IND vs SL: ಸೂಪರ್ ಓವರ್‌ನಲ್ಲಿನ ಬೌಲಿಂಗ್ ರಣತಂತ್ರವನ್ನು ತಿಳಿಸಿದ ಅರ್ಷದೀಪ್ ಸಿಂಗ್!
ಶ್ರೀಲಂಕಾ ವಿರುದ್ಧದ ಏಷ್ಯಾ ಕಪ್ ಟೂರ್ನಿಯ ಸೂಪರ್-4ರ ಪಂದ್ಯದ ಸೂಪರ್ ಓವರ್‌ನಲ್ಲಿ ಬುದ್ದಿವಂತಿಕೆಯಿಂದ ಬೌಲ್ ಮಾಡಿದ ಅರ್ಷದೀಪ್ ಸಿಂಗ್ ಭಾರತ ತಂಡವನ್ನು ಗೆಲ್ಲಿಸಿದ್ದರು. ತಾವು ಬೌಲ್ ಮಾಡಿದ 5 ಎಸೆತಗಳಲ್ಲಿ 2 ರನ್ ನೀಡಿ 2 ವಿಕೆಟ್ ಕಿತ್ತಿದ್ದರು. ಪಂದ್ಯದ ಬಳಿಕ ತಮ್ಮ ಬೌಲಿಂಗ್ ಗೇಮ್ ಪ್ಲ್ಯಾನ್ ಏನೆಂದು ಅವರು ರಿವೀಲ್ ಮಾಡಿದ್ದಾರೆ.

ಶ್ರೀಲಂಕಾ ಎದುರು ಸೂಪರ್ ಓವರ್‌ನಲ್ಲಿನ ತಮ್ಮ ಬೌಲಿಂಗ್ ಗೇಮ್ ಪ್ಲ್ಯಾನ್ ತಿಳಿಸಿದ ಅರ್ಷದೀಪ್ ಸಿಂಗ್. -

ಬರಹ: ಕೆ ಎನ್ ರಂಗು ಚಿತ್ರದುರ್ಗ
ದುಬೈ: ಭಾರತ ತಂಡದ ಪ್ರಮುಖ ವೇಗಿ ಅರ್ಷದೀಪ್ ಸಿಂಗ್ (Arshdeep Singh) ಪ್ರಸ್ತುತ ನಡೆಯುತ್ತಿವ ಏಷ್ಯಾ ಕಪ್ (Asia Cup 2025) ಟೂರ್ನಿಯ ಶ್ರೀಲಂಕಾ ವಿರುದ್ಧದ ಸೂಪರ್-4ರ ಪಂದ್ಯದ ಸೂಪರ್ ಓವರ್‌ನಲ್ಲಿ ಅದ್ಬುತ ಬೌಲಿಂಗ್ ಪ್ರದರ್ಶನ ತೋರಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಪಂದ್ಯದ ನಿಗದಿತ 20 ಓವರ್‌ಗಳಿಗೆ ಉಭಯ ತಂಡಗಳ ಮೊತ್ತ ಸಮಬಲವಾಗಿತ್ತು. ಈ ವೇಳೆ ಸೂಪರ್ ಓವರ್‌ನಲ್ಲಿ ಮೊದಲು ಬ್ಯಾಟ್ ಮಾಡಿದ್ದ ಶ್ರೀಲಂಕಾ (Sri Lanka) ತಂಡವನ್ನು ಅರ್ಷದೀಪ್ ಸಿಂಗ್ ಕಟ್ಟಿ ಹಾಕಿದ್ದರು. ಅವರು ಬೌಲ್ ಮಾಡಿದ 5 ಎಸೆತಗಳಲ್ಲಿ ಕೇವಲ ಎರಡು ರನ್ ನೀಡಿ 2 ವಿಕೆಟ್ ಕಿತ್ತಿದ್ದರು ಬಳಿಕ ಭಾರತ ಮೊದಲನೇ ಎಸೆತದಲ್ಲಿಯೇ ಮೂರು ರನ್ ಗಳಿಸಿ ಗೆದ್ದು ಬೀಗಿತ್ತು. ಈ ಪಂದ್ಯದ ಬಳಿಕ ತಮ್ಮ ಬೌಲಿಂಗ್ ಗೇಮ್ ಪ್ಲ್ಯಾನ್ ಏನೆಂದು ಅರ್ಷದೀಪ್ ಸಿಂಗ್ ರಿವೀಲ್ ಮಾಡಿದ್ದಾರೆ.
ಈ ಕುರಿತು ಮಾತನಾಡಿರುವ ಅರ್ಷದೀಪ್ ಸಿಂಗ್, "ಪವರ್‌ಪ್ಲೇನಲ್ಲಿ ನಮಗೆ ಹೊಡೆತ ಬಿತ್ತು ಎಂದು ನಾನು ಭಾವಿಸಿದ್ದೆ. ಆದರೆ ಎಲ್ಲರೂ ನಂತರ ಕಮ್‌ಬ್ಯಾಕ್ ಮಾಡಿ ಸೂಪರ್ ಓವರ್‌ಗೆ ಪಂದ್ಯವನ್ನು ತೆಗೆದುಕೊಂಡು ಹೋದರು. ಸೂಪರ್ ಓವರ್‌ನಲ್ಲಿ ನನ್ನ ಯೋಜನೆ ಸ್ಪಷ್ಟವಾಗಿತ್ತು. ವೈಡ್ ಯಾರ್ಕರ್‌ಗಳನ್ನು ಬೌಲ್ ಮಾಡಿ, ಅವರನ್ನು (ಶ್ರೀಲಂಕಾದ ಬ್ಯಾಟ್ಸ್‌ಮನ್‌ಗಳು) ಆಫ್-ಸೈಡ್‌ನಲ್ಲಿ ಸ್ಕೋರ್ ಮಾಡುವಂತೆ ಮಾಡುವುದು," ಎಂದು ಬಿಸಿಸಿಐ ಪೋಸ್ಟ್ ಮಾಡಿದ ವಿಡಿಯೊದಲ್ಲಿ ಬಹಿರಂಗಪಡಿಸಿದ್ದಾರೆ.
ಅರ್ಷದೀಪ್ ಸಿಂಗ್ ಅವರ ಈ ತಂತ್ರ ಯಶಸ್ವಿಯಾಗಿದ್ದು, ಕುಸಾಲ್ ಪೆರೇರಾ ಮತ್ತು ದಸೂನ್ ಶಾನಕ ಇಬ್ಬರೂ ಚೆಂಡನ್ನು ಆಫ್-ಸೈಡ್ ಮೂಲಕ ಬಲವಾಗಿ ತಳ್ಳಲು ಪ್ರಯತ್ನಿಸಿದ್ದರು. ಆದರೆ, ಡೀಪ್ ಪಾಯಿಂಟ್‌ನಲ್ಲಿ ರಿಂಕು ಸಿಂಗ್ ಮತ್ತು ಡೀಪ್ ಬ್ಯಾಕ್‌ವಾರ್ಡ್ ಪಾಯಿಂಟ್‌ನಲ್ಲಿ ಜಿತೇಶ್ ಶರ್ಮಾ ಕ್ಯಾಚ್ ಪಡೆದರು. ಇದರೊಂದಿಗೆ ಭಾರತ ತಂಡ ಗೆಲುವನ್ನು ಖಚಿತಪಡಿಸಿಕೊಂಡಿತು.
Asia Cup 2025 final: ಫೈನಲ್ ತನಕ ಭಾರತ ಗೆದ್ದು ಬಂದ ಹಾದಿಯ ಇಣುಕು ನೋಟ
ಅರ್ಷದೀಪ್ ಸಿಂಗ್ ಏಷ್ಯಾಕಪ್ ಟೂರ್ನಿಯಲ್ಲಿ ಇದುವರೆಗೆ ಕೇವಲ ಎರಡು ಪಂದ್ಯಗಳಲ್ಲಿ ಮಾತ್ರ ಆಡಿದ್ದರೂ, ದುಬೈನಲ್ಲಿನ ಪರಿಸ್ಥಿತಿಯಿಂದಾಗಿ ಟೀಮ್ ಮ್ಯಾನೇಜ್‌ಮೆಂಟ್, ಜಸ್‌ಪ್ರೀತ್ ಬುಮ್ರಾ ಮತ್ತು ಹಾರ್ದಿಕ್ ಪಾಂಡ್ಯ ಅವರನ್ನು ಮುಂಚೂಣಿಯ ವೇಗಿಗಳಾಗಿ ಆಡಿಸುತ್ತಿದೆ. ಈ ಕಾರಣದಿಂದಾಗಿ ತಾನು ನಿರಾಶೆಗೊಂಡಿಲ್ಲ ಎಂದು ಅರ್ಷದೀಪ್ ಹೇಳಿಕೊಂಡಿದ್ದಾರೆ.
"ನಾನು ಯಾವಾಗಲೂ ನನ್ನನ್ನು ಮಾನಸಿಕವಾಗಿ ಸಿದ್ಧವಾಗಿಟ್ಟುಕೊಳ್ಳಲು ಪ್ರಯತ್ನಿಸುತ್ತೇನೆ. ನೀವು ಮಲಗಲು ಹೋದಾಗಲೆಲ್ಲಾ, ನೀವು ನಿಮ್ಮ 100 ಪ್ರತಿಶತವನ್ನು ನೀಡಿದ್ದೀರಿ ಎಂದು ನೀವು ಭಾವಿಸಬೇಕು. ನೀವು ಆಡದಿದ್ದಾಗಲೆಲ್ಲಾ ನೀವು ಮೈದಾನದ ಹೊರಗೆ ನಿಮ್ಮ 100 ಪ್ರತಿಶತವನ್ನು ನೀಡಬೇಕು, ಆಡುತ್ತಿರುವ ಆಟಗಾರರನ್ನು ಹಿಡಿದಿಟ್ಟುಕೊಳ್ಳಬೇಕು, ಚೆನ್ನಾಗಿ ತರಬೇತಿ ನೀಡಬೇಕು, ನಿಮ್ಮ ಫಿಟ್‌ನೆಸ್‌ನಲ್ಲಿ ಕೆಲಸ ಮಾಡಬೇಕು," ಎಂದು ಅವರು ವಿವರಿಸಿದ್ದಾರೆ.
Asia Cup 2025 final: ನಾಳೆ ಭಾರತ vs ಪಾಕ್ ಫೈನಲ್; ಉಭಯ ತಂಡಗಳ ದಾಖಲೆ ಹೇಗಿದೆ?
ಅರ್ಷದೀಪ್ ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ 100 ವಿಕೆಟ್‌ಗಳನ್ನು ತಲುಪಿದ ಮೊದಲ ಭಾರತೀಯ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅವರು ತಮ್ಮ 64ನೇ ಪಂದ್ಯದಲ್ಲಿ ಈ ಸಾಧನೆಯನ್ನು ಮಾಡಿದ್ದಾರೆ. ಅಫ್ಘಾನಿಸ್ತಾನದ ರಶೀದ್ ಖಾನ್ (53 ಪಂದ್ಯಗಳು) ಮತ್ತು ನೇಪಾಳದ ಸಂದೀಪ್ ಲಾಮಿಚನ್ನೆ (54) ನಂತರ ವೇಗವಾಗಿ ಈ ಸಾಧನೆ ಮಾಡಿದ ಬೌಲರ್ ಎನಿಸಿಕೊಂಡಿದ್ದಾರೆ.
"ಪರಿಸ್ಥಿತಿ ಏನೇ ಇರಲಿ ನೀವು ವರ್ತಮಾನವನ್ನು ಆನಂದಿಸಬೇಕು. ನನ್ನ ಸರದಿ ಬಂದಾಗಲೆಲ್ಲಾ ರನ್‌ಗಳನ್ನು ಹಿಡಿದಿಟ್ಟುಕೊಂಡು, ಒತ್ತಡವನ್ನು ಹೆಚ್ಚಿಸಿ ಮತ್ತು ವಿಕೆಟ್‌ಗಳನ್ನು ತೆಗೆದುಕೊಂಡಿದ್ದೇನೆ. ಹೊಸ ಚೆಂಡು, ಹಳೆಯ ಚೆಂಡು, ಮೊದಲ ಇನಿಂಗ್ಸ್ ಅಥವಾ ಎರಡನೇ ಇನಿಂಗ್ಸ್ ಏನೇ ಇರಲಿ ನಾನು ಸನ್ನಿವೇಶಗಳಿಗೆ ಹೊಂದಿಕೊಳ್ಳಬೇಕಾಗಿದೆ. ಅದೃಷ್ಟವಶಾತ್, ಭುವಿ (ಭುವನೇಶ್ವರ್ ಕುಮಾರ್) , ಶಮಿ, ಬುಮ್ರಾ ಅಥವಾ ಹಾರ್ದಿಕ್ ಆಗಿರಲಿ, ನನಗೆ ಬಹಳಷ್ಟು ಉತ್ತಮ ಪಾಲುದಾರರು ಸಿಕ್ಕರು. ನಾವು ಒತ್ತಡವನ್ನು ಹೆಚ್ಚಿಸಲು ಪ್ರಯತ್ನಿಸುತ್ತೇವೆ. ನಾನು ಅವರೆಲ್ಲರಿಗೂ ಧನ್ಯವಾದ ಹೇಳಬೇಕಾಗಿದೆ," ಎಂದು ಅವರು ತಿಳಿಸಿದ್ದಾರೆ.