CSK vs KKR: ನಾಲ್ಕನೇ ಸೋಲಿನ ಬಳಿಕ ಕೆಕೆಆರ್ ನಾಯಕ ಅಜಿಂಕ್ಯ ರಹಾನೆ ಹೇಳಿದ್ದಿದು!
ಕೋಲ್ಕತಾ ನೈಟ್ ರೈಡರ್ಸ್ ತಂಡ ಮಂಗಳವಾರ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧವೂ ಸೋಲು ಅನುಭವಿಸಿತು. 193 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಕೆಕೆಆರ್, ಚೆನ್ನೈನಲ್ಲಿ ಹಿನ್ನಡೆಯನ್ನು ಅನುಭವಿಸಿ 32 ರನ್‌ಗಳಿಂದ ಪಂದ್ಯವನ್ನು ಸೋತಿದೆ. ನಾಯಕ ಅಜಿಂಕ್ಯ ರಹಾನೆ ಅವರು ಪಂದ್ಯದ ಬಳಿಕ ಹಲವು ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ.
ಕೆಕೆಆರ್ ನಾಲ್ಕನೇ ಸೋಲಿನ ಬಳಿಕ ಅಜಿಂಕ್ಯ ರಹಾನೆ ಬೇಸರ. -
ಚೆನ್ನೈ: ಪ್ರಸ್ತುತ ನಡೆಯುತ್ತಿರುವ 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯಲ್ಲಿ ನಾಲ್ಕನೇ ಸೋಲು (CSK vs KKR Match Highlights) ಅನುಭವಿಸಿದ ಕೋಲ್ಕತಾ ನೈಟ್ ರೈಡರ್ಸ್ ತಂಡ, ಇನ್ನೂ ಮೊದಲ ಗೆಲುವಿನ ಹುಡುಕಾಟದಲ್ಲಿದೆ. ಮಂಗಳವಾರ ಇಲ್ಲಿನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 32 ರನ್‌ಗಳ ಸೋಲಿನ ಬಳಿಕ ಕೆಕೆಆರ್ ನಾಯಕ ಅಜಿಂಕ್ಯ ರಹಾನೆ (Ajinkya Rahane) ಅವರು ಪ್ರತಿಕ್ರಿಯಿಸಿದ್ದಾರೆ. ಸತತ ಸೋಲುಗಳ ಹೊರತಾಗಿಯೂ ಕೋಲ್ಕತಾ ತಂಡದ ಆಟಗಾರರ ಸಕಾರಾತ್ಮಕವಾಗಿ ಉಳಿದು ಮುಂದಿನ ಪಂದ್ಯಗಳಲ್ಲಿ ಕಮ್‌ಬ್ಯಾಕ್ ಮಾಡಬೇಕೆಂದು ಆಗ್ರಹಿಸಿದ್ದಾರೆ.
ಪಂದ್ಯದ ನಂತರ ಮಾತನಾಡಿದ ಅಜಿಂಕ್ಯ ರಹಾನೆ ಅವರು, ಈ ಸೀಸನ್‌ನಲ್ಲಿ ಮುಂದುವರಿದಿರುವ ಸೋಲಿನ ಸರಣಿಯನ್ನು ಮುರಿಯಲು ತಂಡದ ಸಂಯೋಜನೆಯನ್ನು ಮರುಪರಿಶೀಲಿಸುವ ಅಗತ್ಯವಿದೆ ಎಂದು ಹೇಳಿದರು. ಕೋಲ್ಕತಾ ನೈಟ್ ರೈಡರ್ಸ್ ತಂಡ ಡ್ರೆಸ್ಸಿಂಗ್ ರೂಮ್‌ನಲ್ಲಿ ಕೂತು ತಮ್ಮ ತಂಡದ ಆಯ್ಕೆ ಹಾಗೂ ತಂತ್ರಗಳನ್ನು ಮರು ವಿಮರ್ಶೆ ಮಾಡಿಕೊಳ್ಳಬೇಕಾಗಿದೆ ಎಂದು ಅವರು ಅಭಿಪ್ರಾಯಪಟ್ಟರು. ಮಂಗಳವಾರ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಕೆಕೆಆರ್ 193 ರನ್‌ಗಳ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲವಾಗಿ 160 ರನ್‌ಗಳಿಗೆ ಸೀಮಿತವಾಯಿತು.
CSK vs KKR: ಸತತ ನಾಲ್ಕನೇ ಪಂದ್ಯ ಸೋತ ಕೋಲ್ಕತಾ, ಚೆನ್ನೈ ಸೂಪರ್ ಕಿಂಗ್ಸ್‌ಗೆ ಎರಡನೇ ಜಯ!
"ನಮ್ಮ ತಂಡದ ಸಂಯೋಜನೆ ಬಗ್ಗೆ ನೋಡಿದರೆ, ಹಿಂದಿನ ಪಂದ್ಯದಲ್ಲೂ ಮತ್ತು ಈ ಪಂದ್ಯದಲ್ಲೂ ನಾವು ಹೊಂದಿದ್ದ ಕಾಂಬಿನೇಶನ್ ಉತ್ತಮವಾಗಿತ್ತು ಎಂದು ಭಾವಿಸಿದ್ದೇನೆ. ಆದರೆ ಈಗ ಪರಿಸ್ಥಿತಿ ಕಠಿಣವಾಗಿದೆ. ನಾವು ಪಂದ್ಯಗಳನ್ನು ಗೆಲ್ಲುತ್ತಿಲ್ಲ ಎಂಬುದು ನಿಜ, ಅದು ಸವಾಲಿನ ಸಂಗತಿ. ಆದರೆ ತಂಡವಾಗಿ ನಾವು ಧನಾತ್ಮಕ ಮನೋಭಾವವನ್ನು ಕಾಪಾಡಿಕೊಳ್ಳಬೇಕು, ತಲೆಯನ್ನು ಎತ್ತಿಕೊಂಡೇ ಇರಬೇಕು ಮತ್ತು ಪ್ರಸ್ತುತ ಕ್ಷಣದ ಮೇಲೆ ಮಾತ್ರ ಗಮನಹರಿಸಬೇಕು,” ಎಂದು ಅಜಿಂಕ್ಯ ರಹಾನೆ ಪಂದ್ಯದನಂತರ ಪ್ರಸಾರಕರಿಗೆ ತಿಳಿಸಿದ್ದಾರೆ.
𝙏𝙪𝙧𝙣𝙞𝙣𝙜 the tide @ChennaiIPL's way 💛
— IndianPremierLeague (@IPL) April 14, 2026
Noor Ahmad is the Player of the Match for his impressive spell of bowling tonight 🕸️
Scorecard ▶️ https://t.co/jWkXVCPxj5#TATAIPL | #KhelBindaas | #CSKvKKR | @noor_ahmad_15 pic.twitter.com/BbGq2HBQJO
ಈ ಸೋಲು ನಾಯಕ ಅಜಿಂಕ್ಯ ರಹಾನೆ ಅವರ ಮೇಲೆ ಮತ್ತಷ್ಟು ಒತ್ತಡವನ್ನು ಹೆಚ್ಚಿಸಿದೆ, ಏಕೆಂದರೆ ಅವರು ಇದುವರೆಗೆ ತಂಡವನ್ನು ಗೆಲುವಿನತ್ತ ಪ್ರೇರೇಪಿಸಲು ಸಾಧ್ಯವಾಗಿಲ್ಲ. ಮಂಗಳವಾರ ಕೆಕೆಆರ್ ತಂಡದ ಬ್ಯಾಟಿಂಗ್ ಅತ್ಯಂತ ನಿರಾಸಾಜನಕವಾಗಿದ್ದು, ಪವರ್‌ಪ್ಲೇ ಅವಧಿಯಲ್ಲಿ ಕೇವಲ 36 ರನ್‌ಗಳನ್ನು ಮಾತ್ರ ಗಳಿಸಿತ್ತು. ಇದರ ಪರಿಣಾಮವಾಗಿ ಮಧ್ಯಮ ಕ್ರಮಾಂಕದ ಮೇಲೆ ಹೆಚ್ಚಿನ ಹೊರೆ ಬಿದ್ದಿತ್ತು. ಈ ಹಂತದಲ್ಲಿ ಸ್ಪಿನ್ ಬೌಲಿಂಗ್ ವಿರುದ್ಧ ಕೆಕೆಆರ್ ತಂಡದ ದುರ್ಬಲತೆ ಮತ್ತೊಮ್ಮೆ ಬಹಿರಂಗವಾಯಿತು.
CSK vs KKR: ಸತತ ಐದನೇ ಬಾರಿ ವಿಫಲರಾದ ಋತುರಾಜ್ ಗಾಯಕ್ವಾಡ್‌ಗೆ ಸಂಕಷ್ಟ!
ಅಫ್ಘಾನಿಸ್ತಾನದ ಸ್ಟಾರ್ ಸ್ಪಿನ್ನರ್ ನೂರ್ ಅಹ್ಮದ್ ಅವರು ಮಧ್ಯಮ ಓವರ್‌ಗಳಲ್ಲಿ ಕೆಕೆಆರ್ ಬ್ಯಾಟಿಂಗ್ ಬಲವನ್ು ಸಂಪೂರ್ಣವಾಗಿ ಕುಗ್ಗಿಸಿದರು. ಇವರ ಬೌಲಿಂಗ್‌ನಲ್ಲಿ ಅಜಿಂಕ್ಯ ರಹಾನೆ ಮತ್ತು ಕ್ಯಾಮೆರಾನ್ ಗ್ರೀನ್ ಸತತವಾಗಿ ವಿಕೆಟ್ ಕಳೆದುಕೊಂಡಿದ್ದರು.
ತಂಡದ ಸಂಯೋಜನೆಯಲ್ಲಿ ಬದಲಾವಣೆ ಅಗತ್ಯ
“ನಾವು ಡ್ರೆಸ್ಸಿಂಗ್ ರೂಮ್‌ನಲ್ಲಿ ಕೂತು ತಂಡದ ಸಂಯೋಜನೆ ಬಗ್ಗೆ ಚರ್ಚಿಸಬೇಕು. ಅಗತ್ಯಬಿದ್ದರೆ ಬದಲಾವಣೆಗಳನ್ನು ಮಾಡಬೇಕಾಗುತ್ತದೆ. ಕೆಲವೊಮ್ಮೆ ಆಟಗಾರರನ್ನು ಬೆಂಬಲಿಸಿದಾಗ ಫಲಿತಾಂಶಗಳು ನಮ್ಮ ಪರವಾಗಿ ಬರುತ್ತವೆ, ಆಗ ಅದು ಸರಿ. ಆದರೆ ಫಲಿತಾಂಶಗಳು ನಮ್ಮ ಪರವಾಗಿಲ್ಲದಿದ್ದರೆ, ತಂಡದ ಕಾಂಬಿನೇಶನ್ ಬಗ್ಗೆ ಮರುಚಿಂತನೆ ಮಾಡಲೇಬೇಕು. ಇದಕ್ಕಿಂತ ಹೊರತಾಗಿ, ಧನಾತ್ಮಕ ಮನೋಭಾವವನ್ನು ಉಳಿಸಿಕೊಂಡು ತಲೆಯನ್ನು ಎತ್ತಿಕೊಂಡೇ ಇರೋದು ಮುಖ್ಯ,” ಎಂದು ಅಜಿಂಕ್ಯ ರಹಾನೆ ತಿಳಿಸಿದ್ದಾರೆ.