ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

GT vs LSG: ಗುಜರಾತ್‌ ಟೈಟನ್ಸ್‌ಗೆ ಶಾಕ್‌ ನೀಡಿದ ಲಖನೌ ಸೂಪರ್‌ ಜಯಂಟ್ಸ್‌!

GT vs LSG Match Highlights: ಇಲ್ಲಿನ ಏಕನಾ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಶನಿವಾರ ನಡೆದಿದ್ದ 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ 26ನೇ ಪಂದ್ಯದಲ್ಲಿ ಗುಜರಾತ್‌ ಟೈಟನ್ಸ್‌ ವಿರುದ್ಧ ಲಖನೌ ಸೂಪರ್‌ ಜಯಂಟ್ಸ್‌ ತಂಡ 6 ವಿಕೆಟ್‌ಗಳ ಗೆಲುವು ಪಡೆಯಿತು. ಈ ಸೋಲಿನೊಂದಿಗೆ ಗುಜರಾತ್‌ ಎರಡನೇ ಸ್ಥಾನಕ್ಕೆ ಕುಸಿದರೆ, ಲಖನೌ ಮೂರನೇ ಸ್ಥಾನಕ್ಕೇರಿದೆ.

ಗುಜರಾತ್‌ ಟೈಟನ್ಸ್‌ಗೆ ಮಣ್ಣು ಮುಕ್ಕಿಸಿದ ಲಖನೌ ಸೂಪರ್‌ ಜಯಂಟ್ಸ್‌!

ಗುಜರಾತ್‌ ಟೈಟನ್ಸ್‌ ವಿರುದ್ಧ ಲಖನೌ ಸೂಪರ್‌ ಜಯಂಟ್ಸ್‌ ತಂಡಕ್ಕೆ 6 ವಿಕೆಟ್‌ ಜಯ.

Profile Ramesh Kote Apr 12, 2025 8:42 PM

ಲಖನೌ: ಏಡೆನ್‌ ಮಾರ್ಕ್ರಮ್‌ (58 ರನ್‌) ಹಾಗೂ ನಿಕೋಲಸ್‌ ಪೂರನ್‌ (61) ಅವರ ಸ್ಪೋಟಕ ಅರ್ಧಶತಕಗಳ ಬಲದಿಂದ ಲಖನೌ ಸೂಪರ್‌ ಜಯಂಟ್ಸ್‌ ತಂಡ, 2025ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2025) ಟೂರ್ನಿಯ 26ನೇ ಪಂದ್ಯದಲ್ಲಿ(GT vs LSG) ಗುಜರಾತ್‌ ಟೈಟನ್ಸ್‌ ವಿರುದ್ಧ 6 ವಿಕೆಟ್‌ಗಳ ಗೆಲುವು ಪಡೆಯಿತು. ಆ ಮೂಲಕ ಹದಿನೆಂಟನೇ ಆವೃತ್ತಿಯ ಟೂರ್ನಿಯಲ್ಲಿ ನಾಲ್ಕನೇ ಗೆಲುವು ಪಡೆದ ಎಲ್‌ಎಸ್‌ಜಿ (Lucknow Super Giants) ಟೂರ್ನಿಯ ಪಾಯಿಂಟ್ಸ್‌ ಟೇಬಲ್‌ನಲ್ಲಿ ಮೂರನೇ ಸ್ಥಾನಕ್ಕೆ ಲಗ್ಗೆ ಇಟ್ಟಿದೆ. ಆದರೆ, ಎರಡನೇ ಸೋಲು ಅನುಭವಿಸಿದ ಶುಭಮನ್‌ ಗಿಲ್‌ ನಾಯಕತ್ವದ ಜಿಟಿ, ಪಾಯಿಂಟ್ಸ್‌ ಟೇಬಲ್‌ನಲ್ಲಿ ಎರಡನೇ ಸ್ಥಾನಕ್ಕೆ ಇಳಿದಿದೆ.

ಇಲ್ಲಿನ ಏಕನಾ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಗುಜರಾತ್‌ ಟೈಟನ್ಸ್‌ ನೀಡಿದ್ದ 181 ರನ್‌ಗಳ ಗುರಿಯನ್ನು ಹಿಂಬಾಲಿಸಿದ್ದ ಲಖನೌ ಸೂಪರ್‌ ಜಯಂಟ್ಸ್‌ ತಂಡ, 19.3 ಓವರ್‌ಗಳಿಗೆ 4 ವಿಕೆಟ್‌ಗಳ ನಷ್ಟಕ್ಕೆ 186 ರನ್‌ಗಳನ್ನು ಗಳಿಸಿ 6 ವಿಕೆಟ್‌ಗಳ ಗಲುವು ಪಡೆಯಿತು. ಲಖನೌ ಪರ ಇನಿಂಗ್ಸ್‌ ಆರಂಭಿಸಿದ್ದ ಏಡೆನ್‌ ಮಾರ್ಕ್ರಮ್‌ ಸ್ಪೋಟಕ ಬ್ಯಾಟ್‌ ಮಾಡಿದ್ದರು. ಇವರು ಆಡಿದ್ದ 31 ಎಸೆತಗಳಲ್ಲಿ ಒಂದು ಸಿಕ್ಸರ್‌ ಹಾಗೂ 9 ಬೌಂಡರಿಗಳೊಂದಿಗೆ 58 ರನ್‌ಗಳನ್ನು ಸಿಡಿಸಿದರು. ಇವರು 187ರ ಸ್ಟ್ರೈಕ್‌ ರೇಟ್‌ನಲ್ಲಿ ಬ್ಯಾಟ್‌ ಬೀಸಿದ್ದು ಎಲ್ಲರ ಗಮನವನ್ನು ಸೆಳೆದಿದೆ. ಆ ಮೂಲಕ ಲಖನೌ ತಂಡದ ಗೆಲುವಿಗೆ ನೆರವಾಗುವ ಮೂಲಕ ಮಾರ್ಕ್ರಮ್‌ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

IPL 2025: ಅರ್ಧಶತಕ ಸಿಡಿಸಿ ಗುಜರಾತ್‌ ಟೈಟನ್ಸ್‌ ಪರ ನೂತನ ದಾಖಲೆ ಬರೆದ ಶುಭಮನ್‌ ಗಿಲ್‌!

ನಿಕೋಲಸ್‌ ಪೂರನ್‌ ಸ್ಪೋಟಕ ಅರ್ಧಶತಕ

ಮಿಚೆಲ್‌ ಮಾರ್ಷ್‌ ಅನುಪಸ್ಥಿತಿಯಲ್ಲಿ ಏಡೆನ್‌ ಮಾರ್ಕ್ರಮ್‌ ಜೊತೆ ಇನಿಂಗ್ಸ್‌ ಆರಂಭಿಸಿದ್ದ ನಾಯಕ ರಿಷಭ್‌ ಪಂತ್‌ 21 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು. ಆದರೆ, ಎರಡನೇ ವಿಕೆಟ್‌ಗೆ ಏಡೆನ್‌ ಮಾರ್ಕ್ರಮ್‌ ಗೆ ಜೊತೆಯಾದ ನಿಕೋಲಸ್‌ ಪೂರನ್‌, ಕಳೆದ ಪಂದ್ಯಗಳಂತೆ ಸ್ಪೋಟಕ ಬ್ಯಾಟ್‌ ಮಾಡಿದರು. ಈ ಜೋಡಿ ಮುರಿಯದ ಎರಡನೇ ವಿಕೆಟ್‌ಗೆ 58 ರನ್‌ಗಳನ್ನು ಕಲೆ ಹಾಕಿತ್ತು. ಸ್ಪೋಟಕ ಬ್ಯಾಟ್‌ ಮಾಡಿದ್ದ ನಿಕೋಲಸ್‌ ಪೂರನ್‌, 34 ಎಸೆತಗಳಲ್ಲಿ 7 ಸಿಕ್ಸರ್‌ ಹಾಗೂ ಒಂದು ಬೌಂಡರಿಯೊಂದಿಗೆ 61 ರನ್‌ ಸಿಡಿಸಿದ್ದರು. ಆ ಮೂಲಕ ತಂಡದ ಮೊತ್ತವನ್ನು 150ರ ಗಡಿಯನ್ನು ದಾಟಿಸಿ ವಿಕೆಟ್‌ ಒಪ್ಪಿಸಿದ್ದರು. ಕೊನೆಯಲ್ಲಿ 20 ಎಸೆತಗಳಲ್ಲಿ ಅಜೇಯ 28 ರನ್‌ ಗಳಿಸಿ ಆಯುಷ್‌ ಬದೋನಿ ಲಖನೌ ತಂಡವನ್ನು ಗೆಲ್ಲಿಸಿದರು. ಗುಜರಾತ್‌ ಟೈಟನ್ಸ್‌ ಪರ ಅತ್ಯುತ್ತಮ ಬೌಲಿಂಗ್‌ ಪ್ರದರ್ಶನ ತೋರಿದ ಪ್ರಸಿಧ್‌ ಕೃಷ್ಣ ಎರಡು ವಿಕೆಟ್‌ ಕಿತ್ತರು.

180 ರನ್ ಕಲೆ ಹಾಕಿದ ಗುಜರಾತ್‌ ಟೈಟನ್ಸ್‌

ಇದಕ್ಕೂ ಮುನ್ನ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾಗಿದ್ದ ಗುಜರಾತ್‌ ಟೈಟನ್ಸ್‌ ತಂಡ, ಶುಭಮನ್‌ ಗಿಲ್‌ ಹಾಗೂ ಸಾಯಿ ಸುದರ್ಶನ್‌ ಅವರ ಸ್ಪೋಟಕ ಅರ್ಧಶತಕಗಳ ಬಲದಿಂದ ತನ್ನ ಪಾಲಿನ 20 ಓವರ್‌ಗಳಿಗೆ 6 ವಿಕೆಟ್‌ಗಳ ನಷ್ಟಕ್ಕೆ 180 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ಎದುರಾಳಿ ಲಖನೌ ಸೂಪರ್‌ ಜಯಂಟ್ಸ್‌ ತಂಡಕ್ಕೆ 181 ರನ್‌ಗಳ ಗುರಿಯನ್ನು ನೀಡಿತ್ತು.

IPL 2025: ಗುಜರಾತ್‌ ಟೈಟನ್ಸ್‌ಗೆ ಆಘಾತ, ಐಪಿಎಲ್‌ ಟೂರ್ನಿಯಿಂದ ಗ್ಲೆನ್‌ ಫಿಲಿಪ್ಸ್‌ ಔಟ್‌!

ಗಿಲ್‌-ಸುದರ್ಶನ್‌ ಜುಗಲ್‌ಬಂದಿ

ಗುಜರಾತ್‌ ಟೈಟನ್ಸ್‌ ಪರ ಇನಿಂಗ್ಸ್‌ ಆರಂಭಿಸಿದ್ದ ಸಾಯಿ ಸುದರ್ಶನ್‌ ಹಾಗೂ ಶುಭಮನ್‌ ಗಿಲ್‌ ಸ್ಪೋಟಕ ಬ್ಯಾಟಿಂಗ್‌ ಪ್ರದರ್ಶನ ತೋರಿದರು. ಈ ಜೋಡಿ ಮುರಯದ ಮೊದಲನೇ ವಿಕೆಟ್‌ಗೆ 120 ರನ್‌ಗಳನ್ನು ಕಲೆ ಹಾಕಿತ್ತು. ಆ ಮೂಲಕ ಗುಜರಾತ್‌ ಟೈಟನ್ಸ್‌ಗೆ ಭರ್ಜರಿ ಆರಂಭವನ್ನು ನೀಡಿತ್ತು. ಸ್ಪೋಟಕ ಬ್ಯಾಟ್‌ ಮಾಡಿದ್ದ ಸಾಯಿ ಸುದರರ್ಶನ್‌, 37 ಎಸೆತಗಳಲ್ಲಿ 56 ರನ್‌ಗಳನ್ನು ಸಿಡಿಸಿದ್ದರೆ, ನಾಯಕ ಶುಭಮನ್‌ ಗಿಲ್‌ 38 ಎಸೆತಗಳಲ್ಲಿ 60 ರನ್‌ಗಳನ್ನು ಸಿಡಿಸಿದ್ದರು. ಈ ಇಬ್ಬರೂ ಬ್ಯಾಟ್ಸ್‌ಮನ್‌ಗಳು ವಿಕೆಟ್‌ ಒಪ್ಪಿಸಿದ್ದ ವೇಳೆ ಗುಜರಾತ್‌ ಉತ್ತಮ ಸ್ಥಿತಿಯಲ್ಲಿತ್ತು.

ಮಧ್ಯಮ ಕ್ರಮಾಂಕ ವೈಫಲ್ಯ

ಆರಂಭಿಕ ಬ್ಯಾಟ್ಸ್‌ಮನ್‌ಗಳು ವಿಕೆಟ್‌ ಒಪ್ಪಿಸಿದ ಬಳಿಕ ಗುಜರಾತ್‌ ಟೈಟನ್ಸ್‌ ತಂಡದ ಮಧ್ಯಮ ಬ್ಯಾಟ್ಸ್‌ಮನ್‌ಗಳನ್ನು ಲಖನೌ ಬೌಲರ್‌ಗಳು ಕಟ್ಟಿ ಹಾಕಿದರು. ವಾಷಿಂಗ್ಟನ್‌ ಸುಂದರ್‌ (2), ಜೋಸ್‌ ಬಟ್ಲರ್‌ (16), ಶೆರ್ಫೆನ್‌ ಋದರ್‌ಫೋರ್ಡ್‌ (22), ಶಾರೂಖ್‌ ಖಾನ್‌ (11) ಹಾಗೂ ರಾಹುಲ್‌ ತೆವಾಟಿಯಾ (0) ವೈಫಲ್ಯ ಅನುಭವಿಸಿತು. ಅತ್ಯುತ್ತಮ ಬೌಲ್‌ ಮಾಡಿದ ಶಾರ್ದುಲ್ ಠಾಕೂರ್‌ ಹಾಗೂ ರವಿ ಬಿಷ್ಣೋಯ್‌ ತಲಾ ಎರಡೆರಡು ವಿಕೆಟ್‌ ಪಡೆದರು.