RCB vs PBKS: ಮೊದಲನೇ ಕ್ವಾಲಿಫೈಯರ್ಗೆ ಆರ್ಸಿಬಿ ಪ್ಲೇಯಿಂಗ್ XIನಲ್ಲಿ 2 ಬದಲಾವಣೆ ಸಾಧ್ಯತೆ!
RCB vs PBKS Match Preview: ಚೊಚ್ಚಲ ಕಪ್ ಗೆಲ್ಲುವ ವಿಶ್ವಾಸದಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಮೇ29 ರಂದು ಗುರುವಾರ ನಡೆಯುವ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಮೊದಲನೇ ಕ್ವಾಲಿಫೈಯರ್ನಲ್ಲಿ ಕಾದಾಟ ನಡೆಸಲು ಸಜ್ಜಾಗುತ್ತಿವೆ. ಈ ಪಂದ್ಯದಲ್ಲಿ ಸಂಭಾವ್ಯ ಪ್ಲೇಯಿಂಗ್ XI, ಪಿಚ್ ರಿಪೋರ್ಟ್, ಮುಖಾಮುಖಿ ದಾಖಲೆ ಸೇರಿದಂತೆ ಪ್ರಮುಖ ವಿವರಗಳನ್ನು ಇಲ್ಲಿ ನೀಡಲಾಗಿದೆ.

ಮೊದಲನೇ ಕ್ವಾಲಿಫೈಯರ್ನಲ್ಲಿ ಆರ್ಸಿಬಿ vs ಪಂಜಾಬ್ ಕಾದಾಟ.

ಚಂಡೀಗಢ: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಟೂರ್ನಿಯಲ್ಲಿ ಚೊಚ್ಚಲ ಕಪ್ ಗೆಲ್ಲುವ ಸನಿಹ ಬಂದಿದೆ. ರಜತ್ ಪಾಟಿದಾರ್ ನಾಯಕತ್ವದ ಆರ್ಸಿಬಿ ತಂಡ ಕಪ್ ಎತ್ತಿ ಹಿಡಿಯಲು ಇನ್ನು ಕೇವಲ ಎರಡು ಹೆಜ್ಜೆ ಮಾತ್ರ ಬಾಕಿ ಇದೆ. ಲೀಗ್ ಹಂತದಲ್ಲಿ ಯಶಸ್ವಿಯಾಗಿ ಮುಗಿಸಿರುವ ಆರ್ಸಿಬಿ 19 ಅಂಕಗಳೊಂದಿಗೆ ಪಾಯಿಂಟ್ಸ್ ಟೇಬಲ್ನಲ್ಲಿ ಎರಡನೇ ಸ್ಥಾನ ಪಡೆದು ಮೊದಲನೇ ಕ್ವಾಲಿಫೈಯರ್ಗೆ ಅರ್ಹತೆ ಪಡೆದಿದೆ. ಇದೀಗ ಬೆಂಗಳೂರು ತಂಡ, ಮೇ 29 ರಂದು ಚಂಡೀಗಢದ ಮಹಾರಾಜ ಯದವೀಂದ್ರ ಸಿಂಗ್ ಇಂಟರ್ನ್ಯಾಷನಲ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಪಂಜಾಬ್ ಕಿಂಗ್ಸ್ ಎದುರು ಮೊದಲನೇ ಕ್ವಾಲಿಫೈಯರ್ ಪಂದ್ಯದಲ್ಲಿ (RCB vs PBKS) ಕಾದಾಟ ನಡೆಸಲು ಸಜ್ಜಾಗುತ್ತಿದೆ.
2014ರ ಬಳಿಕ ಶ್ರೇಯಸ್ ಅಯ್ಯರ್ ನಾಯಕತ್ವದ ಪಂಜಾಬ್ ಕಿಂಗ್ಸ್ ತಂಡದ ಮೊದಲನೇ ಪ್ಲೇಆಫ್ಸ್ ಪಂದ್ಯ ಇದಾಗಿದೆ. ಪಂಜಾಬ್ ತಂಡ 14 ಪಂದ್ಯಗಳ ಪೈಕಿ 9 ರಲ್ಲಿ ಗೆಲುವು ಪಡೆಯುವ ಮೂಲಕ 19 ಅಂಕಗಳನ್ನು ಕಲೆ ಹಾಕಿದೆ. ಆ ಮೂಲಕ ಟೂರ್ನಿಯ ಪಾಯಿಂಟ್ಸ್ ಟೇಬಲ್ನಲ್ಲಿ ಅಗ್ರ ಸ್ಥಾನ ಪಡೆದು ಮೊದಲನೇ ಕ್ವಾಲಿಫೈಯರ್ಗೆ ಅರ್ಹತೆ ಪಡೆದಿದೆ. ಮುಂಬೈ ಇಂಡಿಯನ್ಸ್ ವಿರುದ್ಧ ತನ್ನ ಕೊನೆಯ ಲೀಗ್ ಪಂದ್ಯವನ್ನು ಗೆಲ್ಲುವ ಮೂಲಕ ಪಂಜಾಬ್ ತಂಡ ಮೊದಲನೇ ಕ್ವಾಲಿಫೈಯರ್ಗೆ ಬಂದಿದೆ.
IPL 2025: ಮುಂಬೈ ಅಲ್ಲ! ಈ 2 ತಂಡಗಳು ಫೈನಲ್ ಆಡುವುದು ಪಕ್ಕಾ ಎಂದ ರಾಬಿನ್ ಉತ್ತಪ್ಪ!
ಇನ್ನು ಆರ್ಸಿಬಿ 2016ರ ಬಳಿಕ ಇದೇ ಮೊದಲ ಬಾರಿ ಮೊದಲನೇ ಕ್ವಾಲಿಫೈಯರ್ಗೆ ಅರ್ಹತೆಯನ್ನು ಪಡೆದಿದೆ. ಪಂಜಾಬ್ ಕಿಂಗ್ಸ್ ( +0.372) ರೀತಿ ಆರ್ಸಿಬಿ (+0.301) ಕೂಡ 19 ಅಂಕಗಳನ್ನು ಕಲೆ ಹಾಕಿದೆ. ಆದರೆ, ರನ್ ರೇಟ್ ಕಡಿಮೆ ಇರುವ ಕಾರಣ ಬೆಂಗಳೂರು ತಂಡ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಬುಧವಾರ ಲಖನೌ ಸೂಪರ್ ಜಯಂಟ್ಸ್ ವಿರುದ್ಧದ ಪಂದ್ಯದಲ್ಲಿ228 ರನ್ಗಳ ಗುರಿಯನ್ನು ಆರ್ಸಿಬಿ ಇನ್ನು 8 ಎಸೆತಗಳು ಬಾಕಿ ಇರುವಾಗಲೇ ಮುಟ್ಟಿತ್ತು.
ಈ ತಂಡಗಳು ಲೀಗ್ನಲ್ಲಿ ಎರಡು ಪಂದ್ಯಗಳಲ್ಲಿ ಕಾದಾಟ ನಡೆಸಿದ್ದವು. ಬೆಂಗಳೂರಿನಲ್ಲಿ ನಡೆದಿದ್ದ ಪಂದ್ಯದಲ್ಲಿ ಆರ್ಸಿಬಿಯನ್ನು ಪಂಜಾಬ್ ಮಣಿಸಿತ್ತು. ನಂತರ ಮುಲ್ಲನ್ಪುರದಲ್ಲಿ ನಡೆದಿದ್ದ ಪಂದ್ಯದಲ್ಲಿ ಪಂಜಾಬ್ ತಂಡವನ್ನು ಆರ್ಸಿಬಿ ಮಣಿಸಿ ಸೇಡು ತೀರಿಸಿಕೊಂಡಿತ್ತು. ಇದೀಗ ಅದೇ ಲಯವನ್ನು ಮುಂದುವರಿಸಲು ಬೆಂಗಳೂರು ತಂಡ ಎದುರು ನೋಡುತ್ತಿದೆ.
RCB vs LSG: ಜತೇಶ್-ಮಯಾಂಕ್ ಕಮಾಲ್, ಲಖನೌ ವಿರುದ್ಧ ಗೆದ್ದು ಮೊದಲನೇ ಕ್ವಾಲಿಫೈಯರ್ಗೇರಿದ ಆರ್ಸಿಬಿ!
ಆರ್ಸಿಬಿ ಪ್ಲೇಯಿಂಗ್ XIನಲ್ಲಿ ಎರಡು ಬದಲಾವಣೆ ಸಾಧ್ಯತೆ
ಮೊದಲನೇ ಕ್ವಾಲಿಫೈಯರ್ಗೆ ಆರ್ಸಿಬಿ ಪ್ಲೇಯಿಂಗ್ XIನಲ್ಲಿ ಎರಡು ಬದಲಾವಣೆಯನ್ನು ನಿರೀಕ್ಷೆ ಮಾಡಬಹುದು. ಕಳೆದ ಪಂದ್ಯದಲ್ಲಿ ಆಡಿದ್ದ ಲಿಯಾಮ್ ಲಿವಿಂಗ್ಸ್ಟೋನ್ ಜಾಗದಲ್ಲಿ ಟಿಮ್ ಡೇವಿಡ್ ಅಥವಾ ಟಿಮ್ ಸೈಫರ್ಟ್ ಆಡಬಹುದು. ಟಿಮ್ ಡೇವಿಡ್ ಸ್ನಾಯು ಸೆಳೆತದಿಂದ ಗುಣುಮುಖರಾಗುತ್ತಿದ್ದಾರೆ. ಇನ್ನು ವೇಗದ ಬೌಲಿಂಗ್ ವಿಭಾಗದಲ್ಲಿ ನುವಾನ್ ತುಷಾರ ಜಾಗದಲ್ಲಿ ಜಾಶ ಹೇಝಲ್ವುಡ್ ಆಡಬಹುದು.
ಪಿಚ್ ರಿಪೋರ್ಟ್
ಆರ್ಸಿಬಿ ಹಾಗೂ ಪಂಜಾಬ್ ತಂಡಗಳ ನಡುವಣ ಮೊದಲನೇ ಕ್ವಾಲಿಫೈಯರ್ ಪಂದ್ಯ ನಡೆಯುವ ಚಂಡೀಗಢದ ಮಹಾರಾಜ ಯದವೀಂದ್ರ ಸಿಂಗ್ ಇಂಟರ್ನ್ಯಾಷನಲ್ ಕ್ರಿಕೆಟ್ ಕ್ರೀಡಾಂಗಣದ ಪಿಚ್ ಬ್ಯಾಟಿಂಗ್ ಸ್ನೇಹಿಯಾಗಿದೆ. ಈ ಅಂಗಣದ ಪ್ರಥಮ ಇನಿಂಗ್ಸ್ನ ಸರಾಸರಿ ಮೊತ್ತ 174 ರನ್ಗಳು. ಈ ಆವೃತ್ತಿಯಲ್ಲಿ ಇಲ್ಲಿ 4 ಪಂದ್ಯಗಳನ್ನು ಆಡಿಸಲಾಗಿದೆ. ಇದರಲ್ಲಿ ಮೂರು ಪಂದ್ಯಗಳಲ್ಲಿ ಮೊದಲು ಬ್ಯಾಟ್ ಮಾಡಿದ್ದ ತಂಡಗಳು ಗೆದ್ದಿವೆ. ಇನ್ನೊಂದು ಪಂದ್ಯ ಚೇಸಿಂಗ್ ತಂಡ ಗೆದ್ದಿದೆ. ಆರ್ಸಿಬಿಈ ಅಂಗಣದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ದ 7 ವಿಕೆಟ್ ಗೆಲುವು ಪಡೆದಿದೆ. ಇಲ್ಲಿ ಟಾಸ್ ಗೆದ್ದ ತಂಡದ ನಾಯಕ ಚೇಸಿಂಗ್ ಆಯ್ಕೆ ಮಾಡಬಹುದು.
RCB vs LSG: ಶತಕ ಸಿಡಿಸಿ ಪಲ್ಟಿ ಹೊಡೆದು ವಿಚಿತ್ರವಾಗಿ ಸಂಭ್ರಮಿಸಿದ ರಿಷಭ್ ಪಂತ್!
ಪಂದ್ಯದ ವಿವರ
ಐಪಿಎಲ್ 2025
ಮೊದಲನೇ ಕ್ವಾಲಿಪೈಯರ್ ಪಂದ್ಯ
ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಪಂಜಾಬ್ ಕಿಂಗ್ಸ್
ದಿನಾಂಕ: ಮೇ 29, 2025
ಸಮಯ: ಸಂಜೆ 07: 30ಕ್ಕೆ
ಸ್ಥಳ: ಮಹಾರಾಜ ಯದವೀಂದ್ರ ಸಿಂಗ್ ಇಂಟರ್ನ್ಯಾಷನಲ್ ಕ್ರಿಕೆಟ್ ಕ್ರೀಡಾಂಗಣ, ಮುಲ್ಲನ್ಪುರ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್
ಲೈವ್ಸ್ಟ್ರೀಮಿಂಗ್: ಡಿಸ್ನಿ ಹಾಟ್ಸ್ಟಾರ್, ಜಿಯೊ ಸಿನಿಮಾ
PBKS vs RCB Qualifier 1: ಮಳೆಯಿಂದ ಆರ್ಸಿಬಿ-ಪಂಜಾಬ್ ಕ್ವಾಲಿಫೈಯರ್ ಪಂದ್ಯ ರದ್ದಾದರೆ?
ಮುಖಾಮುಖಿ ದಾಖಲೆ
ಒಟ್ಟು ಆಡಿರುವ ಪಂದ್ಯಗಳು: 35
ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆಲುವು: 17
ಪಂಜಾಬ್ ಕಿಂಗ್ಸ್ ಗೆಲುವು: 18
ಉಭಯ ತಂಡಗಳ ಸಂಭಾವ್ಯ ಪ್ಲೇಯಿಂಗ್ IX
ರಾಯಲ್ ಚಾಲೆಂಜರ್ಸ್ ಬೆಂಗಳೂರು: ಫಿಲಿಪ್ ಸಾಲ್ಟ್, ವಿರಾಟ್ ಕೊಹ್ಲಿ, ಮಯಾಂಕ್ ಅಗರ್ವಾಲ್, ಜಿತೇಶ್ ಶರ್ಮಾ (ವಿ.ಕೀ, ನಾಯಕ), ಟಿಮ್ ಡೇವಿಡ್ / ಟಿಮ್ ಸೈಫರ್ಟ್, ರೊಮ್ಯಾರಿಯೊ ಶೆಫರ್ಡ್, ಕೃಣಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಜಾಶ್ ಹೇಝಲ್ವುಡ್ / ನುವಾನ್ ತುಷಾರ, ಸುಯಾಶ್ ಶರ್ಮಾ, ಯಶ್ ದಯಾಳ್
ಇಂಪ್ಯಾಕ್ಟ್ ಪ್ಲೇಯರ್: ರಜತ್ ಪಾಟಿದಾರ್
ಪಂಜಾಬ್ ಕಿಂಗ್ಸ್: ಪ್ರಿಯಾಂಶ್ ಆರ್ಯ, ನೆಹಾಲ್ ವಧೇರಾ, ಶ್ರೇಯಸ್ ಅಯ್ಯರ್ (ನಾಯಕ), ಶಶಾಂಕ್ ಸಿಂಗ್, ಜಾಶ್ ಇಂಗ್ಲಿಸ್ (ವಿ.ಕೀ), ಮಾರ್ಕಸ್ ಸ್ಟೊಯ್ನಿಸ್, ಮಾರ್ಕೊ ಯೆನ್ಸೆನ್, ಹರ್ಪ್ರೀತ್ ಬ್ರಾರ್, ಕೈಲ್ ಜೇಮಿಸನ್, ಅರ್ಷದೀಪ್ ಸಿಂಗ್, ವೈಶಾಕ್ ವಿಜಯ್ಕುಮಾರ್