IND vs NZ: ಐದನೇ ಪಂದ್ಯದಲ್ಲಿಯೂ ವಿಫಲರಾದ ಸಂಜು ಸ್ಯಾಮ್ಸನ್ ವಿರುದ್ಧ ಫ್ಯಾನ್ಸ್ ಕಿಡಿ!
ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಐದನೇ ಟಿ20ಐ ತಿರುವನಂತಪುರಂನಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲೂ ಸಂಜು ಸ್ಯಾಮ್ಸನ್ ವಿಫಲರಾದರು. ಭಾರತದ ಪರ ಎಲ್ಲಾ ಪಂದ್ಯಗಳನ್ನು ಆಡಲು ಅವಕಾಶ ಸಿಕ್ಕರೂ ಸಂಜು, ಒಂದೇ ಒಂದು ಪಂದ್ಯದಲ್ಲಿಯೂ ದೊಡ್ಡ ಇನಿಂಗ್ಸ್ ಆಡುವಲ್ಲಿ ವಿಫಲರಾದರು. ಆ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಟೀಕೆಗಳಿಗೆ ಗುರಿಯಾಗಿದ್ದಾರೆ.
-
ನವದೆಹಲಿ: ಭಾರತ ಮತ್ತು ನ್ಯೂಜಿಲೆಂಡ್ (IND vs NZ) ನಡುವಿನ ಐದನೇ ಟಿ20ಐ ಜನವರಿ 31 ರಂದು ತಿರುವನಂತಪುರದ ಗ್ರೀನ್‌ಫೀಲ್ಡ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಿತು. ಆರಂಭಿಕ ನಾಲ್ಕು ಪಂದ್ಯಗಳಲ್ಲಿ ವೈಫಲ್ಯದ ಹೊರತಾಗಿಯೂ ತಮ್ಮ ತವರು ಕ್ರೀಡಾಂಗಣವಾದ ತಿರುವನಂತಪುರಂನಲ್ಲಿ ನಡೆದಿದ್ದ ಐದನೇ ಪಂದ್ಯದಲ್ಲಿ ಆಡಲು ಸಂಜು ಸ್ಯಾಮ್ಸನ್‌ಗೆ (Sanju Samson) ಅವಕಾಶ ಲಭಿಸಿತು. ಆದರೆ, ಈ ಪಂದ್ಯದಲ್ಲಿಯೂ ಅವರು ದೊಡ್ಡ ಇನಿಂಗ್ಸ್ ಆಡುವಲ್ಲಿ ವಿಫಲರಾದರು. ಸ್ಯಾಮ್ಸನ್ 6 ಎಸೆತಗಳಲ್ಲಿ 6 ರನ್‌ಗಳಿಗೆ ಔಟಾದರು. ಆ ಮೂಲಕ ತವರು ಅಭಿಮಾನಿಗಳು ಇಟ್ಟಿದ್ದ ನಂಬಿಕೆಯನ್ನು ಸಂಜು ಮಣ್ಣು ಪಾಲು ಮಾಡಿದರು. ಈ ಐದು ಪಂದ್ಯಗಳ ಸರಣಿಯಲ್ಲಿ ಸಂಜು ಕೇವಲ 46 ರನ್ ಗಳಿಸಿದ್ದಾರೆ. ಟಿ20 ವಿಶ್ವಕಪ್ (T20 World Cup 2026) ಟೂರ್ನಿಯ ನಿಮಿತ್ತ ಅವರ ಫಾರ್ಮ್ ಟೀಮ್ ಇಂಡಿಯಾಕ್ಕೆ ಕಳವಳಕಾರಿಯಾಗಿದೆ.
2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯು ಫೆಬ್ರವರಿ 7 ರಂದು ಪ್ರಾರಂಭವಾಗಲಿದೆ. ಇದಕ್ಕೂ ಮುನ್ನ ಸಂಜು ಸ್ಯಾಮ್ಸನ್ ಅವರ ಬ್ಯಾಟ್ ತುಕ್ಕು ಹಿಡಿದಂತೆ ಕಾಣುತ್ತಿದೆ. ಇವರು ರನ್ ಗಳಿಸಲು ಪರದಾಡುತ್ತಿದ್ದಾರೆ. ಸಂಜು ಕಳಪೆ ಫಾರ್ಮ್‌ನಿಂದಾಗಿ ಅವರು ಟಿ20 ವಿಶ್ವಕಪ್ ಟೂರ್ನಿಯಲ್ಲಿ ಬೆಂಚ್ ಕಾಯಬೇಕಾಗಬಹುದು. ಸಂಜು ಬದಲಿಗೆ ಭಾರತ ತಂಡವು ಇಶಾನ್ ಕಿಶನ್ ಅವರನ್ನು ಸಹ ಹೊಂದಿದೆ. ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಆಗಿರುವ ಮತ್ತು ಇನಿಂಗ್ಸ್ ಆರಂಭಿಸುವ ಇಶಾನ್ ಕಿಶನ್ ಕೂಡ ಉತ್ತಮ ಫಾರ್ಮ್‌ನಲ್ಲಿದ್ದಾರೆ.
IND vs NZ 5th T20I: ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಿಸಿಕೊಂಡ ಟೀಮ್ ಇಂಡಿಯಾ!
ದೀರ್ಘಾವಧಿ ಬಳಿಕ ಭಾರತ ತಂಡಕ್ಕೆ ಮರಳಿದ ಇಶಾನ್ ಕಿಶನ್
2023ರಲ್ಲಿ ಇಶಾನ್ ಕಿಶನ್ ಅವರನ್ನು ಭಾರತ ತಂಡದಿಂದ ಕೈಬಿಡಲಾಗಿತ್ತು. ಇದೀಗ ಅವರು ನ್ಯೂಜಿಲೆಂಡ್ ವಿರುದ್ಧದ ತಂಡಕ್ಕೆ ಮರಳಿದ್ದಾರೆ. ಕಿಶನ್ ಅವರ ಫಾರ್ಮ್ ಕಾರಣದಿಂದಾಗಿ ಆಯ್ಕೆಯಾಗಿದ್ದಾರೆ. ಅವರು 2025ರ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯಲ್ಲಿ ಅಸಾಧಾರಣ ಪ್ರದರ್ಶನವನ್ನುತೋರಿದರು. ಅವರು ತಮ್ಮ ನಾಯಕತ್ವದಲ್ಲಿ ಜಾರ್ಖಂಡ್ ಅನ್ನು ಗೆಲುವಿನತ್ತ ಕೊಂಡೊಯ್ದರು. ಅವರು ಬ್ಯಾಟಿಂಗ್‌ನಿಂದಲೂ ವಿನಾಶವನ್ನುಂಟು ಮಾಡಿದರು. 2025ರ ದೇಶಿ ಚುಟಕು ಟೂರ್ನಿಯಲ್ಲಿ ಅತಿ ಹೆಚ್ಚು ರನ್‌ಗಳನ್ನು ಕಲೆ ಹಾಕಿದ್ದರು.
ಅವರು 10 ಪಂದ್ಯಗಳಲ್ಲಿ ಎರಡು ಶತಕಗಳು ಮತ್ತು ಎರಡು ಅರ್ಧಶತಕಗಳು ಸೇರಿದಂತೆ 517 ರನ್ ಗಳಿಸಿದ್ದರು. ಇಶಾನ್ ಅವರ ಸ್ಟ್ರೈಕ್ ರೇಟ್ 197.32 ಆಗಿತ್ತು. ಆದ್ದರಿಂದ, ಕಿಶನ್ ವಿಶ್ವಕಪ್‌ನಲ್ಲಿ ಸ್ಯಾಮ್ಸನ್ ಬದಲಿಗೆ ಆಡಬಹುದು.
THANK YOU SANJU SAMSON.
— Wickets Hitting (@offpacedelivery) January 31, 2026
The management backed you heavily, but the performances simply didn’t justify that faith. There’s been no sign of a solid technique or consistency.
Getting out in a different manner every match. Play Ishan Kishan, He plays fearless cricket, doesn’t seem… pic.twitter.com/rEf6xgDtq3
ಧನ್ಯವಾದ ಸಂಜು ಸ್ಯಾಮ್ಸನ್
ಮ್ಯಾನೇಜ್‌ಮೆಂಟ್ ನಿಮಗೆ ತುಂಬಾ ಬೆಂಬಲ ನೀಡಿತು, ಆದರೆ ಪ್ರದರ್ಶನಗಳು ಆ ನಂಬಿಕೆಯನ್ನು ಸಮರ್ಥಿಸಲಿಲ್ಲ. ಘನ ತಂತ್ರ ಅಥವಾ ಸ್ಥಿರತೆಯ ಯಾವುದೇ ಲಕ್ಷಣಗಳಿಲ್ಲ. ಪ್ರತಿ ಪಂದ್ಯದಲ್ಲೂ ವಿಭಿನ್ನ ರೀತಿಯಲ್ಲಿ ಔಟ್ ಆಗುವುದು. ಇಶಾನ್ ಕಿಶನ್ ನಿರ್ಭೀತ ಕ್ರಿಕೆಟ್ ಆಡುತ್ತಾರೆ, ಒತ್ತಡದಿಂದ ಹೊರೆಯಾಗಿ ಕಾಣುವುದಿಲ್ಲ ಮತ್ತು ಮುಖ್ಯವಾಗಿ ಅವರು ಈಗ ಉತ್ತಮ ಫಾರ್ಮ್‌ನಲ್ಲಿದ್ದಾರೆ.
The way Sanju Samson was backed, if Ruturaj Gaikwad had received even half of that support, India might have a proper opener.
— Vipin Tiwari (@Vipintiwari952) January 31, 2026
Solid technique, calm temperament, and exactly what India needs right now.
pic.twitter.com/WgGKRpyjve
ಸಂಜು ಸ್ಯಾಮ್ಸನ್‌ಗೆ ಬೆಂಬಲ ನೀಡಿದ ರೀತಿ, ಋತುರಾಜ್ ಗಾಯಕ್ವಾಡ್‌ಗೆ ಆ ಬೆಂಬಲದ ಅರ್ಧದಷ್ಟು ಸಿಕ್ಕಿದ್ದರೆ, ಭಾರತಕ್ಕೆ ಸರಿಯಾದ ಆರಂಭಿಕ ಆಟಗಾರ ಸಿಗಬಹುದಿತ್ತು. ಭಾರತಕ್ಕೆ ಈಗ ಬೇಕಾಗಿರುವುದು ಘನ ತಂತ್ರ, ಶಾಂತ ಸ್ವಭಾವ ಎಂದು ಮತ್ತೊಬ್ಬ ಅಭಿಮಾನಿ ಟ್ವೀಟ್ ಮಾಡಿದ್ದಾರೆ.