IPL 2025: ಗುಜರಾತ್ ಟೈಟನ್ಸ್‌ಗೆ ಆಘಾತ, ಐಪಿಎಲ್ ಟೂರ್ನಿಯಿಂದ ಗ್ಲೆನ್ ಫಿಲಿಪ್ಸ್ ಔಟ್!
Glenn Phillips Ruled Out Of IPL 2025: ಪ್ರಸ್ತುತ ನಡೆಯುತ್ತಿರುವ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರುತ್ತಿರುವ ಗುಜರಾತ್ ಟೈಟನ್ಸ್ ತಂಡಕ್ಕೆ ಭಾರಿ ಹಿನ್ನಡೆಯಾಗಿದೆ. ತೊಡೆಸಂದು ಗಾಯಕ್ಕೆ ತುತ್ತಾಗಿರುವ ಕಾರಣ ನ್ಯೂಜಿಲೆಂಡ್ ಆಲ್‌ರೌಂಡರ್ ಟೂರ್ನಿಯ ಇನ್ನೂಳಿದ ಭಾಗದಿಂದ ಹೊರ ನಡೆದಿದ್ದಾರೆಂದು ವರದಿಯಾಗಿದೆ.

2025ರ ಐಪಿಎಲ್ ಟೂರ್ನಿಯಿಂದ ಗ್ಲೆನ್ ಫಿಲಿಪ್ಸ್ ಔಟ್

ನವದೆಹಲಿ: ತೊಡೆ ಸಂದು ಗಾಯಕ್ಕೆ ತುತ್ತಾಗಿರುವ ಗುಜರಾತ್ ಟೈಟನ್ಸ್ ( Gujarat Titans) ಆಲ್‌ರೌಂಡರ್ ಗ್ಲೆನ್ ಫಿಲಿಪ್ಸ್ (Glenn Phillips) ಅವರು 2025ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಟೂರ್ನಿಯ ಇನ್ನುಳಿದ ಭಾಗದಿಂದ ಹೊರ ಬಿದ್ದಿದ್ದಾರೆಂದು ವರದಿಯಾಗಿದೆ. ಅಲ್ಲದೆ ಕಿವೀಸ್ ಆಲ್‌ರೌಂಡರ್ ಏಪ್ರಿಲ್ 12 ರಂದು ಫ್ರಾಂಚೈಸಿಯನ್ನು ತೊರೆದು ತವರಿಗೆ ಮರಳಿದ್ದಾರೆಂದು ಹೇಳಲಾಗುತ್ತಿದೆ. ಆದರೆ, ಪ್ರಸಕ್ತ ಆವೃತ್ತಿಯಲ್ಲಿ ಗ್ಲೆನ್ ಫಿಲಿಪ್ಸ್ ಅವರು ಗುಜರಾತ್ ಟೈಟನ್ಸ್ ಪರ ಒಂದೇ ಒಂದು ಪಂದ್ಯವನ್ನು ಕೂಡ ಆಡಲಿಲ್ಲ. ಆದರೆ, ಸನ್‌ರೈಸರ್‌ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಅವರು ಸಬ್‌ಸ್ಟಿಟ್ಯೂಟ್ ಫೀಲ್ಡರ್ ಆಗಿ ಕಾಣಿಸಿಕೊಂಡಿದ್ದರು. ಅನಿರೀಕ್ಷಿತವಾಗಿ ಅವರು ಗಾಯಕ್ಕೆ ತುತ್ತಾಗಿ ಟೂರ್ನಿಯಿಂದ ಹೊರ ನಡೆದಿರುವುದು ಗುಜರಾತ್ ಟೈಟನ್ಸ್‌ಗೆ ಭಾರಿ ಹಿನ್ನಡೆಯನ್ನು ತಂದಿದೆ.
ಗುಜರಾತ್ ಟೈಟನ್ಸ್ ಅಥವಾ ಐಪಿಎಲ್ ಗ್ಲೆನ್ ಫಿಲಿಪ್ಸ್ ಗಾಯದ ಬಗ್ಗೆ ಇನ್ನೂ ಯಾವುದೇ ಮಾಹಿತಿಯನ್ನು ನೀಡಿಲ್ಲ. ಆದರೆ, ಅತಿ ಶೀಘ್ರದಲ್ಲಿಯೇ ಅವರು ಗಾಯದ ಬಗ್ಗೆ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ. ಕಳೆದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಗ್ಲೆನ್ ಫಿಲಿಪ್ಸ್ ಅವರು ನ್ಯೂಜಿಲೆಂಡ್ ಪರ ಅತ್ಯುತ್ತಮ ಪ್ರದರ್ಶನವನ್ನು ತೋರಿದ್ದರು. ಆ ಮೂಲಕ ನ್ಯೂಜಿಲೆಂಡ್ ತಂಡ ಸೆಮಿಫೈನಲ್‌ಗೆ ಪ್ರವೇಶ ಮಾಡಲು ನೆರವು ನೀಡಿದ್ದರು. ಬ್ಯಾಟಿಂಗ್ ಹಾಗೂ ಬೌಲಿಂಗ್ ಅಲ್ಲದೆ ಫೀಲ್ಡಿಂಗ್‌ನಲ್ಲಿಯೂ ಅವರು ಗಮನಾರ್ಹ ಪ್ರದರ್ಶನವನ್ನು ತೋರಿದ್ದರು.
IPL 2025: ಸತತ 5 ಪಂದ್ಯ ಸೋತ ಚೆನ್ನೈ ತಂಡದ ಪ್ಲೇ ಆಫ್ ಲೆಕ್ಕಾಚಾರ ಹೇಗಿದೆ?
ಕಳೆದ ವರ್ಷ ನಡೆದಿದ್ದ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಮೆಗಾ ಹರಾಜಿನಲ್ಲಿ ಗ್ಲೆನ್ ಫಿಲಿಪ್ಸ್ ಅವರನ್ನು ಗುಜರಾತ್ ಟೈಟನ್ಸ್ ತಂಡ ಮೂಲ ಬೆಲೆ 2 ಕೋಟಿ ರೂ. ಗಳಿಗೆ ಖರೀದಿಸಿತ್ತು. ಅಂದ ಹಾಗೆ ಇದೀಗ ಅವರು ಗಾಯದ ಕಾರಣ ಟೂರ್ನಿಯಿಂದ ಹೊರ ಬಿದ್ದಿದ್ದಾರೆ. ಇವರ ಸ್ಥಾನಕ್ಕೆ ಬದಲಿ ಆಟಗಾರನನ್ನು ಇನ್ನೂ ಗುಜರಾತ್ ಫ್ರಾಂಚೈಸಿ ಸೂಚಿಸಿಲ್ಲ.
ಅದ್ಭುತ ಫಾರ್ಮ್‌ನಲ್ಲಿರುವ ಗುಜರಾತ್ ಟೈಟನ್ಸ್
ಶುಭಮನ್ ಗಿಲ್ ನಾಯಕತ್ವದಲ್ಲಿ ಗುಜರಾತ್ ಟೈಟನ್ಸ್ ತಂಡ ಅತ್ಯುತ್ತಮ ಪ್ರದರ್ಶನವನ್ನು ತೋರುತ್ತಿದೆ. ಇಲ್ಲಿಯ ತನಕ ಆಡಿದ ಐದು ಪಂದ್ಯಗಳಲ್ಲಿ ನಾಲ್ಕರಲ್ಲಿ ಗೆಲುವು ಪಡೆಯುವ ಮೂಲಕ ಟೂರ್ನಿಯ ಪಾಯಿಂಟ್ಸ್ ಟೇಬಲ್‌ನಲ್ಲಿ ಅಗ್ರ ಸ್ಥಾನವನ್ನು ಕಾಯ್ದುಕೊಂಡಿದೆ. ಪಂಜಾಬ್ ಕಿಂಗ್ಸ್ ವಿರುದ್ಧ ಟೂರ್ನಿಯಲ್ಲಿ ತನ್ನ ಮೊದಲನೇ ಪಂದ್ಯವನ್ನು ಸೋತ ಬಳಿಕ ಗುಜರಾತ್ ಟೈಟನ್ಸ್ ತಂಡ, ಇದಾದ ಬಳಿಕ ಸತತ ನಾಲ್ಕು ಪಂದ್ಯಗಳನ್ನು ಗೆಲ್ಲುವ ಮೂಲಕ ಟೂರ್ನಿಯಲ್ಲಿ ತನ್ನ ಫಾರ್ಮ್ ಅನ್ನು ಮುಂದುವರಿಸಿದೆ.
IPL 2025 Points Table: ಕೆಕೆಆರ್ ಗೆಲುವಿನಿಂದ ಅಂಕಪಟ್ಟಿಯಲ್ಲಿ ಕುಸಿತ ಕಂಡ ಆರ್‌ಸಿಬಿ
ಕಳೆದ ವರ್ಷವೂ ಗುಜರಾತ್ ಟೈಟನ್ಸ್ ತಂಡವನ್ನು ಶುಭಮನ್ ಗಿಲ್ ಅವರೇ ಮುನ್ನಡೆಸಿದ್ದರು. ಆದರೆ, ಪ್ಲೇಆಫ್ಸ್‌ಗೆ ಅರ್ಹತೆ ಪಡೆಯುವಲ್ಲಿ ಜಿಟಿ ವೈಫಲ್ಯ ಅನುಭವಿಸಿತ್ತು. ಆದರೆ, ಪ್ರಸಕ್ತ ಆವೃತ್ತಿಯಲ್ಲಿ ಗುಜರಾತ್ ಅತ್ಯುತ್ತಮ ಪ್ರದರ್ಶನವನ್ನು ತೋರುತ್ತಿದೆ. ಸಾಯಿ ಸುದರ್ಶನ್ ಹಾಗೂ ಸಾಯಿ ಕಿಶೋರ್ ಅವರು ಗುಜರಾತ್ ಪರ ನಿಯಮಿತ ಪ್ರದರ್ಶನವನ್ನು ತೋರುತ್ತಿದ್ದಾರೆ. ಆದರೆ, ಶುಭಮನ್ ಗಿಲ್, ಜೋಸ್ ಬಟ್ಲರ್ ಹಾಗೂ ರಶೀದ್ ಖಾನ್ ಅವರಿಂದ ಗುಜರಾತ್ ಟೈಟನ್ಸ್ ಸ್ಥಿರ ಪ್ರದರ್ಶನವನ್ನು ಎದುರು ನೋಡುತ್ತಿದೆ.
ಗುಜರಾತ್ ಟೈಟನ್ಸ್
ಸಾಯಿ ಸುದರ್ಶನ್, ಶುಭಮನ್ ಗಿಲ್ (ನಾಯಕ), ಜೋಸ್ ಬಟ್ಲರ್ (ವಿ.ಕೀ), ವಾಷಿಂಗ್ಟನ್ ಸುಂದರ್, ಶೆರ್ಫೇನ್ ಋದರ್‌ಫೋರ್ಡ್, ಶಾರುಖ್ ಖಾನ್, ರಾಹುಲ್ ತೆವಾಟಿಯಾ, ಅರ್ಷದ್ ಖಾನ್, ರಶೀದ್ ಖಾನ್, ಸಾಯಿ ಕಿಶೋರ್, ಮೊಹಮ್ಮದ್ ಸಿರಾಜ್, ಪ್ರಸಿಧ್ ಕೃಷ್ಣ, ಮಹಿಪಾಲ್ ಲೊಮ್ರೋರ್, ನಿಶಾಂತ್ ಸಿಂಧು. ಅನುಜ್ ರಾವತ್, ಜಯಂತ್ ಯಾದವ್,ಕುಲ್ವಂತ್ ಖೆಜ್ರೋಲಿಯಾ, ಇಶಾಂತ್ ಶರ್ಮಾ, ಗ್ಲೆನ್ ಫಿಲಿಪ್ಸ್, ಜೆರಾಲ್ಡ್ ಕೋಯೆಡ್ಜಿ, ಕರೀಮ್ ಜನತ್, ಮಾನವ್ ಸುತಾರ್, ಗುರ್ನೂರ್ ಬ್ರಾರ್, ಕುಮಾರ್ ಕುಶಾಗ್ರಾ