ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

DC vs LSG: ತಮ್ಮ ಮ್ಯಾಚ್‌ ವಿನ್ನಿಂಗ್‌ ಇನಿಂಗ್ಸ್‌ನ ಶ್ರೇಯ ಕೆವಿನ್‌ ಪಿಟರ್ಸನ್‌ಗೆ ಸಮರ್ಪಿಸಿದ ಆಶುತೋಷ್‌ ಶರ್ಮಾ!

Ashutosh Sharma on Runs Chase against LSG: ಲಖನೌ ಸೂಪರ್‌ ಜಯಂಟ್ಸ್‌ ವಿರುದ್ಧ ರನ್‌ ಚೇಸ್‌ ಮಾಡಿದ ಯಶಸ್ಸಿನ ಶ್ರೇಯ ಹೆಡ್‌ ಕೋಚ್‌ ಕೆವಿನ್‌ ಪೀಟರ್ಸನ್‌ಗೆ ಸಲ್ಲಬೇಕೆಂದು ಡೆಲ್ಲಿ ಕ್ಯಾಪಿಟಲ್ಸ್‌ ಬ್ಯಾಟ್ಸ್‌ಮನ್‌ ಆಶುತೋಷ್‌ ಶರ್ಮಾ ತಿಳಿಸಿದ್ದಾರೆ. 5 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಡೆಲ್ಲಿ ತಂಡವನ್ನು ಅರ್ಧಶತಕ ಸಿಡಿಸುವ ಮೂಲಕ ಆಶುತೋಷ್‌ ಶರ್ಮಾ ಗೆಲ್ಲಿಸಿದರು.

ರನ್‌ ಚೇಸ್‌ ಸಕ್ಸಸ್‌ನ ಶ್ರೇಯ ಈ ದಿಗ್ಗಜನಿಗೆ ಸಲ್ಲಬೇಕೆಂದ ಆಶುತೋಷ್‌ ಶರ್ಮಾ!

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಶುತೋಷ್‌ ಶರ್ಮಾ

Profile Ramesh Kote Mar 25, 2025 4:05 PM

ವಿಶಾಖಪಟ್ಟಣಂ: ಲಖನೌ ಸೂಪರ್‌ ಜಯಂಟ್ಸ್‌ ( Lucknow Super Giants) ವಿರುದ್ಧದ ಪಂದ್ಯದಲ್ಲಿ ರನ್‌ ಚೇಸ್‌ ಮಾಡಿದ ಯಶಸ್ಸಿನ ಶ್ರೇಯ ಹೆಡ್‌ ಕೋಚ್‌ ಕೆವಿನ್‌ ಪೀಟರ್ಸನ್‌ಗೆ ಸಲ್ಲಬೇಕೆಂದು ಡೆಲ್ಲಿ ಕ್ಯಾಪಿಟಲ್ಸ್‌ (Delhi Capitals) ತಂಡದ ಬ್ಯಾಟ್ಸ್‌ಮನ್‌ ಆಶುತೋಷ್‌ ಶರ್ಮಾ (Ashutosh Sharma) ತಿಳಿಸಿದ್ದಾರೆ. ಈ ಪಂದ್ಯದಲ್ಲಿ ಎಲ್‌ಎಸ್‌ಜಿ ನೀಡಿದ್ದ 210 ರನ್‌ಗಳ ಗುರಿಯನ್ನು ಹಿಂಬಾಲಿಸಿದ್ದ ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಪರ ಆಶುತೋಷ್‌ ಶರ್ಮಾ ಡೆತ್‌ ಓವರ್‌ಗಳಲ್ಲಿ ಸ್ಪೋಟಕ ಬ್ಯಾಟ್‌ ಮಾಡಿ ಅರ್ಧಶತಕವನ್ನು ಸಿಡಿಸಿದರು. ಆ ಮೂಲಕ ಸೋಲುವ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು ಗೆಲ್ಲಿಸಿದರು ಹಾಗೂ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಇಲ್ಲಿನ ಆಂಧ್ರ ಕ್ರಿಕೆಟ್‌ ಅಸೋಸಿಯೇಷನ್‌ ಕ್ರೀಡಾಂಗಣದಲ್ಲಿ ಸೋಮವಾರ ನಡೆದಿದ್ದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ್ದ ಲಖನೌ ಸೂಪರ್‌ ಜಯಂಟ್ಸ್‌ ತಂಡ 209 ರನ್‌ಗಳನ್ನು ಕಲೆ ಹಾಕಿತ್ತು. ಬಳಿಕ ಗುರಿ ಹಿಂಬಾಲಿಸಿದ ಡೆಲ್ಲಿ ಕ್ಯಾಪಿಟಲ್ಸ್‌ 65 ರನ್‌ಗಳಿಗೆ 5 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ವೇಳೆ ಡೆಲ್ಲಿ ಸೋಲುವುದು ಬಹುತೇಕ ಖಚಿತ ಎಂದೇ ಭಾವಿಸಲಾಗಿತ್ತು. ಆದರೆ, ಟ್ರಿಸ್ಟನ್‌ ಸ್ಟಬ್ಸ್‌ 34 ರನ್‌ ಗಳಿಸಿ ತಂಡಕ್ಕೆ ಗೆಲುವಿನ ಆಸೆಯನ್ನು ಜೀವಂತವಾಗಿರಿಸಿ ಔಟ್‌ ಆದರು.

DC vs LSG: ಸೋಲಿನಂಚಿನಲ್ಲಿದ್ದ ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು ಗೆಲ್ಲಿಸಿದ ಆಶುತೋಷ್‌ ಶರ್ಮಾ!

ಆದರೆ, ಇಂಪ್ಯಾಕ್ಟ್‌ ಪ್ಲೇಯರ್‌ ಆಗಿ ಬಂದ ಆಶುತೋಷ್‌ ಶರ್ಮಾ ಹಾಗೂ ವಿಪ್ರಾಜ್‌ ನಿಗಮ್‌ ಜೋಡಿ ಸ್ಪೋಟಕ ಬ್ಯಾಟಿಂಗ್‌ ಮೂಲಕ ಪಂದ್ಯದ ದಿಕ್ಕನ್ನು ಬದಲಿಸಿದರು. ಈ ಜೋಡಿ 55 ರನ್‌ಗಳ ನಿರ್ಣಾಯಕ ಜೊತೆಯಾಟವನ್ನು ಆಡಿತು. ಮೊದಲಿಗೆ ವಿಪ್ರಾಜ್‌ ಬ್ಯಾಟಿಂಗ್‌ನಲ್ಲಿ ತಮ್ಮನ್ನು ತಾವು ಅಭಿವ್ಯಕ್ತಗೊಳಿಸಿದರು. ಅವರು ಕೇವಲ 15 ಎಸೆತಗಳಲ್ಲಿ 39 ರನ್‌ ಗಳಿಸಿ ಪಂದ್ಯದ ದಿಕ್ಕನ್ನು ಬದಲಾಯಿಸಿದರು. ವಿಪ್ರಾಜ್‌ ಔಟ್‌ ಆದ ಬಳಿಕ ತಂಡದ ಜವಾಬ್ದಾರಿ ಹೊತ್ತ ಆಶುತೋಷ್‌ ಶರ್ಮಾ ಸ್ಪೋಟಕ ಅರ್ಧಶತಕ ಸಿಡಿಸಿದರು. ಅವರು ಆಡಿದ 31 ಎಸೆತಗಳಲ್ಲಿ ಅಜೇಯ 66 ರನ್‌ ಸಿಡಿಸಿ ಡೆಲ್ಲಿ ಕ್ಯಾಪಿಟಲ್ಸ್‌ಗೆ ಕೇವಲ ಒಂದು ವಿಕೆಟ್‌ ಗೆಲುವು ತಂದುಕೊಟ್ಟರು.

ಐಪಿಎಲ್‌ ಶೇರ್‌ ಮಾಡಿರುವ ವಿಡಿಯೊದಲ್ಲಿ ಮಾತನಾಡಿದ ಆಶುತೋಷ್‌ ಶರ್ಮಾ, "ಡೆಲ್ಲಿ ಕ್ಯಾಪಿಟಲ್ಸ್‌ ಅದ್ಭುತ ಫ್ರಾಂಚೈಸಿ, ಒಟ್ಟಾರೆ ಕೋಚಿಂಗ್‌ ಸಿಬ್ಬಂದಿ ಬೆಂಬಲ ನೀಡುವವರಾಗಿದ್ದಾರೆ. ಕೆವಿನ್‌ ಪೀಟರ್ಸನ್‌ ಜೊತೆ ಡ್ರೆಸ್ಸಿಂಗ್‌ ರೂಂ ಶೇರ್‌ ಮಾಡಲು ನಾನು ನಿಜಕ್ಕೂ ಅದೃಷ್ಟ ಮಾಡಿದ್ದೇನೆ. ಅವರ ವೃತ್ತಿ ಜೀವನದಲ್ಲಿನ ಮ್ಯಾಚ್‌ ವಿನ್ನಿಂಗ್‌ ಇನಿಂಗ್ಸ್‌ಗಳ ಬಗ್ಗೆ ನಾನು ಸಾಕಷ್ಟು ಚರ್ಚೆ ನಡೆಸಿದ್ದೇನೆ. ಅವರ ಜೊತೆಗಿನ ಸಂಭಾಷಣೆ ಅತ್ಯುತ್ತಮವಾಗಿದೆ," ಎಂದು ಹೇಳಿದ್ದಾರೆ.



ವಿಪ್ರಾಜ್‌ ನಿಗಮ್‌ ಹೇಳಿದ್ದೇನು?

ಆಶುತೋಷ್‌ ಶರ್ಮಾಗೂ ಮುನ್ನ ಕೇವಲ 15 ಎಸೆತಗಳಲ್ಲಿ 39 ರನ್‌ ಸಿಡಿಸುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್‌ಗೆ ಟರ್ನಿಂಗ್‌ ಪಾಯಿಂಟ್‌ ತಂದುಕೊಟ್ಟಿದ್ದು ವಿಪ್ರಾಜ್‌ ನಿಗಮ್‌. ಈ ಯುವ ಬ್ಯಾಟ್ಸ್‌ಮನ್‌ ಈ ರೀತಿಯ ಬ್ಯಾಟಿಂಗ್‌ ಪ್ರದರ್ಶನ ತೋರಲಿದ್ದಾರೆಂದು ಯಾರೂ ಕೂಡ ನಿರೀಕ್ಷೆ ಮಡಿರಲಿಲ್ಲ. ಪಂದ್ಯದ ಬಳಿಕ ಮಾತನಾಡಿದ ಅವರು, ತಂಡ ನೀಡಿರುವ ಪಾತ್ರದ ಬಗ್ಗೆ ನನಗೆ ಸ್ಪಷ್ಟತೆ ಇದೆ ಎಂದು ಹೇಳಿದ್ದಾರೆ.



"ಅಕ್ಷರ್‌ ಪಟೇಲ್‌, ಕೋಚಿಂಗ್‌ ಸಿಬ್ಬಂದಿ ಹಾಗೂ ಇತರೆ ಆಟಗಾರರು ನಮ್ಮ ಜೊತೆ ಇದ್ದಾರೆ. ಕೆಳ ಬ್ಯಾಟಿಂಗ್‌ ಕ್ರಮಾಂಕದಲ್ಲಿ ಆಡಿದರೆ, ಏನು ಮಾಡಬೇಕೆಂದು ಅವರು ನಮಗೆ ಸ್ಪಷ್ಟತೆಯನ್ನು ನೀಡಿದ್ದಾರೆ. ಒಳ್ಳೆಯ ಸಂಗತಿ ಏನೆಂದರೆ, ಅವರ ನಂಬಿಕೆಯನ್ನು ನಾನು ಉಳಿಸಿಕೊಂಡಿದ್ದೇನೆ. ನಾಯಕ ಹಾಗೂ ಒಟ್ಟಾರೆ ತಂಡ ಬೆಂಬಲಿಸುವುದಕ್ಕಿಂತ ಒಳ್ಳೆಯ ಸಂಗತಿ ಬೇರೆ ಯಾವುದೂ ಇಲ್ಲ. ನಾನು ನನ್ನ ಕನಸಿನಲ್ಲಿದ್ದೇನೆ ಹಾಗೂ ಮುಂದೆಯೂ ಇದನ್ನು ಮುಂದುವರಿಸುತ್ತೇನೆ," ಎಂದು ವಿಡಿಯೊದಲ್ಲಿ ವಿಪ್ರಾಜ್‌ ತಿಳಿಸಿದ್ದಾರೆ.