ದಾಸ್ ತಂಡವನ್ನು ಮುನ್ನಡೆಸಲಿದ್ದು, ಸೈಫ್ ಹಸನ್ ಉಪನಾಯಕನಾಗಿ ಆಯ್ಕೆಯಾಗಿದ್ದಾರೆ. ಏತನ್ಮಧ್ಯೆ, ವಿಕೆಟ್ ಕೀಪರ್ ಜಾಕರ್ ಅಲಿ ಮತ್ತು ಮಹಿದುಲ್ ಇಸ್ಲಾಂ ಅಂಕಾನ್ ತಮ್ಮ ಸ್ಥಾನಗಳನ್ನು ಉಳಿಸಿಕೊಳ್ಳಲು ವಿಫಲರಾಗಿದ್ದಾರೆ. ನಜ್ಮುಲ್ ಹೊಸೈನ್ ಶಾಂಟೊ ಕೂಡ ತಂಡದಿಂದ ಹೊರಗುಳಿದಿದ್ದಾರೆ.
ಬಾಂಗ್ಲಾದೇಶ ತಂಡವು ಟಿ20 ವಿಶ್ವಕಪ್‌ನಲ್ಲಿ ತಮ್ಮ ಅಭಿಯಾನವನ್ನು ಟೂರ್ನಿಯ ಆರಂಭಿಕ ದಿನದಂದು ಆರಂಭಿಸಲಿದೆ. ವೆಸ್ಟ್ ಇಂಡೀಸ್, ಇಂಗ್ಲೆಂಡ್, ನೇಪಾಳ ಮತ್ತು ಇಟಲಿಯೊಂದಿಗೆ 'ಸಿ' ಗುಂಪಿನಲ್ಲಿ ಸ್ಥಾನ ಪಡೆದಿದೆ.
ಭಾರತದಲ್ಲಿ ಪಂದ್ಯ ಆಡುವುದು ಅನುಮಾನ
ಮೊದಲ ಪಂದ್ಯ ಫೆಬ್ರವರಿ 7 ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಎರಡು ಬಾರಿಯ ಚಾಂಪಿಯನ್ ವೆಸ್ಟ್ ಇಂಡೀಸ್ ವಿರುದ್ಧ ನಿಗದಿಯಾಗಿದೆ. ಆದರೆ ಮುಸ್ತಾಫಿಜುರ್‌ರನ್ನು ಐಪಿಎಲ್‌ನಿಂದ ಹೊರಹಾಕಿ, ತನ್ನೊಂದಿಗೆ ದ್ವಿಪಕ್ಷೀಯ ಸರಣಿ ಆಡದಿರಲು ಬಿಸಿಸಿಐ ಚಿಂತನೆ ನಡೆಸುತ್ತಿದೆ ಎನ್ನುವ ಸುದ್ದಿ ಹೊರಬೀಳುತ್ತಿದ್ದಂತೆ ವಿಚಲಿತಗೊಂಡಿರುವ ಬಾಂಗ್ಲಾ ಕ್ರಿಕೆಟ್ ಮಂಡಳಿ ಟಿ20 ವಿಶ್ವಕಪ್‌ನಲ್ಲಿ ತನ್ನ ಪಂದ್ಯಗಳನ್ನು ಭಾರತದಿಂದ ಸ್ಥಳಾಂತರಿಸುವಂತೆ ಐಸಿಸಿಗೆ ಒತ್ತಾಯಿಸಿದೆ.
ಭಾರತದಲ್ಲಿ ಟಿ20 ವಿಶ್ವಕಪ್ ಪಂದ್ಯ ಆಡದಿರಲು ನಿರ್ಧರಿಸಿದ ಬಾಂಗ್ಲಾದೇಶ
ವಿಶ್ವಕಪ್ ಸಮಯದಲ್ಲಿ ಆಟಗಾರರು, ಅಭಿಮಾನಿಗಳು, ಮಾಧ್ಯಮಗಳು ಮತ್ತು ಪ್ರಾಯೋಜಕರಿಗೆ ಭದ್ರತಾ ವ್ಯವಸ್ಥೆಗಳ ಬಗ್ಗೆ ಭರವಸೆ ನೀಡುವಂತೆ ಕೋರಿ ಬಿಸಿಬಿ ಐಸಿಸಿಗೆ ಪತ್ರ ಬರೆಯಲು ಸಜ್ಜಾಗಿದೆ ಮತ್ತು ಮುಸ್ತಾಫಿಜುರ್ ಅವರನ್ನು ಕೆಕೆಆರ್ ತಂಡದಿಂದ ತೆಗೆದುಹಾಕಿದ್ದಕ್ಕೆ ಬಿಸಿಸಿಐನಿಂದ ಔಪಚಾರಿಕ ವಿವರಣೆಯನ್ನು ಕೇಳಿದೆ. ಅಲ್ಲದೆ ಆಟಗಾರರ ಸುರಕ್ಷತೆಯ ಬಗ್ಗೆ ವ್ಯಾಪಕ ಕಳವಳಗಳನ್ನು ಉಲ್ಲೇಖಿಸಿ ಭಾರತದಲ್ಲಿ ತಮ್ಮ ಗುಂಪು ಪಂದ್ಯಗಳನ್ನು ಆಡುವುದನ್ನು ಮರುಪರಿಶೀಲಿಸುವಂತೆ ಮಂಡಳಿಯನ್ನು ಒತ್ತಾಯಿಸಿವೆ. ಹೀಗಾಗಿ ಬಾಂಗ್ಲಾ ತನ್ನ ಪಾಲಿನ ಪಂದ್ಯವನ್ನು ಶ್ರೀಲಂಕಾದಲ್ಲಿ ಆಡುವ ಸಾಧ್ಯತೆ ಇದೆ.
ಬಾಂಗ್ಲಾದೇಶ ಟಿ20 ವಿಶ್ವಕಪ್ ತಂಡ
ಲಿಟ್ಟನ್ ಕುಮಾರ್ ದಾಸ್ (ನಾಯಕ), ಮೊಹಮ್ಮದ್ ಸೈಫ್ ಹಸನ್ (ಉಪನಾಯಕ), ತಂಜಿದ್ ಹಸನ್, ಮೊಹಮ್ಮದ್ ಪರ್ವೇಜ್ ಹೊಸೈನ್ ಎಮನ್, ತೌಹಿದ್ ಹೃದಯೋಯ್, ಶಮೀಮ್ ಹೊಸೈನ್, ಖಾಜಿ ನೂರುಲ್ ಹಸನ್ ಸೋಹನ್, ಮಹೇದಿ ಹಸನ್, ರಿಶಾದ್ ಹೊಸೈನ್, ನಸುಮ್ ಅಹ್ಮದ್, ಮುಸ್ತಾಫಿಜುರ್ ರೆಹಮಾನ್, ತಂಝಿಮ್ ಹಸನ್ ಸಾಕಿಬ್, ತಸ್ಕಿನ್ ಅಹ್ಮದ್, ಎಂಡಿ ಶೈಫುದ್ದೀನ್, ಶೋರಿಫುಲ್ ಇಸ್ಲಾಂ.