INDA vs ENGA: ಇಂಗ್ಲೆಂಡ್ ಲಯನ್ಸ್ ವಿರುದ್ಧ ಭರ್ಜರಿ ಶತಕ ಸಿಡಿಸಿದ ಕನ್ನಡಿಗ ಕರುಣ್ ನಾಯರ್!
ಭಾರತ ಟೆಸ್ಟ್ ತಂಡಕ್ಕೆ ಆಯ್ಕೆಯಾಗಿರುವ ಖುಷಿಯಲ್ಲಿರುವ ಕನ್ನಡಿಗ ಕರುಣ್ ನಾಯರ್, ಇಂಗ್ಲೆಂಡ್ ಲಯನ್ಸ್ ವಿರುದ್ದ ಮೊದಲನೇ ಅನಿಧಿಕೃತ ಟೆಸ್ಟ್ ಪಂದ್ಯದ ಪ್ರಥಮ ಇನಿಂಗ್ಸ್ನಲ್ಲಿ ಶತಕ ಸಿಡಿಸಿದ್ದಾರೆ. ಮೊದಲನೇ ದಿನದಾಟದ ಅಂತ್ಯಕ್ಕೆ ಅವರು ಅಜೇಯ 186 ರನ್ ಗಳಿಸಿ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಇಂಗ್ಲೆಂಡ್ ಲಯನ್ಸ್ ವಿರುದ್ಧ ದ್ವಿಶತಕದಂಚಿನಲ್ಲಿ ಕರುಣ್ ನಾಯರ್.

ನವದೆಹಲಿ: ಎಂಟು ವರ್ಷಗಳ ಬಳಿಕ ಭಾರತ ಟೆಸ್ಟ್ ತಂಡಕ್ಕೆ (India) ಆಯ್ಕೆಯಾಗಿರುವ ಕನ್ನಡಿಗ ಕರುಣ್ ನಾಯರ್ (Karun Nair), ಇಂಗ್ಲೆಂಡ್ ಪ್ರವಾಸದಲ್ಲಿ ಶುಭಾರಂಭವನ್ನು ಕಂಡಿದ್ದಾರೆ. ಟೆಸ್ಟ್ ಸರಣಿಗೂ ಇಂಗ್ಲೆಂಡ್ ಲಯನ್ಸ್ (England Lions) ವಿರುದ್ಧದ ಮೊದಲ ಅನಧಿಕೃತ ಟೆಸ್ಟ್ ಪಂದ್ಯದ ಪ್ರಥಮ ಇನಿಂಗ್ಸ್ನಲ್ಲಿ ಭಾರತ ಎ ತಂಡದ ಬ್ಯಾಟ್ಸ್ಮನ್ ಕರುಣ್ ನಾಯರ್ ಭರ್ಜರಿ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದ್ದಾರೆ. 155 ಎಸೆತಗಳಲ್ಲಿ ಶತಕವನ್ನು ಪೂರ್ಣಗೊಳಿಸಿದ ಅವರು, ಆರಂಭಿಕ ಆಘಾತವನ್ನು ಅನುಭವಿಸಿದ್ದ ಭಾರತ ಎ ತಂಡಕ್ಕೆ ಆಸರೆಯಾಗಿದ್ದಾರೆ. ಮೊದಲನೇ ದಿನದಾಟದ ಅಂತ್ಯಕ್ಕೆ ಅವರು ದ್ವಿಶತಕದಂಚಿನಲ್ಲಿದ್ದಾರೆ. ಎರಡನೇ ದಿನ ತಮ್ಮ ಡಬಲ್ ಸೆಂಚುರಿಯನ್ನು ಪೂರ್ಣಗೊಳಿಸಲಿದ್ದಾರೆ.
ಸೇಂಟ್ ಲಾರೆನ್ಸ್ ಕ್ರೀಡಾಂಗಣದಲ್ಲಿ ಶುಕ್ರವಾರ ಆರಂಭವಾದ ಮೊದಲನೇ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾಗಿದ್ದ ಭಾರತ ಎ ತಂಡ ಆರಂಭಿಕ ಆಘಾತವನ್ನು ಅನುಭವಿಸಿತ್ತು. ಆರಂಭಿಕರಾದ ಯಶಸ್ವಿ ಜೈಸ್ವಾಲ್ (24) ಹಾಗೂ ಅಭಿಮನ್ಯು ಈಶ್ವರನ್ (8) ಅವರು ಬಹುಬೇಗ ವಿಕೆಟ್ ಒಪ್ಪಿಸಿದರು. ಆ ಮೂಲಕ ಭಾರತ ಎ 51 ರನ್ಗಳಿಗೆ ಎರಡು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.
India's Test Squad: ಇಂಗ್ಲೆಂಡ್ ಟೆಸ್ಟ್ ಸರಣಿಗೆ ಭಾರತ ತಂಡ ಪ್ರಕಟ, ಶುಭಮನ್ ಗಿಲ್ ನೂತನ ನಾಯಕ!
ಶತಕ ಬಾರಿಸಿದ ಕರುಣ್ ನಾಯರ್
ಈ ವೇಳೆ ಮೂರನೇ ಕ್ರಮಾಂಕದಲ್ಲಿ ಕ್ರೀಸ್ಗೆ ಬಂದಿದ್ದ ಕರುಣ್ ನಾಯರ್ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದರು. ಇಂಗ್ಲೆಂಡ್ ಲಯನ್ಸ್ ಬೌಲರ್ಗಳನ್ನು ಸಮರ್ಥವಾಗಿ ಎದುರಿಸಿದ ಕನ್ನಡಿಗ ಕರುಣ್ ನಾಯರ್, 155ಎಸೆತಗಳಲ್ಲಿ ಮೊದಲಿಗೆ ಶತಕವನ್ನು ಪೂರ್ಣಗೊಳಿಸಿದ್ದರು. ಅಲ್ಲದೆ ಸರ್ಫರಾಝ್ ಖಾನ್ ಅವರ ಜೊತೆ ಮೂರನೇ ವಿಕೆಟ್ಗೆ 181 ರನ್ಗಳನ್ನು ಕಲೆ ಹಾಕಿದ್ದರು. ಆ ಮೂಲಕ ತಂಡದ ಮೊತ್ತವನ್ನು 232 ರನ್ಗಳನ್ನು ದಾಖಲಿಸಲು ನೆರವು ನೀಡಿದ್ದರು. ಕರುಣ್ ಜೊತೆ ಮತ್ತೊಂದು ತುದಿಯಲ್ಲಿ ಅತ್ಯುತ್ತಮ ಬ್ಯಾಟ್ ಮಾಡಿದ್ದ ಸರ್ಫರಾಝ್ ಖಾನ್ 119 ಎಸೆತಗಳಲ್ಲಿ 92 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಇವರು ಕೇವಲ 8 ರನ್ಗಳ ಅಂತರದಲ್ಲಿ ಶತಕವನ್ನು ಕಳೆದುಕೊಂಡರು.
Wow!! 😮
— Cricbuzz (@cricbuzz) May 30, 2025
Karun Nair scores a century for India A against England Lions.
Should he now get picked in India's XI for the 1st Test? pic.twitter.com/oQKr0dWbZH
ದ್ವಿಶತಕದಂಚಿನಲ್ಲಿ ಕನ್ನಡಿಗ
ನಂತರ ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ಬ್ಯಾಟಿಂಗ್ ಮುಂದುವರಿಸಿದ ಕರುಣ್ ನಾಯರ್, ಮೊದಲನೇ ದಿನದಾಟವನ್ನು ಯಶಸ್ವಿಯಾಗಿ ಮುಗಿಸಿದರು. ಅವರು ಮೊದಲನೇ ದಿನದಾಟದ ಅಂತ್ಯಕ್ಕೆ ಅವರು 246 ಎಸೆತಗಳಲ್ಲಿ ಒಂದು ಸಿಕ್ಸರ್ ಹಾಗೂ 24 ಬೌಂಡರಿಗಳೊಂದಿಗೆ ಅಜೇಯ 186 ರನ್ಗಳನ್ನು ಬಾರಿಸಿದ್ದಾರೆ. ಅಲ್ಲದೆ ಧ್ರುವ್ ಜುರೆಲ್ ಜೊತೆ ನಾಲ್ಕನೇ ವಿಕೆಟ್ಗೆ ಅಜೇಯ 177 ರನ್ಗಳನ್ನು ಕರುಣ್ ನಾಯರ್ ಕಲೆ ಹಾಕಿದ್ದಾರೆ. ಪಂದ್ಯದ ಎರಡನೇ ದಿನ ಮೊದಲನೇ ಸೆಷನ್ನಲ್ಲಿ ಕರುಣ್ ನಾಯರ್ 14 ರನ್ ಗಳಿಸಿದರೆ, ದ್ವಿಶತಕವನ್ನು ಬಾರಿಸಲಿದ್ದಾರೆ. ಮತ್ತೊಂದೆಡೆ ಧ್ರುವ್ ಜುರೆಲ್ 104 ಎಸೆತಗಳಲ್ಲಿ ಅಜೇಯ 82 ರನ್ ಗಳಿಸಿ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಭಾರತ ಎ ತಂಡ ಮೊದಲನೇ ದಿನದಾಟದ ಅಂತ್ಯಕ್ಕೆ 90 ಓವರ್ಗಳಿಗೆ 3 ವಿಕೆಟ್ಗಳ ನಷ್ಟಕ್ಕೆ 409 ರನ್ಗಳನ್ನು ಕಲೆ ಹಾಕಿದೆ.
ಭಾರತದ ಪ್ಲೇಯಿಂಗ್ XIನಲ್ಲಿ ಕರುಣ್ಗೆ ಸ್ಥಾನ?
ದೇಶಿ ಕ್ರಿಕೆಟ್ನಲ್ಲಿ ಅತ್ಯುತ್ತಮ ಪ್ರದರ್ಶನ ತೋರುವ ಮೂಲಕ ಇಂಗ್ಲೆಂಡ್ ವಿರುದ್ದದ ಐದು ಪಂದ್ಯಗಳ ಟೆಸ್ಟ್ ಸರಣಿಯ ಭಾರತ ತಂಡಕ್ಕೆ ಆಯ್ಕೆಯಾಗಿರುವ ಕರುಣ್ ನಾಯರ್, ಇದೇ ಲಯವನ್ನು ಮುಂದುವರಿಸಲು ಎದುರು ನೋಡುತ್ತಿದೆ. ಇದೀಗ ಇಂಗ್ಲೆಂಡ್ ಲಯನ್ಸ್ ವಿರುದ್ಧ 186 ರನ್ಗಳನ್ನು ಗಳಿಸಿರುವುದ ಫಲವಾಗಿ ಕರುಣ್ ನಾಯರ್ ಮೊದಲನೇ ಟೆಸ್ಟ್ ಪಂದ್ಯದ ಭಾರತದ ಪ್ಲೇಯಿಂಗ್XIನಲ್ಲಿ ಅವಕಾಶ ಸಿಗಬಹುದು.