ಭಾರತ ಮತ್ತು ಪಾಕಿಸ್ತಾನ ನಡುವಿನ ಟಾಪ್ 10 ಫೈನಲ್ ಪಂದ್ಯಗಳ ವಿವರ!
2025ರ ಏಷ್ಯಾ ಕಪ್ ಫೈನಲ್ ಪಂದ್ಯಕ್ಕೆ ದುಬೈ ಇಂಟರ್ನ್ಯಾಷನಲ್ ಕ್ರಿಕೆಟ್ ಕ್ರೀಡಾಂಗಣ ಸಜ್ಜಾಗುತ್ತಿದೆ. ಏಷ್ಯಾ ಕಪ್ ಇತಿಹಾಸದಲ್ಲೇ ಇದೇ ಮೊದಲ ಬಾರಿ ಇಂಡೋ-ಪಾಕ್ ಫೈನಲ್ ಪಂದ್ಯದಲ್ಲಿ ಕಾದಾಟ ನಡೆಸುತ್ತಿವೆ. ಭಾರತ ಮತ್ತು ಪಾಕಿಸ್ತಾನದ ನಡುವೆ 1986ರಿಂದ ಈವರೆಗೆ ಹಲವು ಫೈನಲ್ ಪಂದ್ಯಗಳು ನಡೆದಿವೆ. ಇಂಡೋ-ಪಾಕ್ ಫೈನಲ್ಗಳು ಕ್ರಿಕೆಟ್ನ ಕೆಲವು ಸ್ಮರಣೀಯ ಕ್ಷಣಗಳನ್ನು ನೀಡಿವೆ.

ಇಂಡೋ-ಪಾಕ್ ನಡುವಣ ಟಾಪ್ 10 ಫೈನಲ್ ಪಂದ್ಯಗಳ ವಿವರ! -


1985ರ ವಿಶ್ವ ಕ್ರಿಕೆಟ್ ಚಾಂಪಿಯನ್ಷಿಪ್ ಫೈನಲ್ ಪಂದ್ಯ
ಆಸ್ಟ್ರೇಲಿಯಾ ಆತಿಥ್ಯದಲ್ಲಿ ನಡೆದಿದ್ದ ವಿಶ್ವ ಕ್ರಿಕೆಟ್ ಚಾಂಪಿಯನ್ಷಿಪ್ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ಪಾಕ್ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಪಾಕ್ 176 ರನ್ ಕಲೆ ಹಾಕಲಾಷ್ಟೇ ಶಕ್ತವಾಗಿತ್ತು. ಬಳಿಕ ಈ ಮೊತ್ತವನ್ನು ಭಾರತ ಸುಲಭವಾಗಿ ಚೇಸ್ ಮಾಡಿತ್ತು. ಆ ಮೂಲಕ ಭಾರತ ವಿಶ್ವ ಕ್ರಿಕೆಟ್ ಚಾಂಪಿಯನ್ಷಿಪ್ ಮುಡಿಗೆರಿಸಿಕೊಂಡಿತ್ತು.

1986ರ ಏಷ್ಯಾ ಕಪ್ ಫೈನಲ್
ಶಾರ್ಜಾ ಕ್ರಿಕೆಟ್ ಮೈದಾನದಲ್ಲಿ ನಡೆದಿದ್ದ ಈ ಪಂದ್ಯ ಅಂತಿಮ ಕ್ಷಣದವರೆಗೂ ಬಹಳ ರೋಚಕತೆಯಿಂದ ಕೂಡಿತ್ತು. ಕೊನೆಯ ಎಸೆತದಲ್ಲಿ ಪಾಕ್ಗೆ ನಾಲ್ಕು ರನ್ ಅಗತ್ಯವಿತ್ತು. ಚೇತನ್ ಶರ್ಮಾ ಹಾಕಿದ ಫುಲ್ ಟಾಸ್ ಬಾಲ್ ಅನ್ನು ಜಾವೇದ್ ಮಿಯಾಂದಾದ್ ಸಿಕ್ಸರ್ ಬಾರಿಸುವ ಮೂಲಕ ಪಾಕ್ ತಂಡಕ್ಕೆ ಜಯ ತಂದುಕೊಟ್ಟಿದ್ದರು.

1991ರ ವಿಲ್ಸ್ ಟ್ರೋಫಿಯ ಫೈನಲ್ ಪಂದ್ಯ
ಈ ಪಂದ್ಯದಲ್ಲಿ ಭಾರತ ತಂಡ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡು ಆರಂಭದಲ್ಲಿ ಮುನ್ನಡೆ ಸಾಧಿಸಿತ್ತು. ಆದಾಗ್ಯೂ, ಜಾಹಿದ್ ಫಜಲ್ ಮತ್ತು ಸಲೀಮ್ ಮಲಿಕ್ ನಡುವಿನ 171 ರನ್ಗಳ ಮೂರನೇ ವಿಕೆಟ್ ಜೊತೆಯಾಟ ಪಂದ್ಯದ ಗತಿಯನ್ನೇ ಬದಲಿಸಿತು. ಇದರಿಂದಾಗಿ ಪಾಕಿಸ್ತಾನವು 262/6 ಸ್ಕೋರ್ ಮಾಡಲು ಸಾಧ್ಯವಾಯಿತು. ಭಾರತ ತಂಡವು 190 ರನ್ಗಳಿಗೆ ಆಲೌಟ್ ಆಗಿತ್ತು. ಆದ್ದರಿಂದ ಪಾಕಿಸ್ತಾನಕ್ಕೆ 72 ರನ್ಗಳ ಜಯ ದೊರಕಿತ್ತು.

1994ರ ಏಷ್ಯಾ ಕಪ್ ಫೈನಲ್ ಪಂದ್ಯ
ಶಾರ್ಜಾದಲ್ಲಿ ನಡೆದಿದ್ದ ಈ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ 250 ರನ್ ಗಳ ಗುರಿ ನೀಡಿತ್ತು. ಗುರಿ ಬೆನ್ನತ್ತಿದ ಭಾರತ ಆರಂಭದಿಂದಲೂ ನಿರಂತರವಾಗಿ ವಿಕೆಟ್ ಕಳೆದುಕೊಳ್ಳುತ್ತಾ ಸಂಕಷ್ಟಕ್ಕೆ ತುತ್ತಯಿತು. ವಿನೋದ್ ಕಾಂಬ್ಳಿ ಅವರ 56 ರನ್ಗಳು ತಂಡವು 211 ರನ್ಗಳಿಗೆ ಆಲೌಟ್ ಆಗುವವರೆಗೂ ಏಕಾಂಗಿ ಪ್ರತಿರೋಧ ಒಡ್ಡಿತು. ಮತ್ತು ಪಾಕಿಸ್ತಾನ 39 ರನ್ಗಳ ಜಯ ಸಾಧಿಸಿತು.

1998ರ ಇಂಡಿಪೆಂಡೆನ್ಸ್ ಕಪ್ ಫೈನಲ್ ಮ್ಯಾಚ್
ಡಾಕಾದಲ್ಲಿ ನಡೆದಿದ್ದ ಈ ಫೈನಲ್ ಪಂದ್ಯಕೂ ಮುನ್ನ ಭಾರತ ಮತ್ತು ಪಾಕಿಸ್ತಾನ ಎರಡು ಬಾರಿ ಮುಖಾಮುಖಿಯಾಗಿದ್ದು, ತಲಾ ಒಂದರಲ್ಲಿ ಜಯಗಳಿಸಿದ್ದವು. ಪಾಕ್ ಈ ಪಂದ್ಯದಲ್ಲಿ 314 ರನ್ಗಳ ಸವಾಲಿನ ಗುರಿ ನೀಡಿತ್ತು. ಗುರಿ ಬೆನ್ನತ್ತಿದ ಭಾರತ ತಂಡಕ್ಕೆ ಸೌರವ್ ಗಂಗೂಲಿ ಅವರ 124 ರನ್ಗಳ ಇನಿಂಗ್ಸ್ ಆಸರೆಯಾಗಿತ್ತು. ಈ ಮೂಲಕ ಭಾರತ ಈ ಪಂದ್ಯವನ್ನು 3 ವಿಕೆಟ್ ಅಂತರದಿಂದ ಗೆದ್ದುಕೊಂಡಿತು.

1999ರ ಪೆಪ್ಸಿ ಕಪ್ ಫೈನಲ್ ಪಂದ್ಯ
ಬೆಂಗಳೂರಿನಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ಪಾಕ್ ಕಲೆ ಹಾಕಿದ್ದ 291 ರನ್ಗಳ ಗುರಿ ಬೆನ್ನತ್ತಿದ ಭಾರತ ತಂಡ ಚೇಸ್ ಮಾಡುವಲ್ಲಿ ವಿಫಲವಾಯಿತು. 178 ರನ್ಗಳಿಗೆ ಆಲ್ ಔಟ್ ಆಗಿತ್ತು.

1999ರ ಕೊಕಕೋಲಾ ಕಪ್ ಫೈನಲ್ ಪಂದ್ಯ
ಶಾರದಾ ಕ್ರಿಕೆಟ್ ಮೈದಾನದಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ಭಾರತ ತಂಡ ಕೇವಲ 145 ರನ್ ಗಳಿಗೆ ಪತನಗೊಂಡಿತು. ಪಾಕಿಸ್ತಾನ ಸಾಧಾರಣ ಗುರಿಯನ್ನು ಬೆನ್ನತ್ತಿ 7 ವಿಕೆಟ್ ಗಳ ಜಯ ಗಳಿಸಿತು.

2007ರ ಐಸಿಸಿ ಟಿ20 ವಿಶ್ವಕಪ್ ಫೈನಲ್ ಪಂದ್ಯ
ಭಾರತ ಈ ಪಂದ್ಯದಲ್ಲಿ 7 ವಿಕೆಟ್ ನಷ್ಟಕ್ಕೆ 157 ಕಲೆಹಾಕಿತ್ತು. ಬಳಿಕ ಪಾಕಿಸ್ತಾನ ಕೂಡ 7 ವಿಕೆಟ್ ನಷ್ಟಕ್ಕೆ 104 ರನ್ ಕಲೆಹಾಕಿತ್ತು. ನಂತರ ಮಿಸ್ಬಾ-ಉಲ್-ಹಕ್ ತಡವಾಗಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ಆದರೆ ಜೋಗಿಂದರ್ ಶರ್ಮಾ ಅವರ ಎಸೆತದಲ್ಲಿ ಅಂತಿಮ ಓವರ್ನಲ್ಲಿ ಶ್ರೀಶಾಂತ್ ಶಾರ್ಟ್ ಫೈನ್-ಲೆಗ್ನಲ್ಲಿ ಕ್ಯಾಚ್ ಕೊಟ್ಟಿದ್ದರು. ಇದು ಭಾರತಕ್ಕೆ ಐದು ರನ್ಗಳ ರೋಚಕ ಜಯವನ್ನು ತಂದುಕೊಟ್ಟಿತ್ತು.

2017ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್
ಈ ಪಂದ್ಯದಲ್ಲಿ ಭಾರತದ ವಿರುದ್ಧ ಪಾಕ್ 180 ರನ್ಗಳ ಸಮಗ್ರ ಜಯ ಸಾಧಿಸಿತ್ತು. ಫಖರ್ ಝಮಾನ್ ಅವರ ಅದ್ಭುತ 114 ರನ್ಗಳ ನೆರವಿನಿಂದ ಪಾಕಿಸ್ತಾನ 338/4 ರನ್ ಗಳಿಸಿತು. ಹಾರ್ದಿಕ್ ಪಾಂಡ್ಯ ಅವರ 76 ರನ್ಗಳ ಹೊರತಾಗಿಯೂ ಭಾರತದ ಚೇಸಿಂಗ್ ವೇಗ ಪಡೆಯಲಿಲ್ಲ ಮತ್ತು 158 ಕ್ಕೆ ಆಲ್ ಔಟ್ ಆಗಿತ್ತು. ಈ ಮೂಲಕ ಪಾಕಿಸ್ತಾನ ತಮ್ಮ ಮೊದಲ ಚಾಂಪಿಯನ್ಸ್ ಟ್ರೋಫಿಯನ್ನು ಎತ್ತಿಹಿಡಿದಿತ್ತು.

2025ರ ಏಷ್ಯಾ ಕಪ್ ಫೈನಲ್
ಇನ್ನು ಸೆಪ್ಟೆಂಬರ್ 28ರಂದು ದುಬೈನಲ್ಲಿ ನಡೆಯಲಿರುವ ಏಷ್ಯಾ ಕಪ್ ಫೈನಲ್ ಪಂದ್ಯ ಮತ್ತೊಂದು ಐತಿಹಾಸಿಕ ಪಂದ್ಯವಾಗಲಿದೆ. ಭಾರತ ತನ್ನ ಒಂಬತ್ತನೇ ಪ್ರಶಸ್ತಿಯನ್ನು ಗೆಲ್ಲುವ ಗುರಿಯನ್ನು ಹೊಂದಿದ್ದರೆ, ಅತ್ತ ಪಾಕಿಸ್ತಾನ ತನ್ನ ಮೂರನೇ ಪ್ರಶಸ್ತಿಯನ್ನು ಗೆಲ್ಲುವ ಗುರಿಯನ್ನು ಹೊಂದಿದೆ.