ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

CSK vs KKR: ಎಂಎಸ್‌ ಧೋನಿಯನ್ನು ರವಿ ಶಾಸ್ತ್ರಿ ಅನ್‌ಕ್ಯಾಪ್ಡ್‌ ಪ್ಲೇಯರ್‌ ಎನ್ನಲು ಕಾರಣವೇನು?

Why MS DhoniS Called 'Uncapped': ಪ್ರಸ್ತುತ ನಡೆಯುತ್ತಿರುವ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ಮಾಜಿ ನಾಯಕ ಎಂಎಸ್‌ ಧೋನಿ ಅನ್‌ಕ್ಯಾಪ್ಡ್‌ ಆಟಗಾರನಾಗಿ ಆಡುತ್ತಿದ್ದಾರೆ. ಅದರಂತೆ ಶುಕ್ರವಾರ ಕೋಲ್ಕತಾ ನೈಟ್‌ ರೈಡರ್ಸ್‌ ವಿರುದ್ಧದ ಪಂದ್ಯಕ್ಕೂ ಮುನ್ನ ಟಾಸ್‌ ವೇಳೆ ಕ್ರಿಕೆಟ್‌ ನಿರೂಪಕ ರವಿ ಶಾಸ್ತ್ರಿ, ಎಂಎಸ್‌ ಧೋನಿಯನ್ನು ಅನ್‌ಕ್ಯಾಪ್ಡ್‌ ಆಟಗಾರ ಎಂದು ಕರೆದಿದ್ದರು.

ಎಂಎಸ್‌ ಧೋನಿಯನ್ನು ಅನ್‌ಕ್ಯಾಪ್ಡ್‌ ಆಟಗಾರ ಎನ್ನಲು ಕಾರಣವೇನು?

ಎಂಎಸ್‌ ಧೋನಿಯನ್ನು ಅನ್‌ಕ್ಯಾಪ್ಡ್‌ ಆಟಗಾರ ಎಂದ ರವಿ ಶಾಸ್ತ್ರಿ.

Profile Ramesh Kote Apr 11, 2025 9:42 PM

ಚೆನ್ನೈ: ಶುಕ್ರವಾರ ಇಲ್ಲಿನ ಎಂಎ ಚಿದಂಬರಂ ಕ್ರಿಕೆಟ್‌ ಕ್ರೀಡಾಂಣಗಣದಲ್ಲಿ ಕೋಲ್ಕತಾ ನೈಟ್‌ ರೈಡರ್ಸ್‌(Kolkata Knight Riders) ವಿರುದ್ಧದ ಪಂದ್ಯದಲ್ಲಿ ಟಾಸ್‌ಗೆ ಬರುತ್ತಿದ್ದಂತೆ ಭಾರತೀಯ ಕ್ರಿಕೆಟ್‌ ದಿಗ್ಗಜ ಎಂಎಸ್‌ ಧೋನಿ (MS Dhoni) ಅವರು 683 ದಿನಗಳ ಬಳಿಕ ಚೆನ್ನೈ ಸೂಪರ್‌ ಕಿಂಗ್ಸ್‌ (Chennai Super Kings) ತಂಡದ ನಾಯಕತ್ವಕ್ಕೆ ಮರಳಿದ್ದಾರೆ. ಋತುರಾಜ್‌ ಗಾಯಕ್ವಾಡ್‌ ಅವರು ಮೊಣಕೈ ಗಾಯದ ಕಾರಣ ಐಪಿಎಲ್‌ ಟೂರ್ನಿಯ ಇನ್ನುಳಿದ ಭಾಗದಿಂದ ಹೊರ ಬಿದಿದ್ದಾರೆ. ಈ ಕಾರಣದಿಂದಾಗಿ ಎಂಎಸ್‌ ಧೋನಿ ಸಿಎಸ್‌ಕೆ ನಾಯಕತ್ವಕ್ಕೆ ಮರಳಿದ್ದಾರೆ. ಅಂದ ಹಾಗೆ ಕೆಕೆಆರ್‌ ನಾಯಕ ಅಜಿಂಕ್ಯ ರಹಾನೆ ಜೊತೆ ಟಾಸ್‌ಗೆ ನಿಂತಿದ್ದ ಎಂಎಸ್‌ ಧೋನಿಯನ್ನು ಕ್ರಿಕೆಟ್‌ ನಿರೂಪಕ ಹಾಗೂ ಮಾಜಿ ಹೆಡ್‌ ಕೋಚ್‌ ರವಿ ಶಾಸ್ತ್ರಿ ಅನ್‌ಕ್ಯಾಪ್ಡ್‌ ಪ್ಲೇಯರ್‌ ಎಂದು ಪರಿಚಯಿಸಿದರು.

ಹದಿನೆಂಟನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಹೊಸ ನಿಯಮಗಳನ್ನು ಪರಿಚಯಿಸಲಾಗಿದೆ. ಅನ್‌ಕ್ಯಾಪ್ಡ್‌ ಆಟಗಾರ ನಿಯಮವನ್ನು ಹೊಸದಾಗಿ ಮತ್ತೊಮ್ಮೆ ಪರಿಚಯಿಸಲಾಗಿದೆ. ಕಳೆದ ಐದು ವರ್ಷಗಳಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಆಡದೆ ಅಥವಾ ಬಿಸಿಸಿಐ ಗುತ್ತಿಗೆ ಇಲ್ಲದ ಇಬ್ಬರು ಭಾರತೀಯ ಆಟಗಾರರನ್ನು ಅನ್‌ಕ್ಯಾಪ್ಡ್‌ ನಿಯಮದಡಿಯಲ್ಲಿ ಫ್ರಾಂಚೈಸಿ ಉಳಿಸಿಕೊಳ್ಳಬಹುದಾಗಿತ್ತು. ಅನ್‌ಕ್ಯಾಪ್ಡ್‌ ನಿಯಮದಡಿಯಲ್ಲಿ ಎಂಎಸ್‌ ಧೋನಿಯನ್ನು ಚೆನ್ನೈ ಫ್ರಾಂಚೈಸಿ ಉಳಿಸಿಕೊಂಡಿತ್ತು.

IPL 2025: ಚೆನ್ನೈ ಸೂಪರ್‌ ಕಿಂಗ್ಸ್‌ ನಾಯಕತ್ವಕ್ಕೆ ಮರಳಿದ ಎಂಎಸ್‌ ಧೋನಿ! ಋತುರಾಜ್‌ ಗಾಯಕ್ವಾಡ್‌ ಔಟ್‌

ಪಂದ್ಯದ ಟಾಸ್‌ ವೇಳೆ ಮಾತನಾಡಿದ್ದ ಎಂಎಸ್‌ ಧೋನಿ, ತಾವು ಮೊದಲು ಬ್ಯಾಟ್‌ ಮಾಡಲು ಸಿದ್ದರಿದ್ದೇವೆ ಎಂದು ಹೇಳಿದರು. ಇದಕ್ಕೆ ಕಾರಣವೇನೆಂದು ಅವರು ಸಂಕ್ಷಿಪ್ತವಾಗಿ ವಿವರಿಸಿದ್ದಾರೆ. "ಕಳೆದ ಕೆಲ ಪಂದ್ಯಗಳಲ್ಲಿ ನಾವು ಚೇಸ್‌ ಮಾಡಲು ಪ್ರಯತ್ನಿಸಿದ್ದೇವೆ ಹಾಗೂ ಅಲ್ಲಿನ ವಿಕೆಟ್‌ ಸ್ವಲ್ಪ ನಿಧಾನಗತಿಯಾಗಿ ಕೂಡಿದೆ ಎಂಬುದು ನಮಗೆ ಮನವರಿಕೆಯಾಗಿತ್ತು. ನೀವು ಉತ್ತಮ ಆರಂಭವನ್ನು ಪಡೆಯದಿದ್ದಾಗ, ಮದ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಒತ್ತಡದಲ್ಲಿ ಆಡಬೇಕಾಗುತ್ತದೆ," ಎಂದು ಹೇಳಿದ್ದರು.

ಋತುರಾಜ್‌ ಗಾಯಕ್ವಾಡ್‌ ಬಗ್ಗೆ ಮಾತನಾಡಿದ ಅವರು, "ಅವರ ಮೊಣಕೈ ಗಾಯವಾಗಿದೆ, ಈ ಕಾರಣದಿಂದಲೇ ಅವರು ಟೂರ್ನಿಯಿಂದ ಹೊರ ಬಿದ್ದಿದ್ದಾರೆ. ಅವರು ತುಂಬಾ ಅಧಿಕೃತ ಬ್ಯಾಟ್ಸ್‌ಮನ್, ಚೆಂಡನ್ನು ಚೆನ್ನಾಗಿ ಸಮಯಕ್ಕೆ ತಕ್ಕಂತೆ ಹೊಡೆಯುವ ವ್ಯಕ್ತಿ. ಅವರನ್ನು ನಾವು ದೊಡ್ಡದಾಗಿ ಕಳೆದುಕೊಳ್ಳುತ್ತಿದ್ದೇವೆ," ಎಂದು ತಿಳಿಸಿದ್ದಾರೆ.



"ಈ ಪಂದ್ಯ ತುಂಬಾ ಮುಖ್ಯ, ಪ್ರತಿಯೊಂದು ಪಂದ್ಯ ಕೂಡ ತುಂವಾ ಮುಖ್ಯವಾಗುತ್ತದೆ. ನಾವು ಹಲವು ಪಂದ್ಯಗಳನ್ನು ಸೋತಿದ್ದೇವೆ ಹಾಗೂ ಇದೀಗ ಮೂಲ ಅಂಶಗಳಿಗೆ ಅಂಟಿಕೊಂಡು ಆಡುವುದು ತುಂಬಾ ಮುಖ್ಯ. ಹೆಚ್ಚಿನ ಡಾಟ್‌ ಬಾಲ್‌ಗಳನ್ನು ಹಾಕುವುದು ಹಾಗೂ ನಮ್ಮ ಕ್ಯಾಚ್‌ಗಳನ್ನು ಪಡೆಯುವುದು. ಕೆಲ ಪಂದ್ಯಗಳನ್ನು ನಾವು ದೊಡ್ಡ ಅಂತರದಲ್ಲಿ ಸೋತಿದ್ದೇವೆ. ಆದರೆ, ಇನ್ನುಳಿದ ಪಂದ್ಯಗಳಲ್ಲಿ ಸಣ್ಣ-ಸಣ್ಣ ಅಂಶಗಳಲ್ಲಿ ನಾವು ಎಡವಿದ್ದೇವೆ. ಒಂದು ಓವರ್‌ನಲ್ಲಿ 20 ರನ್‌ ನೀಡುವುದಾಗಿದೆ. ನಮ್ಮ ಬ್ಯಾಟ್ಸ್‌ಮನ್‌ಗಳು ಅಧಿಕೃತವಾಗಿದ್ದಾರೆ, ಅವರು ಎಲ್ಲಾ ಎಸೆತಗಳನ್ನು ಸ್ಲಾಗ್‌ ಮಾಡಲು ಹೋಗುವುದಿಲ್ಲ. ಅವರು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಡಬೇಕಾದ ಅಗತ್ಯವಿದೆ. ಆರಂಭದಲ್ಲಿ ಹೆಚ್ಚಿನ ಬೌಂಡರಿಗಳನ್ನು ಸಿಡಿಸುವುದು ಅಥವಾ ಕೆಲ ವಿಕೆಟ್‌ಗಳನ್ನು ಪಡೆದು ಉತ್ತಮ ಆರಂಭ ಪಡೆಯಬೇಕಾಗುತ್ತದೆ," ಎಂದು ಎಂಎಸ್‌ ಧೋನಿ ಹೇಳಿದ್ದಾರೆ.

IPL 2025: 'ಸ್ವೀಕಾರಾರ್ಹವಲ್ಲ'-ಆರ್‌ಸಿಬಿ ಬ್ಯಾಟ್ಸ್‌ಮನ್‌ಗಳನ್ನು ಟೀಕಿಸಿದ ರಜತ್‌ ಪಾಟಿದಾರ್‌!

ಇತ್ತಂಡಗಳ ಪ್ಲೇಯಿಂಗ್‌ XI

ಚೆನ್ನೈ ಸೂಪರ್ ಕಿಂಗ್ಸ್ : ರಚಿನ್ ರವೀಂದ್ರ, ಡೆವೋನ್ ಕಾನ್ವೇ, ರಾಹುಲ್ ತ್ರಿಪಾಠಿ, ವಿಜಯ್ ಶಂಕರ್, ಶಿವಂ ದುಬೆ, ಎಂಎಸ್ ಧೋನಿ (ನಾಯಕ, ವಿಕೆಟ್‌ ಕೀಪರ್‌), ರವೀಂದ್ರ ಜಡೇಜಾ, ರವಿಚಂದ್ರನ್ ಅಶ್ವಿನ್, ನೂರ್ ಅಹ್ಮದ್, ಅನ್ಷುಲ್ ಕಾಂಬೋಜ್, ಖಲೀಲ್ ಅಹ್ಮದ್

ಕೋಲ್ಕತ್ತಾ ನೈಟ್ ರೈಡರ್ಸ್: ಕ್ವಿಂಟನ್ ಡಿ ಕಾಕ್ (ವಿಕೆಟ್‌ ಕೀಪರ್‌), ಸುನೀಲ್ ನರೇನ್, ಅಜಿಂಕ್ಯ ರಹಾನೆ (ನಾಯಕ), ವೆಂಕಟೇಶ್ ಅಯ್ಯರ್, ರಿಂಕು ಸಿಂಗ್, ಮೊಯೀನ್‌ ಅಲಿ, ಆಂಡ್ರೆ ರಸೆಲ್, ರಮಣ್‌ದೀಪ್ ಸಿಂಗ್, ಹರ್ಷಿತ್ ರಾಣಾ, ವೈಭವ್ ಅರೋರಾ, ವರುಣ್ ಚಕ್ರವರ್ತಿ