ಶುಭಮನ್ ಗಿಲ್ ನಾಯಕತ್ವದಲ್ಲಿ ಭಾರತ ಟೆಸ್ಟ್ ಸರಣಿಯನ್ನು ಗೆಲ್ಲಲಿದೆ ಎಂದ ಕಪಿಲ್ ದೇವ್!
Kapil Dev on IND vs ENG test Series: ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಜೂನ್ 20 ರಂದು ಮೊದಲನೇ ಟೆಸ್ಟ್ ಪಂದ್ಯವನ್ನು ಆರಂಭಿಸಲಿದವೆ. ಈ ಪಂದ್ಯದ ಮೂಲಕ ಭಾರತ, ಇಂಗ್ಲೆಂಡ್ ಪ್ರವಾಸವನ್ನು ಅಧಿಕೃತವಾಇ ಆರಂಭಿಸಲಿವೆ. ಅಂದ ಹಾಗೆ ಈ ಟೆಸ್ಟ್ ಸರಣಿಯಲ್ಲಿ ಗೆಲ್ಲುವ ತಂಡವನ್ನು ದಿಗ್ಗಜ ಕಪಿಲ್ ದೇವ್ ಹೆಸರಿಸಿದ್ದಾರೆ.

ಶುಭಮನ್ ಗಿಲ್ ನಾಯಕತ್ವದ ಬಗ್ಗೆ ದೊಡ್ಡ ಹೇಳಿಕೆ ನೀಡಿದ ಕಪಿಲ್ ದೇವ್.

ಲೀಡ್ಸ್: ಶುಭಮನ್ ಗಿಲ್ ನಾಯಕತ್ವದ ಭಾರತ ತಂಡ (Indain Cricket Team) ಈ ಬಾರಿ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು (IND vs ENG) ಗೆಲ್ಲಲಿದೆ ಎಂದು 1983ರ ವಿಶ್ವಕಪ್ ವಿಜೇತ ನಾಯಕ ಕಪಿಲ್ ದೇವ್ (Kapil Dev) ಭವಿಷ್ಯ ನುಡಿದಿದ್ದಾರೆ. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಹಾಗೂ ಆರ್ ಅಶ್ವಿನ್ ಅವರ ಅನುಪಸ್ಥಿತಿಯಲ್ಲಿ ಭಾರತ ತಂಡ, ಶುಭಮನ್ ಗಿಲ್ ನಾಯಕತ್ವದಲ್ಲಿ ಟೆಸ್ಟ್ ಸರಣಿಯನ್ನು ಆಡಲಿದೆ. ಈ ಹಿನ್ನೆಲೆಯಲ್ಲಿ ಭಾರತ ಯುವ ತಂಡಕ್ಕೆ ಈ ಬಾರಿ ಕಠಿಣ ಸವಾಲು ಎದುರಾಗಲಿದೆ. ಜೂನ್ 20 ರಂದು ಲೀಡ್ಸ್ನ ಹೆಡಿಂಗ್ಲೆ ಕ್ರಿಕೆಟ್ ಕ್ರೀಡಾಂಗಣದಲ್ಲಿ ಆರಂಭವಾಗಲಿರುವ ಮೊದಲನೇ ಟೆಸ್ಟ್ ಪಂದ್ಯದ ಮೂಲಕ ಭಾರತ ತಂಡದ ಇಂಗ್ಲೆಂಡ್ ಪ್ರವಾಸವನ್ನು ಆರಂಭಿಸಲಿದೆ.
ಟೈಮ್ಸ್ ಆಫ್ ಇಂಡಿಯಾದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಕಪಿಲ್ ದೇವ್, "ಶುಭಮನ್ ಗಿಲ್ ಒಳ್ಳೆಯವರು ಹಾಗೂ ಪ್ರತಿಭಾವಂತ ಹುಡುಗ. ಇದೀಗ ಅವರು ಭಾರತ ತಂಡಕ್ಕೆ ನಾಯಕರಾಗಿದ್ದಾರೆ," ಎಂದು ಹೇಳಿದ್ದಾರೆ. ಅಲ್ಲದೆ ಇದೇ ವೇಳೆ ಅವರು ಶುಭಮನ್ ಗಿಲ್ ನಾಯಕತ್ವದಲ್ಲಿ ಭಾರತ ಟೆಸ್ಟ್ ಸರಣಿಯನ್ನು ಗೆಲ್ಲಲಿದೆ ಎಂದು ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
IND vs ENG 1st Test: ಭಾರತ ತಂಡಕ್ಕೆ ಎಚ್ಚರಿಕೆ ನೀಡಿದ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್
"ಶುಭಮನ್ ಗಿಲ್ ಅವರು ತಮ್ಮ ಕೈಯಲ್ಲಿ ಟೆಸ್ಟ್ ಸರಣಿಯನ್ನು ತಮ್ಮ ಕೈಯಲ್ಲಿ ಹಿಡಿದುಕೊಂಡು ಭಾರತಕ್ಕೆ ಮರಳಲಿದ್ದಾರೆಂದು ನನಗೆ ವಿಶ್ವಾಸವಿದೆ. ನಮಗೆ ತುಂಬಾ ಹೆಮ್ಮೆಯಿದೆ ಹಾಗೂ ಅವರಿಗೆ ಈ ಟೆಸ್ಟ್ ಸರಣಿಯಲ್ಲಿ ಅದೃಷ್ಟ ಕೈ ಹಿಡಿಯಲಿ. ಅವರು ತಮ್ಮ ಪೂರ್ಣ ಪ್ರಮಾಣದ ಆಡಿ, ಟೆಸ್ಟ್ ಸರಣಿಯನ್ನು ಗೆದ್ದು ಭಾರತಕ್ಕೆ ಮರಳಲಿದೆ ಎಂಬ ನಿರೀಕ್ಷೆ ಇದೆ, " ಎಂದು ಕಪಿಲ್ ದೇವ್ ತಿಳಿಸಿದ್ದಾರೆ.
ರಾಹುಲ್ ದ್ರಾವಿಡ್ ನಾಯಕತ್ವದಲ್ಲಿ ಭಾರತ ತಂಡ 2007ರಲ್ಲಿ ಕೊನೆಯ ಬಾರಿ ಇಂಗ್ಲೆಂಡ್ಲ್ಲಿ ಟೆಸ್ಟ್ ಸರಣಿಯನ್ನು ಗೆದ್ದಿತ್ತು. ಇದಕ್ಕೂ ಮುನ್ನ 1971ರಲ್ಲಿ ಅಜಿತ್ ವಾಡೇಕರ್ ಅವರ ನಾಯಕತ್ವದಲ್ಲಿ ಭಾರತ ತಂಡ, ಇಂಗ್ಲೆಂಡ್ನಲ್ಲಿ ಟೆಸ್ಟ್ ಸರಣಿಯನ್ನು ಜಯಿಸಿತ್ತು. ಇನ್ನು 1986ರಲ್ಲಿ ಕಪಿಲ್ ದೇವ್ ನಾಯಕತ್ವದಲ್ಲಿ ಭಾರತ ತಂಡ ಟೆಸ್ಟ್ ಸರಣಿಯನ್ನು ಗೆದ್ದುಕೊಂಡಿತ್ತು.
IND vs ENG 1st Test: ಲೀಡ್ಸ್ನಲ್ಲಿ ಭಾರತದ ಟೆಸ್ಟ್ ಸಾಧನೆ ಹೇಗಿದೆ?
ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಹಾಗೂ ಆರ್ ಅಶ್ವಿನ್ ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳಿದ ಬಳಿಕ ಭಾರತ ತಂಡದಲ್ಲಿ ಇದೀಗ ಸಾಯಿ ಸುದರ್ಶನ್, ಅಭಿಮನ್ಯು ಈಶ್ವರನ್ ಹಾಗೂ ಧ್ರುವ್ ಜುರೆಲ್ ಅವರನ್ನು ನೋಡಬಹುದಾಗಿದೆ. ಮತ್ತೊಂದು ಕಡೆ 8 ವರ್ಷಗಳ ಬಳಿಕ ಭಾರತ ಟೆಸ್ಟ್ ತಂಡದಲ್ಲಿ ಕರುಣ್ ನಾಯರ್ ಅವರನ್ನು ನೋಡಬಹುದಾಗಿತ್ತು.
ರವೀಂದ್ರ ಜಡೇಜಾ, ಜಸ್ಪ್ರೀತ್ ಬುಮ್ರಾ, ಕೆಎಲ್ ರಾಹುಲ್ ಹಾಗೂ ರಿಷಭ್ ಪಂತ್ ಸದ್ಯ ಭಾರತ ತಂಡದಲ್ಲಿ ಉಪ ನಾಯಕನ ಜವಾಬ್ದಾರಿಯನ್ನು ನಿರ್ವಹಿಸಬಹುದಾಗಿದೆ. ಶುಭಮನ್ ಗಿಲ್ ಅವರ ವಯಸ್ಸು ಇನ್ನೂ 32 ವರ್ಷ ವಯಸ್ಸು, ಹಾಗಾಗಿ ಅವರ ನಾಯಕತ್ವದ ಬಗ್ಗೆ ನಕಾರಾತ್ಮಕ ಪ್ರತಿಕ್ರಿಯೆಯನ್ನು ನೀಡಬೇಡಿ ಎಂದು ಮಾಜಿ ನಾಯಕ ಆಗ್ರಹಿಸಿದ್ದಾರೆ.
IND vs ENG: ಮೊದಲನೇ ಟೆಸ್ಟ್ಗೆ ತಮ್ಮ ನೆಚ್ಚಿನ ಪ್ಲೇಯಿಂಗ್ XI ಆರಿಸಿದ ವಸೀಮ್ ಜಾಫರ್!
"ಇಂದು ಅವರು ಅನುಭವಿಯಲ್ಲ, ನಾಳೆ ಅನುಭವಿಯಾಗಲಿದ್ದಾರೆ. ಈ ಆಟಗಾರರ ಗುಂಪಿನ ಬಗ್ಗೆ ನನಗೆ ವಿಶ್ವಾಸವಿದೆ. ಅವರು ಏನಾದರೂ ವಿಶೇಷವನ್ನು ಮಾಡಲಿದ್ದಾರೆಂದು ನನಗೆ ನಂಬಿಕೆ ಇದೆ. ನಾನು ಅವರಿಗೆ ಹೇಳುವುದು ಇಷ್ಟೇ. ನೀವು ಹೋಗಿ ನಿಮ್ಮ ಆಟವನ್ನು ನೀವು ಆಡಿ. ನಿಮ್ಮ ಪಾಡಿಗೆ ನೀವು ಆನಂದಿಸಿ," ಎಂದು ಕಪಿಲ್ ದೇವ್ ಹೇಳಿದ್ದಾರೆ.