Karun Nair: 8 ವರ್ಷಗಳ ಬಳಿಕ ಟೆಸ್ಟ್ ತಂಡಕ್ಕೆ ಗ್ರೇಟೆಸ್ಟ್ ಕಮ್‌ಬ್ಯಾಕ್ ಮಾಡಿದ ಕನ್ನಡಿಗ!
Karun Nair test Comeback: ಇಂಗ್ಲೆಂಡ್ ವಿರುದ್ದದ ಐದು ಪಂದ್ಯಗಳ ಟೆಸ್ಟ್ ಸರಣಿಯ ಭಾರತ ತಂಡವನ್ನು ಬಿಸಿಸಿಐ ಮೇ 24 ರಂದು ಪ್ರಕಟಿಸಿದ್ದು, ಶುಭಮನ್ ಗಿಲ್‌ಗೆ ನಾಯಕತ್ವವನ್ನು ನೀಡಿದೆ. ಕನ್ನಡಿಗ ಕರುಣ್ ನಾಯರ್‌ಗೂ ಕೂಡ ಎಂಟು ವರ್ಷಗಳ ಬಳಿಕ ಟೆಸ್ಟ್ ತಂಡದಲ್ಲಿ ಸ್ಥಾನವನ್ನು ನೀಡಲಾಗಿದೆ.

ಭಾರತ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದ ಕರುಣ್ ನಾಯರ್.

ನವದೆಹಲಿ: ಇಂಗ್ಲೆಂಡ್ ವಿರುದ್ಧದ ಮುಂಬರುವ ಐದು ಪಂದ್ಯಗಳ ಟೆಸ್ಟ್ ಸರಣಿಯ (IND vs ENG) ಭಾರತ ತಂಡವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಮೇ 24 ರಂದು ಪ್ರಕಟಿಸಿದೆ. ಯುವ ಬ್ಯಾಟ್ಸ್‌ಮನ್ ಶುಭಮನ್ ಗಿಲ್ ಅವರನ್ನು ನೂತನ ನಾಯಕನ್ನಾಗಿ ಆಯ್ಕೆ ಮಾಡಲಾಗಿದೆ. ವಿಕೆಟ್ ಕೀಪರ್ ರಿಷಭ್ ಪಂತ್ ಅವರನ್ನು ಉಪ ನಾಯಕನ್ನಾಗಿ ನೇಮಿಸಲಾಗಿದೆ. ಅಂದ ಹಾಗೆ ಕನ್ನಡಿಗ ಕರುಣ್ ನಾಯರ್ ( Karun Nair) ಅವರು ಎಂಟು ವರ್ಷಗಳ ಬಳಿಕ ಭಾರತ ಟೆಸ್ಟ್ ತಂಡಕ್ಕೆ ಕಮ್‌ಬ್ಯಾಕ್ ಮಾಡಿದ್ದಾರೆ. ಜೂನ್ 20 ರಂದು ಹೆಡಿಂಗ್ಲೆನಲ್ಲಿ ಮೊದಲನೇ ಟೆಸ್ಟ್ ಪಂದ್ಯದ ಮೂಲಕ ಭಾರತ ತಂಡದ ಇಂಗ್ಲೆಂಡ್ ಪ್ರವಾಸ ಆರಂಭವಾಗಲಿದೆ.
ಕರ್ನಾಟಕ ತಂಡದ ಪರ ರಣಜಿ ಟ್ರೋಫಿ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರಿದ ಬಳಿಕ ಕರುಣ್ ನಾಯರ್ ಅವರು 2016ರಲ್ಲಿ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಅಜಿಂಕ್ಯ ರಹಾನೆ ಗಾಯಕ್ಕೆ ತುತ್ತಾಗಿದ್ದ ಹಿನ್ನೆಲೆಯಲ್ಲಿ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿದ್ದ ಕರುಣ್ ನಾಯರ್ ಇಂಗ್ಲೆಂಡ್ ವಿರುದ್ಧ ಚೆನ್ನೈ ಟೆಸ್ಟ್ ಪಂದ್ಯದಲ್ಲಿ ತ್ರಿಶತಕ ಸಿಡಿಸಿ ವಿಶ್ವ ಕ್ರಿಕೆಟ್ ತನ್ನತ್ತಾ ತಿರುಗುವತ್ತಾ ಮಾಡಿದ್ದರು. ವೀರೇಂದ್ರ ಸೆಹ್ವಾಗ್ ಬಳಿಕ ಟೆಸ್ಟ್ ಕ್ರಿಕೆಟ್‌ನಲ್ಲಿ ತ್ರಿಶತಕ ಸಿಡಿಸಿದ ಎರಡನೇ ಬ್ಯಾಟ್ಸ್‌ಮನ್ ಎಂಬ ದಾಖಲೆಯನ್ನು ಅವರು ಬರೆದಿದ್ದರು. ಆದರೆ, ಅವರು ಹೆಚ್ಚು ದಿನಗಳ ಕಾಲ ಭಾರತ ಟೆಸ್ಟ್ ತಂಡದಲ್ಲಿ ಆಡಲಿಲ್ಲ.
India's Test Squad: ಇಂಗ್ಲೆಂಡ್ ಟೆಸ್ಟ್ ಸರಣಿಗೆ ಭಾರತ ತಂಡ ಪ್ರಕಟ, ಶುಭಮನ್ ಗಿಲ್ ನೂತನ ನಾಯಕ!
2017ರಲ್ಲಿ ಕೊನೆಯ ಟೆಸ್ಟ್ ಆಡಿದ್ದ ಕನ್ನಡಿಗ
ಅವರು 2017ರಲ್ಲಿ ಧರ್ಮಶಾಲಾದಲ್ಲಿ ಆಸ್ಟ್ರೇಲಿಯಾ ವಿರುದ್ದ ಕೊನೆಯ ಟೆಸ್ಟ್ ಆಡಿದ್ದರು. ಅವರು ಆಡಿದ್ದ ಕೇವಲ 6 ಟೆಸ್ಟ್ ಪಂದ್ಯಗಳಿಂದ 67 ರ ಸರಾಸರಿಯಲ್ಲಿ 374 ರನ್‌ಗಳನ್ನು ಕಲೆ ಹಾಕಿದ್ದಾರೆ. ಆದರೆ, ಅಜಿಂಕ್ಯ ರಹಾನೆ ತಂಡಕ್ಕೆ ಮರಳಿದ ಬಳಿಕ ಕರುಣ್ ನಾಯರ್ ಮತ್ತೆ ರಾಷ್ಟ್ರೀಯ ತಂಡಕ್ಕೆ ಮರಳಲಿಲ್ಲ. ನಂತರ ಅವರು ತಮ್ಮ ವೃತ್ತಿ ಜೀವನದಲ್ಲಿ ಸಾಕಷ್ಟು ಏರಿಳಿತಗಳನ್ನು ಕಂಡರು. ಅವರು ತಮ್ಮ ರಾಜ್ಯ ತಂಡ ಕರ್ನಾಟಕದಿಂದಲೂ ಸ್ಥಾನವನ್ನು ಕಳೆದುಕೊಂಡಿದ್ದರು.
ವಿದರ್ಭ ಪರ ಮಿಂಚಿದ ಕರುಣ್ ನಾಯರ್
ಆದರೆ, 2023-24ರ ದೇಶಿ ಕ್ರಿಕೆಟ್ ಋತುವಿಗೂ ಮುನ್ನ ಕರುಣ್ ನಾಯರ್ ಅವರು ವಿದರ್ಭ ತಂಡಕ್ಕೆ ಸೇರ್ಪಡೆಯಾಗಿದ್ದರು. ಅವರ ಈ ನಿರ್ಧಾರ ಅದಷ್ಟವನ್ನು ಬದಲಿಸಿತು. ಅವರು 2024-25 ರ ಸಾಲಿನಲ್ಲಿ ವಿದರ್ಭ ತಂಡದ ಪರ ಆಡಿದ 9 ಪಂದ್ಯಗಳಿಂದ 54ರ ಸರಾಸರಿಯಲ್ಲಿ 863 ರನ್‌ಗಳನ್ನು ಕಲೆ ಹಾಕಿದ್ದರು. ಆ ಮೂಲಕ ವಿದರ್ಭ ತಂಡ ಮೂರನೇ ರಣಜಿ ಟ್ರೋಫಿ ಗೆಲುವಿಗೆ ನೆರವು ನೀಡಿದ್ದರು. ರಣಜಿ ಟ್ರೋಫಿ ಮಾತ್ರವಲ್ಲದೆ ವೈಟ್ ಬಾಲ್ ಕ್ರಿಕೆಟ್‌ನಲ್ಲಿಯೂ ಮಿಂಚಿದ್ದರು.
Shubman Gill-led #TeamIndia are READY for an action-packed Test series 💪
— BCCI (@BCCI) May 24, 2025
A look at the squad for India Men’s Tour of England 🙌#ENGvIND | @ShubmanGill pic.twitter.com/y2cnQoWIpq
ಮೂರು ವರ್ಷಗಳ ಬಳಿಕ ಐಪಿಎಲ್‌ಗೆ ಕಮ್‌ಬ್ಯಾಕ್
ಇದರ ಫಲವಾಗಿ ಮೂರು ವರ್ಷಗಳ ಬಳಿಕ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಕಮ್‌ಬ್ಯಾಕ್ ಮಾಡಿದ್ದರು. ಡೆಲ್ಲಿ ಕ್ಯಾಪಿಟಲ್ಸ್ ಪರ ಈ ಸೀಸನ್‌ನಲ್ಲಿ ಕರುಣ್ ನಾಯರ್ ಆಡಿದ ಮೊದಲನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ದ 80ಕ್ಕೂ ಅಧಿಕ ರನ್‌ಗಳನ್ನು ಕಲೆ ಹಾಕಿದ್ದರು. ಇದಾದ ಬಳಿಕ ಕರುಣ್ ನಾಯರ್ ಅವರ ಹಳೆಯ ಟ್ವೀಟ್‌ವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಅದೇನೆಂದರೆ, "ಕ್ರಿಕೆಟ್, ದಯಮಾಡಿ ನನಗೆ ಮತ್ತೊಂದು ಅವಕಾಶ ಕೊಡು," ಎಂದು ಟ್ವೀಟ್ ಮಾಡಿದ್ದರು.
Say Hello to #TeamIndia's newest Test Captain 👋@ShubmanGill pic.twitter.com/OkBmNZT5M0
— BCCI (@BCCI) May 24, 2025
ಕರುನ್ ನಾಯರ್ ಕೌಂಟಿ ಚಾಂಪಿಯನ್‌ಷಿಪ್ ಅಂಕಿಅಂಶಗಳು
ಭಾರತ ಟೆಸ್ಟ್ ತಂಡಕ್ಕೆ ಆಯ್ಕೆ ಮಾಡುವುದಕ್ಕೂ ಮುನ್ನ ಕರುಣ್ ನಾಯರ್ ಅವರನ್ನು ಭಾರತ ʻಎʼ ತಂಡದಲ್ಲಿ ಸ್ಥಾನವನ್ನು ನೀಡಲಾಗಿದೆ. ಇಂಗ್ಲೆಂಡ್ ಲಯನ್ಸ್ ವಿರುದ್ಧ ಅವರು ಉತ್ತಮ ಪ್ರದರ್ಶನವನ್ನು ತೋರಿದರೆ, ಭಾರತ ತಂಡದ ಪ್ಲೇಯಿಂಗ್ xiನಲ್ಲಿ ಸ್ಥಾನವನ್ನು ಪಡೆಯಲಿದ್ದಾರೆ. ಅಂದ ಹಾಗೆ ಕರುಣ್ ನಾಯರ್ ಅವರು ಕೌಂಟಿ ಚಾಂಪಿಯನ್‌ಷಿಪ್‌ನಲ್ಲಿಯೂ ಆಡಿದ ಅನುಭವವನ್ನು ಹೊಂದಿದ್ದಾರೆ. 2023ರಲ್ಲಿ ಆಡಿದ್ದ ಮೂರು ಪಂದ್ಯಗಳಿಂದ ಅವರು 249 ರನ್‌ಗಳನ್ನು ಕಲೆ ಹಾಕಿದ್ದರು. ನಂತರ 2024ರಲ್ಲಿ ಆಡಿದ್ದದ 7 ಪಂದ್ಯಗಳ 11 ಇನಿಂಗ್ಸ್‌ಗಳಿಂದ 487 ರನ್‌ಗಳನ್ನು ಕಲೆ ಹಾಕಿದ್ದರು. 202 ರನ್ ಇವರ ಕೌಂಟಿ ವೃತ್ತಿ ಜೀವನದಲ್ಲಿನ ವೈಯಕ್ತಿಕ ಗರಿಷ್ಠ ಮೊತ್ತವಾಗಿದೆ.