PBKS vs RR: ಅಜೇಯ ಪಂಜಾಬ್‌ಗೆ ಮೊದಲ ಸೋಲುಣಿಸುವ ತವಕದಲ್ಲಿ ರಾಜಸ್ಥಾನ್
IPL 2026: ನ್ಯೂ ಚಂಡೀಗಢದಲ್ಲಿರುವ ಮಹಾರಾಜ ಯಾದವೀಂದ್ರ ಸಿಂಗ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದ ಪಿಚ್ ಸಾಮಾನ್ಯವಾಗಿ ಬ್ಯಾಟಿಂಗ್ ಸ್ನೇಹಿಯಾಗಿದ್ದು, ಸ್ಕೋರ್‌ಗಳು ಹೆಚ್ಚಾಗಿ 200 ರನ್‌ಗಳ ಗಡಿಯನ್ನು ದಾಟುತ್ತವೆ. ಮೇಲ್ಮೈ ಉತ್ತಮ ಬೌನ್ಸ್ ಮತ್ತು ಕ್ಯಾರಿ ನೀಡುತ್ತದೆ. ಉಭಯ ತಂಡಗಳ ಬ್ಯಾಟಿಂಗ್ ಬಲಿಷ್ಠವಾಗಿರುವ ಕಾರಣ ದೊಡ್ಡ ಮೊತ್ತಕ್ಕೇನು ಅಡ್ಡಿಯಿಲ್ಲ.
RR vs PBKS -
ಮುಲ್ಲನ್‌ಪುರ್, ಎ.27: ಏಪ್ರಿಲ್ 28 ರಂದು ಮುಲ್ಲನ್‌ಪುರದ ಮಹಾರಾಜ ಯಾದವೀಂದ್ರ ಸಿಂಗ್ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ (IPL 2026) 2026 ರ 40ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ರಾಜಸ್ಥಾನ್ ರಾಯಲ್ಸ್ (PBKS vs RR) ವಿರುದ್ಧ ಸೆಣಸಲಿದೆ.
ಅದ್ಭುತ ಫಾರ್ಮ್‌ನಲ್ಲಿರುವ ಪಂಜಾಬ್ ಕಿಂಗ್ಸ್ ತಂಡ ಆಡಿದ ಏಳು ಪಂದ್ಯಗಳಿಂದ ಆರು ಗೆಲುವುಗಳೊಂದಿಗೆ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ಆರಾಮವಾಗಿ ಕುಳಿತಿದೆ. ಅವರ ಚೇಸಿಂಗ್ ಸಾಮರ್ಥ್ಯವು ವಿಶೇಷವಾಗಿ ಪ್ರಭಾವಶಾಲಿಯಾಗಿದೆ. ಮತ್ತೊಂದೆಡೆ, ಆರ್‌ಆರ್ ಪ್ರಸ್ತುತ ಎಂಟು ಪಂದ್ಯಗಳಲ್ಲಿ ಐದು ಗೆಲುವುಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಸೋಲಿನಿಂದ ಹೊರಬಂದು ಮತ್ತೆ ಪುಟಿದೇಳುವ ಮತ್ತು ಗೆಲುವಿನ ಹಾದಿಗೆ ಮರಳಲು ಅವರು ಉತ್ಸುಕರಾಗಿದ್ದಾರೆ.
ಪಿಚ್ ರಿಪೋರ್ಟ್
ನ್ಯೂ ಚಂಡೀಗಢದಲ್ಲಿರುವ ಮಹಾರಾಜ ಯಾದವೀಂದ್ರ ಸಿಂಗ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದ ಪಿಚ್ ಸಾಮಾನ್ಯವಾಗಿ ಬ್ಯಾಟಿಂಗ್ ಸ್ನೇಹಿಯಾಗಿದ್ದು, ಸ್ಕೋರ್‌ಗಳು ಹೆಚ್ಚಾಗಿ 200 ರನ್‌ಗಳ ಗಡಿಯನ್ನು ದಾಟುತ್ತವೆ. ಮೇಲ್ಮೈ ಉತ್ತಮ ಬೌನ್ಸ್ ಮತ್ತು ಕ್ಯಾರಿ ನೀಡುತ್ತದೆ. ಉಭಯ ತಂಡಗಳ ಬ್ಯಾಟಿಂಗ್ ಬಲಿಷ್ಠವಾಗಿರುವ ಕಾರಣ ದೊಡ್ಡ ಮೊತ್ತಕ್ಕೇನು ಅಡ್ಡಿಯಿಲ್ಲ.
ಮುಖಾಮುಖಿ
ಉಭಯ ತಂಡಗಳ ಮುಖಾಮುಖಿ ದಾಖಲೆ ನೋಡುವುದಾದರೆ, 30 ಪಂದ್ಯಗಳನ್ನಾಡಿದ್ದು ಪಂಜಾಬ್ 13 ಪಂದ್ಯ ಗೆದ್ದರೆ, ರಾಜಸ್ಥಾನ್ 17 ಪಂದ್ಯ ಗೆದ್ದಿದೆ.
ಸಂಭಾವ್ಯ ತಂಡಗಳು
ಪಂಜಾಬ್ ಕಿಂಗ್ಸ್: ಪ್ರಭ್‌ಸಿಮ್ರಾನ್ ಸಿಂಗ್ (ವಿ.ಕೀ.), ಪ್ರಿಯಾಂಶ್ ಆರ್ಯ, ಕೂಪರ್ ಕೊನೊಲಿ, ಶ್ರೇಯಸ್ ಅಯ್ಯರ್ (ನಾಯಕ), ಶಶಾಂಕ್ ಸಿಂಗ್, ಮಾರ್ಕಸ್ ಸ್ಟೊಯಿನಿಸ್, ಮಾರ್ಕೊ ಜಾನ್ಸೆನ್, ಕ್ಸೇವಿಯರ್ ಬಾರ್ಟ್ಲೆಟ್, ವಿಜಯ್ಕುಮಾರ್ ವೈಶಾಕ್, ಅರ್ಶ್‌ದೀಪ್ ಸಿಂಗ್, ಯುಜ್ವೇಂದ್ರ ಚಾಹಲ್
ಇಂಪ್ಯಾಕ್ಟ್ ಆಟಗಾರ: ನೆಹಾಲ್ ವಧೇರಾ.
ರಾಜಸ್ಥಾನ್ ರಾಯಲ್ಸ್: ಯಶಸ್ವಿ ಜೈಸ್ವಾಲ್, ಧ್ರುವ್ ಜುರೆಲ್ (ವಿ.ಕೀ.), ರಿಯಾನ್ ಪರಾಗ್ (ನಾಯಕ), ಶಿಮ್ರಾನ್ ಹೆಟ್ಮೆಯರ್, ಡೊನೊವನ್ ಫೆರೇರಾ, ರವೀಂದ್ರ ಜಡೇಜಾ, ಜೋಫ್ರಾ ಆರ್ಚರ್, ತುಷಾರ್ ದೇಶಪಾಂಡೆ, ನಾಂದ್ರೆ ಬರ್ಗರ್, ಬ್ರಿಜೇಶ್ ಶರ್ಮಾ, ರವಿ ಬಿಷ್ಣೋಯ್
ಇಂಪ್ಯಾಕ್ಟ್ ಆಟಗಾರ: ವೈಭವ್ ಸೂರ್ಯವಂಶಿ.
IPL 2026: ಅಂಪೈರ್ ತೀರ್ಪಿಗೆ ಸಹನೆ ಕಳೆದುಕೊಂಡು ಅನುಚಿತ ವರ್ತನೆ; ಕೆಕೆಆರ್‌ನ ರಘುವಂಶಿಗೆ ದಂಡ ಶಿಕ್ಷೆ
ದಾಖಲೆಗಳ ಪಟ್ಟಿ
ಪ್ರಭ್‌ಸಿಮ್ರಾನ್ ಸಿಂಗ್: ಟಿ20ಗಳಲ್ಲಿ 3500 ರನ್ ತಲುಪಲು 58 ರನ್ ಅಗತ್ಯವಿದೆ.
ಪ್ರಭ್‌ಸಿಮ್ರಾನ್ ಸಿಂಗ್: ಟಿ20ಗಳಲ್ಲಿ 350 ಬೌಂಡರಿಗಳನ್ನು ತಲುಪಲು 2 ಬೌಂಡರಿಗಳು ಅಗತ್ಯವಿದೆ.
ನೆಹಾಲ್ ವಾಧೇರಾ: ಟಿ20ಗಳಲ್ಲಿ 100 ಬೌಂಡರಿಗಳನ್ನು ತಲುಪಲು 3 ಬೌಂಡರಿಗಳು ಅಗತ್ಯವಿದೆ.
ಯಶಸ್ವಿ ಜೈಸ್ವಾಲ್: ಐಪಿಎಲ್‌ನಲ್ಲಿ 2500 ರನ್ ಗಳಿಸಲು 79 ರನ್‌ಗಳು ಬೇಕಾಗಿದೆ.
ವೈಭವ್ ಸೂರ್ಯವಂಶಿ: ಟಿ20ಗಳಲ್ಲಿ 100 ಸಿಕ್ಸರ್‌ಗಳನ್ನು ತಲುಪಲು 6 ಸಿಕ್ಸರ್‌ಗಳು ಬೇಕು.
ವೈಭವ್ ಸೂರ್ಯವಂಶಿ: ಐಪಿಎಲ್‌ನಲ್ಲಿ 50 ಬೌಂಡರಿಗಳನ್ನು ತಲುಪಲು 1 ಬೌಂಡರಿ ಅಗತ್ಯ.
ಧ್ರುವ್ ಜುರೆಲ್: ಐಪಿಎಲ್‌ನಲ್ಲಿ 1000 ರನ್‌ಗಳನ್ನು ತಲುಪಲು 88 ರನ್‌ಗಳು ಅಗತ್ಯ.
ಧ್ರುವ್ ಜುರೆಲ್: ಐಪಿಎಲ್‌ನಲ್ಲಿ 50 ಸಿಕ್ಸರ್‌ಗಳನ್ನು ತಲುಪಲು 3 ಸಿಕ್ಸರ್‌ಗಳು ಬೇಕಾಗಿದೆ.
ರಿಯಾನ್ ಪರಾಗ್: ಟಿ20ಗಳಲ್ಲಿ 200 ಸಿಕ್ಸರ್‌ಗಳನ್ನು ತಲುಪಲು 7 ಸಿಕ್ಸರ್‌ಗಳು ಬೇಕಾಗಿದೆ.
ರಿಯಾನ್ ಪರಾಗ್: ಐಪಿಎಲ್‌ನಲ್ಲಿ 100 ಸಿಕ್ಸರ್‌ಗಳನ್ನು ತಲುಪಲು 8 ಸಿಕ್ಸರ್‌ಗಳು ಅಗತ್ಯವಿದೆ.
ಶಿಮ್ರಾನ್ ಹೆಟ್ಮೈಯರ್: ಟಿ20ಗಳಲ್ಲಿ 450 ಬೌಂಡರಿಗಳನ್ನು ತಲುಪಲು 2 ಬೌಂಡರಿಗಳು ಬೇಕಾಗಿವೆ.
ಶಿಮ್ರಾನ್ ಹೆಟ್ಮೈಯರ್: ಐಪಿಎಲ್‌ನಲ್ಲಿ 100 ಬೌಂಡರಿಗಳನ್ನು ತಲುಪಲು 3 ಬೌಂಡರಿಗಳು ಅಗತ್ಯವಿದೆ.
ಶಿಮ್ರಾನ್ ಹೆಟ್ಮೈಯರ್: 4 ಐಪಿಎಲ್‌ನಲ್ಲಿ 100 ಸಿಕ್ಸರ್‌ಗಳನ್ನು ತಲುಪಲು ಸಿಕ್ಸರ್‌ಗಳು ಬೇಕು.
ರವೀಂದ್ರ ಜಡೇಜಾ: ಟಿ20ಯಲ್ಲಿ 150 ಸಿಕ್ಸರ್‌ಗಳನ್ನು ತಲುಪಲು 8 ಸಿಕ್ಸರ್‌ಗಳು ಅಗತ್ಯವಿದೆ.