ʻ16 ಬಾರಿ ಅವರನ್ನು ಔಟ್ ಮಾಡಿದ್ದೇನೆʼ: ತಾವು ಬೌಲ್ ಮಾಡಲು ಇಷ್ಟಪಡುವ ಬ್ಯಾಟರ್ ಆರಿಸಿದ ಡೇಲ್ ಸ್ಟೇನ್!
ದಕ್ಷಿಣ ಆಫ್ರಿಕಾ ಮಾಜಿ ವೇಗಿ ಡೇಲ್ ಸ್ಟೇನ್ ಅವರು ತಮ್ಮ ವೃತ್ತಿ ಜೀವನದಲ್ಲಿ ಮತ್ತೆ-ಮತ್ತೆ ಬೌಲ್ ಮಾಡಬೇಕೆನಿಸುವ ಬ್ಯಾಟ್ಸ್‌ಮನ್ ಯಾರೆಂದು ರಿವೀಲ್ ಮಾಡಿದ್ದಾರೆ. ಅವರು ಪಾಕಿಸ್ತಾನ ಮಾಜಿ ಬ್ಯಾಟ್ಸ್‌ಮನ್ ಮೊಹಮ್ಮದ್ ಹಫೀಝ್ ಅವರನ್ನು ಆಯ್ಕೆ ಮಾಡಿದ್ದಾರೆ. ಇವರನ್ನು ಸ್ಟೇನ್ 16 ಬಾರಿ ಔಟ್ ಮಾಡಿದ್ದಾರೆ.
ತಾವು ಬೌಲ್ ಮಾಡಲು ಇಷ್ಟಪಡುವ ಬ್ಯಾಟ್ಸ್‌ಮನ್ ಆರಿಸಿದ ಡೇಲ್ ಸ್ಟೇನ್. -
ನವದೆಹಲಿ: ಚಾಟ್‌ಜಿಪಿಟಿಯಲ್ಲಿ ನೀಡಲಾದ ಸರಳ ಪ್ರಾಂಪ್ಟ್‌ಗೆ 1990ರ ಬಳಿಕ ಐದು ಶ್ರೇಷ್ಠ ವೇಗದ ಬೌಲರ್‌ಗಳ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾದ ದಿಗ್ಗಜ ಡೇಲ್ ಸ್ಟೇನ್ (Dale Steyn) ಸ್ಥಾನ ಪಡೆದಿದ್ದಾರೆ. ಈ ಪಟ್ಟಿಯಲ್ಲಿ ವಸೀಮ್ ಅಕ್ರಂ, ಗ್ಲೆನ್ ಮೆಗ್ರಾತ್, ಕರ್ಟ್ಲಿ ಆಂಬ್ರೋಸ್ ಹಾಗೂ ವಖಾರ್ ಯೂನಿಸ್ ಕೂಡ ಸೇರಿದ್ದಾರೆ. ಸ್ಟೇನ್ ಅವರನ್ನು ಪಟ್ಟಿಯಲ್ಲಿ ಸೇರಿಸಲು ನೀಡಲಾದ ಕಾರಣ ಹೀಗಿತ್ತು: “2000 ಮತ್ತು 2010ರ ದಶಕಗಳ ಅತ್ಯುತ್ತಮ ವೇಗ + ಆಕ್ರಮಣಶೀಲತೆ + ಚೆಂಡಿನ ಚಲನೆಯ ಸಂಯೋಜನೆ.” ಡೇಲ್ ಸ್ಟೇನ್ ತಮ್ಮ ಅಂತಾರಾಷ್ಟ್ರೀಯ ವೃತ್ತಿಜೀವನದಲ್ಲಿ ಒಟ್ಟು 699 ವಿಕೆಟ್‌ಗಳನ್ನು ಕಬಳಿಸಿದ್ದಾರೆ.
ಟೆಸ್ಟ್ ಕ್ರಿಕೆಟ್‌ನ 93 ಪಂದ್ಯಗಳಲ್ಲಿ 439 ವಿಕೆಟ್, ಏಕದಿನ ಕ್ರಿಕೆಟ್‌ನ 125 ಪಂದ್ಯಗಳಲ್ಲಿ 196 ವಿಕೆಟ್ ಹಾಗೂ ಟಿ20ಐ ಕ್ರಿಕೆಟ್‌ನ 47 ಪಂದ್ಯಗಳಲ್ಲಿ 64 ವಿಕೆಟ್‌ಗಳನ್ನುಇ ಸ್ಟೇನ್ ಕಬಳಿಸಿದ್ದಾರೆ. ಮೂರು ಮಾದರಿಗಳಲ್ಲೂ ಅದ್ಭುತ ಬೌಲಿಂಗ್ ದಾಖಲೆ ಹೊಂದಿರುವ ಸ್ಟೇನ್, ತಾವು ಬೌಲ್ ಮಾಡಲು ಇಷ್ಟಪಡುವ ಬ್ಯಾಟ್ಸ್‌ಮನ್ ಯಾರೆಂದು ಬಹಿರಂಗಪಡಿಸಿದ್ದಾರೆ. ಭಾರತೀಯ ಆಟಗಾರರನ್ನು ಕಡೆಗಣಿಸಿದ ಅವರು, ಪಾಕಿಸ್ತಾನ ಮಾಜಿ ಬ್ಯಾಟ್ಸ್‌ಮನ್ ಅನ್ನು ಆರಿಸಿದ್ದಾರೆ.
ಸಂದರ್ಶನವೊಂದರಲ್ಲಿ ವೆರ್ನಾನ್ ಫಿಲಾಂಡರ್ ಅವರು, "ನೀವು ಬೌಲ್ ಮಾಡಲು ಇಷ್ಟಪಡುವ ಒಬ್ಬ ಬ್ಯಾಟ್ಸ್‌ಮನ್ ಯಾರೆಂದು?" ಎಂದು ಡೇಲ್ ಸ್ಟೇನ್‌ಗೆ ಪ್ರಶ್ನೆಯನ್ನು ಕೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಡೇಲ್ ಸ್ಟೇನ್,"ಬಹುಶಃ ಮೊಹಮ್ಮದ್ ಹಫೀಝ್, ನಾನು ಇವರನ್ನು 16 ಬಾರಿ ಔಟ್ ಮಾಡಿದ್ದೇನೆ. ಅವರನ್ನು ನಾನು ಔಟ್ ಮಾಡಿದ್ದೇನೆ, ಹಾಗಾಗಿ ಇವರ ಹೆಸರನ್ನು ತೆಗೆದುಕೊಂಡಿದ್ದೇನೆ," ಎಂದು ಸ್ಟೇನ್ ತಿಳಿಸಿದ್ದಾರೆ.
ENG vs PAK: ಅರ್ಧಶತಕ ಬಾರಿಸಿ ಮಿಸ್ಬಾ ಉಲ್ ಹಕ್ ಒಳಗೊಂಡ ಎಲೈಟ್ ಲಿಸ್ಟ್ ಸೇರಿದ ಬಾಬರ್ ಆಝಮ್!
ವೈಭವ್ ಸೂರ್ಯವಂಶಿಗೆ ಡೇಲ್ ಸ್ಟೆನ್ ಮೆಚ್ಚುಗೆ
ಐಪಿಎಲ್‌ನಲ್ಲೂ ಆಡಿರುವ ದಕ್ಷಿಣ ಆಫ್ರಿಕಾದ ದಿಗ್ಗಜ ವೇಗಿ ಡೇಲ್ ಸ್ಟೇನ್, ಯುವ ಬ್ಯಾಟಿಂಗ್ ಪ್ರತಿಭೆ ವೈಭವ್ ಸೂರ್ಯವಂಶಿ ಅವರ ಭವಿಷ್ಯದ ಬಗ್ಗೆ ದೊಡ್ಡ ಭವಿಷ್ಯ ನುಡಿದಿದ್ದಾರೆ. ಸೂರ್ಯವಂಶಿ ತಮ್ಮ ವೃತ್ತಿಜೀವನ ಮುಗಿಸುವ ವೇಳೆಗೆ ಸಚಿನ್ ತೆಂಡೂಲ್ಕರ್ ಹಾಗೂ ವಿರಾಟ್ ಕೊಹ್ಲಿಗಿಂತಲೂ ದೊಡ್ಡ ಸಾಧನೆ ಮಾಡಲಿದ್ದಾರೆ ಎಂದು ಸ್ಟೇನ್ ಭವಿಷ್ಯ ನುಡಿದಿದ್ದಾರೆ.
“ಸೂರ್ಯವಂಶಿ ವಿಭಿನ್ನ ಪ್ರತಿಭೆ, ಮ್ಯಾನ್! ಸದ್ಯವೇ ಅವರು ಬಹುತೇಕ ಅಂತಾರಾಷ್ಟ್ರೀಯ ಆಟಗಾರರಿಗಿಂತ ಉತ್ತಮವಾಗಿ ಆಡುತ್ತಿದ್ದಾರೆ. ಅವರು ಅದ್ಭುತ ಬಾಲ ಪ್ರತಿಭೆ. ಭಾರತೀಯ ಕ್ರಿಕೆಟ್‌ಗೆ ಸಿಕ್ಕಿರುವ ಅಮೂಲ್ಯ ಸಂಪತ್ತು,” ಎಂದು SA20 ಸೀಸನ್-5ರ ಹಿನ್ನೆಲೆಯಲ್ಲಿ ನಡೆದ ಮಾಧ್ಯಮ ಸಂವಾದದಲ್ಲಿ ಎನ್‌ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಸ್ಟೇನ್ ಹೇಳಿದ್ದಾರೆ.
ಪಿಎಸ್‌ಎಲ್‌ನಿಂದ ಒಬ್ಬೇ ಒಬ್ಬ ವೈಭವ್ ಸೂರ್ಯವಂಶಿಯಂಥಾ ಬ್ಯಾಟರ್ ಬೆಳಕಿಗೆ ಬಂದಿಲ್ಲ: ವಸೀಮ್ ಅಕ್ರಮ್
ಐಪಿಎಲ್‌ನಲ್ಲಿ ಆರೆಂಜ್ ಕ್ಯಾಪ್ ಗೆದ್ದಿದ್ದ ಸೂರ್ಯವಂಶಿ
2026ರ ಐಪಿಎಲ್ ಟೂರ್ನಿಯಲ್ಲಿ ವೈಭವ್ ಸೂರ್ಯವಂಶಿ ಅದ್ಭುತ ಪ್ರದರ್ಶನ ನೀಡಿದ್ದು, 776 ರನ್ ಗಳಿಸುವ ಮೂಲಕ ಆರೆಂಜ್ ಕ್ಯಾಪ್ ಗೆದ್ದಿದ್ದರು. ಇದರ ಬಳಿಕ ಐರ್ಲೆಂಡ್ ಮತ್ತು ಇಂಗ್ಲೆಂಡ್ ಪ್ರವಾಸಕ್ಕೆ ಭಾರತ ತಂಡದ ಟಿ20ಐ ಸ್ಕ್ವಾಡ್‌ನಲ್ಲೂ ಸ್ಥಾನ ಪಡೆದಿದ್ದಾರೆ.
“ನೀವು ಸಚಿನ್ ಮತ್ತು ವಿರಾಟ್‌ನಂತಹ ಆಟಗಾರರ ಬಗ್ಗೆ ಯೋಚಿಸುತ್ತೀರಿ. ಆದರೆ ಈ ಹುಡುಗ ಸ್ಫೋಟಿಸಲಿದ್ದಾನೆ. ತನ್ನ ವೃತ್ತಿಜೀವನದ ಅಂತ್ಯದ ವೇಳೆಗೆ ಈ ಹುಡುಗ, ಅವರಿಬ್ಬರ ಒಟ್ಟಾರೆ ಸಾಧನೆಗಿಂತಲೂ ದೊಡ್ಡವನಾಗಲಿದ್ದಾನೆ. ಹೀಗಾಗಿ ಅವರನ್ನು ಹೇಗೆ ನಿರ್ವಹಿಸುತ್ತೀರಿ ಮತ್ತು ಹೇಗೆ ನೋಡಿಕೊಳ್ಳುತ್ತೀರಿ ಎಂಬುದರ ಬಗ್ಗೆ ಎಚ್ಚರಿಕೆಯಿಂದಿರಬೇಕು. ಏಕೆಂದರೆ ದೊಡ್ಡ ಜವಾಬ್ದಾರಿಯೊಂದಿಗೆ ದೊಡ್ಡ ಪ್ರತಿಫಲವೂ ಬರುತ್ತದೆ,” ಎಂದು ತಿಳಿಸಿದ್ದಾರೆ.