ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಐಪಿಎಲ್‌ ಟೂರ್ನಿಯ ಬಳಿಕ ಕೌಂಟಿ ಚಾಂಪಿಯನ್‌ಷಿಪ್‌ ಆಡಲಿರುವ ಯುಜ್ವೇಂದ್ರ ಚಹಲ್‌!

Yuzvendra Chahal to play in the County Championship: ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಬಳಿಕ ಭಾರತದ ಹಿರಿಯ ಸ್ಪಿನ್ನರ್‌ ಯುಜ್ವೇಂದ್ರ ಚಹಲ್‌ ಅವರು ಕೌಂಟಿ ಚಾಂಪಿಯನ್‌ಷಿಪ್‌ ಆಡಲು ಇಂಗ್ಲೆಂಡ್‌ಗೆ ತೆರಳಲಿದ್ದಾರೆ. ನಾರ್ಥ್‌ಹ್ಯಾಮ್ಟನ್‌ಶೈರ್‌ ಪರ ಹೋದವರ್ಷ ಅವರು ಕೌಂಟಿ ಆಡಿದ್ದರು.

ಐಪಿಎಲ್‌ ಬಳಿಕ ಇಂಗ್ಲೆಂಡ್‌ಗೆ ಹಾರಲಿರುವ ಯುಜ್ವೇಂದ್ರ ಚಹಲ್‌!

ಯುಜ್ವೇಂದ್ರ ಚಹಲ್‌

Profile Ramesh Kote Mar 14, 2025 5:03 PM

ನವದೆಹಲಿ: ಭಾರತದ ಹಿರಿಯ ಲೆಗ್‌ ಸ್ಪಿನ್ನರ್‌ ಯುಜ್ವೇಂದ್ರ ಚಹಲ್‌ (Yuzvendra Chahal) ಅವರು ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿಯ ಬಳಿಕ ಇಂಗ್ಲೆಂಡ್‌ಗೆ ತೆರಳಿ ಕೌಂಟಿ ಚಾಂಪಿಯನ್‌ಷಿಪ್‌ ಹಾಗೂ ಒನ್‌ ಡೇ ಕಪ್‌ ಟೂರ್ನಿಯನ್ನು ಆಡಲಿದ್ದಾರೆ. ಮುಂಬರುವ ವಿಶ್ವದ ಅತ್ಯಂತ ಶ್ರೀಮಂತ ಫ್ರಾಂಚೈಸಿ ಲೀಗ್‌ನಲ್ಲಿ ಈ ಬಾರಿ ಯುಜ್ವೇಂದ್‌ ಚಹಲ್‌ ಪಂಜಾಬ್‌ ಕಿಂಗ್ಸ್‌ ತಂಡದ ಪರ ಆಡಲಿದ್ದಾರೆ. ಈ ಟೂರ್ನಿಯ ಬಳಿಕ ಅವರು ಎರಡನೇ ಬಾರಿ ನಾರ್ಥ್‌ಹ್ಯಾಮ್ಟನ್‌ಶೈರ್‌ ಪರ ಆಡಲು ಇಂಗ್ಲೆಂಡ್‌ಗೆ ತೆರಳಲಿದ್ದಾರೆ. ಮಾರ್ಚ್‌ 22 ರಂದು ಹದಿನೆಂಟನೇ ಆವೃತ್ತಿಯ ಐಪಿಎಲ್‌ ಟೂರ್ನಿ ಆರಂಭವಾಗಲಿದೆ.

ಸತತ ಎರಡನೇ ಬಾರಿ ಕೌಂಟಿ ಚಾಂಪಿಯನ್‌ಷಿಪ್‌ಗೆ ಯುಜ್ವೇಂದ್ರ ಚಹಲ್‌ ಲಭ್ಯರಾಗಲಿದ್ದಾರೆಂದು ನಾರ್ಥ್‌ಹ್ಯಾಮ್ಟನ್‌ಶೈರ್‌ ಪ್ರಕಟಿಸಿದೆ. ಜೂನ್‌ 22 ರಂದು ಆರಂಭವಾಗುವ ಮಿಡ್ಲ್‌ಸೆಕ್ಸ್‌ ವಿರುದ್ಧದ ಎರಡನೇ ಡಿವಿಷನ್‌ ಪಂದ್ಯದಲ್ಲಿ ಯುಜ್ವೇಂದ್ರ ಚಹಲ್‌, ನಾರ್ಥ್‌ಹ್ಯಾಮ್ಟನ್‌ಸೈರ್‌ ಪರ ಚಹಲ್‌ ಕಣಕ್ಕೆ ಇಳಿಯಲಿದ್ದಾರೆ. ಏಪ್ರಿಲ್‌ 4 ರಿಂದಲೇ ಕೌಂಟಿ ಚಾಂಪಿಯನ್‌ಷಿಪ್‌ ಆರಂಭವಾಗಲಿದೆ. ಐಪಿಎಲ್‌ ಟೂರ್ನಿಯ ನಿಮಿತ್ತ ಚಹಲ್‌, ಆರಂಭಿಕ 7 ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ. ಇಂಗ್ಲೆಂಡ್‌ಗೆ ತೆರಳುವುದಕ್ಕೂ ಮುನ್ನ ಯುಜ್ವೇಂದ್ರ ಚಹಲ್‌ ಅವರು, ಪಂಜಾಬ್‌ ಕಿಂಗ್ಸ್‌ ತಂಡದಲ್ಲಿ ಸ್ಪಿನ್‌ ವಿಭಾಗವನ್ನು ಮುನ್ನಡೆಸಲಿದ್ದಾರೆ.

IND vs NZ: ಯುಜ್ವೇಂದ್ರ ಚಹಲ್‌ ಜೊತೆ ಕಾಣಿಸಿಕೊಂಡ ಸುಂದರಿ ಯಾರು? ಇಲ್ಲಿದೆ ಮಾಹಿತಿ...

2025ರ ಐಪಿಎಲ್‌ ಟೂರ್ನಿಯು ಮಾರ್ಚ್‌ 22 ರಿಂದ ಮೇ 25ರಂದು ಫೈನಲ್‌ ಪಂದ್ಯದ ಮೂಲಕ ಅಂತ್ಯವಾಗಲಿದೆ. ಇಂಗ್ಲೆಂಡ್‌ನಲ್ಲಿ ರೆಡ್‌ ಬಾಲ್‌ ಕ್ರಿಕೆಟ್‌ ಆಡುವುದಕ್ಕೂ ಮುನ್ನ ಯುಜ್ವೇಂದ್ರ ಚಹಲ್‌ ಒಂದು ತಿಂಗಳ ಕಾಲ ವಿರಾಮವನ್ನು ಪಡೆಯಲಿದ್ದಾರೆ. ಯುಜ್ವೇಂದ್ರ ಚಹಲ್‌ ಕೌಂಟಿ ಚಾಂಪಿಯನ್‌ಷಿಪ್‌ ಆಡುವ ವೇಳೆಯೇ ಭಾರತ ಟೆಸ್ಟ್‌ ತಂಡ ಕೂಡ ಇಂಗ್ಲೆಂಡ್‌ ಪ್ರವಾಸದಲ್ಲಿರುತ್ತದೆ. ಜೂನ್‌ 20 ರಂದು ಭಾರತ ತಂಡ, ಇಂಗ್ಲೆಂಡ್‌ ವಿರುದ್ಧ ಟೆಸ್ಟ್‌ ಸರಣಿಯನ್ನು ಆರಂಭಿಸಲಿದೆ.

2024ರ ಆವೃತ್ತಿಯಲ್ಲಿ ಯುಜ್ವೇಂದ್ರ ಚಹಲ್‌ ಅವರು ನಾರ್ಥ್‌ಹ್ಯಾಮ್ಟನ್‌ಶೈರ್‌ ಪರ ಅತ್ಯುತ್ತಮ ಪ್ರದರ್ಶನವನ್ನು ತೋರಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಸತತ ಎರಡನೇ ಬಾರಿ ನಾರ್ಥ್‌ಹ್ಯಾಮ್ಟನ್‌ಶೈರ್‌ ತಂಡ ಉಳಿಸಿಕೊಂಡಿದೆ. ಕಳೆದ ಆವೃತ್ತಿಯಲ್ಲಿ ಚಹಲ್‌ ಆಡಿದ್ದ ನಾಲ್ಕು ಪಂದ್ಯಗಳಿಂದ 19 ವಿಕೆಟ್‌ಗಳನ್ನು ಪಡೆದುಕೊಂಡಿದ್ದರು. ಕೆಂಟ್‌ ವಿರುದ್ದ ಒನ್‌ಡೇ ಕಪ್‌ ಪಂದ್ಯದಲ್ಲಿ ಚಹಲ್‌ ಒಮ್ಮೆ 5 ವಿಕೆಟ್‌ ಸಾಧನೆಯನ್ನು ಮಾಡಿದ್ದರು. ಕಳೆದ ವರ್ಷ ಡರ್ಬಿಶೈರ್‌ ವಿರುದ್ದ ಕೌಂಟಿ ಚಾಂಪಿಯನ್‌ಷಿಪ್‌ ಪಂದ್ಯದಲ್ಲಿ 99 ರನ್‌ ನೀಡಿ 9 ವಿಕೆಟ್‌ ಕಬಳಿಸಿದ್ದರು. ಇದು ಇವರ ಕೌಂಟಿ ಚಾಂಪಿಯನ್‌ಷಿಪ್‌ನ ಅತ್ಯುತ್ತಮ ಬೌಲಿಂಗ್‌ ಸ್ಪೆಲ್‌ ಆಗಿದೆ.

IND vs ENG: ಯುಜ್ವೇಂದ್ರ ಚಹಲ್‌ಗೆ ಕ್ಷಮೆ ಕೇಳಿದ ಅರ್ಷದೀಪ್‌ ಸಿಂಗ್‌! ಕಾರಣವೇನು?

ಯುಜ್ವೇಂದ್ರ ಚಹಲ್‌ ಪ್ರತಿಕ್ರಿಯೆ

"ಕಳೆದ ಆವೃತ್ತಿಯಲ್ಲಿ ನಾರ್ಥ್‌ಹ್ಯಾಮ್ಟನ್‌ಶೈರ್‌ ಪರ ಆಡುವುದನ್ನು ಆನಂದಿಸಿದ್ದೇನೆ. ಈ ಬಾರಿಯೂ ಇದೇ ತಂಡಕ್ಕೆ ಮರಳುತ್ತಿರುವುದು ಸಂತಸವನ್ನುಂಟು ಮಾಡಿದೆ," ಎಂದು ಯುಜ್ವೇಂದ್ರ ಚಹಲ್‌ ತಿಳಿಸಿದ್ದಾರೆ.

"ನಾರ್ಥ್‌ಹ್ಯಾಮ್ಟನ್‌ಶೈರ್‌ ಡ್ರೆಸ್ಸಿಂಗ್‌ ರೂಂನಲ್ಲಿ ಅದ್ಭುತ ವ್ಯಕ್ತಿಗಳು ಇದ್ದರು ಹಾಗೂ ಮತ್ತೊಮ್ಮೆ ಈ ತಂಡವನ್ನು ಸೇರಲು ನಾನು ಎದುರು ನೋಡುತ್ತಿದ್ದೇನೆ. ಕಳೆದ ಆವೃತ್ತಿಯ ಬ್ಯಾಕೆಂಡ್‌ನಲ್ಲಿ ನಾವು ಕೆಲವು ಅದ್ಭುತ ಪ್ರದರ್ಶನಗಳನ್ನು ತೋರಿದ್ದೇವೆ. ಅದೇ ಲಯವನ್ನು ಈ ಬಾರಿಯೂ ಮುಂದುವರಿಸುತ್ತೇವೆಂಬ ಬಗ್ಗೆ ವಿಶ್ವಾಸವಿದೆ," ಎಂದು ಲೆಗ್‌ ಸ್ಪಿನ್ನರ್‌ ತಿಳಿಸಿದ್ದಾರೆ.