ʻಆರ್‌ಸಿಬಿ ನನ್ನನ್ನು ಖರೀದಿಸಿದಾಗ ಅಚ್ಚರಿಯಾಗಿತ್ತು!ʼ: ಬೆಂಗಳೂರು ತಂಡದ ಬಗ್ಗೆ ಭುವನೇಶ್ವರ್ ಕುಮಾರ್ ಮನದಾಳ!
2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಮೆಗಾ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಭುವನೇಶ್ವರ್ ಕುಮಾರ್ ಅವರನ್ನು 10.75 ಕೋಟಿ ರು. ಗಳಿಗೆ ಖರೀದಿಸಿತ್ತು. ಈ ಬಗ್ಗೆ ಇದೀಗ ಸಂದರ್ಶನವೊಂದರಲ್ಲಿ ಭುವನೇಶ್ವರ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಆರ್‌ಸಿಬಿ ನನ್ನನ್ನು ಖರೀದಿಸಿದ್ದು ನನಗೆ ಅಚ್ಚರಿ ಮೂಡಿಸಿತ್ತು ಎಂದು ಹೇಳಿಕೊಂಡಿದ್ದಾರೆ.
ಆರ್‌ಸಿಬಿಗೆ ಸೇರ್ಪಡೆಯಾದ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ ಭುವನೇಶ್ವರ್ ಕುಮಾರ್. -
ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (IPL) ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಸತತ ಎರಡು ಬಾರಿ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದ ಹಿರಿಯ ವೇಗಿ ಭುವನೇಶ್ವರ್ ಕುಮಾರ್ (Bhuvneshwar Kumar) ಇದೀಗ ಬೆಂಗಳೂರು ತಂಡಕ್ಕೆ ಸೇರ್ಪಡೆಯಾಗಿದ್ದ ಅನುಭವನ್ನು ಹಂಚಿಕೊಂಡಿದ್ದಾರೆ. 2025ರ ಮೆಗಾ ಹರಾಜಿನಲ್ಲಿ ಆರ್‌ಸಿಬಿ ನನ್ನನ್ನು ಖರೀದಿಸಿದ್ದ ವೇಳೆ ನನಗೆ ಅಚ್ಚರಿಯಾಗಿತ್ತು ಹಾಗೂ ಇದು ದೊಡ್ಡ ಅಭಿಮಾನಿಗಳನ್ನು ಹೊಂದಿರುವ ಫ್ರಾಂಚೈಸಿಯಾಗಿದ್ದರಿಂದ ನನಗೆ ಬಹಳ ಖುಷಿಯಾಗಿತ್ತು ಎಂದು ಹೇಳಿಕೊಂಡಿದ್ದಾರೆ.
2025ರ ಐಪಿಎಲ್ ಮೆಗಾ ಹರಾಜಿಗೆ ಭುವನೇಶ್ವರ್ ಕುಮಾರ್ ಅವರನ್ನು ಆರ್‌ಸಿಬಿ ಬಿಡುಗಡೆ ಮಾಡಿತ್ತು. ಅದರಂತೆ ಮೆಗಾ ಹರಾಜಿನಲ್ಲಿ ಭುವನೇಶ್ವರ್ ಕುಮಾರ್ ಅವರನ್ನು ಖರೀದಿಸಲು ಮುಂಬೈ ಇಂಡಿಯನ್ಸ್ ಹಾಗೂ ಲಖನೌ ಸೂಪರ್ ಜಯಂಟ್ಸ್ ತಂಡಗಳು ಪರಸ್ಪರ ಪೈಪೋಟಿ ನಡೆಸಿದ್ದವು. ಅಂತಿಮವಾಗಿ ಆರ್‌ಸಿಬಿ ತಂಡ, ಅವರನ್ನು ದೊಡ್ಡ ಮೊತ್ತಕ್ಕೆ ಖರೀದಿಸಿತ್ತು. ಈ ವೇಳೆ ಭುವನೇಶ್ವರ್ ಕುಮಾರ್ ಅವರು ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯಲ್ಲಿ ಉತ್ತರ ಪ್ರದೇಶ ತಂಡದ ಪರ ಆಡುತ್ತಿದ್ದರು.
IPL 2027: ಕೋಲ್ಕತಾ ನೈಟ್ ರೈಡರ್ಸ್‌ಗೆ ಮುಂದಿನ ನಾಯಕನನ್ನು ಆರಿಸಿದ ಆಕಾಶ್ ಚೋಪ್ರಾ!
ಜತಿನ್ ಸಪ್ರು ಅವರೊಂದಿಗೆ ಸಂದರ್ಶನದಲ್ಲಿ ಮಾತನಾಡಿದ ಭುವನೇಶ್ವರ್ ಕುಮಾರ್, "ಮೆಗಾ ಹರಾಜು ನಡೆದಿದ್ದ ಮೊದಲನೇ ದಿನ, ಸನ್‌ರೈಸರ್ಸ್ ಹೈದರಾಬಾದ್ ಕೋಚ್ ಡೇನಿಯಲ್ ವೆಟ್ಟೋರಿ ಅವರು ಕೂಡ ನನಗೆ ʻನಿಮ್ಮನ್ನು ಖರೀದಿಸಲು ಹಲವು ತಂಡಗಳು ಕಾಯುತ್ತಿವೆʼ ಎಂದು ಹೇಳಿದ್ದರು. ಎಸ್‌ಆರ್‌ಎಚ್‌ಗೂ ನಾನು ಬೇಕಿತ್ತು. ಆದರೆ, ಅವರ ಬಳಿ ಹಣವಿರಲಿಲ್ಲ. ಹಾಗಾಗಿ ಅವರು ನನ್ನನ್ನು ಖರೀದಿಸಿರಲಿಲ್ಲ," ಎಂದು ಹೇಳಿದ್ದಾರೆ.
“ನನ್ನ ಹೆಸರು ಹರಾಜಿನಲ್ಲಿ ಬಂದಾಗ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಪಂದ್ಯಗಳು ನಡೆಯುತ್ತಿದ್ದವು. ನಾನು ಉತ್ತರ ಪ್ರದೇಶ (ಯುಪಿ) ತಂಡದ ನಾಯಕನಾಗಿದ್ದೆ. ನಾವು ಮೈದಾನಕ್ಕೆ ಪ್ರವೇಶಿಸುತ್ತಿದ್ದ ಸಮಯದಲ್ಲಿ ನಮ್ಮ ವಿಡಿಯೊ ವಿಶ್ಲೇಷಕರು ಹರಾಜನ್ನು ವೀಕ್ಷಿಸುತ್ತಿದ್ದರು. ನಾನು ಕೂಡ ಸ್ವಲ್ಪ ಗಮನ ಹರಿಸಿದೆ. ಮುಂಬೈ ಇಂಡಿಯನ್ಸ್ (MI) ಮತ್ತು ಲಖನೌ ಸೂಪರ್ ಜೈಂಟ್ಸ್ (LSG) ಬಿಡ್ಡಿಂಗ್ ಆರಂಭಿಸಿದ್ದವು ಎಂಬುದು ನನಗೆ ನೆನಪಿದೆ. ಹರಾಜಿನಲ್ಲಿ ನನ್ನ ಬೆಲೆ 5-6 ಕೋಟಿಗೆ ತಲುಪಿದಾಗ, ಅಂಪೈರ್‌ಗಳು ಮೈದಾನಕ್ಕೆ ಪ್ರವೇಶಿಸಲು ಆರಂಭಿಸಿದ್ದರಿಂದ ನಾನು ಅಲ್ಲಿಂದ ಹೋಗಬೇಕಾಯಿತು,” ಎಂದು ವೇಗಿ ವಿವರಿಸಿದ್ದಾರೆ.
IPL 2027: ಇಂಪ್ಯಾಕ್ಟ್ ಪ್ಲೇಯರ್ ನಿಯಮವನ್ನು ತೆಗೆಯಬೇಕೆಂದ ಸುರೇಶ್ ರೈನಾ!
“ಕೆಲವು ಓವರ್‌ಗಳ ಬಳಿಕ ಒಬ್ಬರು ಬಂದು ಆರ್‌ಸಿಬಿ (RCB) ನನ್ನನ್ನು ಖರೀದಿಸಿದೆ ಎಂದು ತಿಳಿಸಿದರು. ಆರಂಭದಲ್ಲಿ ಬೇರೆ ಎರಡು ತಂಡಗಳು ಬಿಡ್ಡಿಂಗ್ ಮಾಡುತ್ತಿದ್ದ ಕಾರಣ ನನಗೆ ಸ್ವಲ್ಪ ಆಶ್ಚರ್ಯವಾಯಿತು. ಆದರೆ ನಂತರ ತಂಡದಿಂದ ನನಗೆ ಸಂದೇಶಗಳು ಬಂದವು. ಇಷ್ಟು ದೊಡ್ಡ ಅಭಿಮಾನಿ ಬಳಗ ಹೊಂದಿರುವ ತಂಡದ ಭಾಗವಾಗಿರುವುದಕ್ಕೆ ನನಗೆ ತುಂಬಾ ಸಂತೋಷವಾಯಿತು,” ಎಂದು ಅವರು ಹೇಳಿದ್ದಾರೆ.
17 ವರ್ಷಗಳಿಂದ ಐಪಿಎಲ್ ಟ್ರೋಫಿ ಗೆಲ್ಲಲು ಸಾಧ್ಯವಾಗದ ಆರ್‌ಸಿಬಿ ತಂಡಕ್ಕೆ ಭುವನೇಶ್ವರ್ ಕುಮಾರ್ ಮರಳಿದ್ದರು. ಆದರೆ, ಈ ದೀರ್ಘ ಕಾಯುವಿಕೆಯನ್ನು ಅಂತ್ಯಗೊಳಿಸಲೇಬೇಕು ಎಂಬ ಯಾವುದೇ ಒತ್ತಡ ತಂಡದ ಮೇಲೆ ಇರಲಿಲ್ಲ ಎಂದು ಅವರು ಹೇಳಿದ್ದಾರೆ.
“ನಾನು ತಂಡದ ಸಿಬ್ಬಂದಿಯನ್ನು ಭೇಟಿಯಾದಾಗ, ಎಲ್ಲರೂ ಗೆಲ್ಲಬೇಕು ಎಂಬ ಆಸೆಯನ್ನು ಹೊಂದಿದ್ದರು. ಆದರೆ ಅವರ ಸರಳ ತತ್ವವೇನೆಂದರೆ, ನಾವು ಗೆದ್ದರೆ ಅದು ಅದ್ಭುತ, ಗೆಲ್ಲದಿದ್ದರೆ ಮತ್ತೊಂದು ವರ್ಷ ಅಷ್ಟೇ. ನಾವು ಉತ್ಸಾಹದಿಂದ ಸಿದ್ಧರಾಗಿದ್ದೆವು, ಆದರೆ ಅದೇ ಸಮಯದಲ್ಲಿ ಯಾವುದೇ ಒತ್ತಡವಿಲ್ಲದೆ ನಿರಾಳವಾಗಿದ್ದೆವು,” ಎಂದು ಭುವನೇಶ್ವರ್ ತಿಳಿಸಿದ್ದಾರೆ.