ಮಕ್ಕಳಿಂದ ಒಂದು ಫೋಟೋಗೆ 100 ರು ತೆಗೆದುಕೊಂಡ ವೈಭವ್ ಸೂರ್ಯವಂಶಿ! ವಿಡಿಯೊ
ರಾಜಸ್ಥಾನ್ ರಾಯಲ್ಸ್ ತಂಡದ ಆರಂಭಿಕ ಬ್ಯಾಟರ್ ವೈಭವ್ ಸೂರ್ಯವಂಶಿ ವಿಮಾನ ನಿಲ್ದಾಣದಲ್ಲಿ ಇಬ್ಬರು ಯುವ ಅಭಿಮಾನಿಗಳ ಬಳಿ ಫ್ರಾಂಕ್ ಮಾಡಿದರು. ಒಂದು ಫೋಟೋಗೆ 100 ರು ಶುಲ್ಕ ಪಡೆಯುತ್ತೇನೆಂದು ಹೇಳಿ ಮಕ್ಕಳ ಕಾಲೆಳೆದಿದ್ದಾರೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ವೈಭವ್ ಸೂರ್ಯವಂಶಿ ಶತಕ ಸಿಡಿಸಿ ಸಂಭ್ರಮಿಸಿದ್ದ ಫೋಟೋ. -
ನವದೆಹಲಿ: ಪ್ರಸ್ತುತ ನಡೆಯುತ್ತಿರುವ 2026ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) ಟೂರ್ನಿಯಲ್ಲಿ ತಮ್ಮ ಸ್ಪೋಟಕ ಬ್ಯಾಟಿಂಗ್ ಮೂಲಕ ಸದಾ ಟ್ರೆಂಡ್‌ನಲ್ಲಿರುವ ರಾಜಸ್ಥಾನ್ ರಾಯಲ್ಸ್ (RR) ತಂಡದ 15ರ ವಯಸ್ಸಿನ ಪೋರ ವೈಭವ್ ಸೂರ್ಯವಂಶಿ (Vaibhav Sooryavanshi) ಇದೀಗ ಮತ್ತೊಂದು ವಿಷಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿದ್ದಾರೆ. ರಾಜಸ್ಥಾನ್ ರಾಯಲ್ಸ್‌ನ ಇಬ್ಬರು ಪುಟಾಣಿ ಅಭಿಮಾನಿಗಳಿಗೆ ಫೋಟೋ ನೀಡಲು ಅವರು 100 ರು ಗಳ ಶಲ್ಕವನ್ನು ವಿಧಿಸಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ನಿಜಾನಾ? ತಮ್ಮ ಒಂದೇ ಒಂದು ಪೋಟೋಗಾಗಿ ವೈಭವ್ ಸೂರ್ಯವಂಶಿ ತಮ್ಮ ಪುಟಾಣಿ ಅಭಿಮಾನಿಗಳ ಬಳಿ 100 ರು ತೆಗೆದುಕೊಂಡಿದ್ದಾರಾ? ಖಂಡಿತಾ ಇಲ್ಲ! ಎಡಗೈ ಬ್ಯಾಟ್ಸ್‌ಮನ್ ಇಬ್ಬರು ಪುಟಾಣಿ ಹುಡುಗರ ಬಳಿ ಫ್ರಾಂಕ್ ಮಾಡಿದ್ದಾರೆ ಅಷ್ಟೆ. ವೈರಲ್ ಆಗಿರುವ ವಿಡಿಯೊದಲ್ಲಿ ವೈಭವ್ ಸೂರ್ಯವಂಶಿ ಪುಟಾಣಿ ಹುಡುಗರ ಬಳಿ ಏನೆಲ್ಲಾ ಮಾತನಾಡಿದ್ದಾರೆಂದು ಇಲ್ಲಿ ವಿವರಿಸಲಾಗಿದೆ.
SRH vs RR: 36 ಎಸೆತಗಳಲ್ಲಿ ಶತಕ ಬಾರಿಸಿ ಇತಿಹಾಸ ಬರೆದ ವೈಭವ್ ಸೂರ್ಯವಂಶಿ!
"ಬ್ರದರ್, ನಾನು ಹಣ ಪಡೆಯುತ್ತೇನೆ. ಬ್ರದರ್, ನಾನೀಗ ಇದನ್ನು ಪ್ರಾಮಾಣಿಕವಾಗಿ ಹೇಳುತ್ತಿದ್ದೇನೆ. ನಾನು ಫೋಟೋಗೆ 100 ರು. ಗಳನ್ನು ಪಡೆಯುತ್ತೇನೆ," ಎಂದು ವೈರಲ್ ಆಗಿರುವ ವಿಡಿಯೊದಲ್ಲಿ ಹೇಳಿದ್ದಾರೆ. ಅದರಂತೆ ಇಬ್ಬರು ಹುಡುಗರು 200 ರು. ಗಳನ್ನು ವೈಬವ್‌ಗೆ ನೀಡಲು ಮುಂದಾದರು. ಆದರೆ, ವೈಭವ್ ಸೂರ್ಯವಂಶಿ ಅವರಿಂದ ಹಣ ಪಡೆಯಲಿಲ್ಲ. ನಾನು ನಿಮ್ಮ ಬಳಿ ಫ್ರಾಂಕ್ ಮಾಡಿದ್ದೇನೆಂದು ಅವರು ಹುಡಗರಿಗೆ ಕ್ಯಾಮೆರಾವನ್ನು ತೋರಿಸಿದರು. ಫೋಟೋ ಕ್ಲಿಕ್ಕಿಸಿಕೊಂಡ ಇಬ್ಬರು ಅಭಿಮಾನಿಗಳು ಸಂತೋಷವಾಗಿ ಹೋದರು.
2026ರ ಐಪಿಎಲ್ ಟೂರ್ನಿಯಲ್ಲಿ ವೈಭವ್ ಸೂರ್ಯವಂಶಿ ಅದ್ಭುತ ಬ್ಯಾಟಿಂಗ್ ಪ್ರದರ್ಶನವನ್ನು ತೋರುತ್ತಿದ್ದಾರೆ. ಅವರು ಇತ್ತೀಚೆಗೆ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ 36 ಎಸೆತಗಳಲ್ಲಿ ಸ್ಪೋಟಕ ಶತಕವನ್ನು ಬಾರಿಸಿದ್ದರು. ಆ ಮೂಲಕ ಐಪಿಎಲ್ ಟೂರ್ನಿಯ ಮೂರನೇ ವೇಗದ ಶತಕವನ್ನು ಬಾರಿಸಿದ್ದರು. ಆದರೂ ಈ ಪಂದ್ಯದಲ್ಲಿ ರಾಜಸ್ಥಾನ್ ತಂಡ ಸೋಲು ಅನುಭವಿಸಿತ್ತು.
Baccha party always a step ahead 😂 pic.twitter.com/locrozR0Yh
— Rajasthan Royals (@rajasthanroyals) April 27, 2026
ವೈಭವ್ ಸೂರ್ಯವಂಶಿ ನನ್ನ ನೆಚ್ಚಿನ ಆಟಗಾರ
ಈ ಪಂದ್ಯದ ಬಳಿಕ ಎಸ್‌ಆರ್‌ಎಚ್ ನಾಯಕ ಪ್ಯಾಟ್ ಕಮಿನ್ಸ್, ವೈಭವ್ ಸೂರ್ಯವಂಶಿಯನ್ನು ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ಇನ್ನು ಮುಂದೆ ವೈಭವ್ ನನ್ನ ನೆಚ್ಚಿನ ಆಟಗಾರ ಎಂದು ಗುಣಗಾನ ಮಾಡಿದ್ದಾರೆ. "ಅವರು ನನ್ನ ನೆಚ್ಚಿನ ಆಟಗಾರ ಎಂದು ಭಾವಿಸುತ್ತೇನೆ. ಅವರು ಬಹಳಾ ಬಲವಾಗಿ ಚೆಂಡನ್ನು ಹೊಡೆಯುತ್ತಾರೆ. ಅವರ ಆಟವನ್ನು ನೋಡುವುದು ಅದ್ಭುತವಾಗಿದೆ ಹಾಗೂ ಮೋಜಿನಿಂದ ಕೂಡಿದೆ," ಎಂದು ಪ್ಯಾಟ್ ಕಮಿನ್ಸ್ ಹೇಳಿದ್ದಾರೆ.
“ಬೌಲರ್ ಆಗಿದ್ದರೆ ನೀವು ತುಂಬಾ ನಿಖರವಾಗಿರಬೇಕು. ಹಾಗಿಲ್ಲದಿದ್ದರೆ ಚೆಂಡು ಬಹಳ ದೂರ ಹೋಗುತ್ತದೆ. ಅವರ ಪ್ರದರ್ಶನ ನಿಜಕ್ಕೂ ಮೆಚ್ಚುವಂತಿದೆ. ಅವರು ತನ್ನ ವೃತ್ತಿಜೀವನವನ್ನು ಅತ್ಯುತ್ತಮವಾಗಿ ಆರಂಭಿಸಿದ್ದಾರೆ ಮತ್ತು ಅವರು ಆಡುತ್ತಿರುವ ರೀತಿಯು ನನಗೆ ತುಂಬಾ ಇಷ್ಟವಾಗಿದೆ. ಅವರು ಪಂದ್ಯವನ್ನು ಧೈರ್ಯವಾಗಿ ಎದುರಿಸುತ್ತಾರೆ," ಎಂದು ಎಸ್‌ಆರ್‌ಎಚ್ ನಾಯಕ ಗುಣಗಾನ ಮಾಡಿದ್ದಾರೆ.
PBKS vs RR: ಅಜೇಯ ಪಂಜಾಬ್‌ಗೆ ಮೊದಲ ಸೋಲುಣಿಸುವ ತವಕದಲ್ಲಿ ರಾಜಸ್ಥಾನ್
2026ರ ಐಪಿಎಲ್ ಟೂರ್ನಿಯಲ್ಲಿ ವೈಭವ್ ಪ್ರದರ್ಶನ
ಸೂರ್ಯವಂಶಿ ಇದುವರೆಗೆ ಎಂಟು ಪಂದ್ಯಗಳಲ್ಲಿ 44.63ರ ಸರಾಸರಿ ಮತ್ತು 234.87 ಸ್ಟ್ರೈಕ್‌ರೇಟ್‌ನಲ್ಲಿ 357 ರನ್‌ಗಳನ್ನು ಗಳಿಸಿದ್ದಾರೆ. ಈ ಸೀಸನ್‌ನಲ್ಲಿ ಅವರು 31 ಬೌಂಡರಿಗಳು ಮತ್ತು 32 ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ. ಅವರು ಏಪ್ರಿಲ್ 28ರಂದು ಮುಲ್ಲಾನ್‌ಪುರದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಪರ ಮುಂದಿನ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ.