ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಅಭಿಮನ್ಯು ಈಶ್ವರನ್‌ಗೆ ಭಾರತ ತಂಡದಲ್ಲಿ ಸ್ಥಾನ ಸಿಗದಿದ್ದಕ್ಕೆ ಅವರ ತಂದೆಯೇ ಕಾರಣ: ಕೆ ಶ್ರೀಕಾಂತ್

ದೇಶಿ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ತೋರಿದರೂ ಅಭಿಮನ್ಯು ಈಶ್ವರನ್ ಅವರಿಗೆ ಭಾರತ ತಂಡದಲ್ಲಿ ಸ್ಥಾನ ಸಿಗದಿದ್ದಕ್ಕೆ ಟೀಮ್ ಇಂಡಿಯಾ ಮ್ಯಾನೇಜ್‌ಮೆಂಟ್ ವಿರುದ್ಧ ಅವರ ತಂದೆ ನೀಡಿದ ಹೇಳಿಕೆಗಳೇ ನೇರ ಕಾರಣ ಎಂದು ಭಾರತ ತಂಡದ ಮಾಜಿ ನಾಯಕ ಕೃಷ್ಣಮಾಚಾರಿ ಶ್ರೀಕಾಂತ್‌ ದೂರಿದ್ದಾರೆ.

ಅಭಿಮನ್ಯು ಈಶ್ವರನ್‌ ಬಗ್ಗೆ ಅಚ್ಚರಿ ಹೇಳಿಕೆ ನೀಡಿದ ಶ್ರೀಕಾಂತ್‌!

ಅಭಮನ್ಯು ಈಶ್ವರನ್‌ಗೆ ಭಾರತ ತಂಡದಲ್ಲಿ ಸ್ಥಾನ ಸಿಗದೆ ಇರಲು ಕಾರಣ ತಿಳಿಸಿದ ಕೆ ಶ್ರೀಕಾಂತ್‌. -

Profile Ramesh Kote Sep 27, 2025 8:15 PM

ದುಬೈ: ಅಭಿಮನ್ಯು ಈಶ್ವರನ್ (Abhimanyu Eshwaran) ಅವರು ಕಳೆದ ಇಂಗ್ಲೆಂಡ್ ಪ್ರವಾಸದಲ್ಲಿ (IND vs ENG) ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ವಿಫಲರಾಗಿದ್ದರು. ಇದೀಗ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯಿಂದಲೂ ಅವರನ್ನು ಕೈ ಬಿಡಲಾಗಿದೆ. ಈ ಹಿನ್ನೆಲೆಯಲ್ಲಿ ಮಾಜಿ ಕ್ರಿಕೆಟಿಗ ಕೆ ಶ್ರೀಕಾಂತ್ (K Srikkanth) ಇದಕ್ಕೆ ಕಾರಣವೇನೆಂದು ಬಹಿರಂಗಪಡಿಸಿದ್ದಾರೆ. ಟೀಮ್‌ ಮ್ಯಾನೇಜ್‌ಮೆಂಟ್‌ ವಿರುದ್ಧ ತಂದೆಯ ಅವಹೇಳನಕಾರಿ ಹೇಳಿಕೆಗಳಿಂದಾಗಿ ಅಭಿಮನ್ಯು ಈಶ್ವರನ್ ಭಾರತ ಟೆಸ್ಟ್ ತಂಡದಲ್ಲಿ ಸ್ಥಾನ ಕಳೆದುಕೊಂಡಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈಶ್ವರನ್ 2022ರ ಡಿಸೆಂಬರ್ ನಲ್ಲಿ ಬಾಂಗ್ಲಾದೇಶ ಪ್ರವಾಸಕ್ಕಾಗಿ ಭಾರತ ತಂಡದಲ್ಲಿ ಮೊದಲ ಬಾರಿ ಸ್ಥಾನ ಪಡೆದುಕೊಂಡಿದ್ದರು. ಆದರೆ ಹಲವು ವರ್ಷಗಳಿಂದ ತಂಡದ ನಿಯಮಿತ ಭಾಗವಾಗಿದ್ದರೂ ಸಹ ಟೀಮ್ ಇಂಡಿಯಾ ಪರ ಟೆಸ್ಟ್‌ಗೆ ಪದಾರ್ಪಣೆ ಮಾಡಲು ಸಾಧ್ಯವಾಗಿರಲಿಲ್ಲ. ಇತ್ತೀಚೆಗೆ, ಕ್ರಿಸ್ ಶ್ರೀಕಾಂತ್ ಅವರು ಇದೇ ವಿಚಾರದ ಕುರಿತು ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದರು.  ಅಭಿಮನ್ಯು ಪ್ಲೇಯಿಂಗ್  XIನಲ್ಲಿ ಸ್ಥಾನ ಪಡೆಯುವಲ್ಲಿ ವಿಫಲವಾದ ನಂತರ ಅವರ ತಂದೆ ರಂಗನಾಥನ್ ಮಾಡಿದ ಅವಹೇಳನಕಾರಿ ಕಾಮೆಂಟ್‌ಗಳ ವಿಶ್ವಕಪ್‌ ವಿಜೇತ ಆಟಗಾರ ಉಲ್ಲೇಖ ಮಾಡಿದ್ದಾರೆ.

ಈ ಕುರಿತು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಶ್ರೀಕಾಂತ್‌, "ಅಭಿಮನ್ಯು ಈಶ್ವರನ್ ಬಗ್ಗೆ ನನಗೆ ಬೇಸರವಾಗುತ್ತಿದೆ. ಅವರ ತಂದೆ (ಇಂಗ್ಲೆಂಡ್ ಪ್ರವಾಸದ ನಂತರ) ಕೆಲವು ಬಲವಾದ ಹೇಳಿಕೆಗಳನ್ನು ನೀಡಿದ್ದರು ಎಂದು ನಾನು ಭಾವಿಸುತ್ತೇನೆ ಮತ್ತು ಬಹುಶಃ ಅದಕ್ಕಾಗಿಯೇ ಸೆಲೆಕ್ಟರ್‌ಗಳು ಇದೀಗ ಅವರನ್ನು ಕೈಬಿಟ್ಟಿದ್ದಾರೆ. ಆದರೆ ತವರಿನಲ್ಲಿ ಮೀಸಲು ಆರಂಭಿಕ ಆಟಗಾರನ ಅಗತ್ಯವಿಲ್ಲ ಎಂಬ ಅಜಿತ್ ಅಗರ್ಕರ್ ಅವರ ತರ್ಕ ನ್ಯಾಯಯುತವಾಗಿತ್ತು," ಎಂದು ತಿಳಿಸಿದ್ದಾರೆ.

ವೆಸ್ಟ್‌ ಇಂಡೀಸ್‌ ಟೆಸ್ಟ್‌ ಸರಣಿಗೆ ಭಾರತ ತಂಡ ಪ್ರಕಟ; ಕರುಣ್‌ಗೆ ಕರುಣೆ ತೋರದ ಆಯ್ಕೆ ಸಮಿತಿ

ದೇಶಿ ಕ್ರಿಕೆಟ್‌ನಲ್ಲಿ ಅದ್ಬುತ ಪ್ರದರ್ಶನ ತೋರಿದ ಹೊರತಾಗಿಯೂ ನನ್ನ ಮಗನಿಗೆ ತಂಡದಲ್ಲಿ ಸ್ಥಾನ ನೀಡದೆ ಬೆಂಚ್ ಕಾಯಿಸುತ್ತಿರುವುದೇಕೆ ಎಂದು ರಂಗನಾಥನ್ ಆಯ್ಕೆ ಸಮಿತಿ ವಿರುದ್ಧ ಬೇಸರ ವ್ಯಕ್ತಪಡಿಸಿದ್ದರು. ಇದಲ್ಲದೆ, ಟೆಸ್ಟ್ ತಂಡವನ್ನು ಆಯ್ಕೆ ಮಾಡುವಾಗ ಭಾರತ ತಂಡದ ಆಡಳಿತ ಮಂಡಳಿಯು ಐಪಿಲ್ ಪ್ರದರ್ಶನವನ್ನು ಮಾನದಂಡವಾಗಿರಿಸಿಕೊಂಡಿದೆ ಎಂದು ಆರೋಪ ಮಾಡಿದ್ದರು.

ಇದರ ನಡುವೆ ಈಶ್ವರನ್ ಇತ್ತೀಚೆಗೆ ಆಸ್ಟ್ರೇಲಿಯಾ ಎ ವಿರುದ್ಧದ ಮೊದಲ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಆಡಿ 44 (58) ರನ್ ಗಳಿಸಿದರು. ಕಳೆದ ದೇಶಿ ಋತುವಿನಲ್ಲಿ ಅವರು ದುಲೀಪ್ ಟ್ರೋಫಿ, ಇರಾನಿ ಮತ್ತು ರಣಜಿ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ತೋರಿ ಅದ್ಭುತ ಫಾರ್ಮ್‌ನಲ್ಲಿದ್ದರು.  ಆ ಋತುವಿನಲ್ಲಿ ಅವರು 127(ಅಜೇಯ), 191, 116, 19, 157*, 13, 4, 200*, 72, 65 ರನ್ ಗಳಿಸಿ ತಂಡದ ಪರ ಅದ್ಬುತ ಪ್ರದರ್ಶನ ತೋರಿದ್ದರು.

ತಂದೆಯನ್ನು ಕಳೆದುಕೊಂಡ ದುನಿತ್‌ ವೆಲ್ಲಾಳಗೆಗೆ ಸಾಂತ್ವನ ಹೇಳಿದ ಸೂರ್ಯಕುಮಾರ್‌ ಯಾದವ್‌!

ಇಲ್ಲಿಯವರೆಗೆ ಅವರು ಆಡಿರುವ ಪಂದ್ಯಗಳಲ್ಲಿ 104 ಪಂದ್ಯಗಳಿಂದ (178 ಇನಿಂಗ್ಸ್‌ಗಳು) 48.67ರ ಸರಾಸರಿಯಲ್ಲಿ 27 ಶತಕಗಳು ಮತ್ತು 31 ಅರ್ಧಶತಕಗಳೊಂದಿಗೆ 7885 ರನ್ ಕಲೆ ಹಾಕಿದ್ದಾರೆ. ಇಂಗ್ಲೆಂಡ್ ಸರಣಿಗೂ ಮುನ್ನ ನಡೆದ ಎರಡು ಪ್ರವಾಸ ಪಂದ್ಯಗಳಲ್ಲಿ ಅವರು 68 ಮತ್ತು 80 ರನ್‌ಗಳ ಉತ್ತಮ ಇನಿಂಗ್ಸ್‌ಗಳನ್ನು ಆಡಿದ್ದರು. ಇದಲ್ಲದೆ, 2022ರಲ್ಲಿ ಅಭಿಮನ್ಯು ಈಶ್ವರನ್ ಅವರು ತಂಡದಲ್ಲಿ ಸ್ಥಾನ ಪಡೆದ ನಂತರ, 15 ಆಟಗಾರರು ಭಾರತ ತಂಡದ ಪರ ಟೆಸ್ಟ್‌ಗೆ ಪದಾರ್ಪಣೆ ಮಾಡಿದ್ದಾರೆ, ಆದರೆ ಅವರ ದೀರ್ಘ ಕಾಯುವಿಕೆ ಮುಂದುವರಿದಿದೆ.