ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಕೋಚ್‌ ಪಾಂಟಿಂಗ್ ಅನುಪಸ್ಥಿತಿ; ಹರಾಜು ಮನ್ನಡೆಸಲಿರುವ ಶ್ರೇಯಸ್ ಅಯ್ಯರ್

IPL 2026 Auction: ಅಯ್ಯರ್ ಅವರೊಂದಿಗೆ ಫ್ರಾಂಚೈಸಿಯ ಹೊಸ ಸ್ಪಿನ್ ಬೌಲಿಂಗ್ ಕೋಚ್ ಸಾಯಿರಾಜ್ ಬಹುತುಲೆ, ಸಹಾಯಕ ಬೌಲಿಂಗ್ ಕೋಚ್ ಟ್ರೆವರ್ ಗೊನ್ಸಾಲ್ವೆಸ್ ಮತ್ತು ಜನರಲ್ ಮ್ಯಾನೇಜರ್ ಆಶಿಶ್ ತುಲಿ ಕೂಡ ಇರಲಿದ್ದಾರೆ ಎನ್ನಲಾಗಿದೆ. ಪಂಜಾಬ್ ಕಿಂಗ್ಸ್ ತಂಡವು ವಿದೇಶಿ ಆಟಗಾರರಲ್ಲಿ ಆರನ್ ಹಾರ್ಡಿ, ಜೋಶ್ ಇಂಗ್ಲಿಸ್, ಗ್ಲೆನ್‌ ಮ್ಯಾಕ್ಸ್‌ವೆಲ್‌ ಮತ್ತು ಕೈಲ್ ಜೇಮಿಸನ್ ಅವರನ್ನು ಬಿಡುಗಡೆ ಮಾಡಿತು.

ಮಿನಿ ಹರಾಜು; ಪಂಜಾಬ್ ಕಿಂಗ್ಸ್ ತಂಡದ ಟೇಬಲ್‌ನಲ್ಲಿ ಅಯ್ಯರ್ ಹಾಜರ್

Shreyas Iyer -

Abhilash BC
Abhilash BC Dec 11, 2025 3:47 PM

ಮುಂಬಯಿ, ಡಿ.11: ಇದೇ ಡಿ.16ರಂದು ನಡೆಯುವ ಐಪಿಎಲ್ 2026 ರ ಮಿನಿ(IPL 2026 Auction) ಹರಾಜಿನಲ್ಲಿ ಮುಖ್ಯ ಕೋಚ್ ರಿಕಿ ಪಾಂಟಿಂಗ್(Ricky Ponting) ಅನುಪಸ್ಥಿತಿಯಲ್ಲಿ ಪಂಜಾಬ್ ಕಿಂಗ್ಸ್(Punjab Kings) ತಂಡದ ನಾಯಕ ಶ್ರೇಯಸ್ ಅಯ್ಯರ್(Shreyas Iyer) ಹರಾಜಿನ ನೇತೃತ್ವ ವಹಿಸಲಿದ್ದಾರೆ. ಕ್ರಿಕ್‌ಬಜ್ ಪ್ರಕಾರ, ಆಶಸ್ ಸರಣಿಗಾಗಿ ಆಸ್ಟ್ರೇಲಿಯಾದಲ್ಲಿ ಚಾನೆಲ್ ಸೆವೆನ್ ನೆಟ್‌ವರ್ಕ್‌ನೊಂದಿಗೆ ಕಾಮೆಂಟರಿ ತಂಡದ ಭಾಗವಾಗಿ ಪಾಂಟಿಂಗ್ ಒಪ್ಪಂದ ಮಾಡಿಕೊಂಡಿದ್ದಾರೆ. ಹೀಗಾಗಿ ಅವರು ಮಿನಿ ಹರಾಜಿನಲ್ಲಿ ಪಾಲ್ಗೊಳ್ಳದಿರಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಪಂಜಾಬ್‌ ಕಿಂಗ್ಸ್‌ ಬಲಿಷ್ಠ ಪಡೆಯನ್ನೇ ಹೊಂದಿರುವ ಕಾರಣ ಬೆರಳೆಣಿಕೆ ಆಟಗಾರರು ಮಾತ್ರ ತಂಡಕ್ಕೆ ಬೇಕಿದೆ. ಪಾಂಟಿಂಗ್ ಯಾವ ಆಟಗಾರರ ಖರೀದಿ ಮಾಡಬೇಕು ಎಂಬುದನ್ನು ಫ್ರಾಂಚೈಸಿ ಜತೆ ಈಗಾಗಲೇ ಚರ್ಚಿಸಿದ್ದಾರೆ. ಅವರ ಅನುಪಸ್ಥಿತಿಯಲ್ಲಿ ನಾಯಕ ಶ್ರೇಯಸ್‌ ಅಯ್ಯರ್‌ ಹರಾಜಿನ ಭಾಗವಾಗಲಿದ್ದಾರೆ ಎನ್ನಲಾಗಿದೆ. ಆದರೆ ಫ್ರಾಂಚೈಸಿ ಅಧಿಕೃತ ಮಾಹಿತಿ ನೀಡಿಲ್ಲ.

ಅಯ್ಯರ್ ಅವರೊಂದಿಗೆ ಫ್ರಾಂಚೈಸಿಯ ಹೊಸ ಸ್ಪಿನ್ ಬೌಲಿಂಗ್ ಕೋಚ್ ಸಾಯಿರಾಜ್ ಬಹುತುಲೆ, ಸಹಾಯಕ ಬೌಲಿಂಗ್ ಕೋಚ್ ಟ್ರೆವರ್ ಗೊನ್ಸಾಲ್ವೆಸ್ ಮತ್ತು ಜನರಲ್ ಮ್ಯಾನೇಜರ್ ಆಶಿಶ್ ತುಲಿ ಕೂಡ ಇರಲಿದ್ದಾರೆ ಎನ್ನಲಾಗಿದೆ. ಪಂಜಾಬ್ ಕಿಂಗ್ಸ್ ತಂಡವು ವಿದೇಶಿ ಆಟಗಾರರಲ್ಲಿ ಆರನ್ ಹಾರ್ಡಿ, ಜೋಶ್ ಇಂಗ್ಲಿಸ್ಕೈ ,ಲ್ ಜೇಮಿಸನ್ ಮತ್ತು ಗ್ಲೆನ್‌ ಮ್ಯಾಕ್ಸ್‌ವೆಲ್‌ ಅವರನ್ನು ಬಿಡುಗಡೆ ಮಾಡಿತ್ತು. ಭಾರತೀಯ ಸ್ಪಿನ್ನರ್, ವಿದೇಶಿ ಟಾಪ್-ಆರ್ಡರ್ ಬ್ಯಾಟರ್ ಮತ್ತು ಆಲ್‌ರೌಂಡರ್ ಮತ್ತು ವಿದೇಶಿ ವೇಗದ ಬ್ಯಾಕಪ್ ಕಿಂಗ್ಸ್ ತಂಡದ ಸಂಭಾವ್ಯ ಗುರಿಯಾಗಿದ್ದು, ಲಭ್ಯವಿರುವ ಮೊತ್ತ ರೂ. 11.50 ಕೋಟಿಯೊಂದಿಗೆ ಅವರು ತಮ್ಮ 25 ಸದಸ್ಯರ ತಂಡವನ್ನು ಒಟ್ಟುಗೂಡಿಸಲು ಪ್ರಯತ್ನಿಸುತ್ತಿದ್ದಾರೆ.

ಇದನ್ನೂ ಓದಿ ಹರಾಜಿನಲ್ಲಿ ಐದು ವಿದೇಶಿ ಆಟಗಾರರ ಮೇಲೆ ಕಣ್ಣಿಟ್ಟ ಡೆಲ್ಲಿ ಕ್ಯಾಪಿಟಲ್ಸ್

ಉಳಿಸಿಕೊಂಡಿರುವ ಆಟಗಾರರು: ಪ್ರಭಾಸಿಮ್ರಾನ್ ಸಿಂಗ್, ಪ್ರಿಯಾಂಶ್ ಆರ್ಯ, ಶ್ರೇಯಸ್ ಅಯ್ಯರ್, ಶಶಾಂಕ್ ಸಿಂಗ್, ನೆಹಾಲ್ ವಧೇರಾ, ಮಾರ್ಕಸ್ ಸ್ಟೊಯಿನಿಸ್, ಅಜ್ಮತ್‌ವುಲ್ಲಾ ಒಮರ್ಜಾಯ್, ಮಾರ್ಕೊ ಯೆನ್ಸೆನ್, ಹರ್‌ಪ್ರೀತ್ ಬ್ರಾರ್, ಯುಜ್ವೇಂದ್ರ ಚಹಲ್, ಅರ್ಷದೀಪ್ ಸಿಂಗ್, ಮುಶೀರ್ ಖಾನ್, ಲಾಕಿ ಫರ್ಗ್ಯೂಸನ್, ವೈಶಾಕ್‌ ವಿಜಯ್‌ಕುಮಾರ್‌, ಯಶ್ ಠಾಕೂರ್, ವಿಷ್ಣು ವಿನೋದ್, ಕ್ಸಿವಿಯರ್‌ ಬಾರ್ಲೆಟ್‌, ಪೈಲಾ ಅವಿನಾಶ್‌, ಸರ್ಯಾಂಶ್‌ ಶಡ್ಜೆ, ಹರ್ನೂರ್‌ ಸಿಂಗ್‌.

ಎಲ್ಲಾ 10 ಫ್ರಾಂಚೈಸಿಗಳ ಪರ್ಸ್‌ನಲ್ಲಿ ಉಳಿದಿರುವ ಹಣ

ಕೋಲ್ಕತ್ತಾ ನೈಟ್ ರೈಡರ್ಸ್: 64.3 ಕೋಟಿ

ಚೆನ್ನೈ ಸೂಪರ್ ಕಿಂಗ್ಸ್: 43.4 ಕೋಟಿ

ಸನ್‌ರೈಸರ್ಸ್ ಹೈದರಾಬಾದ್: 25.5 ಕೋಟಿ

ಲಖನೌ ಸೂಪರ್ ಜಯಂಟ್ಸ್: 22.95 ಕೋಟಿ

ಡಲ್ಲಿ ಕ್ಯಾಪಿಟಲ್ಸ್: 21.8 ಕೋಟಿ

ರಾಯಲ್ ಚಾಲೆಂಜರ್ಸ್ ಬೆಂಗಳೂರು: 16.4 ಕೋಟಿ

ರಾಜಸ್ಥಾನ್ ರಾಯಲ್ಸ್: 16.05 ಕೋಟಿ

ಗುಜರಾತ್ ಟೈಟನ್ಸ್: 12.9 ಕೋಟಿ

ಪಂಜಾಬ್ ಕಿಂಗ್ಸ್: 11.5 ಕೋಟಿ

ಮುಂಬೈ ಇಂಡಿಯನ್ಸ್: 2.75 ಕೋಟಿ