ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

RCB vs KKR: ಫಾರ್ಮ್‌ ಕಂಡುಕೊಳ್ಳಲು ಜಿತೇಶ್‌ ಶರ್ಮಾಗೆ ಮಹತ್ವದ ಸಲಹೆ ನೀಡಿದ ಅಂಬಾಟಿ ರಾಯುಡು!

RCB vs KKR: 2026ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಸತತ ಬ್ಯಾಟಿಂಗ್‌ ವೈಫಲ್ಯ ಅನುಭವಿಸುತ್ತಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ವಿಕೆಟ್‌ ಕೀಪರ್‌-ಬ್ಯಾಟ್ಸ್‌ಮನ್‌ ಜಿತೇಶ್‌ ಶರ್ಮಾಗೆ ಫಾರ್ಮ್‌ ಕಂಡುಕೊಳ್ಳಲು ಚೆನ್ನೈ ಸೂಪರ್‌ ಕಿಂಗ್ಸ್‌ ಮಾಜಿ ಆಟಗಾರ ಅಂಬಾಟಿ ರಾಯುಡು ಮಹತ್ವದ ಸಲಹೆಯನ್ನು ನೀಡಿದ್ದಾರೆ.

IPL 2026: ಫಾರ್ಮ್‌ ಕಂಡುಕೊಳ್ಳಲು ಜಿತೇಶ್‌ ಶರ್ಮಾಗೆ ಸಲಹೆ ನೀಡಿದ ರಾಯುಡು!

ಜಿತೇಶ್‌ ಶರ್ಮಾಗೆ ಮಹತ್ವದ ಸಲಹೆ ನೀಡಿದ ಅಂಬಾಟಿ ರಾಯುಡು. -

Profile
Ramesh Kote May 13, 2026 5:03 PM

ನವದೆಹಲಿ: ಇಂಡಿಯನ್‌ ಪ್ರೀಮಿಯರ್‌ ಲೀಗ್‌ 2026ರ (IPL 2026) ಸಾಲಿನಲ್ಲಿ ಸತತ ಬ್ಯಾಟಿಂಗ್‌ ವೈಫಲ್ಯ ಅನುಭವಿಸುತ್ತಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ವಿಕೆಟ್‌ ಕೀಪರ್‌-ಬ್ಯಾಟ್ಸ್‌ಮನ್‌ ಜಿತೇಶ್‌ ಶರ್ಮಾಗೆ (Jitesh Sharma) ಬ್ಯಾಟಿಂಗ್‌ ಫಾರ್ಮ್‌ ಕಂಡುಕೊಳ್ಳಲು ಚೆನ್ನೈ ಸೂಪರ್‌ ಕಿಂಗ್ಸ್‌ ಮಾಜಿ ಆಟಗಾರ ಅಂಬಾಟಿ ರಾಯುಡು (Ambati rayudu) ಮಹತ್ವದ ಸಲಹೆಯನ್ನು ನೀಡಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಜಿತೇಶ್‌ ಶರ್ಮಾ ಅವರ ವೈಫಲ್ಯ ಆರ್‌ಸಿಬಿಗೆ ದೊಡ್ಡ ತಲೆ ನೋವಾಗಿದೆ. ಮುಂದಿನ ಪಂದ್ಯಗಳು ಆರ್‌ಸಿಬಿಗೆ ಅತ್ಯಂತ ನಿರ್ಣಾಯಕವಾಗಿದೆ, ಹಾಗಾಗಿ ಜತೇಶ್‌ ಶರ್ಮಾ ಆದಷ್ಟು ಬೇಗ ಫಾರ್ಮ್‌ ಕಂಡುಕೊಳ್ಳಬೇಕಾಗಿದೆ.

ರಾಯ್ಪುರದ ಶಾಹೀದ್‌ ವೀರ್‌ ನಾರಾಯಣ ಸಿಂಗ್‌ ಇಂಟರ್‌ನ್ಯಾಷನಲ್‌ ಕ್ರೀಡಾಂಗಣದಲ್ಲಿ ಮೇ 13 ರಂದು ನಡೆಯುವ ಕೋಲ್ಕತಾ ನೈಟ್‌ ರೈಡರ್ಸ್‌ ವಿರುದ್ಧದ ಪಂದ್ಯಕ್ಕೆ ಆರ್‌ಸಿಬಿ ಸಜ್ಜಾಗುತ್ತಿದೆ. ಈ ಪಂದ್ಯಕ್ಕೂ ಮುನ್ನ ಜಿತೇಶ್‌ ಶರ್ಮಾಗೆ ಅವರ ಔಟ್‌ ಆಫ್‌ ಫಾರ್ಮ್‌ ಬಗ್ಗೆ ಅಂಬಾಟಿ ರಾಯುಡು ಪ್ರತಿಕ್ರಿಯಿಸಿದ್ದಾರೆ.

RCB vs KKR: ಕೆಕೆಆರ್‌ಗೆ ಮಾಡು ಇಲ್ಲವೇ ಮಡಿ ಪಂದ್ಯ; ಆರ್‌ಸಿಬಿಗೆ ಪ್ಲೇ-ಆಫ್‌ ಪ್ರವೇಶಿಸುವ ಇರಾದೆ

“ಜಿತೇಶ್‌ ಶರ್ಮಾ ಬಗ್ಗೆ ಮಾತನಾಡುವುದಾದರೆ, ಅವರು ಪ್ರತೀ ಬಾರಿ ತಮ್ಮನ್ನು ತಾವು ಸಾಬೀತುಪಡಿಸಬೇಕೆಂಬ ಮನೋಭಾವದೊಂದಿಗೆ ಮೈದಾನಕ್ಕಿಳಿಯುತ್ತಿರುವಂತೆ ನನಗೆ ಅನಿಸುತ್ತದೆ. ಬಹುಶಃ ಅವರು ಸ್ವಲ್ಪ ಶಾಂತವಾಗಿದ್ದು, ತಮ್ಮ ಶಕ್ತಿಗೆ ತಕ್ಕಂತೆ ಆಟ ಆಡಬೇಕು. ಅಂತ್ಯದವರೆಗೂ ಕ್ರೀಸ್‌ನಲ್ಲಿ ಉಳಿದು, ಇಂತಹ ಪಿಚ್‌ನಲ್ಲಿ ಕೊನೆಯ ಎರಡು ಅಥವಾ ಮೂರು ಓವರ್‌ಗಳಲ್ಲಿ ವೇಗವಾಗಿ ರನ್ ಗಳಿಸಲು ಪ್ರಯತ್ನಿಸಬೇಕು. ಹೀಗೆ ಹೇಳುವುದರಿಂದ ಅವರ ಬ್ಯಾಟಿಂಗ್ ವಿಧಾನ ಸಂಪೂರ್ಣ ವಿಫಲವಾಗಿದೆ ಎಂದಲ್ಲ. ಆದರೆ ಖಂಡಿತವಾಗಿಯೂ ಕೆಲವು ವಿಭಾಗಗಳಲ್ಲಿ ಅವರು ಸುಧಾರಣೆ ಮಾಡಬೇಕಿದೆ,” ಎಂದು ಅಂಬಾಟಿ ರಾಯುಡು ಸಲಹೆ ನೀಡಿದ್ದಾರೆ.

ಜಿತೇಶ್‌ ಶರ್ಮಾ ಅವರಿಗೆ ಇದುವರೆಗೆ ಐಪಿಎಲ್ 2026 ಅಭಿಯಾನ ನಿರಾಶಾದಾಯಕವಾಗಿದೆ. ಅವರು ಆಡಿದ 11 ಪಂದ್ಯಗಳಲ್ಲಿ ಕೇವಲ 82 ರನ್‌ಗಳನ್ನು ಮಾತ್ರ ಗಳಿಸಿದ್ದಾರೆ. ಆದಾಗ್ಯೂ, ಅವರ ವಿಕೆಟ್‌ ಕೀಪಿಂಗ್ ಕೌಶಲ ತಂಡಕ್ಕೆ ಕೀ ಸಂಗತಿ. ಇದರ ಜೊತೆಗೆ, ಬ್ಯಾಟ್‌ನಲ್ಲಿಯೂ ಪಂದ್ಯವನ್ನು ತಿರುಗಿಸುವ ಸಾಮರ್ಥ್ಯ ತಮ್ಮಲ್ಲಿದೆ ಎಂಬುದನ್ನು ಅವರು ಹಿಂದೆ ಹಲವು ಬಾರಿ ತೋರಿಸಿದ್ದಾರೆ. ಕಳೆದ ಸೀಸನ್‌ನಲ್ಲಿ ಆರ್‌ಸಿಬಿ, ಲಖನೌ ಸೂಪರ್‌ ಜಯಂಟ್ಸ್‌ ವಿರುದ್ಧ ಸೋಲಿನಂಚಿನಲ್ಲಿದ್ದ ಜಿತೇಶ್ ಶರ್ಮಾ ತಮ್ಮ ಬ್ಯಾಟಿಂಗ್‌ ಮೂಲಕ ಗೆಲ್ಲಿಸಿದ್ದರು.

‌IPL 2026: 500 ರನ್‌ಗಳ ಮೂಲಕ ವಿರಾಟ್‌ ಕೊಹ್ಲಿ ದಾಖಲೆ ಮುರಿದ ಸಾಯಿ ಸುದರ್ಶನ್!

ಜಿತೇಶ್‌ ಶರ್ಮಾ ವೈಫಲ್ಯದ ಬಗ್ಗೆ ಎಬಿಡಿ ಹೇಳಿಕೆ

ದಕ್ಷಿಣ ಆಫ್ರಿಕಾ ದಿಗ್ಗಜ ಎಬಿ ಡಿವಿಲಿಯರ್ಸ್‌ ಅವರ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ ಜಿತೇಶ ಶರ್ಮಾ, ಕೆಲವೊಮ್ಮೆ ಟಾಪ್ ಆರ್ಡರ್ ಬ್ಯಾಟ್ಸ್‌ಮನ್‌ಗಳು ಬೇಗ ಔಟ್ ಆಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದರು. ಆಗ ತಾವು ಕ್ರೀಸ್‌ಗೆ ಬಂದು ಪಂದ್ಯ ನಿರ್ಣಾಯಕ ಇನಿಂಗ್ಸ್‌ ಆಡಲು ಅವಕಾಶ ಸಿಗುತ್ತದೆ ಎಂದು ಅವರು ತಿಳಿಸಿದ್ದರು.

“ನೀವು ನಂಬುವುದಿಲ್ಲ, ಆದರೆ ನಮ್ಮ ಟಾಪ್ ಆರ್ಡರ್ ಕುಸಿಯಲಿ ಎಂದು ನಾನು ಯಾವಾಗಲೂ ದೇವರನ್ನು ಪ್ರಾರ್ಥಿಸುತ್ತೇನೆ, ಆಗ ನಾನು ಕ್ರೀಸ್‌ಗೆ ಬಂದು ರನ್ ಗಳಿಸಬಹುದು,” ಎಂದು ಅವರು ಡಿ ವಿಲಿಯರ್ಸ್‌ಗೆ ಹೇಳಿದ್ದರು.

RCB vs KKR: ಇಂದಿನ ಆರ್‌ಸಿಬಿ-ಕೆಕೆಆರ್‌ ಪಂದ್ಯದಲ್ಲಿ ಆಟಗಾರರು ನಿರ್ಮಿಸಬಹುದಾದ ದಾಖಲೆಗಳು

“ನಾನು ಅದನ್ನು ಹೀರೋ ಆಗುವ ಅವಕಾಶವಾಗಿ ನೋಡುತ್ತೇನೆ. ಜೀವನದಲ್ಲಿ ಇಂತಹ ಇನಿಂಗ್ಸ್‌ಗಳನ್ನು ಆಡುತ್ತಿರುವುದನ್ನು ನಾನು ಯಾವಾಗಲೂ ಮನಸ್ಸಿನಲ್ಲಿ ಕಲ್ಪಿಸಿಕೊಳ್ಳುತ್ತೇನೆ. ನಾನು ಅಂಥ ವ್ಯಕ್ತಿ. ಯಾವಾಗಲೂ ಏನಾದರೂ ಮಾಯಾಜಾಲದಂತಹದ್ದು ಮಾಡಬೇಕು ಎಂಬ ಆಸೆ ಇರುತ್ತದೆ. ಪ್ರಸ್ತುತ ಕ್ಷಣದಲ್ಲಿ ಇರಬೇಕು, ಉಸಿರಾಟದ ಮೇಲೆ ಗಮನ ಕೊಡಬೇಕು, ಸ್ಕೋರ್‌ಬೋರ್ಡ್ ಓದಬೇಕು, ಏನು ಬೇಕು ಮತ್ತು ಏನು ಬೇಡ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಈ ರೀತಿಯ ಲೆಕ್ಕಾಚಾರಗಳೇ ಒತ್ತಡವನ್ನು ನಿಭಾಯಿಸಲು ನನಗೆ ಸಹಾಯ ಮಾಡುತ್ತವೆ,” ಎಂದು ಜಿತೇಶ್ ಶರ್ಮಾ ಈ ಹಿಂದೆ ತಿಳಿಸಿದ್ದರು.