IND vs ENG: ಎರಡನೇ ದಿನ ಇಂಗ್ಲೆಂಡ್ ಕಮ್‌ಬ್ಯಾಕ್, ಭಾರತ 471ಕ್ಕೆ ಆಲ್‌ಔಟ್!
IND vs ENG 1st Test Day 2: ಮೊದಲನೇ ದಿನ ಇಂಗ್ಲೆಂಡ್ ಎದುರು ಬ್ಯಾಟಿಂಗ್‌ನಲ್ಲಿ ಪ್ರಾಬಲ್ಯ ಮೆರೆದಿದ್ದ ಭಾರತ ತಂಡ, ಎರಡನೇ ದಿನ ವಿಫಲವಾಯಿತು. ರಿಷಭ್ ಪಂತ್ ಶತಕವನ್ನು ಪೂರ್ಣಗೊಳಿಸಿದರೂ ಟೀಮ್ ಇಂಡಿಯಾ ಪ್ರಥಮ ಇನಿಂಗ್ಸ್‌ನಲ್ಲಿ 471 ರನ್‌ಗಳಿಗೆ ಆಲ್‌ಔಟ್ ಆಯಿತು.

ಭಾರತ ತಂಡ ಪ್ರಥಮ ಇನಿಂಗ್ಸ್‌ನಲ್ಲಿ 471 ಕ್ಕೆ ಆಲ್‌ಔಟ್.

ಲೀಡ್ಸ್: ರಿಷಭ್ ಪಂತ್ (134 ರನ್) ಅವರ ಶತಕದ ಹೊರತಾಗಿಯೂ ಭಾರತ ತಂಡ, ಮೊದಲನೇ ಟೆಸ್ಟ್ ಪಂದ್ಯದ (IND vs ENG) ಎರಡನೇ ದಿನ ಜಾಶ್ ಟಂಗ್ (86ಕ್ಕೆ 4) ಮತ್ತು ಬೆನ್ ಸ್ಟೋಕ್ಸ್ (66ಕ್ಕೆ 4) ಅವರ ಪರಿಣಾಮಕಾರಿ ಬೌಲಿಂಗ್ ದಾಳಿಗೆ ನಲುಗಿತು. ಇದರ ಪರಿಣಾಮ ಟೀಮ್ ಇಂಡಿಯಾ (India) ಪ್ರಥಮ ಇನಿಂಗ್ಸ್‌ನಲ್ಲಿ 500ಗಡಿ ದಾಟುವಲ್ಲಿ ವಿಫಲವಾಯಿತು. 113 ಓವರ್‌ಗಳಿಗೆ ಭಾರತ ತಂಡ 471 ರನ್‌ಗಳಿಗೆ ಆಲ್‌ಔಟ್ ಆಯಿತು. ಮೊದಲನೇ ದಿನ ಬೌಲಿಂಗ್‌ನಲ್ಲಿ ವೈಫಲ್ಯ ಅನುಭವಿಸಿದ್ದ ಇಂಗ್ಲೆಂಡ್ (England), ಎರಡನೇ ದಿನ ಕೇವಲ 41 ರನ್‌ಗಳ ಅಂತರದಲ್ಲಿ 7 ವಿಕೆಟ್‌ಗಳನ್ನು ಕಳೆದುಕೊಂಡಿತು.
ಇಲ್ಲಿನ ಹಡಿಂಗ್ಲೆ ಕ್ರಿಕೆಟ್ ಕ್ರೀಡಾಂಗಣದಲ್ಲಿ ಎರಡನೇ ದಿನವಾದ ಶನಿವಾರ 359 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ಪ್ರಥಮ ಇನಿಂಗ್ಸ್ ಮುಂದುವರಿಸಿದ ಭಾರತ ತಂಡ ಗಳಿಸಿದ್ದು ಕೇವಲ 112 ರನ್‌ಗಳು ಮಾತ್ರ. ಮೊದಲನೇ ದಿನ ಬಿಸಿಲು ಇದ್ದ ಕಾರಣ ಪಿಚ್ ಬ್ಯಾಟ್ಸ್‌ಮನ್‌ಗಳಿಗೆ ನೆರವು ನೀಡಿತ್ತು. ಆದರೆ, ಎರಡನೇ ದಿನ ಮೊದಲನೇ ಸೆಷನ್ ಬಳಿಕ ಮೋಡ ಕವಿದ ಹವಾಮಾನ ಉಂಟಾಯಿತು. ಈ ಹಿನ್ನೆಲೆಯಲ್ಲಿ ಭಾರತ ತಂಡ ಹೆಚ್ಚು ಹೊತ್ತು ಬ್ಯಾಟ್ ಮಾಡಲು ಸಾಧ್ಯವಾಗಲಿಲ್ಲ.
IND vs ENG: ಎಂಎಸ್ ಧೋನಿಯ ಟೆಸ್ಟ್ ಸಿಕ್ಸರ್‌ಗಳ ದಾಖಲೆ ಮುರಿದ ರಿಷಭ್ ಪಂತ್!
ಗಿಲ್-ಪಂತ್ 206 ರನ್‌ಗಳ ಜೊತೆಯಾಟ
ಎರಡನೇ ದಿನ ಬೆಳಗ್ಗೆ ಕ್ರೀಸ್‌ಗೆ ಬಂದ ರಿಷಭ್ ಪಂತ್ ಹಾಗೂ ಶುಭಮನ್ ಗಿಲ್ ಶನಿವಾರ 71 ರನ್‌ಗಳ ಜೊತೆಯಾಟವನ್ನು ಆಡುವ ಮೂಲಕ ಶುಭಾರಂಭ ಕಂಡಿದ್ದರು. ನಾಯಕ ಶುಭಮನ್ ಗಿಲ್ ಕೂಡ ಉತ್ತಮವಾಗಿ ಆಡುತ್ತಿದ್ದೆರು. ಅವರು 147 ರನ್‌ಗಳನ್ನು ಗಳಿಸಿದ ಬಳಿಕ ಶೋಯೆಬ್ ಬಶೀರ್ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಕೈ ಹಾಕಿ ಕ್ಯಾಚ್ ಕೊಟ್ಟರು. ಆ ಮೂಲಕ ಈ ಜೋಡಿಯ (209 ರನ್‌ಗಳು) ದೊಡ್ಡ ಜೊತೆಯಾಟ ಅಂತ್ಯವಾಯಿತು.
Innings Break! #TeamIndia posted 4⃣7⃣1⃣ on the board! 💪
— BCCI (@BCCI) June 21, 2025
1⃣4⃣7⃣ for captain Shubman Gill
1⃣3⃣4⃣ for vice-captain Rishabh Pant
1⃣0⃣1⃣ for Yashasvi Jaiswal
4⃣2⃣ for KL Rahul
Over to our bowlers now! 👍
Updates ▶️ https://t.co/CuzAEnAMIW #ENGvIND | @ShubmanGill |… pic.twitter.com/mRsXBvzXKx
ರಿಷಭ್ ಪಂತ್ ಏಳನೇ ಶತಕ
ಎರಡನೇ ದಿನ ಮೊದಲನೇ ಸೆಷನ್‌ನಲ್ಲಿ ಭರ್ಜರಿ ಬ್ಯಾಟ್ ಮಾಡಿದ ರಿಷಭ್ ಪಂತ್, ಇಂಗ್ಲೆಂಡ್ ಬೌಲರ್‌ಗಳಿಗೆ ಬೆವರಿಳಿಸಿದರು. ಅವರು 178 ಎಸೆತಗಳಲ್ಲಿ 6 ಸಿಕ್ಸರ್ ಹಾಗೂ 12 ಬೌಂಡರಿಗಳೊಂದಿಗೆ 134 ರನ್‌ಗಳನ್ನು ಕಲೆ ಹಾಕಿದರು. ಆ ಮೂಲಕ ಇವರು ತಮ್ಮ ಟೆಸ್ಟ್ ವೃತ್ತಿ ಜೀವನದಲ್ಲಿ 7ನೇ ಶತಕವನ್ನು ಪೂರ್ಣಗೊಳಿಸಿದರು ಹಾಗೂ ಭಾರತ ತಂಡದ ಮೊತ್ತವನ್ನು 450ರ ಗಡಿಗೆ ತಲುಪಿಸಿ ವಿಕೆಟ್ ಒಪ್ಪಿಸಿದರು.
IND vs ENG: ʻನಿಮ್ಮ ಭವಿಷ್ಯವಾಣಿ ಸುಳ್ಳುʼ-ಮೈಕಲ್ ವಾನ್‌ಗೆ ತಿರುಗೇಟು ಕೊಟ್ಟ ನವಜೋತ್ ಸಿಧು!
ಗಿಲ್ ಹಾಗೂ ಪಂತ್ ವಿಕೆಟ್ ಒಪ್ಪಿಸಿದ ಬಳಿಕ ಇನ್ನುಳಿದ ಬ್ಯಾಟ್ಸ್‌ಮನ್‌ಗಳು ಕೂಡ ಬಹುಬೇಗ ಇಂಗ್ಲೆಂಡ್ ಬೌಲರ್‌ಗಳಿಗೆ ಶರಣಾದರು. 7 ವರ್ಷಗಳ ಬಳಿಕ ಟೆಸ್ಟ್ ಪಂದ್ಯದಲ್ಲಿ ಆಡಿದ ಕರುಣ್ ನಾಯರ್ ಖಾತೆ ತೆರೆಯದೆ ವಿಕೆಟ್ ಒಪ್ಪಿಸಿದರು. ರವೀಂದ್ರ ಜಡೇಜಾ 11 ರನ್ ಗಳಿಸಿ ಔಟ್ ಆದರು. ಶಾರ್ದುಲ್ ಠಾಕೂರ್ ಕೂಡ ನಿರಾಶೆ ಮೂಡಿಸಿದರು. ಇಂಗ್ಲೆಂಡ್ ಪರ ನಾಯಕ ಬೆನ್ ಸ್ಟೋಕ್ಸ್ ಮತ್ತು ಜಾಶ್ ಟಂಗ್ ತಲಾ 4 ವಿಕೆಟ್‌ಗಳನ್ನು ಕಬಳಿಸಿದರು.