ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ʻಭಾರತಕ್ಕೆ ಬರಲು ತಂಡಗಳು ಭಯಪಡುತ್ತಿದ್ದವು, ಈಗ....?ʼ: ಗೌತಮ್‌ ಗಂಭೀರ್‌ ವಿರುದ್ಧ ದಿನೇಶ್‌ ಕಾರ್ತಿಕ್‌ ಕಿಡಿ!

Dinesh karthik on India's Test series loss: ದಕ್ಷಿಣ ಆಫ್ರಿಕಾ ವಿರುದ್ಧ ಎರಡನೇ ಟೆಸ್ಟ್‌ ಪಂದ್ಯದ ಹೀನಾಯ ಸೋಲಿನ ಬಳಿಕ ಮಾಜಿ ವಿಕೆಟ್‌ ಕೀಪರ್‌ ದಿನೇಶ್‌ ಕಾರ್ತಿಕ್‌, ಭಾರತ ಟೆಸ್ಟ್‌ ತಂಡವನ್ನು ಕಟುವಾಗಿ ಟೀಕಿಸಿದ್ದಾರೆ. ಈ ಹಿಂದೆ ಭಾರತಕ್ಕೆ ಪ್ರವಾಸ ಮಾಡಲು ಎದುರಾಳಿ ತಂಡಗಳು ಭುಪಡುತ್ತಿದ್ದವು, ಆದರೆ, ಅವರು ತಮ್ಮ ತುಟಿಗಳನ್ನು ನೆಕ್ಕುತ್ತಿದ್ದಾರೆ ಎಂದು ಹೇಳಿದ್ದಾರೆ.

ಟೆಸ್ಟ್‌ ಸರಣಿ ಸೋಲಿನ ಬೆನ್ನಲ್ಲೆ ಭಾರತ ತಂಡದ ವಿರುದ್ಧ ಕಾರ್ತಿಕ್‌ ಕಿಡಿ!

ಭಾರತ ತಂಡದ ವಿರುದ್ಧ ದಿನೇಶ್‌ ಕಾರ್ತಿಕ್‌ ಕಿಡಿ. -

Profile
Ramesh Kote Nov 27, 2025 7:44 AM

ನವದೆಹಲಿ: ದಕ್ಷಿಣ ಆಫ್ರಿಕಾ ವಿರುದ್ಧ ಎರಡು ಪಂದ್ಯಗಳ (IND vs SA) ಟೆಸ್ಟ್‌ ಸರಣಿಯನ್ನು 0-2 ಅಂತರದಲ್ಲಿ ವೈಟ್‌ವಾಷ್‌ ಆಘಾತ ಅನುಭವಿಸಿದ ಭಾರತ ತಂಡದ ವಿರುದ್ದ ಮಾಜಿ ವಿಕೆಟ್‌ ಕೀಪರ್‌ ದಿನೇಶ್‌ ಕಾರ್ತಿಕ್‌ (Dinesh Karthik) ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಭಾರತಕ್ಕೆ ಎದುರಾಳಿ ತಂಡಗಳು ಬರಲು ಭಯಪಡುತ್ತಿದ್ದವು, ಆದರೆ ಈಗ ಆ ತಂಡಗಳು ತಮ್ಮ ತುಟಿಗಳನ್ನು ನೆಕ್ಕುತ್ತಿದ್ದಾರೆಂದು ಹೇಳಿದ್ದಾರೆ. ಬುಧವಾರ ಗುವಾಹಟಿಯ ಬರ್ಸಪರ ಕ್ರೀಡಾಂಗಣದಲ್ಲಿ ಭಾರತ ತಂಡ (India) ಎರಡನೇ ಟೆಸ್ಟ್‌ ಪಂದ್ಯದಲ್ಲಿ 408 ರನ್‌ಗಳ ಅಂತರದಲ್ಲಿ ಸೋಲು ಅನುಭವಿಸಿತ್ತು. ಇದು ಟೆಸ್ಟ್‌ ಕ್ರಿಕೆಟ್‌ ಇತಿಹಾಸದಲ್ಲಿ ಭಾರತಕ್ಕೆ ಅತ್ಯಂತ ದೊಡ್ಡ ಅಂತರದ ಸೋಲು. ಒಂದು ವರ್ಷದ ಅವಧಿಯಲ್ಲಿ ಎರಡನೇ ಬಾರಿ ಭಾರತ ತಂಡ ತವರಿನಲ್ಲಿ ಟೆಸ್ಟ್‌ ಸರಣಿಯಲ್ಲಿ ಕ್ಲೀನ್‌ ಸ್ವೀಪ್‌ ಆಘಾತ ಅನುಭವಿಸಿದೆ. ಕಳೆದ ವರ್ಷ ನ್ಯೂಜಿಲೆಂಡ್‌ ವಿರುದ್ಧ 3-0 ಅಂತರದಲ್ಲಿ ವೈಟ್‌ವಾಷ್‌ ಆಘಾತ ಅನುಭವಿಸಿತ್ತು.

ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡ ವಿಡಿಯೊದಲ್ಲಿ ಮಾತನಾಡಿದ ದಿನೇಶ್‌ ಕಾರ್ತಿಕ್‌, "ಈ ಹಿಂದೆ ಟೆಸ್ಟ್‌ ಸರಣಿಯ ನಿಮಿತ್ತ ಭಾರತಕ್ಕೆ ಪ್ರವಾಸ ಮಾಡಲು ಎದುರಾಳಿ ತಂಡಗಳು ಭಯಪಡುತ್ತಿದ್ದವು. ಆದರೆ, ಈಗ ವಿದೇಶಿ ತಂಡಗಳು ತಮ್ಮ ತುಟಿಯನ್ನು ನೆಕ್ಕುತ್ತಿವೆ. ಕಳೆದ 12 ತಿಂಗಳ ಅಂತರದಲ್ಲಿ ಭಾರತಕ್ಕೆ ತವರಿನಲ್ಲಿ ಎರಡನೇ ಟೆಸ್ಟ್‌ ಸರಣಿಯ ವೈಟ್‌ವಾಷ್‌ ಇದಾಗಿದೆ. ಭಾರತದಲ್ಲಿ ಕೊನೆಯ ಮೂರು ಟೆಸ್ಟ್‌ ಸರಣಿಗಳ ಪೈಕಿ, ಎರಡರಲ್ಲಿ ಟೀಮ್‌ ಇಂಡಿಯಾ ಕ್ಲೀನ್‌ ಸ್ವೀಪ್‌ ಆಘಾತ ಅನುಭವಿಸಿದೆ. ಭಾರತೀಯ ಟೆಸ್ಟ್‌ ಕ್ರಿಕೆಟ್‌ಗೆ ಇದೀಗ ಕಠಿಣ ಸಮಯ ಹಾಗೂ ಕಠಿಣ ನಿರ್ಧಾರವನ್ನು ತೆಗೆದುಕೊಳ್ಳುವ ಸಮಯ ಕೂಡ ಇದಾಗಿದೆ," ಎಂದು ಹೇಳಿದ್ದಾರೆ.

IND vs SA: ʻಹೆಡ್‌ ಕೋಚ್‌ ಹುದ್ದೆಯಿಂದ ಕಿತ್ತಾಕಿʼ-ಗೌತಮ್‌ ಗಂಭೀರ್‌ ವಿರುದ್ಧ ಫ್ಯಾನ್ಸ್‌ ಆಕ್ರೋಶ!

ಭಾರತದಲ್ಲಿ ದಕ್ಷಿಣ ಆಫ್ರಿಕಾ ತಂಡ, ಎರಡೂ ವಿಭಾಗಗಳಲ್ಲಿ ಪ್ರಾಬಲ್ಯ ಸಾಧಿಸಿದೆ. ಭಾರತದ ಬೌಲರ್‌ಗಳು ತವರು ಪಿಚ್‌ಗಳಲ್ಲಿಯೇ ವಿಫಲರಾಗಿದ್ದಾರೆ. ಇನ್ನು ಬ್ಯಾಟ್ಸ್‌ಮನ್‌ಗಳು ಎದುರಾಳಿ ತಂಡದ ವೇಗದ ಬೌಲರ್‌ಗಳು ಹಾಗೂ ಸ್ಪಿನ್ನರ್‌ಗಳ ಎದುರು ನೀರಸ ಪ್ರದರ್ಶನವನ್ನು ತೋರಿದ್ದಾರೆ. ಹಲವು ಆಯ್ಕೆಯ ನಿರ್ಧಾರಗಳು ಇಲ್ಲಿ ಪರಿಣಾಮ ಬೀರಿದೆ. ತಂಡದಲ್ಲಿಯೇ ಹಲವು ಗೊಂದಲಗಳು ಇವೆ ಎಂದು ದಿನೇಶ್‌ ಕಾರ್ತಿಕ್‌ ದೂರಿದ್ದಾರೆ.

"ಭಾರತದಲ್ಲಿ ವೇಗಿಗಳು ಮತ್ತು ಸ್ಪಿನ್ನರ್‌ಗಳನ್ನು ಸಂಪೂರ್ಣವಾಗಿ ಬಳಸಿಕೊಂಡಿಲ್ಲ. ತುಂಬಾ ಹೆಚ್ಚು ಆಲ್‌ರೌಂಡರ್‌ಗಳನ್ನು ಆಡಿಸಲಾಗಿದೆ. ನಾಮನಿರ್ದೇಶಿತ ವೇಗದ ಆಲ್‌ರೌಂಡರ್ ನಿತೀಶ್ ರೆಡ್ಡಿ ಇಡೀ ದೇಶಿ ಕ್ಯಾಲೆಂಡರ್ ಋತುವಿನಲ್ಲಿ 14 ಓವರ್‌ಗಳನ್ನು ಬೌಲ್‌ ಮಾಡಿದ್ದಾರೆ. ಈ ಟೆಸ್ಟ್ ಸರಣಿಯಲ್ಲಿ ಭಾರತ ತಂಡದ ಕೇವಲ ಇಬ್ಬರು ಆಟಗಾರರು ಮಾತ್ರ 100ಕ್ಕಿಂತ ಹೆಚ್ಚಿನ ರನ್‌ಗಳನ್ನು ಗಳಿಸಿದ್ದಾರೆ. ದಕ್ಷಿಣ ಆಫ್ರಿಕಾ ತಂಡದ ಏಳು ಆಟಗಾರರು 100ಕ್ಕೂ ಅಧಿಕ ರನ್‌ ಗಳಿಸಿದ್ದಾರೆ," ಎಂದು ಹೇಳಿದ್ದಾರೆ.

IND vs SA: ಎರಡನೇ ಟೆಸ್ಟ್‌ ಸೋಲಿನ ಬಳಿಕ ಭಾವುಕರಾಗಿ ಕಣ್ಣೀರಿಟ್ಟ ರಿಷಭ್‌ ಪಂತ್!‌ ವಿಡಿಯೊ

ಮೂರನೇ ಕ್ರಮಾಂಕದಲ್ಲಿ ಸಮಸ್ಯೆ

ಭಾರತ ಟೆಸ್ಟ್‌ ತಂಡದಲ್ಲಿ ಮೂರನೇ ಕ್ರಮಾಂಕದ ಸಮಸ್ಯೆಯ ಬಗ್ಗೆಯೂ ದಿನೇಶ್‌ ಕಾರ್ತಿಕ್‌ ಮಾತನಾಡಿದ್ದಾರೆ. "ಈ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಋತುವಿನಲ್ಲಿ ಟೆಸ್ಟ್‌ ಪಂದ್ಯದ ಪ್ರಥಮ ಇನಿಂಗ್ಸ್‌ನ ಸರಾಸರಿ ರನ್‌ಗಳು 26 ಆಗಿದ್ದು, ಎರಡನೇ ಅತ್ಯಂತ ಕೆಟ್ಟ ದಾಖಲೆಯಾಗಿದೆ. ಮೂರನೇ ಕ್ರಮಾಂಕಕ್ಕೆ ಯಾರು? ಕೋಲ್ಕತಾದಲ್ಲಿ ಮೂರನೇ ಕ್ರಮಾಂಕದಲ್ಲಿ ವಾಷಿಂಗ್ಟನ್‌ ಸುಂದರ್‌ ಆಡಿದ್ದರು. ಗುವಾಹಟಿಯಲ್ಲಿ ಮೂರನೇ ಕ್ರಮಾಂಕದಲ್ಲಿ ಸಾಯಿ ಸುದರ್ಶನ್‌ ಆಡಿದ್ದರು. ಕತ್ತರಿಸುವುದು ಮತ್ತು ಬದಲಾಯಿಸುವುದು ಭಾರತಕ್ಕೆ ಸಹಾಯ ಮಾಡುತ್ತಿದೆಯೇ? ಅಥವಾ ನಮಗೆ ಹೆಚ್ಚಿನ ಸ್ಥಿರತೆ ಮತ್ತು ಸ್ಥಿರತೆ ಬೇಕೇ?" ಎಂದು ಅವರು ಪ್ರಶ್ನೆ ಮಾಡಿದ್ದಾರೆ.

ಈ ಸಮಸ್ಯೆಗಳನ್ನು ಬಗೆಹರಿಸುತ್ತೀರಾ?

ಟೆಸ್ಟ್‌ ಸರಣಿಯಲ್ಲಿ ಮಾಡಿದ ತಪ್ಪುಗಳನ್ನು ಸರಿ ಮಾಡಿಕೊಳ್ಳುತ್ತೀರಾ? ಅಥವಾ ಈ ಕ್ಯಾಲೆಂಡರ್‌ ವರ್ಷದಲ್ಲಿ ಹಾಗೇ ವೈಟ್‌ಬಾಲ್‌ ಸರಣಿಗಳಿಗೆ ಹೋಗುತ್ತೀರಾ? ಎಂದು ಕಾರ್ತಿಕ್‌ ಪ್ರಶ್ನೆ ಮಾಡಿದ್ದಾರೆ. "ಏಳು ತಿಂಗಳುಗಳ ಬಳಿಕ ಮುಂದಿನ ಟೆಸ್ಟ್‌ ಪಂದ್ಯ ಇದೆ. ಆದರೆ, ಈಗಿನ ತಪ್ಪುಗಳನ್ನು ಮರೆತು ನೀವು ಮುಂದೆ ಸಾಗುತ್ತೀರಾ? ಎಂಬುದು ಈಗ ದೊಡ್ಡ‌ ಪ್ರಶ್ನೆ. ಈ ಟೆಸ್ಟ್ ತಂಡ ಮುಂದಿನ ಪಂದ್ಯಕ್ಕೆ ಮರಳಲು ತನ್ನ ತಪ್ಪುಗಳನ್ನು ತಿದ್ದಿಕೊಳ್ಳಲು ಏನು ಮಾಡಬೇಕು?, ಎಂದು ದಿನೇಶ್‌ ಕಾರ್ತಿಕ್‌ ಕೇಳಿದ್ದಾರೆ.