ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Cameron Green IPL Auction 2026: ಆಸ್ಟ್ರೇಲಿಯಾ ಆಲ್‌ರೌಂಡರ್‌ ಮೇಲೆ ಕಣ್ಣಿಟ್ಟಿರುವ ಚೆನ್ನೈ ಸೂಪರ್‌ ಕಿಂಗ್ಸ್‌!

Cameron Green IPL 2026 Auction: ಬಹುನಿರೀಕ್ಷಿತ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಮಿನಿ ಹರಾಜು ಪ್ರಕ್ರಿಯೆ ಡಿಸೆಂಬರ್‌ 16 ರಂದು ನಡೆಯಲಿದೆ. ಈ ಹರಾಜಿನಲ್ಲಿ ಅತಿ ಹೆಚ್ಚು ಮೊತ್ತ ಇರುವ ಕೋಲ್ಕತಾ ನೈಟ್‌ ರೈಡರ್ಸ್‌ ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್ ಬಿಡ್‌ಗಳು ಹೆಚ್ಚಿನ ಗಮನ ಸೆಳೆಯಲಿವೆ. ಅಂದ ಹಾಗೆ ಅತಿ ಹೆಚ್ಚು ಮೊತ್ತಕ್ಕೆ ಕ್ಯಾಮೆರಾನ್‌ ಗ್ರೀನ್‌ ಅವರನ್ನು ಚೆನ್ನೈ ಸೂಪರ್‌ ಕಿಂಗ್ಸ್‌ ಖರೀದಿಸುವ ಸಾಧ್ಯತೆ ಇದೆ.

ಕ್ಯಾಮೆರಾನ್‌ ಗ್ರೀನ್‌ ಮೇಲೆ ಕಣ್ಣಿಟ್ಟಿರುವ ಚೆನ್ನೈ ಸೂಪರ್‌ ಕಿಂಗ್ಸ್‌!

ಕ್ಯಾಮೆರಾನ್‌ ಗ್ರೀನ್‌ ಮೇಲೆ ಕಣ್ಣಿಟ್ಟಿರುವ ಸಿಎಸ್‌ಕೆ. -

Profile
Ramesh Kote Dec 15, 2025 8:41 PM

ನವದೆಹಲಿ: ಹತ್ತೊಂಬತ್ತನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ (IPL 2026 Mini Auction) ಮಿನಿ ಹರಾಜಿಗೆ ಒಂದೇ ಒಂದು ದಿನ ಬಾಕಿ ಇದೆ. ಹಾಗಾಗಿ ಹಾಲಿ ಚಾಂಪಿಯನ್‌ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಸೇರಿದಂತೆ 10 ತಂಡಗಳು ತಮ್ಮ ಅಗತ್ಯಗಳಿಗೆ ಯಾವ-ಯಾವ ಆಟಗಾರರನ್ನು ಖರೀದಿಸಬೇಕೆಂಬ ಲೆಕ್ಕಾಚಾರದಲ್ಲಿ ತೊಡಗಿವೆ. ಈ ಬಾರಿ ಹರಾಜು ಪ್ರಕ್ರಿಯೆ ಅಬುಧಾಬಿಯಲ್ಲಿ ನಡೆಯುತ್ತಿದ್ದು, ಎಲ್ಲಾ ಫ್ರಾಂಚೈಸಿಗಳ ಟೀಮ್‌ ಮ್ಯಾನೇಜ್‌ಮೆಂಟ್‌ ಯುಎಇನಲ್ಲಿವೆ. ಅಂದ ಹಾಗೆ ಈ ಬಾರಿ ಮಿನಿ ಹರಾಜಿನಲ್ಲಿ ಯಾವ ಆಟಗಾರ ಅತಿ ಹೆಚ್ಚು ಮೊತ್ತವನ್ನು ಜೇಬಿಗೆ ಇಳಿಸಿಕೊಳ್ಳಬಹುದು ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ.

ಮಿನಿ ಹರಾಜಿಗೆ ಹೋಗುತ್ತಿರುವ ಫ್ರಾಂಚೈಸಿಗಳ ಪೈಕಿ ಕೋಲ್ಕತಾ ನೈಟ್‌ ರೈಡರ್ಸ್‌ ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಗಳ ಬಳಿ ಅತಿ ಹೆಚ್ಚು ಪರ್ಸ್‌ ಮೊತ್ತವಿದೆ. ಈ ಬಾರಿ ಮಿನಿ ಹರಾಜಿನಲ್ಲಿ ಒಟ್ಟು 359 ಆಟಗಾರರು ಕಾಣಿಸಿಕೊಳ್ಳಲಿದ್ದಾರೆ. ಭಾರತ ಹಾಗೂ ವಿದೇಶಿ ಸ್ಟಾರ್‌ ಆಟಗಾರರು ಕೂಡ ಮಿನಿ ಹರಾಜಿನಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಒಳಗಾಗಲಿದ್ದಾರೆ. ಹರಾಜಿನಲ್ಲಿ ವೇಗದ ಬೌಲಿಂಗ್‌ ಆಲ್‌ರೌಂಡರ್‌ಗಳಾಗಿ ಕ್ಯಾಮೆರಾನ್‌ ಗ್ರೀನ್‌, ವೆಂಕಟೇಶ್‌ ಅಯ್ಯರ್‌, ಜೇಸನ್‌ ಹೋಲ್ಡರ್‌ ಇದ್ದರೆ, ಸ್ಪಿನ್‌ ಬೌಲಿಂಗ್‌ ಆಲ್‌ರೌಂಡರ್‌ ಆಗಿ ಲಿಯಾಮ್‌ ಲಿವಿಂಗ್‌ಸ್ಟೋನ್‌ ಕೂಡ ಹರಾಜಿನಲ್ಲಿ ಗಮನ ಸೆಳೆಯಲಿದ್ದಾರೆ.

IPL 2026 Retained Players: ತಂಡಗಳು ರಿಟೇನ್ ಮಾಡಿಕೊಂಡ ಆಟಗಾರರ ಪಟ್ಟಿ ಇಲ್ಲಿದೆ

ಬ್ಯಾಟ್ಸ್‌ಮನ್‌ಗಳ ವಿಭಾಗದಲ್ಲಿ ನಾವು ನೋಡುವುದಾದರೆ, ಸ್ಟೀವನ್‌ ಸ್ಮಿತ್‌, ಡೇವಿಡ್‌ ಮಿಲ್ಲರ್‌ ಹಾಗೂ ಕ್ವಿಂಟನ್‌ ಡಿ ಕಾಕ್‌ ಇದ್ದಾರೆ. ಅಂದ ಹಾಗೆ ಯಾವ ಆಟಗಾರ ಮಿನಿ ಹರಾಜಿನಲ್ಲಿ ಅತಿ ಹೆಚ್ಚು ಮೊತ್ತವನ್ನು ಪಡೆಯಲಿದ್ದಾರೆಂದು ಈಗಲೇ ಅಂದಾಜಿಸಲು ಸಾಧ್ಯವಿಲ್ಲ. ಆದರೆ, ಅತಿ ಹೆಚ್ಚು ಹಣವನ್ನು ನೀಡಲು ಕೋಲ್ಕತಾ ನೈಟ್‌ ರೈಡರ್ಸ್‌ ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಗಳಿಂದ ಮಾತ್ರ ಸಾಧ್ಯ.

ಕ್ಯಾಮೆರಾನ್‌ ಗ್ರೀನ್‌ ಮೇಲೆ ಸಿಎಸ್‌ಕೆ ಕಣ್ಣು

ಆಸ್ಟ್ರೇಲಿಯಾ ತಂಡದ ಪರ ಮೂರೂ ಸ್ವರೂಪದಲ್ಲಿ ಆಡುವ ಸೀಮ್‌ ಬೌಲಿಂಗ್‌ ಆಲ್‌ರೌಂಡರ್‌ ಕ್ಯಾಮೆರಾನ್‌ ಗ್ರೀನ್‌ ಅವರಿಗೆ 2026ರ ಐಪಿಎಲ್‌ ಟೂರ್ನಿಯ ಮಿನಿ ಹರಾಜಿನಲ್ಲಿ ಹೆಚ್ಚಿನ ಬೇಡಿಕೆ ಬರುವ ಸಾಧ್ಯತೆ ಇದೆ. 2024ರ ಐಪಿಎಲ್‌ ಟೂರ್ನಿಯಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಪರ ಆಡಿದ್ದ ಗ್ರೀನ್‌,2025ರ ಟೂರ್ನಿಯಲ್ಲಿ ವಿರಾಮ ಪಡೆದಿದ್ದರು. ಆದರೆ, ಈ ಬಾರಿ ಹರಾಜಿನಲ್ಲಿ ಅವರು ಕೇವಲ ಬ್ಯಾಟ್ಸ್‌ಮನ್‌ ಆಗಿ ತಮ್ಮ ಹೆಸರನ್ನು ನೋಂದಾಯಿಸಿದ್ದಾರೆ. ಗ್ರೀನ್‌ ಅವರನ್ನು ಖರೀದಿಸಲು ಕೆಕೆಆರ್‌ ಹಾಗೂ ಸಿಎಸ್‌ಕೆ ತಂಡಗಳ ನಡುವೆ ತೀವ್ರ ಪೈಪೋಟಿ ಎದುರಾಗಬಹುದು. ಏಕೆಂದರೆ, ಈ ಎರಡೂ ತಂಡಗಳಿಗೆ ವಿದೇಶಿ ವೇಗದ ಬೌಲಿಂಗ್‌ ಆಲ್‌ರೌಂಡರ್‌ಗಳ ಅಗತ್ಯವಿದೆ.

IPL 2026 Mini Auction: ಪಂಜಾಬ್‌ ಕಿಂಗ್ಸ್‌ ಟಾರ್ಗೆಟ್‌ ಮಾಡಬಲ್ಲ ಐವರು ಆಟಗಾರರು!

ಕೋಲ್ಕತಾ ಫ್ರಾಂಚೈಸಿ ಪರ್ಸ್‌ನಲ್ಲಿ 64.30 ಕೋಟಿ ರು. ಗಳಿಸಿದ್ದರೆ, ಚೆನ್ನೈ ಫ್ರಾಂಚೈಸಿ ಖಾತೆಯಲ್ಲಿ 43.40 ಕೋಟಿ ರು . ಇದೆ. ಹಾಗಾಗಿ ಈ ಎರಡೂ ತಂಡಗಳಿಗೆ ಕ್ಯಾಮೆರಾನ್‌ ಗ್ರೀನ್‌ ಅವರನ್ನು ಅತಿ ಹೆಚ್ಚು ಮೊತ್ತಕ್ಕೆ ಬಿಡ್‌ ಮಾಡುವ ಆರ್ಥಿಕ ಸಾಮರ್ಥ್ಯವನ್ನು ಹೊಂದಿವೆ. ಈ ಎರಡೂ ತಂಡಗಳ ಪೈಕಿ ಒಂದು ತಂಡ ಅತಿ ಹೆಚ್ಚು ಮೊತ್ತಕ್ಕೆ ಕ್ಯಾಮೆರಾನ್‌ ಗ್ರೀನ್‌ ಅವರನ್ನು ಖರೀದಿಸಬಹುದು. ಆದರೆ, ಸಿಎಸ್‌ಕೆ ಆಸೀಸ್‌ ಆಲ್‌ರೌಂಡರ್‌ ಅನ್ನು ಶತಾಯ-ಗತಾಯ ಖರದಿಸಲು ರಣತಂತ್ರ ರೂಪಿಸಿದೆ ಎಂದು ವರದಿಯಾಗಿದೆ.