ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

IND vs AFG: ಒಡಿಐ ಸರಣಿಯಲ್ಲಿ ಹಾರ್ದಿಕ್‌ ಪಾಂಡ್ಯ ಸ್ಥಾನವನ್ನು ತುಂಬಬಲ್ಲ ಮೂವರು ಆಟಗಾರರು!

IND vs AFG ODI Series: ಅಫ್ಘಾನಿಸ್ತಾನ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಿಂದ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಹೊರಬಿದ್ದಿದ್ದಾರೆ. ಹಾಗಾಗಿ ಈ ಸರಣಿಯಲ್ಲಿ ಭಾರತ ತಂಡದ ಪರ ಹಾರ್ದಿಕ್‌ ಪಾಂಡ್ಯ ಅವರ ಸ್ಥಾನವನ್ನು ತುಂಬಬಲ್ಲ ಮೂವರು ಆಟಗಾರರನ್ನು ಇಲ್ಲಿ ವಿವರಿಸಲಾಗಿದೆ. ಇದರಲ್ಲಿ ಶಿವಂ ದುಬೇ ಅಗ್ರ ಸ್ಥಾನದಲ್ಲಿದ್ದಾರೆ.

IND vs AFG: ಹಾರ್ದಿಕ್‌ ಪಾಂಡ್ಯ ಸ್ಥಾನವನ್ನು ತುಂಬಬಲ್ಲ 3 ಆಟಗಾರರು!

ಭಾರತ ಏಕದಿನ ತಂಡದಲ್ಲಿ ಹಾರ್ದಿಕ್‌ ಸ್ಥಾನವನ್ನು ತುಂಬಬಲ್ಲ ಮೂವರು. -

Profile
Ramesh Kote Jun 10, 2026 7:24 PM

ನವದೆಹಲಿ: ಅಫ್ಘಾನಿಸ್ತಾನ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿ (IND vs AFG) ಆರಂಭಕ್ಕೂ ಮುನ್ನ ಭಾರತ ತಂಡಕ್ಕೆ ಭಾರಿ ಹಿನ್ನಡೆಯಾಗಿದೆ. ಫಿಟ್‌ನೆಸ್‌ ಟೆಸ್ಟ್‌ ಪಾಸ್‌ ಮಾಡಿದ ಒಂದು ದಿನದಲ್ಲಿಯೇ ಹಾರ್ದಿಕ್‌ ಪಾಂಡ್ಯ(Hardik Pandya) ಅವರು ಮತ್ತೊಂದು ಗಾಯಕ್ಕೆ ತುತ್ತಾಗಿ ಏಕದಿನ ಸರಣಿಯಿಂದ ಅಧಿಕೃತವಾಗಿ ಹೊರ ನಡೆದಿದ್ದಾರೆ. ಇದಕ್ಕೂ ಮುನ್ನ ಹಿರಿಯ ಬ್ಯಾಟ್ಸ್‌ಮನ್‌ ವಿರಾಟ್‌ ಕೊಹ್ಲಿ (Virat Kohli) ಕೂಡ ಸ್ನಾಯು ಸೆಳೆತದ ಗಾಯಕ್ಕೆ ತುತ್ತಾಗಿ ಈ ಸರಣಿಯಿಂದ ಹೊರ ನಡೆದಿದ್ದರು.

ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಎರಡೂ ವಿಭಾಗಗಳಲ್ಲಿ ತಂಡಕ್ಕೆ ಕೊಡುಗೆ ನೀಡಬಲ್ಲ ಹಾರ್ದಿಕ್‌ ಪಾಂಡ್ಯ ಅವರು ಭಾರತ ತಂಡಕ್ಕೆ ಎಲ್ಲಾ ಸ್ವರೂಪದ ಆಟಗಾರರಾಗಿದ್ದಾರೆ. ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಎರಡೂ ವಿಭಾಗಕ್ಕೆ ಅವರು ಅತ್ಯುತ್ತಮ ಸಂಯೋಜನೆಯನ್ನು ತಂದುಕೊಡುತ್ತಾರೆ. ಇದೀಘ ಆಫ್ಘನ್‌ ಏಕದಿನ ಸರಣಿಯಲ್ಲಿ ಹಾರ್ದಿಕ್‌ ಪಾಂಡ್ಯ ಅವರ ಸ್ಥಾನಕ್ಕೆ ಯಾವ ಆಟಗಾರನನ್ನು ಬಿಸಿಸಿಐ ಆಯ್ಕೆ ಮಾಡಲಿದೆ ಎಂಬುದು ತೀವ್ರ ಕುತೂಹಲ ಕೆರಳಿಸಿದೆ.

ಯಶಸ್ವಿ ಜೈಸ್ವಾಲ್‌ ಔಟ್‌, ಇಶಾನ್‌ ಕಿಶನ್‌ ಇನ್‌; ಮೊದಲನೇ ಒಡಿಐಗೆ ಭಾರತದ ಸಂಭಾವ್ಯ ಪ್ಲೇಯಿಂಗ್‌ XI

ಭಾರತ ಏಕದಿನ ತಂಡದಲ್ಲಿಉ ಹಾರ್ದಿಕ್‌ ಸ್ಥಾನವನ್ನು ತುಂಬಬಲ್ಲ ಮೂವರು ಆಟಗಾರರು

ಆಕಿಬ್‌ ನಬಿ

ಜಮ್ಮು ಮತ್ತು ಕಾಶ್ಮೀರದ ಬಲಗೈ ವೇಗದ ಬೌಲಿಂಗ್‌ ಆಲ್‌ರೌಂಡರ್‌ ಆಕಿಬ್‌ ನಬಿ ಅವರು ಕೂಡ ಭಾರತ ತಂಡದಲ್ಲಿ ಹಾರ್ದಿಕ್‌ ಪಾಂಡ್ಯ ಅವರ ಸ್ಥಾನಕ್ಕೆ ಬಲವಾದ ಅಭ್ಯರ್ಥಿ ಎಂದರೆ ತಪ್ಪಾಗಲಾರದು. ಆಕಿಬ್‌ ಕಳೆದ ರಣಜಿ ಟ್ರೋಫಿ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್‌ ಪಡೆದಿದ್ದರು, ಹಾಗಾಗಿ ಅವರನ್ನು ಎಲ್ಲರೂ ಬೌಲರ್‌ ಎಂದೇ ಪರಿಗಣಿಸಿದ್ದಾರೆ. ಆದರೆ, ಅವರು ಬ್ಯಾಟಿಂಗ್‌ನಲ್ಲಿ ಉತ್ತಮ ಸಾಮರ್ಥ್ಯವನ್ನು ಹೊಂದಿದ್ದಾರೆ. ಇವರು ದೇಶಿ ಕ್ರಿಕೆಟ್‌ನಲ್ಲಿ ಉತ್ತಮ ದಾಖಲೆಯನ್ನು ಹೊಂದಿದ್ದಾರೆ.

ಹೈದರಾಬಾದ್‌ ವಿರುದ್ಧ ವಿಜಯ ಹಝಾರೆ ಟ್ರೋಫಿ ಟೂರ್ನಿಯ ಪಂದ್ಯದಲ್ಲಿ ಶತಕ ಸಿಡಿಸಿದ್ದರು. ಆ ಮೂಲಕ 50 ಓವರ್‌ಗಳ ದೇಶಿ ಕ್ರಿಕೆಟ್‌ನಲ್ಲಿ 8 ಅಥವಾ ಅದಕ್ಕಿಂತ ಕೆಳ ಕ್ರಮಾಂಕದಲ್ಲಿ ಶತಕ ಸಿಡಿಸಿದ ಮೂರನೇ ಬ್ಯಾಟ್ಸ್‌ಮನ್‌ ಎನಿಸಿಕೊಂಡಿದ್ದರು. ಇನ್ನು ಈ ಟೂರ್ನಿಯಲ್ಲಿ ಅವರು 14 ವಿಕೆಟ್‌ಳನ್ನು ಕಬಳಿಸಿದ್ದರು.

ಭಾರತ ಟಿ20 ತಂಡದಲ್ಲಿ ಭುವನೇಶ್ವರ್‌ ಕುಮಾರ್‌ಗೆ ಚಾನ್ಸ್‌ ನೀಡದ ಬಗ್ಗೆ ಆಕಾಶ್‌ ಚೋಪ್ರಾ ಪ್ರತಿಕ್ರಿಯೆ!

ಸರಂಶ್‌ ಜೈನ್

ಮಧ್ಯ ಪ್ರದೇಶದ 33ರ ವಯಸ್ಸಿನ ಆಲ್‌ರೌಂಡರ್‌ ಸರಂಶ್‌ ಜೈನ್‌ ದೇಶಿ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಅನುಭವವನ್ನು ಹೊಂದಿರುವ ಆಲ್‌ರೌಂಡರ್‌ ಆಗಿದ್ದಾರೆ. ಅವರು ಲಿಸ್ಟ್‌ ಎ ಕ್ರಿಕೆಟ್‌ನಲ್ಲಿ 47 ಪಂದ್ಯಗಳಿಂದ 553 ರನ್‌ಗಳು ಹಾಗೂ 38 ವಿಕೆಟ್‌ಗಳನ್ನು ಕಿತ್ತಿದ್ದಾರೆ. ಹಾರ್ದಿಕ್‌ ಪಾಂಡ್ಯ ಅವರ ಸ್ಥಾನಕ್ಕೆ ಅನುಭವಿ ಆಲ್‌ರೌಂಡರ್‌ ಬೇಕೆಂದರೆ, ಅವರ ಸ್ಥಾನಕ್ಕೆ ಸರಂಶ್‌ ಜೈನ್‌ ಸೂಕ್ತ ಆಟಗಾರ.

ಶಿವಂ ದುಬೆ

ಮುಂಬೈನ ಆಲ್‌ರೌಂಡರ್ ಶಿವಂ ದುಬೆ ಮೂರು ಪಂದ್ಯಗಳ ಏಕದಿನ ಸರಣಿಗೆ ಹಾರ್ದಿಕ್‌ ಪಾಂಡ್ಯ ಅವರ ಬದಲಿಯಾಗಿ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಅನುಭವ ಹೊಂದಿರುವ ದುಬೆ, ತಮ್ಮ ಆಲ್‌ರೌಂಡರ್ ಸಾಮರ್ಥ್ಯದ ಮೂಲಕ ತಂಡಕ್ಕೆ ಸಮತೋಲನ ಒದಗಿಸಬಲ್ಲ ಆಟಗಾರರಾಗಿ ಪರಿಗಣಿಸಲ್ಪಟ್ಟಿದ್ದಾರೆ.

ದುಬೆ ಕೊನೆಯದಾಗಿ 2024ರ ಆಗಸ್ಟ್‌ನಲ್ಲಿ ಶ್ರೀಲಂಕಾ ವಿರುದ್ಧ ಭಾರತದ ಪರ ಏಕದಿನ ಪಂದ್ಯವನ್ನಾಡಿದ್ದರು. ಇದೀಗ ಅವರು ಮತ್ತೆ ಈ ಮಾದರಿಯ ತಂಡಕ್ಕೆ ಮರಳುವ ನಿರೀಕ್ಷೆಯಲ್ಲಿದ್ದು, ಅವಕಾಶ ಸಿಕ್ಕರೆ ತಮ್ಮ ಸ್ಥಾನವನ್ನು ಗಟ್ಟಿಗೊಳಿಸಲು ಉತ್ಸುಕರಾಗಿದ್ದಾರೆ. ಇಲ್ಲಿಯವರೆಗೆ ಭಾರತದ ಪರ ನಾಲ್ಕು ಏಕದಿನ ಪಂದ್ಯಗಳನ್ನು ಆಡಿರುವ ಶಿವಂ ದುಬೆ, ಬ್ಯಾಟಿಂಗ್‌ನಲ್ಲಿ 43 ರನ್ ಗಳಿಸಿದ್ದು, ಬೌಲಿಂಗ್‌ನಲ್ಲಿ ಒಂದು ವಿಕೆಟ್ ಮಾತ್ರ ಪಡೆದಿದ್ದಾರೆ.