CSK vs KKR: ಕೋಲ್ಕತಾ ನೈಟ್ ರೈಡರ್ಸ್‌ಗೆ ಸುಲಭವಾಗಿ ಶರಣಾದ ಚೆನ್ನೈ ಸೂಪರ್ ಕಿಂಗ್ಸ್!
CSK vs KKR match Highlights: ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಐದನೇ ಸೋಲು ಅನುಭವಿಸಿ ತವರು ಅಭಿಮಾನಿಗಳು ಎದುರು ಮುಖಭಂಗ ಅನುಭವಿಸಿದೆ. ಆದರೆ, ಕೆಕೆಆರ್ ಪ್ರಸಕ್ತ ಟೂರ್ನಿಯಲ್ಲಿ ಮೂರನೇ ಗೆಲುವು ತನ್ನದಾಗಿಸಿಕೊಂಡಿದೆ.

ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್‌ಗೆ ಸೋಲು.

ಚೆನ್ನೈ: ಎಂಎಸ್ ಧೋನಿ ನಾಯಕತ್ವದಲ್ಲಿಯೂ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ತಂಡ 2025ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಟೂರ್ನಿಯಲ್ಲಿ ಸೋಲಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಶುಕ್ರವಾರ ಇಲ್ಲಿನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದಿದ್ದ ಟೂರ್ನಿಯ 25ನೇ ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಸಿಎಸ್‌ಕೆ, ಎದುರಾಳಿ ಕೋಲ್ಕತಾ ನೈಟ್ ರೈಡರ್ಸ್(Kolkata Knight Riders) ವಿರುದ್ಧ 8 ವಿಕೆಟ್‌ಗಳಿಂದ ಹೀನಾಯ ಸೋಲು ಅನುಭವಿಸಿತು. ಆ ಮೂಲಕ ಹದಿನೆಂಟನೇ ಆವೃತ್ತಿಯಲ್ಲಿ ಸತತ ಐದನೇ ಸೋಲು ಅನುಭವಿಸಿತು. ಇದರೊಂದಿಗೆ ತವರು ಅಭಿಮಾನಿಗಳ ಎದುರು ಐದು ಬಾರಿ ಚಾಂಪಿಯನ್ಸ್ ಭಾರಿ ಮುಖಭಂಗ ಅನುಭವಿಸಿತು. ಆದರೆ, ಸುನೀಲ್ ನರೇನ್ ಸೇರಿದಂತೆ ಇತರೆ ಬೌಲರ್‌ಗಳ ಶಿಸ್ತುಬದ್ದ ಬೌಲಿಂಗ್ ದಾಳಿಯ ಸಹಾಯದಿಂದ ಅಜಿಂಕ್ಯ ರಹಾನೆ ನಾಯಕತ್ವದ ಕೆಕೆಆರ್, ಸಿಎಸ್‌ಕೆ ತಂಡವನ್ನು ಮಣಿಸಿ ಟೂರ್ನಿಯಲ್ಲಿ ಮೂರನೇ ಗೆಲುವನ್ನು ತನ್ನದಾಗಿಸಿಕೊಂಡಿತು.
ಸತತ ನಾಲ್ಕು ಪಂದ್ಯಗಳನ್ನು ಸೋತ ಬಳಿಕ ಚೆನ್ನೈ ನಾಯಕ ಋತುರಾಜ್ ಗಾಯಕ್ವಾಡ್ ಮೊಣಕೈ ಗಾಯದ ಕಾರಣ ಟೂರ್ನಿಯ ಇನ್ನುಳಿಂದ ಭಾಗದಿಂದ ಹೊರ ನಡೆದಿದ್ದಾರೆ. ಈ ಹಿನ್ನೆಲೆಯಲ್ಲಿ ಕೆಕೆಆರ್ ವಿರುದ್ಧದ ಪಂದ್ಯಕ್ಕೂ ಮುನ್ನ ಸಿಎಸ್‌ಕೆ ನಾಯಕತ್ವಕ್ಕೆ ಎಂಎಸ್ ಧೋನಿ ಮರಳಿದ್ದರು. ಅದರಂತೆ ಎಂಎಸ್ ಧೋನಿ ನಾಯಕತ್ವದಲ್ಲಾದರೂ ಚೆನ್ನೈ ಸೂಪರ್ ಕಿಂಗ್ಸ್ ತವರು ಅಂಗಣದಲ್ಲಿ ಗೆಲುವಿನ ಲಯಕ್ಕೆ ಮರಳಬಹುದೆಂದು ನಿರೀಕ್ಷೆ ಮಾಡಲಾಗಿತ್ತು. ಆದರೆ, ಥಲಾ ನಾಯಕತ್ವದಲ್ಲಿಯೂ ಸಿಎಸ್‌ಕೆ ತಂಡದ ಹಣೆಬರಹ ಬದಲಾಗಲಿಲ್ಲ. ಕೆಕೆಆರ್ ವಿರುದ್ದ ತವರು ಅಂಗಣದಲ್ಲಿ 8 ವಿಕೆಟ್‌ಳಿಂದ ಹೀನಾಯವಾಗಿ ಸೋಲು ಅನುಭವಿಸಿತು.
CSK vs KKR: ಎಂಎಸ್ ಧೋನಿಯನ್ನು ರವಿ ಶಾಸ್ತ್ರಿ ಅನ್‌ಕ್ಯಾಪ್ಡ್ ಪ್ಲೇಯರ್ ಎನ್ನಲು ಕಾರಣವೇನು?
103 ರನ್‌ಗಳನ್ನು ಕಲೆ ಹಾಕಿದ ಸಿಎಸ್‌ಕೆ
ಅಂದ ಹಾಗೆ ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾಗಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಎಲ್ಲಾ ಬ್ಯಾಟ್ಸ್‌ಮನ್‌ಗಳು ವೈಫಲ್ಯ ಅನುಭವಿಸಿದರು. ಮಧ್ಯಮ ಕ್ರಮಾಂಕದಲ್ಲಿ ವಿಜಯ್ ಶಂಕರ್ (29) ಹಾಗೂ ಶಿವಂ ದುಬೆ (31*) ಅವರನ್ನು ಹೊರತುಪಡಿಸಿ ಇನ್ನುಳಿದವರು ವೈಯಕ್ತಿಕವಾಗಿ 20 ರನ್‌ಗಳನ್ನು ಕೂಡ ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ರಚಿನ್ ರವೀಂದ್ರ, ಡೆವೋನ್ ಕಾನ್ವೆ, ರಾಹುಲ್ ತ್ರಿಪಾಠಿ, ಆರ್ ಅಶ್ವಿನ್, ರವೀಂದ್ರ ಜಡೇಜಾ ಹಾಗೂ ಇಂಪ್ಯಾಕ್ಟ್ ಪ್ಲೇಯರ್ ಆಗಿದ್ದ ಬಂದಿದ್ದ ದೀಪಕ್ ಹೂಡ ಕೂಡ ವೈಫಲ್ಯ ಅನುಭವಿಸಿದರು. ಮಧ್ಯಮ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದು ಕೊನೆಯವರೆಗೂ ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ಬ್ಯಾಟ್ ಮಾಡಿದ ಶಿವಂ ದುಬೆ, 29 ಎಸೆತಗಳಲ್ಲಿ ಅಜೇಯ 31 ರನ್ ಗಳಿಸಿ ಸಿಎಸ್‌ಕೆ ಮೊತ್ತವನ್ನು 100ರ ಗಡಿ ದಾಟಿಸಲು ನೆರವಾದರು. ಇಲ್ಲವಾದಲ್ಲಿ ಸಿಎಸ್‌ಕೆ ಮೂರಂಕಿ ಮೊತ್ತವನ್ನು ದಾಖಲಿಸಲು ಸಾಧ್ಯವಾಗುತ್ತಿರಲಿಲ್ಲ. 20 ಓವರ್‌ಗಳನ್ನು ಪೂರ್ಣಗೊಳಿಸಿದ ಚೆನ್ನೈ ತನ್ನ ಪಾಲಿನ 20 ಓವರ್‌ಗಳಿಗೆ 9 ವಿಕೆಟ್‌ಗಳ ನಷ್ಟಕ್ಕೆ 103 ರನ್‌ಗಳಿಗೆ ಸೀಮಿತವಾಯಿತು.
They hunted wickets as a pack 💜
— IndianPremierLeague (@IPL) April 11, 2025
5️⃣-star performance from #KKR bowlers that scripted their victory ⭐
Scorecard ▶ https://t.co/gPLIYGiUFV#TATAIPL | #CSKvKKR | @KKRiders pic.twitter.com/q3cz2anJ0A
ಕೆಕೆಆರ್ ತಂಡದ ಎಲ್ಲಾ ಬೌಲರ್‌ಗಳು ಕೂಡ ತಮ್ಮ-ತಮ್ಮ ಯೋಜನೆಗಳನ್ನು ಸಂಪೂರ್ಣವಾಗಿ ಕಾರ್ಯಗತಗೊಳಿಸಿದರು. ಅದರಲ್ಲಿಯೂ ವಿಶೇಷವಾಗಿ ಸುನೀಲ್ ನರೇನ್ ಮೂರು ವಿಕೆಟ್ ಕಿತ್ತರೆ, ವರುಣ್ ಚಕ್ರವರ್ತಿ ಹಾಗೂ ಹರ್ಷಿತ್ ರಾಣಾ ತಲಾ ಎರಡೆರಡು ವಿಕೆಟ್‌ಗಳನ್ನು ಕಿತ್ತರು. ವೈಭವ್ ಅರೋರಾ ಹಾಗೂ ಮೊಯೀನ್ ಅಲಿ ತಲಾ ಒಂದೊಂದು ವಿಕೆಟ್ ಕಿತ್ತರು.
Clinical with the ball, fiery with the bat 🫡 🔥
— IndianPremierLeague (@IPL) April 11, 2025
A superb all-round performance earns Sunil Narine the Player of the Match award 🔝
Scorecard ▶ https://t.co/gPLIYGimQn#TATAIPL | #CSKvKKR pic.twitter.com/ofafkXbOUO
ಕೆಕೆಆರ್‌ಗೆ 8 ವಿಕೆಟ್ ಸುಲಭ ಜಯ
104 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಕೋಲ್ಕತಾ ನೈಟ್ ರೈಡರ್ಸ್ ತಂಡ, ಸುನೀಲ್ ನರೇನ್ (44 ರನ್) ಅವರ ಬ್ಯಾಟಿಂಗ್ ಬಲದಿಂದ 10.1 ಓವರ್‌ಗಳಿಗೆ ಎರಡು ವಿಕೆಟ್ ನಷ್ಟಕ್ಕೆ 107 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ 8 ವಿಕೆಟ್‌ಗಳಿಂದ ಸುಲಭ ಗೆಲುವು ಪಡೆದುಕೊಂಡಿತು. 244ಕ್ಕೂ ಹೆಚ್ಚಿನ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಮಾಡಿದ ಸುನೀಲ್ ನರೇನ್ ಕೇವಲ 18 ಎಸೆತಗಳಲ್ಲಿ 44 ರನ್‌ಗಳನ್ನು ಗಳಿಸಿ ವಿಕೆಟ್ ಒಪ್ಪಿಸಿದರು. ಕ್ವಿಂಟನ್ ಡಿ ಕಾಕ್ 23 ಹಾಗೂ ಅಜಿಂಕ್ಯ ಅಹಾನೆ ಅಜೇಯ 20 ರನ್‌ಗಳನ್ನು ಗಳಿಸಿದರು.
ಸ್ಕೋರ್ ವಿವರ
ಚೆನ್ನೈ ಸೂಪರ್ ಕಿಂಗ್ಸ್: 20 ಓವರ್‌ಗಳಿಗೆ 103-9 (ಶಿವಂ ದುಬೆ 31*, ಕ್ವಿಂಟನ್ ಡಿ ಕಾಕ್ 23; ಸುನೀಲ್ ನರೇನ್ 13ಕ್ಕೆ 3, ಹರ್ಷಿತ್ ರಾಣಾ 16 ಕ್ಕೆ 2, ವರುಣ್ ಚಕ್ರವರ್ತಿ 22 ಕ್ಕೆ 2)
ಕೋಲ್ಕತಾ ನೈಟ್ ರೈಡರ್ಸ್: 10. 1 ಓವರ್‌ಗಳಿಗೆ 107-2 (ಸುನೀಲ್ ನರೇನ್ 44, ಕ್ವಿಂಟನ್ ಡಿ ಕಾಕ್ 23; ನೂರ್ ಅಹ್ಮದ್ 8ಕ್ಕೆ 1)
ಪಂದ್ಯ ಶ್ರೇಷ್ಠ ಪ್ರಶಸ್ತಿ: ಸುನೀಲ್ ನರೇನ್