ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

CSK vs DC: ಸಂಜು ಸ್ಯಾಮ್ಸನ್‌ ಭರ್ಜರಿ ಶತಕ, ಚೆನ್ನೈ ಸೂಪರ್‌ ಕಿಂಗ್ಸ್‌ಗೆ ಮೊದಲ ಜಯ!

CSK vs DC Highlights: ಸಂಜು ಸ್ಯಾಮ್ಸನ್‌ ಭರ್ಜರಿ ಶತಕದ ಬಲದಿಂದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ, 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಮೊದಲ ಗೆಲುವು ಸಾಧಿಸಿದೆ. ಶನಿವಾರ ನಡೆದಿದ್ದ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಋತುರಾಜ್‌ ಗಾಯಕ್ವಾಡ್‌ ನಾಯಕತ್ವದ ಸಿಎಸ್‌ಕೆ 23 ರನ್‌ಗಳ ಗೆಲುವು ಪಡೆಯಿತು. ಇದು ಡೆಲ್ಲಿಗೆ ಸತತ ಎರಡನೇ ಸೋಲಾಗಿದೆ.

IPL 2026: ಸಂಜು ಶತಕದ ಬಲದಿಂದ ಸಿಎಸ್‌ಕೆಗೆ ಮೊದಲ ಜಯ!

ಡೆಲ್ಲಿ ಕ್ಯಾಪಿಟಲ್ಸ್‌ ಎದುರು ಚೆನ್ನೈ ಸೂಪರ್‌ ಕಿಂಗ್ಸ್‌ಗೆ ಜಯ. -

Profile
Ramesh Kote Apr 12, 2026 12:45 AM

ಚೆನ್ನೈ: ಸಂಜು ಸ್ಯಾಮ್ಸನ್‌ (Sanju samson) ಭರ್ಜರಿ ಶತಕ ಹಾಗೂ ಜೇಮಿ ಓವರ್ಟನ್‌ ಅವರ ಮಾರಕ ಬೌಲಿಂಗ್‌ ದಾಳಿಯ ಸಹಾಯದಿಂದ ಚೆನ್ನೈ ಸೂಪರ್‌ ಕಿಂಗ್ಸ್‌ (CSK) ತಂಡ, ಎದುರಾಳಿ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ 23 ರನ್‌ಗಳ ಗೆಲುವು ದಾಖಲಿಸಿತು. ಆ ಮೂಲಕ ಸತತ ಮೂರು ಪಂದ್ಯಗಳಲ್ಲಿ ಸೋಲು ಅನುಭವಿಸಿದ್ದ ಸಿಎಸ್‌ಕೆ ಇದೀಗ 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2026) ಟೂರ್ನಿಯಲ್ಲಿ ಮೊದಲ ಗೆಲುವು ಪಡೆದು ಅಂಕಪಟ್ಟಿಯಲ್ಲಿ ಖಾತೆ ತೆರೆಯಿತು. ಇನ್ನು ಅಕ್ಷರ್‌ ಪಟೇಲ್‌ ನಾಯಕತ್ವದ ಡೆಲ್ಲಿ ತಂಡ ಸತತ ಎರಡನೇ ಸೋಲು ಅನುಭವಿಸಿ ಅಂಕಪಟ್ಟಿಯಲ್ಲಿ ಹಿನ್ನಡೆ ಅನುಭವಿಸಿದೆ.

ಸಿಎಸ್‌ಕೆ ನೀಡಿದ್ದ 213 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಡೆಲ್ಲಿ ಕ್ಯಾಪಿಟಲ್ಸ್‌ ತಂಡ, ಉತ್ತಮ ಆರಂಭ ಪಡೆದ ಹೊರತಾಗಿಯೂ ಅನ್ಷುಲ್‌ ಕಾಂಬೋಜ್‌ ಹಾಗೂ ಜೇಮಿ ಓವರ್ಟನ್‌ ಅವರ ಮಾರಕ ಬೌಲಿಂಗ್‌ ದಾಳಿಗೆ ನಲುಗಿತು. ಆ ಮೂಲಕ 20 ಓವರ್‌ಗಳನ್ನು ಮುಗಿಸಿದರೂ 189 ರನ್‌ಗಳಿಗೆ ಆಲ್‌ಔಟ್‌ ಆಯಿತು. ಆ ಮೂಲಕ ಸೋಲು ಒಪ್ಪಿಕೊಂಡಿತು. ಡೆಲ್ಲಿ ಪರ ಮಧ್ಯಮ ಕ್ರಮಾಂಕದಲ್ಲಿ ಜವಾಬ್ದಾರಿಯುತ ಬ್ಯಾಟ್‌ ಮಾಡಿದ್ದ ಟ್ರಿಸ್ಟನ್‌ ಸ್ಟಬ್ಸ್‌ 38 ಎಸೆತಗಳಲ್ಲಿ 60 ರನ್‌ ಗಳಿಸಿದರು ಹಾಗೂ ಇದಕ್ಕೂ ಮುನ್ನ ಪಥುಮ್‌ ನಿಸಾಂಕ 24 ಎಸೆತಗಳಲ್ಲಿ 41 ರನ್‌ ಗಳಿಸಿದ್ದು ಬಿಟ್ಟರೆ ಇನ್ನುಳಿದ ಬ್ಯಾಟ್ಸ್‌ಮನ್‌ಗಳು ವಿಫಲರಾದರು.

CSK vs DC: 59 ರನ್‌ ಗಳಿಸಿದ ಬಳಿಕ ಆಯುಷ್‌ ಮ್ಹಾತ್ರೆ ರಿಟೈರ್ಡ್‌ ಔಟ್‌ ತೆಗೆದುಕೊಂಡಿದ್ದೇಕೆ? ಕಾರಣ ಇಲ್ಲಿದೆ!

ಕೆಎಲ್‌ ರಾಹುಲ್‌ (18), ಸಮೀರ್‌ ರಿಝ್ವಿ , ಅಕ್ಷರ್‌ ಪಟೇಲ್‌, ಡೇವಿಡ್‌ ಮಿಲ್ಲರ್‌ ಹಾಗೂ ಆಶುತೋಷ್‌ ಶರ್ಮಾ ಬೇಗ ವಿಕೆಟ್‌ ಒಪ್ಪಿಸಿದರು. ಸಿಎಸ್‌ಕೆ ಪರ ಅಂನ್ಷೂಲ್‌ ಕಾಂಬೋಜ್‌ 3 ವಿಕೆಟ್‌ ಕಿತ್ತರೆ, ಜೇಮಿ ಓವರ್ಟನ್‌ 4 ವಿಕೆಟ್‌ ಕಬಳಿಸಿದರು.

212 ರನ್‌ ಕಲೆ ಹಾಕಿದ ಚೆನ್ನೈ ಸೂಪರ್‌ ಕಿಂಗ್ಸ್‌

ಇದಕ್ಕೂ ಮುನ್ನ ಇಲ್ಲಿನ ಎಂ ಚಿದಂಬರಂ ಕ್ರೀಡಾಂಗಣದಲ್ಲಿಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾಗಿದ್ದ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಸಂಜು ಸ್ಯಾಮ್ಸನ್‌ ಶತಕ ಹಾಗೂ ಆಯುಷ್‌ ಮ್ಹಾತ್ರೆ ಅವರ ಅರ್ಧಶತಕದ ಬಲದಿಂದ ತನ್ನ ಪಾಲಿನ 20 ಓವರ್‌ಗಳಿಗೆ 2 ವಿಕೆಟ್‌ ನಷ್ಟಕ್ಕೆ 212 ರನ್‌ಗಳನ್ನು ಕಲೆ ಹಾಕಿತ್ತು.



ಸಿಎಸ್‌ಕೆ ಪರ ಸಂಜು ಚೊಚ್ಚಲ ಶತಕ

ಓಪನರ್ಸ್‌ ಸಂಜು ಸ್ಯಾಮ್ಸನ್‌ ಹಾಗೂ ಋತುರಾಜ್‌ ಗಾಯಕ್ವಾಡ್‌ ಜೋಡಿಯಿಂದ ದೊಡ್ಡ ಜೊತೆಯಾಟ ಮೂಡಿ ಬರಲಿಲ್ಲ, ಏಕೆಂದರೆ ಗಾಯಕ್ವಾಡ್‌ 15 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು. ಆದರೆ, ಒಂದು ತುದಿಯಲ್ಲಿ ದೀರ್ಘಾವಧಿ ನಿಂತು ಬ್ಯಾಟ್‌ ಮಾಡಿದ ಸಂಜು, 52 ಎಸೆತಗಳಲ್ಲಿ ಶತಕವನ್ನು ಪೂರ್ಣಗೊಳಿಸಿದರು. ಅವರು 20 ಓವರ್‌ಗಳನ್ನು ಪೂರ್ಣಗೊಳಿಸಿ 56 ಎಸೆತಗಳಲ್ಲಿ 4 ಸಿಕ್ಸರ್‌ ಹಾಗೂ 15 ಬೌಂಡರಿಗಳೊಂದಿಗೆ ಅಜೇಯ 115 ರನ್‌ಗಳನ್ನು ಬಾರಿಸಿದರು. ಆ ಮೂಲಕ ಸಿಎಸ್‌ಕೆ ಪರ ಮೊದಲ ಹಾಗೂ ತಮ್ಮ ಐಪಿಎಲ್‌ ವೃತ್ತಿ ಜೀವನದಲ್ಲಿ ನಾಲ್ಕನೇ ಶತಕವನ್ನು ಸಿಡಿಸಿದರು. ಕಳೆದ ಮೂರು ಪಂದ್ಯಗಳಲ್ಲಿ ವಿಫಲರಾಗಿದ್ದ ಅವರು, ಈ ಪಂದ್ಯದಲ್ಲಿ ಭರ್ಜರಿಯಾಗಿ ಕಮ್‌ಬ್ಯಾಕ್‌ ಮಾಡಿದರು ಹಾಗೂ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

CSK vs DC: ನಾಲ್ಕನೇ ಐಪಿಎಲ್‌ ಸೆಂಚುರಿ ಬಾರಿಸಿ ಮಿಂಚಿದ ಸಂಜು ಸ್ಯಾಮ್ಸನ್‌!

ಸಂಜು ಸ್ಯಾಮ್ಸನ್‌, ಆಯುಷ್‌ ಮ್ಹಾತ್ರೆ ಅವರ ಜೊತೆಗೆ ಎರಡನೇ ವಿಕೆಟ್‌ಗೆ 68 ಎಸೆತಗಳಲ್ಲಿ 113 ರನ್‌ಗಳ ದೊಡ್ಡ ಜೊತೆಯಾಟವನ್ನು ಆಡಿದರು. ಆಯುಷ್‌ ಕೂಡ ಉತ್ತಮವಾಗಿ ಬ್ಯಾಟ್‌ ಮಾಡಿ 36 ಎಸೆತಗಳಲ್ಲಿ 4 ಸಿಕ್ಸರ್‌ ಹಾಗೂ 3 ಬೌಂಡರಿಯೊಂದಿಗೆ 59 ರನ್‌ಗಳನ್ನು ಚಚ್ಚಿದರು. ಕೊನೆಯಲ್ಲಿ ಶಿವಂ ದುಬೆ 10 ಎಸೆತಗಳಲ್ಲಿ 20 ರನ್‌ಗಳನ್ನು ಬಾರಿಸಿದ್ದರು.

ಅಂತಿಮವಾಗಿ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ, ತನ್ನ ಪಾಲಿನ 20 ಓವರ್‌ಗಳಿಗೆ ಎರಡು ವಿಕೆಟ್‌ಗಳ ನಷ್ಟಕ್ಕೆ 212 ರನ್‌ಗಳನ್ನು ಬಾರಿಸಿತು. ಆ ಮೂಲಕ ಎದುರಾಳಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡಕ್ಕೆ 213 ರನ್‌ಗಳ ಗುರಿಯನ್ನು ನೀಡಿತು. ಡೆಲ್ಲಿ ಪರ ಅಕ್ಷರ್‌ ಪಟೇಲ್‌ ಒಂದು ವಿಕೆಟ್‌ ಕಿತ್ತರು.