ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

IND vs NZ 5th T20I: ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆರಿಸಿಕೊಂಡ ಟೀಮ್‌ ಇಂಡಿಯಾ!

IND vs NZ 5th T20I: ತಿರುವನಂತಪುರಂನ ಗ್ರೀನ್‌ ಫೀಲ್ಡ್‌ ಇಂಟರ್‌ನ್ಯಾಷನಲ್‌ ಕ್ರೀಡಾಂಗಣದಲ್ಲಿ ಇದೀಗ ನಡೆಯುತ್ತಿರುವ ಐದನೇ ಟಿ20ಐ ಪಂದ್ಯದಲ್ಲಿ ಭಾರತ ಹಾಗೂ ನ್ಯೂಜಿಲೆಂಡ್‌ ತಂಡಗಳು ಕಾದಾಟ ನಡೆಸುತ್ತಿವೆ. ಈ ಪಂದ್ಯದಲ್ಲಿ ಟಾಸ್‌ ಗೆದ್ದ ಭಾರತ ತಂಡ ಮೊದಲು ಬ್ಯಾಟಿಂಗ್‌ ನಡೆಸಲು ನಿರ್ಧರಿಸಿದೆ.

IND vs NZ:  ಟಾಸ್‌ ಗೆದ್ದು ಬ್ಯಾಟಿಂಗ್‌ ಆರಿಸಿಕೊಂಡ ಭಾರತ!

ಭಾರತ ಹಾಗೂ ನ್ಯೂಜಿಲೆಂಡ್‌ ನಡುವೆ ಐದನೇ ಟಿ20ಐ ಪಂದ್ಯ. -

Profile
Ramesh Kote Jan 31, 2026 7:01 PM

ತಿರುವನಂತಪುರಂ: ಇಲ್ಲಿನ ಗ್ರೀನ್‌ ಫೀಲ್ಡ್‌ ಇಂಟರ್‌ನ್ಯಾಷನಲ್‌ ಕ್ರೀಡಾಂಗಣದಲ್ಲಿ ಇದೀಗ ನಡೆಯುತ್ತಿರುವ ಐದನೇ ಹಾಗೂ ಟಿ20ಐ ಸರಣಿಯ ಕೊನೆಯ ಪಂದ್ಯದಲ್ಲಿ ಭಾರತ ಹಾಗೂ ನ್ಯೂಜಿಲೆಂಡ್‌ (IND vs NZ) ತಂಡಗಳು ಕಾದಾಟ ನಡೆಸುತ್ತಿವೆ. ಈ ಪಂದ್ಯದಲ್ಲಿ ಟಾಸ್‌ ಗೆದ್ದ ಭಾರತ ತಂಡದ ನಾಯಕ ಸೂರ್ಯಕುಮಾರ್‌ ಯಾದವ್‌ (Suryakumar yadav), ಮೊದಲು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿದ್ದಾರೆ. ಆ ಮೂಲಕ ದೊಡ್ಡ ಮೊತ್ತವನ್ನು ಕಲೆಹಾಕುವ ಯೋಜನೆಯನ್ನು ಹಾಕಿಕೊಂಡಿದೆ. ಈಗಾಗಲೇ ಟಿ20ಐ ಸರಣಿಯನ್ನು 3-1 ಅಂತರದಲ್ಲಿ ವಶಪಡಿಸಿಕೊಂಡಿರುವ ಭಾರತ ತಂಡ (India), ಕೊನೆಯ ಪಂದ್ಯವನ್ನೂ ಗೆದ್ದು 2026ರ ಟಿ20 ವಿಶ್ವಕಪ್‌ ಟೂರ್ನಿಗೂ ಮುನ್ನ ತನ್ನ ವಿಶ್ವಾಸವನ್ನು ಹೆಚ್ಚಿಸಿಕೊಳ್ಳಲು ಎದುರು ನೋಡುತ್ತಿದೆ.

ಅಂದ ಹಾಗೆ ಭಾರತ ತಂಡದ ಪ್ಲೇಯಿಂಗ್‌ xiನಲ್ಲಿ ಮೂರು ಬದಲಾವಣೆಗಳನ್ನು ತರಲಾಗಿದೆ ಎಂದು ಟಾಸ್‌ ವೇಳೆ ನಾಯಕ ಸೂರ್ಯಕುಮಾರ್‌ ಯಾದವ್‌ ಬಹಿರಂಗಪಡಿಸಿದ್ದಾರೆ. ಕಳೆದ ಪಂದ್ಯಕ್ಕೆ ಅಲಭ್ಯರಾಗಿದ್ದ ಇಶಾನ್‌ ಕಿಶನ್‌ ಹಾಗೂ ಗಾಯದಿಂದ ಗುಣಮುಖರಾಗಿರುವ ಉಪ ನಾಯಕ ಅಕ್ಷರ್‌ ಪಟೇಲ್‌ ಅವರು ಪ್ಲೇಯಿಂಗ್‌ xiಗೆ ಮರಳಿದ್ದಾರೆ. ಹಾಗಾಗಿ ಹರ್ಷಿತ್‌ ರಾಣಾ ಹಾಗೂ ಕುಲ್ದೀಪ್‌ ಯಾದವ್‌ಗೆ ವಿಶ್ರಾಂತಿಯನ್ನು ನೀಡಲಾಗಿದೆ. ಇದರ ಜೊತೆಗೆ ರವಿ ಬಿಷ್ಣೋಯ್‌ ಅವರನ್ನು ಕೈ ಬಿಡಲಾಗಿದೆ.

IND vs NZ: ರೋಹಿತ್‌ ಶರ್ಮಾರ ಪ್ರತಿಬಿಂಬ ಸೂರ್ಯಕುಮಾರ್‌ ಯಾದವ್‌ ಎಂದ ಇರ್ಫಾನ್‌ ಪಠಾಣ್‌!

ಕಿವೀಸ್‌ ತಂಡದಲ್ಲಿ 4 ಬದಲಾವಣೆ

ನ್ಯೂಜಿಲೆಂಡ್‌ ತಂಡದ ಪ್ಲೇಯಿಂಗ್‌ XIನಲ್ಲಿಯೂ ನಾಲ್ಕು ಬದಲಾವಣೆಗಳನ್ನು ತರಲಾಗಿದೆ. ಡೆವೋನ್‌ ಕಾನ್ವೆ ಜಾಗಕ್ಕೆ ಫಿನ್‌ ಆಲೆನ್‌, ಮಾರ್ಕ್‌ ಚಾಪ್ಮನ್‌ ಅವರ ಬದಲು ಬೆವೋನ್‌ ಜಾಕೋಬ್ಸ್‌, ಝ್ಯಾಕರಿ ಫೌಲ್ಕ್ಸ್‌ ಅವರ ಜಾಗಕ್ಕೆ ಕೈಲ್‌ ಜೇಮಿಸನ್‌ ಮತ್ತು ಮ್ಯಾಟ್‌ ಹೆನ್ರಿ ಬದಲು ಲಾಕಿ ಫರ್ಗ್ಯೂಸನ್‌ ಆಡುತ್ತಿದ್ದಾರೆ.

ಟಿ20ಐ ಸರಣಿಯನ್ನು ವಶಪಡಿಸಿಕೊಂಡಿರುವ ಭಾರತ

ಆರಂಭಿಕ ಮೂರೂ ಪಂದ್ಯಗಳನ್ನು ಗೆಲ್ಲುವ ಮೂಲಕ ಭಾರತ ತಂಡ, ಈಗಾಗಲೇ ಟಿ20ಐ ಸರಣಿಯನ್ನು 3-1 ಅಂತರದಲ್ಲಿ ವಶಪಡಿಸಿಕೊಂಡಿದೆ. ನಾಲ್ಕನೇ ಪಂದ್ಯದಲ್ಲಿ ನ್ಯೂಜಿಲೆಂಡ್‌ ತಂಡ 50 ರನ್‌ಗಳಿಂದ ಗೆದ್ದು ಬೀಗಿತ್ತು. ಇದೀಗ ಟಿ20 ವಿಶ್ವಕಪ್‌ ಟೂರ್ನಿಗೂ ಮುನ್ನ ವಿಶ್ವಾಸವನ್ನು ಹೆಚ್ಚಿಸಿಕೊಳ್ಳಲು ಕಿವೀಸ್‌ ಎದುರು ನೋಡುತ್ತಿದೆ. ಆದರೆ, ಭಾರತ ತಂಡ ಕೂಡ ಕೊನೆಯ ಪಂದ್ಯವನ್ನು ಗೆಲ್ಲುಲು ಪ್ರಯತ್ನಿಸುತ್ತಿದೆ.



ಇತ್ತಂಡಗಳ ಪ್ಲೇಯಿಂಗ್‌ XI

ಭಾರತ: ಅಭಿಷೇಕ್‌ ಶರ್ಮಾ, ಸಂಜು ಸ್ಯಾಮ್ಸನ್‌ (ವಿಕೆಟ್‌ ಕೀಪರ್)‌, ಇಶಾನ್‌ ಕಿಶನ್‌, ಸೂರ್ಯಕುಮಾರ್‌ ಯಾದವ್‌ (ನಾಯಕ), ರಿಂಕು ಸಿಂಗ್‌, ಹಾರ್ದಿಕ್‌ ಪಾಂಡ್ಯ, ಶಿವಂ ದುಬೆ, ಅಕ್ಷರ್‌ ಪಟೇಲ್‌, ಅರ್ಷದೀಪ್‌ ಸಿಂಗ್‌, ವರುಣ್‌ ಚಕ್ರವರ್ತಿ, ಜಸ್‌ಪ್ರೀತ್‌ ಬುಮ್ರಾ

ನ್ಯೂಜಿಲೆಂಡ್‌: ಟಿಮ್‌ ಸೀಫರ್ಟ್‌ (ವಿಕೆಟ್‌ ಕೀಪರ್‌),ಫಿನ್‌ ಆಲೆನ್‌, ರಚಿನ್‌ ರವೀಂದ್ರ, ಗ್ಲೆನ್‌ ಫಿಲಿಪ್ಸ್‌, ಡ್ಯಾರಿಲ್‌ ಮಿಚೆಲ್‌, ಬೆವೋನ್‌ ಜಾಕೋಬ್ಸ್‌, ಮಿಚೆಲ್‌ ಸ್ಯಾಂಟ್ನರ್‌ (ನಾಯಕ), ಕೈಲ್‌ ಜೇಮಿಸನ್‌, ಇಶ್‌ ಸೋಧಿ, ಲಾಕಿ ಫರ್ಗ್ಯೂಸನ್‌, ಜಾಕೋಬ್‌ ಡಫಿ