ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs ENG: ಟೆಸ್ಟ್‌ ಸರಣಿಗೆ ಮಾರ್ಕ್‌ ವುಡ್‌ ಲಭ್ಯತೆ ಬಗ್ಗೆ ಇಂಗ್ಲೆಂಡ್‌ ಸೆಲೆಕ್ಟರ್‌ ಮಹತ್ವದ ಹೇಳಿಕೆ!

Luke Wright on Mark Wood's Comeback: ಭಾರತ ವಿರುದ್ಧದ ಮುಂಬರುವ ಐದು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ವೇಗದ ಬೌಲರ್‌ ಮಾರ್ಕ್‌ ವುಡ್‌ ಆಡಬಹುದೆಂದು ಇಂಗ್ಲೆಂಡ್ ತಂಡ ಸೆಲೆಕ್ಟರ್‌ ಲ್ಯೂಕ್‌ ರೈಟ್‌ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.‌ ಮಾರ್ಕ್‌ ವುಡ್‌ ಮೊಣಕಾಲು ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು.

ಮಾರ್ಕ್‌ ವುಡ್‌ ಲಭ್ಯತೆ ಬಗ್ಗೆ ಇಂಗ್ಲೆಂಡ್‌ ಸೆಲೆಕ್ಟರ್‌ ಮಾಹಿತಿ!

ಮಾರ್ಕ್‌ ವುಡ್‌ ಲಭ್ಯತೆ ಬಗ್ಗೆ ಲ್ಯೂಕ್‌ ರೈಟ್‌ ಮಹತ್ವದ ಹೇಳಿಕೆ.

Profile Ramesh Kote Jun 7, 2025 10:39 PM

ನವದೆಹಲಿ: ಭಾರತ ಹಾಗೂ ಇಂಗ್ಲೆಂಡ್‌ ನಡುವಣ ಐದು ಪಂದ್ಯಗಳ ಟೆಸ್ಟ್‌ ಸರಣಿ (IND vs ENG) ಜೂನ್‌ 20 ರಂದು ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಎರಡೂ ತಂಡಗಳು ಸಜ್ಜಾಗುತ್ತಿವೆ. ಇದರ ನಡುವೆ ಗಾಯದಿಂದ ಗುಣುಮುಖರಾಗಿರುವ ಇಂಗ್ಲೆಂಡ್‌ ತಂಡದ ಹಿರಿಯ ವೇಗಿ ಮಾರ್ಕ್‌ ವುಡ್‌ (Mark Wood) ಅವರು ಈ ಟೆಸ್ಟ್‌ ಸರಣಿಯಲ್ಲಿಆಡುವ ಸಾಧ್ಯತೆ ಇದೆ. ಅವರು ಸದ್ಯ ನೆಟ್ಸ್‌ನಲ್ಲಿ ಬೌಲಿಂಗ್‌ ಅಭ್ಯಾಸ ನಡೆಸುತ್ತಿದ್ದಾರೆ. ಆದರೆ, ಆರಂಭಿಕ ಕೆಲ ಪಂದ್ಯಗಳಿಂದ ಹೊರಗುಳಿದರೂ ನಂತರ ನಾಲ್ಕನೇ ಟೆಸ್ಟ್‌ಗೆ ಅವರು ತಂಡದ ಪ್ಲೇಯಿಂಗ್‌ XIಗೆ ಮರಳಬಹುದು ಎಂದು ಇಂಗ್ಲೆಂಡ್‌ ತಂಡದ ಚೀಫ್‌ ಸೆಲೆಕ್ಟರ್‌ ಲ್ಯೂಕ್‌ ರೈಟ್‌ (Luke Wright) ತಿಳಿಸಿದ್ದಾರೆ.

2025ರ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯ ಬಳಿಕ ಮಾರ್ಕ್‌ ವುಡ್‌ ಅವರು ತಮ್ಮ ಮೊಣಕಾಲು ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು, ಹಾಗಾಗಿ ಅವರು ನಾಲ್ಕು ತಿಂಗಳುಗಳ ಕಾಲ ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ಹೊರ ನಡೆದಿದ್ದರು. ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯಲ್ಲಿ ಮಾರ್ಕ್‌ ವುಡ್‌ ಆಡಿದ್ದ ಎರಡು ಪಂದ್ಯಗಳಿಂದ ಒಂದೇ ಒಂದು ವಿಕೆಟ್‌ ಕಿತ್ತಿದ್ದರು. ಇದೀಗ ಅವರು ಕಮ್‌ಬ್ಯಾಕ್‌ ಮಾಡಲು ಕಠಿಣ ಪರಿಶ್ರಮವನ್ನು ಪಡುತ್ತಿದ್ದಾರೆ. ತಂಡದ ಮೆಡಿಕಲ್‌ ಸಿಬ್ಬಂದು ಕೂಡ ಅವರನ್ನು ನಿರ್ವಹಿಸುತ್ತಿದ್ದಾರೆ.

IND vs ENG: ರಿಷಭ್‌ ಪಂತ್‌ ಔಟ್‌! ವಿಕೆಟ್‌ ಕೀಪರ್‌ ಆಗಿ ಮೊದಲನೇ ಟೆಸ್ಟ್‌ ಆಡಲಿರುವ ಧ್ರುವ್‌ ಜುರೆಲ್?

"ಪ್ರಾಮಾಣಿಕವಾಗಿ ಹೇಳಬೇಕೆಂದರೆ ಮಾರ್ಕ್‌ ವುಡ್‌ ಅವರು ನಿಧಾನಗತಿ ಬೌಲ್‌ ಮಾಡುತ್ತಿದ್ದಾರೆ. ಅವರು ತುಂಬಾ ವೇಗದಿಂದ ಬೌಲ್‌ ಮಾಡುತ್ತಿಲ್ಲವಾದರೂ, ಅವರ ಪ್ರಕ್ರಿಯೆ ನಮಗೆ ಶುಭ ಸಂಕೇತವನ್ನು ನೀಡಿದೆ. ಹಾಗಾಗಿ ಅವರು ಚೇತರಿಸಿಕೊಳ್ಳುವ ಹಾದಿಯಲ್ಲಿದ್ದಾರೆ. ಅವರು ಇನ್ನೂ ಸಂಪೂರ್ಣ ಮ್ಯಾಚ್‌ ಫಿಟ್‌ನೆಸ್‌ಗೆ ಬರಲು ಹೆಚ್ಚಿನ ಸಮಯದ ಅಗತ್ಯವಿದೆ. ಅಂದ ಹಾಗೆ ಅವರು ನಮಗೆ 4 ಅಥವಾ 5ನೇ ಪಂದ್ಯಕ್ಕೆ ಲಭ್ಯರಾಗಬಹುದು. ಆದರೆ ಅವರು ಪ್ರತಿಯೊಂದು ದಿನ ಎಲ್ಲಾ ಬಾಕ್ಸ್‌ಗಳನ್ನು ಪೂರ್ಣಗೊಳಿಸಿದ್ದಾರೆ," ಎಂದು ಸ್ಕೈ ಸ್ಪೋರ್ಟ್ಸ್‌ಗೆ ರೈಟ್‌ ತಿಳಿಸಿದ್ದಾರೆ.

ಮಾರ್ಕ್‌ ವುಡ್‌ ಅವರು ಆಡಿದ 37 ಟೆಸ್ಟ್‌ ಪಂದ್ಯಗಳಿಂದ 30.42ರ ಸರಾಸರಿಯಲ್ಲಿ 199 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಭಾರತದ ವಿರುದ್ಧ ಅವರು ಆಡಿದ ನಾಲ್ಕು ಟೆಸ್ಟ್‌ ಪಂದ್ಯಗಳಿಂದ 9 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಅವರು 50.33ರ ಸರಾಸರಿಯಲ್ಲಿ ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಆದರೆ, ಇಂಗ್ಲೆಂಡ್‌ನಲ್ಲಿ ಅವರು ಒಂದು ಪಂದ್ಯವನ್ನು ಆಡಿದ್ದರು ಹಾಗೂ 4 ವಿಕೆಟ್‌ಗಳನ್ನು ಕಬಳಿಸಿದ್ದರು.

IND vs ENG: ಯಶಸ್ವಿ ಜೈಸ್ವಾಲ್‌ ಜೊತೆ ಸಾಯಿ ಸುದರ್ಶನ್‌ ಇನಿಂಗ್ಸ್‌ ಆರಂಭಿಸಬೇಕೆಂದ ರಿಕಿ ಪಾಂಟಿಂಗ್‌!

ಭಾರತ ವಿರುದ್ಧದ ಟೆಸ್ಟ್‌ ಸರಣಿಗೆ 14 ಸದಸ್ಯರ ಭಾರತ ತಂಡವನ್ನು ಜೂನ್‌ 5 ರಂದು ಪ್ರಕಟಿಸಲಾಗಿದೆ. ಮೊದಲನೇ ಟೆಸ್ಟ್‌ ಹೆಡಿಂಗ್ಲೆಯ ಲೀಡ್ಸ್‌ನಲ್ಲಿ ಜೂನ್‌ 20 ರಿಂದ 24ವರೆಗೆ ನಡೆಯಲಿದೆ. ಇಂಗ್ಲೆಂಡ್‌ ತಂಡ ಐವರು ವೇಗಿಗಳಿಗೆ ಅವಕಾಶವನ್ನು ನೀಡಲಾಗಿದೆ. ಜಾಶ ಟಾಂಗ್‌, ಕ್ರಿಸ್‌ ವೋಕ್ಸ್‌, ಸ್ಯಾಮ್‌ ಕುಕ್‌, ಜೇಮಿ ಒವರ್ಟನ್‌ ಹಾಗೂ ಬ್ರೈಡನ್‌ ಕಾರ್ಸ್‌ ಅವರನ್ನು ಇಂಗ್ಲೆಂಡ್‌ ವೇಗದ ಬೌಲಿಂಗ್‌ ವಿಭಾಗದಲ್ಲಿದ್ದಾರೆ. ಗಸ್‌ ಅಟ್ಕಿನ್ಸನ್‌ ಹಾಗೂ ಜೋಫ್ರಾ ಆರ್ಚರ್‌ ಅವರು ವಿವಿಧ ಗಾಯಗಳಿಂದ ಬಳಲುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರನ್ನು ಹೊರ ಬಿಡಲಾಗಿದೆ.