ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

IPL 2026: ಆರ್‌ಸಿಬಿ ಎದುರು ಫೈನಲ್‌ಗೂ ಮೊದಲೇ ಸೋತಿದ್ದ ಗುಜರಾತ್ ಟೈಟನ್ಸ್!

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಗುಜರಾತ್‌ ಟೈಟನ್ಸ್‌ ಎದುರು 5 ವಿಕೆಟ್‌ಳಿಂದ ಗೆಲುವು ಪಡೆಯುವ ಮೂಲಕ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ, ಸತತ ಎರಡನೇ ಬಾರಿ ಐಪಿಎಲ್‌ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತ್ತು. ಅಂದ ಹಾಗೆ ಈ ಪಂದ್ಯವನ್ನು ತವರು ಅಂಗಣದಲ್ಲಿ ಆಡಿದರೂ ಜಿಟಿ, ಆರ್‌ಸಿಬಿ ಎದುರು ಪರಾಭವಗೊಂಡಿತು. ಅಂದ ಹಾಗೆ ಫೈನಲ್‌ ಪಂದ್ಯಕ್ಕೂ ಜಿಟಿಗೆ ಆಗಿದ್ದ ಬಹುದೊಡ್ಡ ಹಿನ್ನಡೆಯನ್ನು ಇಲ್ಲಿ ವಿವರಿಸಲಾಗಿದೆ.

ಆರ್‌ಸಿಬಿ ಎದುರು ಫೈನಲ್‌ಗೂ ಮೊದಲೇ ಸೋತಿದ್ದ ಗುಜರಾತ್ ಟೈಟನ್ಸ್!

ಆರ್‌ಸಿಬಿ ಎದುರು ಜಿಟಿ ಫೈನಲ್‌ಗೂ ಮೊದಲೇ ಸೋತಿತ್ತು. -

Profile
Ramesh Kote Jun 1, 2026 5:11 PM

ಅಹಮದಾಬಾದ್‌: ಈ ಸೀಸನ್‌ಗೆ ಎಂಟ್ರಿ ಕೊಡುವುದಕ್ಕೂ ಮೊದಲು ಗುಜರಾತ್ ಟೈಟನ್ಸ್(GT) 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL 2026) ಟೂರ್ನಿಯಲ್ಲಿ ಕಪ್ ಗೆಲ್ಲುವ ಫೇವರಿಟ್ ಟೀಮ್ ಆಗಿರಲಿಲ್ಲ. ರಾಯಲ್ ಚಾಲೆಂಜರ್ಸ್ ಬೆಂಗಳೂರು, ಪಂಜಾಬ್ ಕಿಂಗ್ಸ್, ರಾಜಸ್ಥಾನ್ ರಾಯಲ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ಟ್ರೋಫಿ ಗೆಲ್ಲುವ ನೆಚ್ಚಿನ ತಂಡಗಳಾಗಿದ್ದವು. ಆದರೆ ಶುಭಮನ್ ಗಿಲ್ ಸಾರಥ್ಯದ ಗುಜರಾತ್ ಟೈಟನ್ಸ್ ಎಲ್ಲಾ ಲೆಕ್ಕಾಚಾರಗಳನ್ನು ತಲೆ ಕೆಳಗಾಗಿಸಿ ಫೈನಲ್ ಗೆ ಪ್ರವೇಶ ಮಾಡಿತ್ತು.

ಇದರ ಶ್ರೇಯ ಶುಭಮನ್ ಗಿಲ್, ಸಾಯಿ ಸುದರ್ಶನ್, ಕಗಿಸೊ ರಬಾಡ ಮತ್ತು ಮೊಹಮ್ಮದ್ ಸಿರಾಜ್‌ಗೆ ಸಲ್ಲಬೇಕು. ಈ ನಾಲ್ವರು ಟೂರ್ನಿಯುದ್ದಕ್ಕೂ ಸ್ಥಿರ ಪ್ರದರ್ಶನವನ್ನು ಕಾಯ್ದುಕೊಂಡರು. ಬ್ಯಾಟಿಂಗ್‌ನಲ್ಲಿ ಗಿಲ್(732 ರನ್) -ಸುದರ್ಶನ್ (722 ರನ್) ನೋಡಿಕೊಂಡರೆ, ಬೌಲಿಂಗ್‌ನಲ್ಲಿ ರಬಾಡ (29 ವಿಕೆಟ್)- ಸಿರಾಜ್ (19) ನೋಡಿಕೊಂಡರು. ಇವರಿಗೆ ಜೋಸ್ ಬಟ್ಲರ್, ರಶೀದ್ ಖಾನ್ ಅಗತ್ಯ ಸಂದರ್ಭಗಳಲ್ಲಿ ಹೆಗಲು ಕೊಟ್ಟಿದ್ದರು.

RCB vs GT: ʻಈ ಸಲಾನು ಕಪ್‌ ನಮ್ದೇʼ-ಗುಜರಾತ್‌ ವಿರುದ್ಧ ಗೆದ್ದ ಆರ್‌ಸಿಬಿಗೆ ಸತತ ಎರಡನೇ ಐಪಿಎಲ್‌ ಗರಿ!

ಫೈನಲ್ ಪಂದ್ಯಕ್ಕೆ ಬಂದ್ರೆ, ಗುಜರಾತ್ ಟೈಟನ್ಸ್ ತಂಡಕ್ಕೆ ಅಂಗಣದ ಲಾಭವಿತ್ತು ಹಾಗೂ ಇಲ್ಲಿ ಆರ್‌ಸಿಬಿಯನ್ನು ಲೀಗ್ ಹಂತದಲ್ಲಿ ಸೋಲಿಸಿತ್ತು. ಆದರೂ ಜಿಟಿ ಫೈನಲ್ ಆಡಲು ಅಹಮದಾಬಾದ್‌ಗೆ ಬರುವುದಕ್ಕೂ ಮೊದಲೇ ಸೋಲು ಒಪ್ಪಿಕೊಂಡಿತ್ತು. ಎರಡನೇ ಕ್ವಾಲಿಫೈಯರ್ ಪಂದ್ಯಕ್ಕೂ ಮತ್ತು ಫೈನಲ್ ಪಂದ್ಯಕ್ಕೂ ಒಂದೇ ಒಂದು ದಿನ ಅಂತರ ಇತ್ತು. ಮೇ 29 ರಂದು ರಾಜಸ್ಥಾನ್ ರಾಯಲ್ಸ್ ವಿರುದ್ಧ ಗೆದ್ದಿದ್ದ ಗುಜರಾತ್ ತಂಡ, ಮೇ 30 ರಂದು ಚಾರ್ಟರ್ ವಿಮಾನದ ಮೂಲಕ ಆದಷ್ಟು ಬೇಗ ಅಹಮದಾಬಾದ್‌ಗೆ ಆಗಮಿಸಿ ಸಂಜೆ ಒಂದು ಸೆಷನ್ ಅಭ್ಯಾಸ ನಡೆಸಬೇಕಿತ್ತು ಹಾಗೂ ಟೀಮ್ ಮೀಟಿಂಗ್‌ನಲ್ಲಿ ಆರ್‌ಸಿಬಿಗೆ ಸೂಕ್ತ ರಣತಂತ್ರ ರೂಪಿಸಬೇಕಿತ್ತು.

ಆದರೆ, ಚಂಡೀಗಢದಲ್ಲಿ ಬಿರುಗಾಳಿ ಸಹಿತ ಧಾರಾಕಾರ ಮಳೆ ಸುರಿದಿತ್ತು. ಇದರ ಕಾರಣ ನಿಗದಿತ ಸಮಯಕ್ಕೆ ವಿಮಾನ ಟೇಕ್ ಆಫ್ ಆಗಿರಲಿಲ್ಲ. ಇದಕ್ಕೆ ವಿಮಾನ ನಿಲ್ದಾಣದ ಪ್ರಾಧಿಕಾರ ಕೂಡ ಅನುಮತಿ ನೀಡಿರಲಿಲ್ಲ. ಜಿಟಿ ಆಟಗಾರರು ಶನಿವಾರ ತಡರಾತ್ರಿ ಅಹಮದಾಬಾದ್‌ಗೆ ಆಗಮಿಸಿದ್ದರು. ಇದರ ಪರಿಣಾಮ ಒಂದೇ ಒಂದು ಟ್ರೈನಿಂಗ್ ಸೆಷನ್ ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಇದಕ್ಕಿಂತ ಮುಖ್ಯವಾಗಿ ಶನಿವಾರ ರಾತ್ರಿ ಎಲ್ಲಾ ಆಟಗಾರರಿಗೂ ಸಂಪೂರ್ಣವಾಗಿ ನಿದ್ರೆ ಆಗಿರುವುದು ಅನುಮಾನ. ದೇಹ ಸಂಪೂರ್ಣವಾಗಿ ರಿಕವರಿ ಆಗಿದ್ರೆ ಮಾತ್ರ ನೀವು ಪಂದ್ಯದಲ್ಲಿ ಶೇ 100 ರಷ್ಟು ಎಫರ್ಟ್ ಹಾಕಬಹುದು. ಇಲ್ಲ ಅರ್ಧಂಬರ್ಧ ನಿದ್ರೆ ಆಗಿದ್ದರೆ, ನಿಮ್ಮಿಂದ ಪೂರ್ಣಪ್ರಮಾಣದ ಆಟ ಬರಲ್ಲ. ಗುಜರಾತ್‌ ತಂಡಕ್ಕೆ ಆಗಿದ್ದು ಇದೇ. ವಿಶೇಷವಾಗಿ ಬ್ಯಾಟಿಂಗ್ ವಿಭಾಗದಲ್ಲಿ.

IPL 2026 Award winners: ವೈಭವ್‌ ಸೂರ್ಯವಂಶಿಗೆ ಅಗ್ರ ಸ್ಥಾನ, ಪ್ರಶಸ್ತಿ ವಿಜೇತರ ಸಂಪೂರ್ಣ ವಿವರ!

ಸುನೀಲ್ ಗವಾಸ್ಕರ್ ಕೂಡ ಇದೇ ಮಾತನ್ನು ಹೇಳಿದ್ರು, ಫೈನಲ್ ಪಂದ್ಯವನ್ನು ಒಂದು ದಿನ ಮುಂದಕ್ಕೆ ಹಾಕಿ ಎಂದು ಸಲಹೆ ನೀಡಿದ್ದರು. ಐಪಿಎಲ್ ಆಡಳಿತ ಮಂಡಳಿ ವೇಳಾಪಟ್ಟಿಯನ್ನು ರೂಪಿಸುವಾಗ ಮೇಲಿನ ಎಲ್ಲ ಅಂಶಗಳ ಬಗ್ಗೆ ಮುಂದಾಲೋಚನೆ ಮಾಡಬೇಕಿತ್ತು. ಎರಡನೇ ಕ್ವಾಲಿಫೈಯರ್ ಮತ್ತು ಫೈನಲ್ ಪಂದ್ಯಕ್ಕೆ ಕನಿಷ್ಠ ಎರಡು ದಿನಗಳ ಅಂತರ ನೀಡಬೇಕಿತ್ತು. ಇದು ಆರ್‌ಸಿಬಿಗೆ ಲಾಭವಾಯಿತು.

ಆರ್‌ಸಿಬಿ ಮೊದಲನೇ ಕ್ವಾಲಿಫೈಯರ್ ಗೆದ್ದಿದ್ದು ಮೇ 26ಕ್ಕೆ. ಬುಧವಾರವೇ ರಜತ್‌ ಪಡೆ ಅಹಮದಾಬಾದ್‌ಗೆ ಆಗಮಿಸಿತ್ತು ಹಾಗೂ 4 ದಿನಗಳ ದೀರ್ಘ ವಿರಾಮ ಸಿಕ್ಕಿತ್ತು. ಇದನ್ನು ಆರ್‌ಸಿಬಿ ಟೀಮ್ ಮ್ಯಾನೇಜ್ಮೆಂಟ್ ಸಂಪೂರ್ಣವಾಗಿ ಸದುಪಯೋಗಪಡಿಸಿಕೊಂಡಿತು. ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಆರ್‌ಸಿಬಿ ಎರಡು ಟ್ರೇನಿಂಗ್ ಸೆಷನ್ ಕೂಡ ಮುಗಿಸಿತ್ತು. ಫೈನಲ್ ಪಂದ್ಯಕ್ಕೆ ತಯಾರಿ ನಡೆಸಲು ಸಾಕಷ್ಟು ಸಮಯ ಸಿಕ್ಕಿತ್ತು. ಒಂದು ವೇಳೆ ಜಿಟಿಗೂ ಕನಿಷ್ಠ 2 ದಿನ ವಿರಾಮ ಸಿಕ್ಕಿ, ಸೂಕ್ತ ತಯಾರಿ ನಡೆಸಿ ಫೈನಲ್‌ಗೆ ಬಂದಿದ್ರೆ ಆರ್‌ಸಿಬಿಗೆ ಇನ್ನಷ್ಟು ಪೈಪೋಟಿ ನೀಡುತಿತ್ತು.

ಐಪಿಎಲ್ 2026 ಬಹುಮಾನದ ಮೊತ್ತ ಸೇರಿ ಪ್ರತಿಯೊಬ್ಬ ಪ್ರಶಸ್ತಿ ವಿಜೇತರು ಗೆದ್ದ ಮೊತ್ತದ ವಿವರ ಇಲ್ಲಿದೆ

ಆರ್‌ಸಿಬಿ ಚಾಂಪಿಯನ್ ಟೀಮ್. ಇದರಲ್ಲಿ ಅನುಮಾನವೇ ಇಲ್ಲ. ಮುಂಬೈ ಇಂಡಿಯನ್ಸ್ ವಿರುದ್ಧ ವಾಂಖೆಡೆಯಲ್ಲಿ ಗೆದ್ದ ಕ್ಷಣವೇ ಬೆಂಗಳೂರು ತಂಡ ನಾವು ಚಾಂಪಿಯನ್ಸ್ ಎನ್ನುವುದನ್ನು ಸಾಬೀತುಪಡಿಸಿತ್ತು. ಬೆಂಗಳೂರು ತಂಡ ಬ್ಯಾಟಿಂಗ್, ಬೌಲಿಂಗ್ ಎರಡೂ ವಿಭಾಗಗಳಲ್ಲಿ ಡೆಪ್ತ್ ಇದೆ. ಫೈನಲ್‌ಗೆ ಯಾವುದೇ ತಂಡ ಬಂದಿದ್ದರೂ ಆರ್‌ಸಿಬಿ ಗೆಲ್ಲುತಿತ್ತು.