ಡಬ್ಲ್ಯುಟಿಸಿ ಫೈನಲ್: ಭಾರತಕ್ಕಿದೆಯೇ ಇನ್ನೂ ಅವಕಾಶ?
WTC final: ಕಳೆದ ಎರಡು WTC ಸೈಕಲ್‌ಗಳ ಸಂಖ್ಯೆಗಳ ಪ್ರಕಾರ, ತಂಡಗಳು ಕಟ್ ಮಾಡುವ ಅವಕಾಶವನ್ನು ಪಡೆಯಲು 60-65% ವ್ಯಾಪ್ತಿಯಲ್ಲಿರಬೇಕು. 2021-23 ಸೈಕಲ್‌ನಲ್ಲಿ, ಭಾರತವು 58.8 ಶೇಕಡಾವಾರು ಅಂಕಗಳೊಂದಿಗೆ ಫೈನಲ್‌ಗೆ ಎರಡನೇ ತಂಡವಾಗಿ ಅರ್ಹತೆ ಪಡೆದರೆ, ಆಸ್ಟ್ರೇಲಿಯಾದ 67.54% ಅಂಕಗಳು ಹಿಂದಿನ ಆವೃತ್ತಿಯಲ್ಲಿ ಎರಡನೇ ಸ್ಥಾನವನ್ನು ಗಳಿಸಿ ಫೈನಲ್ ತಲುಪಿತ್ತು.
ಭಾರತ ಟೆಸ್ಟ್ ತಂಡ -
ಮುಂಬಯಿ, ನ.27: ದಕ್ಷಿಣ ಆಫ್ರಿಕಾ(India vs South Africa) ವಿರುದ್ಧದ ತವರಿನ ಟೆಸ್ಟ್ ಸರಣಿಯಲ್ಲಿ 2-0 ಅಂತರದ ಸೋಲು ಕಂಡ ಭಾರತ ತಂಡ ನಾಲ್ಕನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ (WTC final) ಫೈನಲ್ ತಲುಪುವ ಸಾಧ್ಯತೆಗಳನ್ನು ಗಂಭೀರವಾಗಿ ಕುಂಠಿತಗೊಳಿಸಿದೆ. 2025-27ರ ಸರಣಿಯ ಅರ್ಧದಾರಿಯಲ್ಲೇ ಭಾರತ ತಂಡ 18 ಟೆಸ್ಟ್‌ಗಳಲ್ಲಿ ಒಂಬತ್ತು ಪಂದ್ಯಗಳನ್ನು ಆಡಿದ್ದು ಗೆಲುವಿನ ಶೇಕಡಾವಾಡು 48.15 ಅಂಕದೊಂದಿಗೆ ಐದನೇ ಸ್ಥಾನದಲ್ಲಿದೆ.
ನ್ಯೂಜಿಲೆಂಡ್ ಇನ್ನೂ ಒಂದೇ ಒಂದು ಸರಣಿಯನ್ನು ಆಡಿಲ್ಲ. ಶ್ರೀಲಂಕಾ ಮತ್ತು ಪಾಕಿಸ್ತಾನ ಒಂದು ಸರಣಿಯನ್ನು ಆಡಿವೆ ಮತ್ತು ಇಂಗ್ಲೆಂಡ್ ತಮ್ಮ ಎರಡನೇ ಸರಣಿಯನ್ನು ಪ್ರಾರಂಭಿಸಿದೆ. ಆಸ್ಟ್ರೇಲಿಯಾ (100%) ಮತ್ತು ದಕ್ಷಿಣ ಆಫ್ರಿಕಾ (75%) ಮೊದಲ ಎರಡು ಸ್ಥಾನಗಳಲ್ಲಿ ಕಾಣಿಸಿಕೊಂಡಿದೆ.
ಕಳೆದ ಎರಡು WTC ಸೈಕಲ್‌ಗಳ ಸಂಖ್ಯೆಗಳ ಪ್ರಕಾರ, ತಂಡಗಳು ಕಟ್ ಮಾಡುವ ಅವಕಾಶವನ್ನು ಪಡೆಯಲು 60-65% ವ್ಯಾಪ್ತಿಯಲ್ಲಿರಬೇಕು. 2021-23 ಸೈಕಲ್‌ನಲ್ಲಿ, ಭಾರತವು 58.8 ಶೇಕಡಾವಾರು ಅಂಕಗಳೊಂದಿಗೆ ಫೈನಲ್‌ಗೆ ಎರಡನೇ ತಂಡವಾಗಿ ಅರ್ಹತೆ ಪಡೆದರೆ, ಆಸ್ಟ್ರೇಲಿಯಾದ 67.54% ಅಂಕಗಳು ಹಿಂದಿನ ಆವೃತ್ತಿಯಲ್ಲಿ ಎರಡನೇ ಸ್ಥಾನವನ್ನು ಗಳಿಸಿ ಫೈನಲ್ ತಲುಪಿತ್ತು.
ಇದನ್ನೂ ಓದಿ IND vs SA: ಭಾರತದ ಬ್ಯಾಟ್ಸ್‌ಮನ್‌ಗಳ ಸ್ಪಿನ್ ವೈಫಲ್ಯಕ್ಕೆ ಕಾರಣ ತಿಳಿಸಿದ ಆರ್ ಅಶ್ವಿನ್!
9 ಪಂದ್ಯಗಳು ಬಾಕಿ
ಭಾರತ ಫೈನಲ್ ಪ್ರವೇಶಿಸಬೇಕಾದರೆ, ಗೆಲುವಿನ ಶೇಕಾಡಾವಾರು 60 ತಲುಪಲು, ಅವರು 130 ಅಂಕಗಳನ್ನು ಗಳಿಸಬೇಕು. ಏಕೆಂದರೆ ಅವರು ಈ ಚಕ್ರದಲ್ಲಿ 18 ಟೆಸ್ಟ್‌ಗಳನ್ನು ಆಡುತ್ತಿದ್ದಾರೆ (18 x 12 ಅಂಕಗಳು 216). ತಂಡಗಳ ಗೆಲುವಿಗೆ 12 ಅಂಕಗಳನ್ನು ಮತ್ತು ಡ್ರಾಗೆ ನಾಲ್ಕು ಅಂಕಗಳನ್ನು ಗಳಿಸುತ್ತವೆ. ಆದ್ದರಿಂದ ಭಾರತವು ತಮ್ಮ ಉಳಿದ ಒಂಬತ್ತು ಟೆಸ್ಟ್‌ಗಳಿಂದ ಇನ್ನೂ 78 ಅಂಕಗಳನ್ನು ಪಡೆಯಬೇಕು. ಶ್ರೀಲಂಕಾ ಮತ್ತು ನ್ಯೂಜಿಲೆಂಡ್‌ನಲ್ಲಿ ತಲಾ ಎರಡು ಮತ್ತು ಆಸ್ಟ್ರೇಲಿಯಾ ವಿರುದ್ಧದ ತವರಿನಲ್ಲಿ ಐದು ಪಂದ್ಯಗಳ ಸರಣಿಯನ್ನು ಭಾರತ ಆಡಲಿದೆ. ಎಲ್ಲ ಪಂದ್ಯಗಳನ್ನು ಗೆಲ್ಲುವ ಜತೆಗೆ ತನಗಿಂತ ಮೇಲಿರುವ ತಂಡಗಳ ಸೋಲನ್ನು ಕೂಡ ಭಾರತದ ಬಯಸಬೇಕಿದೆ. ಹೀಗಾದರೆ ಭಾರತಕ್ಕೆ ಕನಿಷ್ಠ 2ನೇ ಸ್ಥಾನಿಯಾಗಿ ಫೈನಲ್ ಪ್ರವೇಶಿಸುವ ಅವಕಾಶವೊಂದು ಲಭಿಸಬಹುದು.
ಬಲವಾಗಿ ಮೇಲೇರುತ್ತೇವೆ; ಗಿಲ್
ದ.ಆಫ್ರಿಕಾ ವಿರುದ್ಧ ಸರಣಿ ಸೋತ ಬೆನ್ನಲ್ಲೇ ಟೀಂ ಇಂಡಿಯಾ ನಾಯಕ ಶುಭಮನ್ ಗಿಲ್ ಅವರು ಮುಂದಿನ ದಿನಗಳಲ್ಲಿ ಒಗ್ಗಟ್ಟಾಗಿ ಹೋರಾಡುವುದಾಗಿ ದೃಢಸಂಕಲ್ಪ ಮಾಡಿದ್ದಾರೆ. ಎಕ್ಸ್ ಮೂಲಕ ಪ್ರತಿಕ್ರಿಯಿಸಿರುವ ಗಿಲ್, ‘ಶಾಂತ ಸಮುದ್ರಗಳು ನಿಮಗೆ ಹೇಗೆ ಈಜಬೇಕು ಎಂದು ಕಲಿಸುವುದಿಲ್ಲ. ಆದರೆ, ಬಿರುಗಾಳಿ ಬಂದಾಗ ನೀವು ದಡ ಸೇರಲು ಪ್ರಯತ್ನಿಸುತ್ತೀರಿ. ನಾವು ಪರಸ್ಪರ ನಂಬಿಕೆಯಿಂದ ಮುಂದುವರೆಯುತ್ತೇವೆ, ಜೊತೆಯಾಗಿ ಹೋರಾಡುತ್ತೇವೆ, ಜೊತೆಯಾಗಿ ಮುಂದುವರಿಯುತ್ತೇವೆ ಹಾಗೂ ಬಲವಾಗಿ ಉನ್ನತಿಗೇರುತ್ತೇವೆ’ ಎಂದು ಬರೆದುಕೊಂಡಿದ್ದಾರೆ.
ಕೊಲ್ಕತ್ತ ಟೆಸ್ಟ್‌ನ ಮೊದಲ ಪಂದ್ಯದ ವೇಳೆ ಬ್ಯಾಟಿಂಗ್ ಮಾಡುವಾಗ ಶುಭಮನ್ ಗಿಲ್ ಅವರು ಕುತ್ತಿಗೆ ಸೆಳೆತದ ನೋವಿಗೆ ಒಳಗಾಗಿದ್ದರು. ಹೀಗಾಗಿ ಅವರು ಎರಡನೇ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದರು. ಸದ್ಯ ಚೇತರಿಕೆಯ ಹಾದಿಯಲ್ಲಿರುವ ಗಿಲ್ ಟಿ20 ಸರಣಿಯಲ್ಲಿ ಮತ್ತೆ ತಂಡ ಸೇರುವ ಸಾಧ್ಯತೆ ಇದೆ.