DC vs CSK: ಡೆಲ್ಲಿ ಕ್ಯಾಪಿಟಲ್ಸ್ ಪ್ಲೇಯಿಂಗ್ XIಗೆ ಮರಳಿದ ವೇಗಿ ಲುಂಗಿ ಎನ್ಗಿಡಿ!
DC vs CSK: ಮಂಗಳವಾರ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಹಣಾಹಣಿ ನಡೆಯುತ್ತಿದೆ. ಡೆಲ್ಲಿಗೆ ಒಳ್ಳೆಯ ಸುದ್ದಿ ಏನೆಂದರೆ ವೇಗದ ಬೌಲರ್ ಲುಂಗಿ ಎನ್‌ಗಿಡಿ ತಮ್ಮ ಫಿಟ್‌ನೆಸ್ ಮರಳಿ ಪಡೆದು ತಂಡಕ್ಕೆ ಕಮ್‌ಬ್ಯಾಕ್ ಮಾಡಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ಪ್ಲೇಯಿಂಗ್ Xiಗೆ ಮರಳಿದ ಲುಂಗಿ ಎನ್ಗಿಡಿ. -
ನವದೆಹಲಿ: ಪಂಜಾಬ್ ಕಿಂಗ್ಸ್ ವಿರುದ್ಧ ಕುತ್ತಿಗೆ ಭಾಗದಲ್ಲಿ ಗಾಯಕ್ಕೆ ತುತ್ತಾಗಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ವೇಗಿ ಲುಂಗಿ ಎನ್ಗಿಡಿ (Lungi Ngidi) ಅವರು ಸಂಪೂರ್ಣ ಫಿಟ್ ಆಗಿದ್ದಾರೆ. ಆ ಮೂಲಕ ಇಲ್ಲಿನ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪ್ಲೇಯಿಂಗ್ XIಗೆ ಮರಳಿದ್ದಾರೆ. ಅವರು ಕನ್ಕಷನ್ ನಿಯಮಗಳನ್ನು ಪೂರ್ಣಗೊಳಿಸಿದ ಬಳಿಕ ಅವರು ಡೆಲ್ಲಿ ತಂಡದ ಪ್ಲೇಯಿಂಗ್ XIಗೆ ಲಭ್ಯರಾಗಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಅಕ್ಷರ್ ಪಟೇಲ್ ತಮ್ಮ ತವರು ಮೈದಾನದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಪಂದ್ಯ ಮುಂದುವರಿದಂತೆ ಪಿಚ್ ನಿಧಾನವಾಗುತ್ತದೆ, ಎರಡನೇ ಇನಿಂಗ್ಸ್‌ನಲ್ಲಿ ರನ್ ಗಳಿಸುವುದು ಸವಾಲಿನ ಸಂಗತಿಯಾಗುತ್ತದೆ ಎಂದು ಅಕ್ಷರ್ ನಂಬಿದ್ದಾರೆ. ಚೆನ್ನೈ ತಂಡದ ನಾಯಕ ಋತುರಾಜ್ ಗಾಯಕ್ವಾಡ್ ಕೂಡ ಇದಕ್ಕೆ ಸಮ್ಮತಿ ಸೂಚಿಸಿದರು, ಮೇಲ್ಮೈ ಒಣಗಿದಂತೆ ಕಾಣುತ್ತದೆ ಮತ್ತು ಪಂದ್ಯ ನಡೆಯುತ್ತಿದ್ದಂತೆ ಸ್ಪಿನ್ನರ್‌ಗಳು ಮತ್ತು ನಿಧಾನಗತಿಯ ಬೌಲರ್‌ಗಳಿಗೆ ಸಹಾಯ ಮಾಡಬಹುದು ಎಂದು ಹೇಳಿದರು. ಡೆಲ್ಲಿ ಕ್ಯಾಪಿಟಲ್ಸ್ ಪಾಲಿಗೆ ಸಿಹಿ ಸುದ್ದಿ ಏನೆಂದರೆ ಗಾಯಾಳು ಲುಂಗಿ ಎನ್ಗಿಡಿ ಮರಳಿದ್ದು. ಅವರು ತಮ್ಮ ಕನ್ಕ್ಯಷನ್ ಪ್ರೋಟೋಕಾಲ್‌ಗಳನ್ನು ಪೂರ್ಣಗೊಳಿಸಿದ ನಂತರ ಪ್ಲೇಯಿಂಗ್ XIನಲ್ಲಿ ಕೈಲ್ ಜೇಮಿಸನ್ ಸ್ಥಾನವನ್ನು ಅಲಂಕರಿಸಿದ್ದಾರೆ.
IPL 2026: ʻಒಂದು ಕಾಲದಲ್ಲಿ ನನ್ನನ್ನು ಟೆಸ್ಟ್ ಕ್ರಿಕೆಟ್‌ಗೆ ಸೀಮಿತ ಮಾಡಿದ್ದರುʼ-ಕೆಎಲ್ ರಾಹುಲ್!
ದಕ್ಷಿಣ ಆಫ್ರಿಕಾದ ವೇಗಿ ಲುಂಗಿ ಎನ್‌ಗಿಡಿ ಹಿಂದಿನ ಎರಡು ಪಂದ್ಯಗಳಿಗೆ ಹೊರಗುಳಿದಿದ್ದರು. ಏಪ್ರಿಲ್ 25 ರಂದು, ಪಂಜಾಬ್ ಕಿಂಗ್ಸ್ ವಿರುದ್ಧ ಫೀಲ್ಡಿಂಗ್ ವೇಳೆ ಅವರ ತಲೆಗೆ ತೀವ್ರ ಗಾಯವಾಗಿದ್ದು, ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಅವರ ಗಾಯವು ತುಂಬಾ ಗಂಭೀರವಾಗಿತ್ತು. ಬಿಸಿಸಿಐ ನಿಯಮಗಳಿಗೆ ಅನುಸಾರವಾಗಿ ಆರು ದಿನಗಳ ಕಡ್ಡಾಯ ಚೇತರಿಕೆಯ ಅವಧಿಯನ್ನು ಪೂರ್ಣಗೊಳಿಸಿದ ನಂತರ, ಬೌಲಿಂಗ್ ಕೋಚ್ ಮುನಾಫ್ ಪಟೇಲ್ ಅವರು 100% ಫಿಟ್ ಆಗಿದ್ದಾರೆ ಎಂದು ದೃಢಪಡಿಸಿದರು. ಎನ್‌ಗಿಡಿ ಮರಳುವಿಕೆಯೊಂದಿಗೆ, ಮಿಚೆಲ್ ಸ್ಟಾರ್ಕ್ ಮತ್ತು ಟಿ. ನಟರಾಜನ್ ಒಳಗೊಂಡ ಡೆಲ್ಲಿಯ ವೇಗದ ದಾಳಿ ಇನ್ನಷ್ಟು ಬಲಿಷ್ಠವಾಗಿ ಕಾಣುತ್ತಿದೆ ಹಾಗೂ ಸಿಎಸ್‌ಕೆ ತಂಡದ ಅಗ್ರ ಕ್ರಮಾಂಕಕ್ಕೆ ಗಮನಾರ್ಹ ಸವಾಲುಗಳನ್ನು ಒಡ್ಡಬಹುದು.
Great to see you back in action, Lungi 🥹 pic.twitter.com/fLy4OmZkQm
— Delhi Capitals (@DelhiCapitals) May 5, 2026
ಮತ್ತೊಂದೆಡೆ, ತಮ್ಮ ಹಿಂದಿನ ಪಂದ್ಯದಲ್ಲಿ ಗೆಲುವು ಸಾಧಿಸಿದರೂ, ಚೆನ್ನೈ ಸೂಪರ್ ಕಿಂಗ್ಸ್ ತಂಡವು ದೊಡ್ಡ ಹಿನ್ನಡೆಯನ್ನು ಅನುಭವಿಸಿದೆ. ಸ್ಟಾರ್ ಆಲ್‌ರೌಂಡರ್ ರಾಮಕೃಷ್ಣ ಘೋಷ್ ಗಾಯದ ಕಾರಣದಿಂದಾಗಿ ತಂಡದಿಂದ ಹೊರಗುಳಿದಿದ್ದು, ಇದು ತಂಡದ ಸಮತೋಲನವನ್ನು ಸ್ವಲ್ಪಮಟ್ಟಿಗೆ ಅಡ್ಡಿಪಡಿಸಿದೆ. ಅವರ ಅನುಪಸ್ಥಿತಿಯಿಂದ ಉಂಟಾದ ನಷ್ಟವನ್ನು ತುಂಬಲು ನಾಯಕ ಗಾಯಕ್ವಾಡ್, ಎಡಗೈ ಸ್ಪಿನ್ನರ್ ಅಕೀಲ್ ಹುಸೇನ್ ಮತ್ತು ಎಡಗೈ ವೇಗಿ ಗುರ್ಜಪ್ನೀತ್ ಸಿಂಗ್ ಅವರನ್ನು ಆಡುವ XIಗೆ ಕರೆತಂದಿದ್ದಾರೆ. ಚೆನ್ನೈ ಪ್ರಸ್ತುತ ಸ್ಪಿನ್‌ಗೆ ಅನುಗುಣವಾಗಿ ತನ್ನ ಬೌಲಿಂಗ್ ದಾಳಿಯನ್ನು ರೂಪಿಸುವತ್ತ ಗಮನಹರಿಸುತ್ತಿದ್ದು, ಪಿಚ್‌ನ ಒಣ ಪರಿಸ್ಥಿತಿಯನ್ನು ಸಂಪೂರ್ಣವಾಗಿ ಬಳಸಿಕೊಳ್ಳುವ ಗುರಿಯನ್ನು ಹೊಂದಿದೆ.
Battle ready! 🥳#WhistlePodu #DCvCSK pic.twitter.com/r1xo6FheTz
— Chennai Super Kings (@ChennaiIPL) May 5, 2026
ಉಭಯ ತಂಡಗಳ ಪ್ಲೇಯಿಂಗ್ XI
ಚೆನ್ನೈ ಸೂಪರ್ ಕಿಂಗ್ಸ್ : ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಋತುರಾಜ್ ಗಾಯಕ್ವಾಡ್ (ನಾಯಕ), ಊರ್ವಿಲ್ ಪಟೇಲ್, ಕಾರ್ತಿಕ್ ಶರ್ಮಾ, ಡೆವಾಲ್ಡ್ ಬ್ರೆವಿಸ್, ಜೇಮಿ ಓವರ್ಟನ್, ಅಕೀಲ್ ಹುಸೇನ್, ನೂರ್ ಅಹ್ಮದ್, ಅನ್ಶುಲ್ ಕಾಂಬೋಜ್, ಮುಖೇಶ್ ಚೌಧರಿ, ಗುರ್ಜಪ್ನೀತ್ ಸಿಂಗ್
ಡೆಲ್ಲಿ ಕ್ಯಾಪಿಟಲ್ಸ್ : ಕೆಎಲ್ ರಾಹುಲ್(ವಿಕೆಟ್ ಕೀಪರ್), ಪಥುಮ್ ನಿಸಾಂಕ, ಕರುಣ್ ನಾಯರ್, ಟ್ರಿಸ್ಟನ್ ಸ್ಟಬ್ಸ್, ನಿತೀಶ್ ರಾಣಾ, ಅಕ್ಷರ್ ಪಟೇಲ್ (ನಾಯಕ), ಅಶುತೋಷ್ ಶರ್ಮಾ, ಮಿಚೆಲ್ ಸ್ಟಾರ್ಕ್, ಕುಲ್‌ದೀಪ್ ಯಾದವ್, ಲುಂಗಿ ಎನ್‌ಗಿಡಿ, ಟಿ ನಟರಾಜನ್